November 29, 2008

ಮುಂಬಯಿಯ ಮಹಾಯುದ್ಧ !

ಮುಂಬಯಿಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಯುದ್ಧ ಅಂತೂ ಮುಗಿದಂತಾಗಿದೆ. ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಭಯೋತ್ಪಾದಕರ ವಿರುದ್ಧ ಹೋರಾಡಿದ ನಮ್ಮ ಸೈನಿಕರು, ರಾಷ್ಟ್ರೀಯ ರಕ್ಷಣಾ ಪಡೆಯ ಕಮಾಂಡೋಗಳಿಗೆಲ್ಲ ಹೃತ್ಪೂರ್ವಕ ನಮನಗಳು .

ಕಳೆದ ಸಲ ಬಾಂಬ್ ಸಿಡಿದಾಗ ಕೆಲವೇ ಘಂಟೆಗಳಲ್ಲಿ ತಮ್ಮ ಮಾಮೂಲು ದಿನಚರಿಗೆ ಮರಳಿದ್ದ ಮುಂಬಯಿಯ ಜನ- ಜೀವನ ,ಈ ಬಾರಿ ಮಾತ್ರ ಹಠಾತ್ ದಾಳಿಗೆ ತತ್ತರಿಸಿ ನಿಂತೇ ಬಿಟ್ಟಿತ್ತು. ಎಲ್ಲೆಡೆಯೂ ದುಗುಡ ತುಂಬಿದ ವಾತಾವರಣ.

ಗುರುವಾರ ನಮಗೆಲ್ಲ ವಾರದ ರಜೆ.ನಿದ್ದೆಗಣ್ಣಲ್ಲೆ ಎತ್ತಿಕೊಂಡ ದಿನಪತ್ರಿಕೆಗಳು ಮಾತ್ರ ಮುಂದಿನೆರಡು ದಿನಗಳ ನಿದ್ರೆಯನ್ನೂ ಸೆಳೆದುಬಿಟ್ಟವು. ಮುಂಬಯಿಯ ಮೇಲಿನ ಆಕ್ರಮಣದ ಸುದ್ದಿಯಿಂದ ತುಂಬಿದ್ದ ಪತ್ರಿಕೆಗಳು ನಮ್ಮನ್ನು ಟಿ ವಿ ಯ ಮುಂದೆಯೇ ಕೂರುವಂತೆ ಮಾಡಿದವು. ಯಾವಾಗಲೂ ಪ್ರಯಾಣಿಕರಿಂದ ಗಿಜಗುಡುವ ಪುಣೆ -ಮುಂಬಯಿ ಟ್ರೇನುಗಳು, ಬಸ್ಸುಗಳು ಎರಡು ದಿನಗಳಿಂದ ಖಾಲಿ ಖಾಲಿ. ಮುಂಬಯಿಯ ಸೂತಕದ ಕಳೆ ಪುಣೆಯಲ್ಲೂ ಕಾಣುತ್ತಿತ್ತು. ಎಲ್ಲರ ಮುಖದಲ್ಲೂ ಆತಂಕ , ಪ್ರತಿ ಕ್ಷಣವೂ ಈಗೇನಾಯ್ತು / ಏನಾಗುತ್ತಿದೆ ಎಂದು ತಿಳಿಯುವ ಕಾತರ . ಆಫೀಸಿನಲ್ಲೂ ಅಲ್ಲಲ್ಲಿ ಗುಂಪು ಗುಂಪಾಗಿ ಚರ್ಚೆ ನಡೆಯುತ್ತಿತ್ತು. ಯಾಕೆ ಹೀಗಾಯ್ತು ,ಯಾರು ಅಪರಾಧಿಗಳು , ಏನು ಮಾಡಬೇಕು ಇತ್ಯಾದಿ ಪ್ರಶ್ನೆಗಳು.ಪ್ರತಿ ನಿಮಿಷವನ್ನೂ , ಪ್ರತಿ ಹಂತವನ್ನೂ ನೇರ ಪ್ರಸಾರ ಮಾಡುವ ಟಿ ವಿ ಚಾನಲ್ ಗಳ ಕಡೆ ಎಲ್ಲರ ಸೆಳೆತ .

ಮೂರುದಿನಗಳಕಾಲ ಎಲ್ಲರನ್ನೂ ಆತಂಕದ ಮಡುವಿಗೆ ದೂಡಿದ, ೧೯೦ಕ್ಕೂ ಹೆಚ್ಚು ಅಮಾಯಕರನ್ನು ಬಲಿ ತೆಗೆದುಕೊಂಡು , ೩೨೫ಕ್ಕೂ ಹೆಚ್ಚು ಗಾಯಾಳುಗಳನ್ನು ನರಳಿಸುತ್ತಿರುವ ಈ ಘಟನೆ ನಮ್ಮಂಥ ಸಾಮಾನ್ಯರನ್ನು ದಿಗ್ಮೂಢರನ್ನಾಗಿ ಮಾಡಿದೆ.

ಇಲ್ಲಿ ನಾನು ಕೇವಲ ನನ್ನಲ್ಲಿ ಕಾಡುತ್ತಿರುವ ಪ್ರಶ್ನೆಗಳನ್ನು , ನನ್ನ ಅನಿಸಿಕೆಗಳನ್ನು , ನನ್ನಲ್ಲಿ ಈ ಘಟನೆ ತುಂಬಿದ ಆಕ್ರೋಶ , ಅಸಹಾಯಕತೆಯನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನನ್ನಲ್ಲಿ ಕುದಿಯುತ್ತಿರುವ ಭಾವನೆಗಳನ್ನು ಹೇಳಿಕೊಂಡರೆ ಸ್ವಲ್ಪವಾದರೂ ಸಮಾಧಾನವಾಗಬಹುದೇನೋ ಎಂಬ ಆಸೆಯಷ್ಟೆ.

ಇತ್ತೀಚೆ ದೇಶದಲ್ಲಿ ಪದೇ ಪದೇ ಆಗುತ್ತಿರುವ ಭಯೋತ್ಪಾದಕ ಚಟುವಟಿಕೆಗಳು ನಿಜಕ್ಕೂ ಆತಂಕ ತರುತ್ತಿವೆ. ನಾವೆಷ್ಟು ಸುರಕ್ಷಿತ ಎಂಬ ಪ್ರಶ್ನೆ ಪದೇ ಪದೇ ಏಳುತ್ತಿದೆ. ದೇಶದ ವಾಣಿಜ್ಯ ರಾಜಧಾನಿಯ ಅತ್ಯಂತ ಪ್ರಮುಖ ಸ್ಥಳಗಳಲ್ಲಿ ನಡೆದ ಈ ಬಹಿರಂಗ ಆಕ್ರಮಣ ಜನಸಾಮಾನ್ಯರಲ್ಲಿ ಕಳವಳ ತಂದಿದೆ . ನಮ್ಮ ಗುಪ್ತಚಾರ ಪಡೆ ಮುನ್ಸೂಚನೆ ಕೊಡುವಲ್ಲಿ ವಿಫಲವಾಗಿದ್ದೇಕೆ? ಸಮುದ್ರಮಾರ್ಗದ ಮೂಲಕ ಆತಂಕವಾದಿಗಳು ರಾಜಾರೋಷವಾಗಿ ಮುಂಬಯಿಯಲ್ಲಿ ಕಾಲಿಡಬಹುದಾದರೆ ನಮ್ಮ ಗೃಹಖಾತೆ , ಗಡಿ ಭದ್ರತಾಪಡೆಗಳು ಎಷ್ಟು ಕರ್ತವ್ಯ ಪರತೆಯಿಂದ ಕಾರ್ಯ ವಹಿಸುತ್ತಿವೆ? ಮೀನುಗಾರರು ಕೊಟ್ಟ ಮಾಹಿತಿಯನ್ನು ರಕ್ಷಣಾ ಪಡೆಗಳು ನಿರ್ಲಕ್ಷ್ಯ ಮಾಡಿದ್ದೇಕೆ ? ತಾಜ್ ಹಾಗೂ ಒಬೆರೊಯ್ ನಂತಹ ಪಂಚತಾರಾ ಹೊಟೆಲ್ ಗಳ ಲೇ ಔಟ್ ಗಳು, ಎಲ್ಲೆಲ್ಲಿ ಏನೇನಿದೆ ಎಂಬ ಮಾಹಿತಿಗಳು ಉಗ್ರರ ಕೈಗೆ ಸಿಕ್ಕಿದ್ದಾದರೂ ಹೇಗೆ? ಛತ್ರಪತಿ ಶಿವಾಜಿ ಟರ್ಮಿನಸ್ ನಂತಹ ಜನನಿಬಿಡ ಸ್ಥಳಗಳಲ್ಲಿ ಭಯೋತ್ಪಾದಕರು ಆಯುಧಗಳೊಂದಿಗೆ ನುಗ್ಗಿ ಎರ್ರಾಬಿರ್ರಿ ಗುಂಡು ಹಾರಿಸಿ ಎಷ್ಟೋ ಅಮಾಯಕರರನ್ನು ಕೊಂದು ಹಾಕುವಷ್ಟು ನಿರ್ಭೀತರಾಗಿದ್ದು ಹೇಗೆ ... ಹೀಗೆ ಸಾವಿರಾರು ಪ್ರಶ್ನೆಗಳು ಜನ ಸಾಮಾನ್ಯರ ಮನಸ್ಸಿನಲ್ಲಿ ಕುದಿಯುತ್ತಿವೆ.

ಉತ್ತರಿಸಬೇಕಾದ ನಮ್ಮ ಗಣ್ಯ ರಾಜಕಾರಣಿಗಳು ಮಾತ್ರ ಈ ಘಟನೆಯಿಂದ ಕೊಂಚವೂ ವಿಚಲಿತರಾಗಿಲ್ಲ ಎನಿಸುತ್ತದೆ. ಬಹುಶಃ ಚುನಾವಣೆ ಹತ್ತಿರಬಂದಂತೆ ನಡೆದಿರುವ ಈ ದಾಳಿಯನ್ನು ತಮ್ಮ ಪರವಾಗಿ ಚುನಾವಣೆಯಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬ ಯೋಚನೆಯಲ್ಲಿ ಪುಳಕಿತರಾಗಿದ್ದಾರೆ. ನಮ್ಮ ನಾಯಕರುಗಳು ಈ ಸಂಕಟದ ಸಂದರ್ಭದಲ್ಲಿ ಒಟ್ಟಾಗದೇ ಒಬ್ಬರನ್ನೊಬ್ಬರು ನಿಂದಿಸುವಂಥ ಮಾತನಾಡಿ ಸಂದರ್ಭವನ್ನು ಚುನಾವಣಾ ಲಾಭಕ್ಕೆ ಬಳಸಿಕೊಂಡಿದ್ದು ಶೋಭೆ ತರುವಂಥದ್ದೆ? ಕೇವಲ ಅಧಿಕಾರವೊಂದೇ ಗುರಿಯಾಗಿರುವ ಇವರಿಗೆ ಜನತೆಯ ಬಗ್ಗೆ ಸ್ವಲ್ಪವಾದರೂ ಕಾಳಜಿಯಿದೆಯೆ? ದೇಶದ ವಿವಿಧ ಭಾಗಗಳಲ್ಲಿ ಈ ವರ್ಷ ನಡೆದಿರುವ ಸರಣಿ ಬಾಂಬ್ ಸ್ಫೋಟಗಳ ತನಿಖೆ ಆಮೆ ವೇಗದಲ್ಲಿ ನಡೆದಿರುವುದೇ ಇದಕ್ಕೆ ಸಾಕ್ಷಿ ಅಲ್ಲವೆ? ಭಯೋತ್ಪಾದಕತೆಯ ವಿರುದ್ಧ ಇನ್ನೂ ಯಾವುದೇ ಕಠಿಣ ಕಾನೂನನ್ನು ರೂಪಿಸಲು ಮೀನಮೇಷ ಮಾಡುವುದನ್ನು ಕಂಡಾಗ ಮೈಯುರಿಯುವುದಿಲ್ಲವೆ?

ಮುಸಲ್ಮಾನರನ್ನೇ ಏಕೆ ಭಯೋತ್ಪಾದಕರನ್ನಾಗಿ ಚಿತ್ರಿಸಲಾಗುತ್ತದೆ ಎಂದು ಪ್ರಶ್ನಿಸುವ ನಮ್ಮ ರಾಜಕಾರಣಿಗಳಿಗೆ , ಇಲ್ಲಿಯವರೆಗೆ ನಡೆದ ಹೆಚ್ಚಿನ ಭಯೋತ್ಪಾದಕ ಕೃತ್ಯಗಳಲ್ಲಿ ಸಿಕ್ಕಿಬಿದ್ದವರು ಅಥವಾ ಆ ಹೇಯ ಕೃತ್ಯಗಳ ಜವಾಬ್ದಾರಿಯನ್ನು ಹೆಮ್ಮೆಯಿಂದ ವಹಿಸಿಕೊಂಡವರು ಮುಸಲ್ಮಾನರು ಹಾಗೂ ಮುಸ್ಲಿಮ್ ಸಂಘಟನೆಗಳು ಎನ್ನುವ ಕಣ್ಣಿಗೆ ರಾಚುವ ಸತ್ಯವೂ ಕಾಣದಂತಾಗಿದ್ದು ನಮ್ಮ ದೌರ್ಭಾಗ್ಯವಲ್ಲವೆ? ಮುಸ್ಲಿಮರು ಅಲ್ಪಸಂಖ್ಯಾತರು , ಅವರನ್ನು ಕಾಪಾಡುವುದೇ ತಮ್ಮ ಮಹತ್ವದ ಗುರಿಯೆಂದು ಬೊಗಳೆ ಬಿಡುವ ಇವರಿಗೆ ಕಣ್ಣ ಮುಂದೆ ಖುರ್ಚಿಯಲ್ಲದೇ ಇನ್ನೇನೂ ಕಾಣದ್ದು ವಿಷಾದನೀಯ!
ಬದಲಿಗೆ ಅವರನ್ನೇಕೆ ದೇಶದ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ಮಾಡಬಾರದು? ಉತ್ತರಪ್ರದೇಶ ಭಾರತದ ಮುಸ್ಲಿಮ್ ಉಗ್ರವಾದಿಗಳ ಮನೆಯಂತಾಗಿದ್ದರೂ ಕೂಡ " ಉತ್ತರ ಪ್ರದೇಶದ ಮುಸ್ಲಿಂ ಬಾಂಧವರ ಕೂದಲೂ ಕೊಂಕದಂತೆ ನೋಡಿಕೊಳ್ಳುವ ಹೊಣೆ ತನ್ನದು " ಎಂದು ಹೇಳಿಕೆ ಕೊಡುವ ಮಾಯಾವತಿಯಂತಹ ನೇತಾರರು , ರಾಷ್ಟ್ರದ ನೈಸರ್ಗಿಕ ಸಂಪತ್ತಿನ ಮೇಲೆ ಮೊದಲ ಹಕ್ಕು ಅಲ್ಪಸಂಖ್ಯಾತರದ್ದು ಎಂದು ಸಾರುವ ಕಾಂಗ್ರೆಸ್ ನ ಧುರೀಣರು ದೇಶವನ್ನು ಒಡೆಯುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ರಾಜಕಾರಣಿಗಳ ಇಂತಹ ಹೇಳಿಕೆಗಳು , ಪಕ್ಷಪಾತದಿಂದಾಗಿ ಈಗ ಹಿಂದೂ ಸಂಘಟನೆಗಳು ಹಿಂಸೆಯತ್ತ ವಾಲುತ್ತಿವೆ ಎಂದೆನಿಸುವಿದಿಲ್ಲವೆ? ಅವರ ಧರ್ಮಯುದ್ಧ ನ್ಯಾಯಸಮ್ಮತವಾದರೆ ನಮ್ಮದೇಕಲ್ಲ ಎಂಬ ಭಾವನೆ ಬೆಳೆಯುತ್ತಿದೆ.

ಟಿ ವಿ ಚಾನಲ್ ಗಳಲ್ಲಿ ಬಿತ್ತರವಾಗುವ ಇತ್ತೀಚಿನ ಘಟನೆಗಳನ್ನು ನೋಡಿದ ನಮ್ಮ ಮಕ್ಕಳು ಮನಸ್ಸಿನಲ್ಲಿ ದ್ವೇಷವನ್ನು ಬೆಳೆಸಿಕೊಳ್ಳುತ್ತಲೇ ಬೆಳೆಯುತ್ತಾರೆ ಎಂದು ಅನಿಸುವುದಿಲ್ಲವೆ? ಹೀಗೆ ಮುಂದುವರಿದಲ್ಲಿ ಈಗಾಗಲೇ ಒಳಗೇ ಕುದಿಯುತ್ತಿರುವ ಕೋಮು ದ್ವೇಷದ ಜ್ವಾಲೆ ಮತ್ತೆ ಹೊತ್ತಿಕೊಳ್ಳದೇ? ಆಗ ಏನಾಗಬಹುದು ನಮ್ಮ ಭಾರತದ ಕಥೆ ಎಂದು ಕಳವಳವಾಗುತ್ತದೆ.

ಬೇರೆಲ್ಲ ರಾಷ್ಟ್ರಗಳಲ್ಲಿ ನೆಲೆಸಿರುವ ಮುಸಲ್ಮಾನರು ಅಲ್ಲಿಯ ಪ್ರಜೆಗಳಾಗಿ ಅಲ್ಲಿನ ಕಾನೂನಿನ ಪ್ರಕಾರ ನಡೆದುಕೊಳ್ಳಬಹುದಾದರೆ ಭಾರತದಲ್ಲೇಕೆ ಹಾಗೆ ಮಾಡುವುದಿಲ್ಲ ? ಇಲ್ಲೇಕೆ ಅವರಿಗೆ ಪ್ರತ್ಯೇಕ ಸ್ಥಾನಮಾನ ಬೇಕು? ಇಂತಹ ಎಷ್ಟೊ ಪ್ರಶ್ನೆಗಳು ನಮ್ಮನ್ನು ಕಾಡುವುದಿಲ್ಲವೆ? ಭಾರತದ ಮುಸ್ಲಿಮರು ನಮ್ಮ ಸಂವಿಧಾನದ ಕಾನೂನಿನ ಬದಲು ತಮ್ಮ ’ ಶರಿಯತ್’ ನ ಕಾಯಿದೆ ಗಳನ್ನು ಪಾಲಿಸುತ್ತೇವೆ ಎನ್ನುವುದಾದರೆ ಅವರಿಗೆ ಸಿಗಬೇಕಾದ ಶಿಕ್ಷೆಯನ್ನೂ ಮುಸ್ಲಿಂ ಕಾಯಿದೆಯ ಪ್ರಕಾರ ದಯಪಾಲಿಸೋಣ . ಸೆರೆ ಸಿಕ್ಕ ಉಗ್ರಗಾಮಿಗಳನ್ನು ಗಲ್ಲಿಗೇರಿಸುವುದೋ ಅಥವ ಜೀವಾವಧಿ ಶಿಕ್ಷೆ ಕೊಡುವ ಬದಲು ಸಾರ್ವಜನಿಕವಾಗಿ ಕಲ್ಲೆಸೆದೋ , ಛಡಿಯೇಟಿನಿಂದಲೋ ಸತ್ಕರಿಸೋಣ. ಕೈ ಕಾಲು ಕತ್ತರಿಸಿಯೋ , ಕಣ್ಣು ಕಿತ್ತೋ ಅವರದೇ ರೀತಿಯಲ್ಲಿ ಶಿಕ್ಷಿಸೋಣ .

ಯಾವ ಪಕ್ಷಗಳೂ ದೇಶದ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಸಮರ್ಥವಾಗಿಲ್ಲ ಎಂದು ಲೋಕಸಭಾ ಚುನಾವಣೆಯನ್ನೇ ಎಲ್ಲರೂ ಬಹಿಷ್ಕರಿಸಬಾರದೇಕೆ ಎಂದೆನಿಸುತ್ತದೆ. ಕೇವಲ ಅಧಿಕಾರದ ಲಾಲಸೆಯಿರುವ ಇವರಿಗಾಗಿ ಇನ್ನೆಷ್ಟು ಮುಗ್ಧ ಜೀವಿಗಳು ಜೀವತೆರಬೇಕು? ಇನ್ನೆಷ್ಟು ಮಕ್ಕಳು ಅನಾಥರಾಗಬೇಕು?
ಇನ್ನೆಷ್ಟು ಕುಟುಂಬಗಳು ತಮ್ಮ ಪ್ರಿಯಜನರನ್ನು ಕಳೆದುಕೊಳ್ಳಬೇಕು ? ಇನ್ನಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ನಮಗೆ ನಮ್ಮ ದೇಶ ಉಳಿಯಬಹುದೆ?

ಕೊನೆಯಮಾತು: ಅಂದಹಾಗೆ, ಲೋಕಸಭಾ ಭವನದ ಮೇಲೆ ಕೆಲವರ್ಷಗಳ ಹಿಂದೆ ವಿಫಲ ದಾಳಿ ನಡೆಸಿದ ಅಫ್ಜಲ್ ಗುರುವಿನ ಗಲ್ಲು ಶಿಕ್ಷೆ ಇನ್ನೂ ಗೊಂದಲದಲ್ಲೇ ಇದೆ। ನನಗನಿಸುತ್ತದೆ, ಅವನನ್ನು ನಿಜಕ್ಕೂ ಕ್ಷಮಾದಾನ ನೀಡಿ ಸಕಲ ಗೌರವದೊಂದಿಗೆ ಬಿಡುಗಡೆ ಮಾಡಬೇಕು. ಮುಂದಿನಸಲವಾದರೂ ಗುರಿತಪ್ಪದೇ ಕೆಲಸ ಪೂರೈಸಲೆಂದು ಹಾರೈಸಬೇಕು. ಅವನ ಉದ್ದೇಶ ಏನೇ ಇದ್ದರೂ ಬಹುಶಃ ಅದರಿಂದಾಗಿ ನಮ್ಮ ದೇಶಕ್ಕೆ ಲಾಭವಾಗುವ ಸಾಧ್ಯತೆಯೇ ಹೆಚ್ಚೆಂದು ನನ್ನ ಭಾವನೆ .

9 comments:

sunaath said...

ಹ್ಞಾ, ಖರೆ ಅದ, ಚಿತ್ರಾ.
ಅಫಜಲ್ ಗುರು, ಲೋಕಸಭೆಯ ಕಟ್ಟಡದ ಮೇಲೆ ದಾಳಿ ಮಾಡುವದರ ಬದಲು, ಲೋಕಸಭೆಯ ಸದಸ್ಯರಲ್ಲಿ ಕೆಲವರನ್ನು ಮಟಾಶ್ ಮಾಡಿದ್ದರೆ ಛಲೋ ಆಗ್ತಿತ್ತು ಅಂತ ಅನಸ್ತದ.
-ಕಾಕಾ

prasca said...

ಅವನಿಗೆ ಕಾಸು ಕೊಟ್ಟಿದ್ದು ಅಷ್ಟು ಕೆಲ್ಸಕ್ಕೆ ಮಾತ್ರ ಅವನು ಅಷ್ಟನ್ನೆ ಮಾಡಿದನೆ.

Lakshmi Shashidhar Chaitanya said...

ನಿಮ್ಮ ಮಾತುಗಳಲ್ಲಿರುವ ನೋವು ಅರ್ಥವಾಗತ್ತೆ.

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ,
ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯುತ್ತಿಲ್ಲ. ನನ್ನ ಮನಸ್ಸಿನಲ್ಲೂ ಇದೇ ತರಹ ರೋಷ, ಭಾವೊಗ್ದ್ವೇಗಗಳು ಮೊಳಗುತ್ತಿದೆ. ನೀವು ಬರೆದ ಪ್ರತಿ ವಾಕ್ಯವು ಅಕ್ಷರಶಃ ಸತ್ಯ.

Ittigecement said...

ಚಿತ್ರ..
ನೀವೆನ್ನುವ ಸತ್ಯ... ದಪ್ಪ ಚರ್ಮದ ರಾಜಕಾರಣಿಗಳಿಗೂ ಗೊತ್ತಾಗುತ್ತದೆ...
ಇಲ್ಲಿಯವರೆಗೆ ರಸ್ತೆ ಪಕ್ಕದಲ್ಲಿ ಬೊಂಬ್ ಸ್ಫೊಟ ಆಗುತ್ತಿತ್ತು.ಸಾಮಾನ್ಯ ಜನ ಸಾಯುತ್ತಿದ್ದರು.
ಈಗ ಪಂಚತಾರ ಹೊಟೆಲನಲ್ಲಿ ಶುರುವಾಗಿದೆ..ಇನ್ನು ರಾಜಕಾರಣಿಗಳೂ, ಸರ್ಕಾರಿ ಅಧಿಕಾರಿಗಳು ಇನ್ನು ಎಚ್ಚೆತ್ತುಕೊಳ್ಳುತ್ತಾರೆ ನೋಡಿ...
ಲೇಖನ ಬಹಳ ಚೆನ್ನಾಗಿ ಬರೆದಿದ್ದೀರಿ..
ಅಭಿನಂದನೆಗಳು...

Harisha - ಹರೀಶ said...

ಅಫ್ಜಲ್ ಗುರುವಿನ ಹೆಸರಲ್ಲಿ ಡಿಸೆಂಬರ್ ೧೩ಕ್ಕೆ ಶೋಕಾಚರಣೆ ಮಾಡಕ್ಕು.. ತನ್ನ ಕೆಲಸದಲ್ಲಿ ಅಸಫಲ ಆಜ್ನಲ.. ಅದ್ಕೆ

Anonymous said...

ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?

ಚಿತ್ರಾ said...

ಕಾಕಾ ,
ಯಾವತ್ತು ಕೊನೆ ಇದಕ್ಕೆಲ್ಲ ?

ಪ್ರಸ್ಕಾ , ಲಕ್ಷ್ಮಿ , ಸುಧೇಶ್,
ಪ್ರತಿಕ್ರಿಯೆಗೆ ಧನ್ಯವಾದಗಳು.

ಪ್ರಕಾಶ್,
ನಿಜವಾಗಿಯೂ ನಿದ್ರಿಸುತ್ತಿರುವವರನ್ನು ಎಚ್ಚರಿಸಬಹುದು, ಆದರೆ ನಿದ್ರೆಯನ್ನು ನಟಿಸುತ್ತಿರುವವರನ್ನು ಏಳಿಸುವುದು ಸುಲಭವಲ್ಲ.
ಇವರುಗಳು, ಎದ್ದೇಳದಿದ್ದರೆ ಒದ್ದು ಏಳಿಸುವ ಹೊಣೆ ನಮ್ಮ ಪಾಲಿಗೆ ಬರ ಬಹುದೇನೋ!

ಹರೀಶ,
ನೀ ಹೇಳಿದ ಹಾಂಗೆ ಶೋಕ ಸಭೆ ಇಟ್ಟರೆ , ಭಾರೀ ಜನ ಸೇರ ಸಾಧ್ಯತೆ ಇದ್ದು ನೋಡು !

ನೀಲಾಂಜಲಾ,
ಧನ್ಯವಾದಗಳು. ಖಂಡಿತಾ ನಿಮ್ಮ ಬ್ಲಾಗ್ ನೋಡುತ್ತೇನೆ.
ಬರುತ್ತಿರಿ.

shivu.k said...

ಚಿತ್ರಾ ಮೇಡಮ್,

ನಿಮ್ಮ ಬರವಣಿಗೆಯ ಆಳ ಅರ್ಥವಾಗುತ್ತಿದೆ. ನನ್ನ ಮನಸ್ಸಿನಲ್ಲೂ ರೋಷ ಉಕ್ಕುತ್ತಿದೆ...ನಿಮ್ಮ ಮಾತು ಸರಿ ಎನಿಸುತ್ತದೆ...