July 20, 2008

ಗುರುವ ನೆನೆಸಿ.....

ಮೊನ್ನೆ ’ ಗುರು ಪೂರ್ಣಿಮೆ ’ಯ ದಿನ ಮಕ್ಕಳೆಲ್ಲ ತಮ್ಮ ಪ್ರೀತಿಯ ಸರ್ / ಮೇಡಮ್ ಗಳಿಗೆ ಕೊಡಲೆಂದು ಹೂಗಳನ್ನು ತೊಗೊಂಡು ಹೋಗ್ತಾ ಇದ್ದರು.
ಪ್ರತಿ ವರ್ಷವೂ ಅದನ್ನು ನೋಡಿದಾಗ ನಾನು ನನಗೆ ಕಲಿಸಿದ ಗುರುಗಳನ್ನೆಲ್ಲ ನೆನಪಿಸಿಕೊಳ್ಳುತ್ತೇನೆ.
ಒಂದನೇ ಕ್ಲಾಸಿನಲ್ಲಿ ಕಲಿಸಿದ ಲಕ್ಷ್ಮಮ್ಮ ಟೀಚರ್ ರಿಂದ ಹಿಡಿದು ಹೈಸ್ಕೂಲ್ ನಲ್ಲಿ ವಿಜ್ಞಾನವನ್ನು ಸುಲಭವಾಗಿ ನಮ್ಮ ತಲೆಯೊಳಗೆ ಇಳಿಸಿದ ಬಿಆರ್ ಡಿ ಯವರ ವರೆಗೆ ಎಲ್ಲರೂ ತಕ್ಷಣ ನೆನಪಾಗುತ್ತಾರೆ. ಡಿಪ್ಲೊಮಾದಲ್ಲಿ ಕಲಿಸಿದ ಕಾತರಕಿ ಸರ್, ಸುಂಕದ್ ಸರ್ ತಮ್ಮ ಕಲಿಸುವ ಶೈಲಿಯಿಂದ ನೆನಪಾದರೆ , ಉಳಿದ ಕೆಲವರು ಬೇರೆ ಬೇರೆ ಕಾರಣಗಳಿಂದಾಗಿ ನೆನಪಿನಲ್ಲಿ ಉಳಿಯುತ್ತಾರೆ .
ಅಂಥವರಲ್ಲೊಬ್ಬರು ಇವರು !

ಅವರ ಹೆಸರು ಬೇರೆಯೇ ಇದ್ದರೂ ಅವರ ವೇಷ - ಭೂಷಣಗಳು ಹಾಗೂ ನಡವಳಿಕೆಗಳಿಂದಾಗಿ ನಾವು ಹುಡುಗಿಯರಿಗೆಲ್ಲಾ ಅವರು ’ ರಾವಣ ’ ಎಂದೇ ಪರಿಚಿತರಾಗಿದ್ದರು.
ಅವರ ಅಮವಾಸ್ಯೆಯ ಚಂದಿರನ ಮೈ ಬಣ್ಣಕ್ಕೆ ಹೊಂದುತ್ತಿದ್ದ ಅವರ ಹಿಪ್ಪಿ ಕೂದಲು, ಫ್ರೆಂಚ್ ಗಡ್ಡ.... ಆಹಾಹಾ !
ಮೊದ ಮೊದಲು ಪ್ರತಿದಿನ ಥ್ರೀ - ಪೀಸ್ ಸೂಟ್ ನಲ್ಲಿಯೇ ಕಾಲೇಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದವರು ಕ್ರಮೇಣ ಬಣ್ಣ ಬಣ್ಣದ ಅಡ್ಡ ಗೆರೆಗಳ ಟಿ ಶರ್ಟ್ ಗಳನ್ನೂ ಪ್ರದರ್ಶಿಸಿದರು.

ನಮ್ಮದು ಮಹಿಳಾ ಕಾಲೇಜ್. ಇವರು ಆಗತಾನೇ ಇಂಜಿನೀಯರಿಂಗ್ ಡಿಗ್ರಿ ಕೈಯಲ್ಲಿ ಹಿಡಿದು ಬಂದವರು! ಇನ್ನೂ ಹುಡುಗು ಬುದ್ಧಿ ಮಾಯವಾಗಿರಲಿಲ್ಲ !
ಮೊದಲೇ ಎಲೆಕ್ತ್ರಾನಿಕ್ಸ್ ಸೂತ್ರಗಳು ಸರಿಯಾಗಿ ಅರ್ಥವಾಗುತ್ತಿರಲಿಲ್ಲ , ಇವರೋ ಅಂದು ಕಲಿಸಿ ಕೊಡುವ ಪಾಠವನ್ನು ಸಂಪೂರ್ಣವಾಗಿ ಬಾಯಿಪಾಠ ಮಾಡಿಕೊಂಡು ( ಕೆಲವೊಮ್ಮೆ ಲೈಬ್ರರಿಯಿಂದ ಆ ಪಾಠದ ಪೇಜುಗಳನ್ನೇ ಹರಿದುಕೊಂಡು) ಬರುತ್ತಿದ್ದವರು ಬೋರ್ಡ್ ನ ಮೇಲೆ ಯಥಾವತ್ತಾಗಿ ಇಳಿಸುತ್ತಿದ್ದರು.
ಅಪ್ಪಿ ತಪ್ಪಿ ಯಾರಾದರೂ ’ ಸರ್ , ಈ ಉತ್ತರ ಹೇಗೆ ಬಂತು ? ’ ಎಂದೇನಾದರೂ ಕೇಳಿದರೋ , ಮುಗೀತು.
’ Yes, I am also thinking the same thing ! How we got this answer !!! " ಎಂದು ಬೋರ್ಡನ್ನೇ ನೋಡುತ್ತಾ ನಿಂತರೆ ಅಂದಿನ ಪಾಠ ಮುಗಿದಂತೆ !
ಹೀಗಾಗಿ , ಅವರ ಕ್ಲಾಸ್ ನಲ್ಲಿ " ಇದು ಯಾಕೆ ಹೀಗೆ ಸರ್? " ಎಂಬ ಪ್ರಶ್ನೆ ಬಹಳ ಕಾಮನ್ ಆಗಿತ್ತು!

ಒಂದು ಸಲ ಏನಾಯ್ತು ಅಂದ್ರೆ . ಯಾವುದೋ ಹಬ್ಬದ ಮರುದಿನ ಹುಡುಗಿಯರೆಲ್ಲ ಹೊಸ ಹೊಸ ಬಟ್ಟೆ ಹಾಕಿಕೊಂಡು ಅಲಂಕರಿಸಿಕೊಂಡು ಬಂದಿದ್ದರು, ಈ ಸರ್ ಕ್ಲಾಸಿಗೆ ಬಂದವರೇ ಸೊಂಟದ ಮೇಲೆ ಎರಡೂ ಕೈಯಿಟ್ಟು ಇಡೀ ಕ್ಲಾಸನ್ನು ಒಮ್ಮೆ ಅವಲೋಕಿಸಿದರು !
ನಂತರ ಉದ್ಗರಿಸಿದರು! " ಅಲ್ಲಾ, ನೀವೆಲ್ಲ ಹೀಂಗೆ ಬಣ್ಣ ಬಣ್ಣದ ಬಟ್ಟೆ ಹಾಕ್ಕೊಂಡು, ರಂಗಾಗಿ ಬಂದು ಬಿಟ್ರೆ , ನಾನು ಪಾಠ ಮಾಡೊದಾದ್ರೂ ಹೆಂಗೆ ಅಂತ !!! " ಹಲ್ಲು ಬಿಟ್ಟಾಗ ನಮಗೆಲ್ಲ ತಲೆ ಚಚ್ಚಿಕೊಳ್ಳುವಂತಾಗಿತ್ತು .

ಇದೆಲ್ಲದರಿಂದ ಬೇಸತ್ತ ಸಹಪಾಠಿಯೊಬ್ಬಳು ಒಮ್ಮೆ ಕ್ಲಾಸಿನಲ್ಲಿ ಎದ್ದು ನಿಂತು ಕೇಳಿಯೇ ಬಿಟ್ಟಳು .
" ಸರ್ , ನೀವೇಕೆ ಬೇರೆ ಕಡೆ ವರ್ಗ ಮಾಡಿಸಿಕೋ ಬಾರದು ?"

ಇಂಥಾ ಪ್ರಶ್ನೆಯೊಂದನ್ನು ನಿರೀಕ್ಷಿಸಿರದ ಸರ್ ಒಂದು ಕ್ಷಣ ಕಕ್ಕಾಬಿಕ್ಕಿಯಾದರು .

ಮರುಕ್ಷಣವೇ ನಗುತ್ತಾ ಕೇಳಿದರು " ಅಲ್ರೀ , ಫಸ್ಟ್ ಅಪಾಯಿಂಟ್ ಮೆಂಟ್ ಹುಡುಗೀರ ಕಾಲೇಜಿನಲ್ಲಿ ಸಿಕ್ಕಿದರೆ ಯಾವ ಮುಟ್ಠಾಳ ವರ್ಗ ಮಾಡಿಸಿಕೋತಾನ್ರೀ? "
ಈಗ ಕಕ್ಕಾಬಿಕ್ಕಿಯಾಗುವ ಸರದಿ ನಮ್ಮದಾಗಿತ್ತು!

ಈ ಪರಿಯ ಅವರ ಅಮೋಘವಾದ ಕಲಿಸುವಿಕೆಯಿಂದಾಗಿ ನಾವೂ ನಮ್ಮ ನಂತರದ ನಂತರದ ಇನ್ನೂ ೨-೩ ಬ್ಯಾಚ್ ಗಳ ಹುಡುಗಿಯರೂ "ಅಂತೂ ಇಂತೂ ಆ ವಿಷಯದಲ್ಲಿ ಪಾಸಾದರೆ ಸಾಕಪ್ಪಾ" ಎಂದು ಬೇಡಿ ಕೊಂಡು ಹತ್ತಿರದ ಹನುಮಂತನ ಗುಡಿಗೆ ಸಾಕಷ್ಟು ಲಾಭವಾಗಿದ್ದಂತೂ ನಿಜ !

ಆಗ ಆ ಸರ್ ಬಗ್ಗೆ , ಅವರ ಕಲಿಸುವ ರೀತಿಯ ಬಗ್ಗೆ , ಸಿಟ್ಟು ಬರುತ್ತಿತ್ತು. ಅದೊಂದು ವಿಷಯದಲ್ಲಿ ಹೇಗೆ ಮಾರ್ಕ್ಸ್ ತೆಗೆಯುವುದು ಎಂಬ ಚಿಂತೆ, ಅಕಸ್ಮಾತ್ ಫೇಲ್ ಆಗಿಬಿಟ್ಟರೆ , ಎಂಬ ಟೆನ್ ಶನ್ ಇರುತ್ತಿತ್ತು.
ಈಗ ನೆನೆಸಿಕೊಂಡರೆ ನಗುವೇ ಬರುತ್ತದೆ.

ಇಂಥಾ ಗುರುಗಳನ್ನು ಗುರುಪೂರ್ಣಿಮೆಯಂದು ನೆನಪಿಸಿಕೊಳ್ಳುವ ಭಾಗ್ಯ ಎಲ್ಲರಿಗೂ ಸಿಕ್ಕುವುದಿಲ್ಲ ಅಲ್ಲವೆ?

12 comments:

ಸುಶ್ರುತ ದೊಡ್ಡೇರಿ said...

ಬಿಆರ್‌ಡಿ ಮೇಷ್ಟ್ರಾ? ನೀವು ಓದಿದ್ದು ನಿಸರಾಣಿ ಹೈಸ್ಕೂಲಲ್ಲಾ?

chitra said...

ಅಲ್ಲ ಸುಶ್ರುತ,

ನಾ ಓದಿದ್ದು ಕೆಳದಿ ಹೈಸ್ಕೂಲ್ನಲ್ಲಿ. ಆದರೆ , ನೀವು ಹೇಳ ಬಿ ಆರ್ ಡಿ ಮೇಷ್ಟ್ರು ಬೆಳೆಯೂರಿನವರಾಗಿದ್ರೆ ಅವರು ಬಹುಶಃ ನಿಸರಾಣಿ ಹೈಸ್ಕೂಲ್ ನಲ್ಲೂ ಸ್ವಲ್ಪ ದಿನ ಕಲಿಸಿದ್ದ ಅಂತ ಕೇಳಿದಹಾಂಗಿದ್ದು.

ಶಾಂತಲಾ ಭಂಡಿ said...

ಚಿತ್ರಾ ಅವರೆ...
ಲೇಖನ ಸೂಪರ್, ಓದಿ ನಗ್ತಾ ಇದ್ದಿ ಇನ್ನೂ.

Vish said...

ha ha... chennagittu nimma lekhana..

ಅನೂಜ್ಞಾ said...

ಬಿ.ಆರ್ ಡಿ ಅಂದ್ರೆ ಬಿ ಆರ್ ದೇವರಾಜ್ ಆವ್ರಾ? ನೀವು ಓದಿದ್ದು ಶಿವಮೊಗ್ಗದ ಮಹಿಳಾ ಪಾಲಿಟೆಕ್ನಿಕ್ ನಲ್ಲಾ?

chitra said...

@ ಶಾಂತಲಾ,
ಮೆಚ್ಚುಗೆಗೆ ಧನ್ಯವಾದಗಳು.

@ ವಿಶ್ ,
ಧನ್ಯವಾದಗಳು . ಬರ್ತಾ ಇರಿ .

@ ಅನೂಜ್ಞಾ,
ನಾನು ಶಿವಮೊಗ್ಗಾದಲ್ಲಿ ಓದಿಲ್ಲ . ನಾ ಬರೆದ ಬಿ ಆರ್ ಡಿ ಮೇಷ್ಟ್ರು, ನನಗೆ ಹೈಸ್ಕೂಲ್ ನಲ್ಲಿ ಕಲಿಸಿದವರು.
ಬರ್ತಾ ಇರಿ.

ತೇಜಸ್ವಿನಿ ಹೆಗಡೆ- said...

ಚಿತ್ರಾ,

ಹೌದು ಕೆಲವೊಮ್ಮೆ ಇಂತಹ ಮೇಸ್ಟ್ರಗಳಿಂದಾಗಿ ವಿದ್ಯಾರ್ಥಿಗಳು ರಾಶಿನೇ ಕಷ್ಟ ಪಡಕಾಗ್ತು. ಓದಿ ಸ್ವಲ್ಪ ಬೇಜಾರು.. ಸ್ವಲ್ಪ ನಗು ಹಾಗೇ ರಾಶಿ ಚಿಂತೆ ಆತು.. ಈಗೀಗ ಹಲವಷ್ಟು ಕಾಲೇಜುಗಳ ಸ್ಥಿತಿ ಹೀಗೇ ಆಗ್ತಾ ಇದ್ದು ಹೇಳಿ ಕೇಳಿದ್ದಿ!!

praveenshankat said...

superb writing, i read all your blogs! good ones. keep it up hegdeyavare.

mjshalini said...

hey chitra neevu Bharathi high school nalli and Shimoga womens polytehnic nalli odidda? naanu alle odiddu. nangu BRD mestru mado pata thuba ista agtha ittu. nimma uru? naanu shalini antha, sagara da hudugi

ravi said...

Hi Chitra,
I just explored your blog today while reading Kannada Prabha's e-news.waw, You are a fantastic writer and many of your thinkings,openions and outlook towards nature,environment are so easily brought out by you in a candid style of concern and humor.

When I read the article about Sirsi road trip, the beuty of forest and the pleasure of driving has just reminded me of my preference of driving from karwar to my native Davangere through Sirsi almost on evry month end while I was working for Seabird project.
Nimage nanna hrutpurvaka pranamagalu.

Ravi shankar
Dubai

Ravi shankar

chitra said...

ತೇಜಸ್ವಿನಿ,

ಕಾಲೇಜ್ ಅಷ್ಟೇ ಅಲ್ಲ , ಶಾಲೆಗಳಲ್ಲೂ ಇದೇ ಹಾಡು .
ನಿಜಕ್ಕೂ ಈಗೀಗಿನ ಕೆಲವು ಮೇಷ್ಟ್ರುಗಳ / ಮೇಡಂ ಗಳ ಬಗ್ಗೆ
ಮಕ್ಕಳ ಅಭಿಪ್ರಾಯ ಕೇಳಿದಾಗ ರಾಶಿ ಬೇಜಾರಾಗ್ತು .ನಮ್ಮ ಹಳ್ಳಿ ಕಡೆಗೆ ಈಗಿತ್ಲಾಗಿ ಅಪಾಯಿಂಟ್ ಮೆಂಟ್ ಲೆಟರ್ ಸಿಕ್ಕಿದ ಕೆಲವರಿಗಂತೂ ರಿಟೈರ್ ಆಗ ವಯಸ್ಸು ಹತ್ರ ಬಂದು ಹೇಳಿ ಕೇಳಿದ್ದಿ. ಅವಕೆಲ್ಲ ಏನು ಕಲಿತಿದ್ದ ಹೇಳೇ ಮರ್ತು ಹೋಗಿಕ್ಕು. ಮಕ್ಕಳಿಗೆ ಕಲಿಸ ಉತ್ಸಾಹ ಇರ್ತಿಕ್ಕಾ ಅನ್ನದು ನನ್ನ ಚಿಂತೆ !

ಶಾಲಿನಿ,

ನಾನೂ ಸಾಗರದವಳೇ.ಆದರೆ ಶಿವಮೊಗ್ಗದಲ್ಲಿ ಓದಿಲ್ಲ.
ಬರ್ತಾ ಇರಿ .

ಪ್ರವೀಣ್,

ಪ್ರೋತ್ಸಾಹಕ್ಕೆ , ಮೆಚ್ಚುಗೆಗೆ ತುಂಬಾ ಧನ್ಯವಾದಗಳು. ಬರ್ತಾ ಇರಿ .


ರವಿ,

ಮೆಚ್ಚುಗೆಗೆ ಧನ್ಯವಾದಗಳು. ನಾನು " ಫಂಟಾಸ್ಟಿಕ್ " ಬರಹಗಾರಳು ಎಂದು ನಾನು ಒಪ್ಪುವುದಿಲ್ಲ .ನಮ್ಮ ಕನ್ನಡ ಬ್ಲಾಗ್ ಲೋಕದಲ್ಲಿ ಅತ್ತ್ಯುತ್ತಮ ಬರಹಗಾರರಿದ್ದಾರೆ. ಅವರೆದುರು ನಾನೇನೂ ಅಲ್ಲ. ಕೇವಲ ನನ್ನ ಅಭಿಪ್ರಾಯಗಳನ್ನು , ಬಾಲ್ಯದ ಕೆಲವು ನೆನಪುಗಳನ್ನು ಇಲ್ಲಿ ನನಗೆ ತಿಳಿದಂತೆ ಹಂಚಿಕೊಳ್ಳುತ್ತಿದ್ದೇನೆ ಅಷ್ಟೆ.
ಬರುತ್ತಾ ಇರಿ.
ಧನ್ಯವಾದಗಳು !

ಸುಶ್ರುತ ದೊಡ್ಡೇರಿ said...

ಹೂಂ, ಬೆಳೆಯೂರು ಬಿಆರ್ಡಿ ಮೇಷ್ಟ್ರೇ! ಅವ್ರು ನಿಸರಾಣಿ ಹೈಸ್ಕೂಲಲ್ಲಿದಿದ್ದ ಮೊದ್ಲು.. ನನ್ ಅಪ್ಪ, ಅತ್ತೆಗೆಲ್ಲ ಅವ್ರೇ ಮೇಷ್ಟ್ರು. ಫುಲ್ ಸ್ಟ್ರಿಕ್ಟಡ.. ಅತ್ತೆ ಈಗ್ಲೂ ಹೆದರ್ತು.. ;)