June 28, 2008

ಮುದ್ದು ಮಾತುಗಳು -೨

ಮುಂಬಯಿಯಲ್ಲಿರುವ ನನ್ನ ಪುಟ್ಟ ಅಳಿಯ ಪ್ರಥಮ್ ಈಗಿನ್ನೂ ೩ ವರ್ಷ ತುಂಬುತ್ತಿರುವ ಪುಟಾಣಿ.
ಅವನಮ್ಮ ಹೇಳಿದ್ದು. ಬೇಸಿಗೆ ರಜೆಗೆ ಮುಂಚೆ.

ಅವನ ಮಿನಿ ಕೆಜಿ ಯ ಕೊನೇ ದಿನ ಶಾಲೆಗೆ ಹೊರಡುತ್ತಿದ್ದ ಮಗನ ಕೈಗೆ ಬಾಲ್ಕನಿಯ ಗಿಡಗಳಿಗೆ ನೀರು ಹಾಕಿ ಬಂದ ಅವನಪ್ಪ ಹೊಸದಾಗಿ ಅರಳಿದ ಮಲ್ಲಿಗೆ ಹೂವೊಂದನ್ನು ಕೊಟ್ಟ .

’ ಅಮ್ಮಾ, ಈ ಹೂ ಟೀಚರಿಗೆ ಕೊಡ್ಲಾ? ’ ಮುದ್ದಾಗಿ ಮಗ ಕೇಳಿದಾಗ ಅವನಮ್ಮ ಬೇಡ ಎನ್ನುತ್ತಾಳೆಯೆ?
’ ಕೊಡು ಪುಟ್ಟಾ. ಟೀಚರಿಗೆ ಏನು ಹೇಳಿ ಹೂ ಕೊಡ್ತೀಯಾ?’
’ ಅಪ್ಪ ಕೊಟ್ಟಿದ್ದು ಅಂತ ’ ಥಟ್ಟೆಂದು ಬಂತು ಉತ್ತರ !

ಅವನಮ್ಮ ಗಾಬರಿಯಾದಳು !
’ ಅಯ್ಯೋ ಹಾಗೆ ಹೇಳ್ಬೇಡ ! ಅಮ್ಮ ಕೊಟ್ಟಿದ್ದು ಅಂತ ಹೇಳು ’
’ ಅಮ್ಮಾ, ಸುಳ್ಳು ಹೇಳಬಾರದು ! ಅಪ್ಪ ಕೊಟ್ಟಿದ್ದಲ್ವಾ ಇದು ? ’

ಜೋಪಾನವಾಗಿ ಹೂವನ್ನು ಜೇಬಲ್ಲಿಟ್ಟುಕೊಂಡು ಹೊರಟ ಮಗನಿಗೆ ಏನು ಹೇಳಬೇಕೆಂದು ತಿಳಿಯದೆ ಅಮ್ಮ ಪೆಚ್ಚಾದಳು.

ಆಮೇಲೆ ಸ್ಕೂಲಿನಲ್ಲಿ ಏನಾಯ್ತು ಅಂತ ಇನ್ನೂ ನಂಗೆ ಗೊತ್ತಾಗಲಿಲ್ಲ !

2 comments:

Harisha - ಹರೀಶ said...

ಅದಕ್ಕೆ ಅಲ್ವೇ ಮಕ್ಕಳನ್ನ ದೇವರು ಅನ್ನೋದು?

ಚಿತ್ರಾ said...

ಹರೀಶ,

ಧನ್ಯವಾದಗಳು. ಬರ್ತಾ ಇರಿ