July 6, 2008

ನಿರಾಸೆ

ಏಯ್ ಹುಡುಗಿ!
ದಿನವೂ ಬಾಗಿಲಲ್ಲಿ ನಿಂತು
ಕಪ್ಪು ಕಣ್ಣರಳಿಸಿ ನನ್ನೆಡೆ ನೋಡಿ
ಕೆಂದುಟಿಯ ಬಿರಿದು
ತುಂಟ ನಗೆ ಚೆಲ್ಲಿದಾಗ
ನಾನು ಸೋತು ಹೋಗುತ್ತೇನೆ

ಚೆಲುವೆ,
ನಿನ್ನ ಬೊಗಸೆ ಕಣ್ಣು , ಹವಳದ ತುಟಿ
ತುಂಬಿದ ಗಲ್ಲಕ್ಕೆ ಮರುಳಾಗಿ
ಮುತ್ತಿಡ ಬಯಸಿ ಬರುವಷ್ಟರಲ್ಲಿ.........


ನಿನ್ನಮ್ಮ ...
ನಿನ್ನನ್ನೆತ್ತಿಕೊಂಡು ಹೋಗಿಯೇ ಬಿಡುತ್ತಾಳೆ !



(ಮತ್ತೊಮ್ಮೆ ಹಳೆ ರಾಶಿಯಲ್ಲಿ ಹೆಕ್ಕಿದ್ದು )

4 comments:

sunaath said...

ಕೈಯಾಡಿಸಿ ಟಾಟಾ ಹೇಳಿಬಿಡಿ, ಸಾಕು!

ಶಾಂತಲಾ ಭಂಡಿ said...

ಚಿತ್ರಾ ಅವರೆ...
ಓದಿದ ತಕ್ಷಣ ಮನೆಸೂರೆಗೊಂಡಿತು ಮನಸೂರೆಗೊಂಡ ಮುದ್ದುಮಗುವಿನ ಹಾಗೆ.

chitra said...

@ಸುನಾಥ್ ರೇ,

ಯಾವಾಗಲೋ ಕೈಯಾಡಿಸಿದ್ದಾಯ್ತು ಪುಟ್ಟಿಗೆ !ಅವರಮ್ಮನನ್ನು ಪರಿಚಯ ಮಾಡಿಕೊಳ್ಳಬೇಕಷ್ಟೆ!


@ಶಾಂತಲಾ,

ಧನ್ಯವಾದಗಳು.

dinesh said...

nice Poem....