June 18, 2009

ನಂ ಕನ್ನಡ ಬಾಸೆ....

ಪರಾಂಜಪೆಯವರ ಮಮ್ಮದೆಯನ್ನು ಓದುವಾಗ ಪರಿಚಯದವರೊಬ್ಬರು ಹೇಳಿದ ಒಂದು ತಮಾಶೆ ನೆನಪಾಯಿತು .

ಅಂಕೋಲಾ ಕಡೆ ಹಾಲಕ್ಕಿ ಗೌಡರು ಹೆಚ್ಚು. ಅವರೆಲ್ಲ ಒಮ್ಮೆ , ಒಂದು ಬಯಲಾಟ ಮಾಡಬೇಕೆಂದು ಹುಮ್ಮಸ್ಸಿನಿಂದ ಪ್ರಾಕ್ಟೀಸ್ ಮಾಡಿ ಅಂತೂ ಒಂದು ಶುಭ ದಿನ ಬಯಲಾಟ ನಡೆಯಿತು. ರಾಜನು ತನ್ನ ರಾಣಿಯೊಂದಿಗೆ ಉದ್ಯಾನವನದಲ್ಲಿ ವಿಹರಿಸುತ್ತಿರುವ ಸನ್ನಿವೇಶ.ರಾಜನ ಪಾತ್ರಧಾರಿ ಉತ್ಸಾಹದಿಂದ ರಾಣಿಗೆ ಪ್ರಕೃತಿಯ ವರ್ಣನೆ ಮಾಡತೊಡಗಿದ ..

" ಪ್ರಿಯೇ , ಈ ಸುಂದರವಾದ ಉಜ್ಜನವನದ ಚೊಬಗನ್ನು ನೋಡು. ಆಚಿ ದಿಕ್ಕಿಗ್ ನೋಡು ಕೆಂಪಿ ಗೊಂಡೆನುಂಗು , ಇಚಿ ದಿಕ್ಕಿಗ್ ನೋಡು ಬಿಳಿ ಗೊಂಡೆನುಂಗು , ಚೊಚ್ಚೊಂದವಾಗಿ ಆರಾಡುತ್ತಿರುವ ’ ಅಪನಕ್ಕಿ’ ಗಳ ಇಂಡನ್ನು ನೋಡು. ಪ್ರಿಯೇ , ಅಲ್ಲಿ ಪಚ್ಚಿಮ ದಿಕ್ಕಿನಲ್ಲಿ ಕೆಂಪು ಕೆಂಪಾಗಿ ಹೊಳೆಯುತ್ತಿರುವ ಆಕಾಚವನ್ನು ನೋಡು ಪ್ರಿಯೇ...

ಹಾಲಕ್ಕಿಗಳೆ ಹೆಚ್ಚಿನ ಪ್ರೇಕ್ಷಕರಾಗಿದ್ದರಿಂದ , ಬಯಲಾಟ ಸುಗಮವಾಗಿ ನಡೆಯಿತಂತೆ !
( ಹಾಲಕ್ಕಿ ಗೌಡರು - ಒಂದು ಬುಡಕಟ್ಟು ಜನಾಂಗ ; ಗೊಂಡೆನುಂಗು - ಚೆಂಡು ಹೂ ; ಅಪನಕ್ಕಿ - ಪಾರಿವಾಳ )

ಇನ್ನೊಂದು , ನಾವು ಚಿಕ್ಕವರಾಗಿದ್ದಾಗಿನ ಸಂದರ್ಭ. ಅಜ್ಜನ ಮನೆಯ ಕೆಲಸದಾಳು ಬೀರನ ಮಗಳು ಗೀತಾ ೭ನೇ ಕ್ಲಾಸ್ ವರೆಗೆ ಕಲಿತವಳು. ಸುಮಾರು ನಮ್ಮದೇ ವಯಸ್ಸಿನ ಆಕೆ ಅವರ ಪೈಕಿಯಲ್ಲೆ ಹೆಚ್ಚು ಓದಿದ ಹುಡುಗಿ. ಆ ಹೆಮ್ಮೆ ಅವಳಿಗೆ ತುಂಬಾ ಇತ್ತು. ಅವಳ ಅಕ್ಕನ ಮದುವೆಗೆ ಅಜ್ಜನಿಗೆ ಕರೆ ಬಂದಿತ್ತು. ದೊಡ್ಡವರ್ಯಾರೂ ಹೋಗದ ಕಾರಣ ,ನಾವು ಮಕ್ಕಳೇ ಹೋಗಬೇಕಾಯ್ತು. ನಾವೆಲ್ಲ ಬಂದಿದ್ದನ್ನು ಕಂಡು ಅಲ್ಲಿದ್ದ ಹೆಂಗಸೊಬ್ಬಳು ’ ಸುಬ್ರಾಯ್ ಹೆಗಡೇರ ಮನಿ ಮದ್ವಿಗೆ ಹೋಗಿ ಬಂದ್ಮೇಲೆ ಅಕ್ಕನ್ ಮದ್ವಿಗೆ ತಾನು ಹಾಡಾದೇಯಾ ಹೇಳಿ ನಮ್ಮ್ ಗೀತಾನೂ ನಿಮ್ ಜನ್ರಾಂಗೇ ಹಾಡು ಹೇಳಾಕೆಲ್ಲ ಕಲ್ತದೆ. ಏ ಗೀತಾ ಹೇಳೆ " ಎಂದಳು. ಗೀತಾ ಸ್ವಲ್ಪ ನಾಚುತ್ತಾ ಸ್ವಲ್ಪ ಹೆಮ್ಮೆ ತೋರಿಸುತ್ತ ಹಾಡ ತೊಡಗಿದಳು " ಇದೇ ಸುಬ ಮೂತ್ರಾ... ಮಂಗಲ ಸೂಸ್ತ್ರಾ...... " ನಾವು ಉಕ್ಕುತ್ತಿದ್ದ ನಗುವನ್ನು ಹೇಗೆ ತಡೆದುಕೊಂಡು ಗಂಭೀರವಾಗಿ ಕುಳಿತಿದ್ದೆವೋ ನಮಗೇ ಗೊತ್ತು !

ಇದೆಲ್ಲ ಅನಕ್ಷರಸ್ಥರ ಕಥೆಯಾಯಿತು. ಆದರೆ , ಕನ್ನಡದ ಟಿವಿ ವಾಹಿನಿಗಳನ್ನು ನೋಡುವಾಗ ಇಂತಹವು ಎಷ್ಟೋ ದಿನನಿತ್ಯ ನೋಡ ಸಿಗುತ್ತವೆ ಅಲ್ಲವೆ?

18 comments:

ಗೀತಾ ಗಣಪತಿ said...

ಚಿತ್ರ ರವರೆ,
ನಕ್ಕು ನಕ್ಕು ಸುಸ್ತಾಗಿ ಹೋತು :)

PARAANJAPE K.N. said...

ಚಿತ್ರಾ
ನಮ್ಮ ಮಮ್ಮದೇ ನಿಮಗೆ ಇಷ್ಟೆಲ್ಲಾ ನೆನಪಿಸಲು ಕಾರಣನಾದನಲ್ಲ, ಬಹಳ ಚೆನ್ನಾಗಿದೆ. ಕನ್ನಡ ಪದಗಳ ಅಪಭ್ರ೦ಶ ಹೇಗೆ ಅಪಾರ್ಥ ಮೂಡಿಸುತ್ತದೆ, ಹಾಸ್ಯದ ಹೊನಲು ಹರಿಸುತ್ತದೆ, ಎ೦ಬುದಕ್ಕೆ ನಿಮ್ಮ ಲೇಖನ ಒಳ್ಳೆಯ ಉದಾಹರಣೆ. ಖುಷಿಯಾಯಿತು.

ಬಾಲು said...

nakku nakku sustade!!!

subha moothra... hahahaha. illi ofc nalli ellaru nagtha iddare.

thumba chenangide.

ಸಿಮೆಂಟು ಮರಳಿನ ಮಧ್ಯೆ said...

ಹೊಟ್ಟೆ ಹುಣ್ಣಾಗುವಷ್ಟು ನಕ್ಕೆ...

ನಮ್ಮೂರಲ್ಲೂ ಬಯಲಾಟಕ್ಕೆ ಹೋಗಿದ್ದೆ..
" ಪ್ಲಿಯೆ... ಪಚ್ಚಿಮ ದಿಕ್ಕಿನಲ್ಲಿ ನೀಲಿ
ಆ.. ಕಾಚವನ್ನು ನೋಡು"
ಅಂದಾಗ ಸಭೆಯಲ್ಲಿ ನಗುತಡೆಯಲಾಗಲಿಲ್ಲ...

ಬಹಳ ದಿನಗಳ ನಂತರ ಫಾರ್ಮಿಗೆ ವಾಪಸ್ ಬಂದಿದ್ದೀರಿ...
ಶತಕ ಬಾರಿಸಿರಿ...

ಅಭಿನಂದನೆಗಳು...

shivu said...

ಚಿತ್ರ ಮೇಡಮ್,

ಅನಕ್ಷರಸ್ತರ ಮಾತುಗಳನ್ನು ಕೇಳುತ್ತಿದ್ದರೇ ನಗು ಬರುತ್ತಿರುತ್ತದೆ...

ಶಾಂತಲಾ ಭಂಡಿ said...

ಚಿತ್ರಕ್ಕಾ...
ಕೊನೆಯಲ್ಲಿ ಹಾಡು ಕೇಳಿದ್ರೆ ಎಷ್ಟು ನಗು ಬರ್ತು ಅಂದ್ರೆ...
ನಾವೆಲ್ಲ ಎಷ್ಟು ಹಾಡು ಕಲತ್ಗಂಡ್ರೂ ಹಿಂಗೆ ಮಾತ್ರ ಹಾಡಲೆ ಬರ್ತಿಲ್ಲೆ ನಮಗೆ, ಅಲ್ದ? :-)
ನಗಿಸಿದ್ದಕ್ಕೆ ಧನ್ಯವಾದ.

Keshav Kulkarni said...

"ಪ್ರಿಯೇ , ಈ ಸುಂದರವಾದ ಉಜ್ಜನವನದ ಚೊಬಗನ್ನು ನೋಡು. ಆಚಿ ದಿಕ್ಕಿಗ್ ನೋಡು ಕೆಂಪಿ ಗೊಂಡೆನುಂಗು , ಇಚಿ ದಿಕ್ಕಿಗ್ ನೋಡು ಬಿಳಿ ಗೊಂಡೆನುಂಗು , ಚೊಚ್ಚೊಂದವಾಗಿ ಆರಾಡುತ್ತಿರುವ ’ ಅಪನಕ್ಕಿ’ ಗಳ ಇಂಡನ್ನು ನೋಡು. ಪ್ರಿಯೇ , ಅಲ್ಲಿ ಪಚ್ಚಿಮ ದಿಕ್ಕಿನಲ್ಲಿ ಕೆಂಪು ಕೆಂಪಾಗಿ ಹೊಳೆಯುತ್ತಿರುವ ಆಕಾಚವನ್ನು ನೋಡು ಪ್ರಿಯೇ.."

ನಂಗ ಖರೆ ಹೇಳ್ಬೇಕಂದ್ರ ಇದನ್ನ ಓದಿ ನಗುನs ಬರ್ಲಿಲ್ಲ, ಸಿಕ್ಕಾಪಟ್ಟಿ ಖುಶಿ ಆತು. ಎಷ್ಟ್ ರಿಚ್ ಅದಪಾ ನಮ್ ಕನ್ನಡ ಅಂತ! ಗೊಂಡೆನುಂಗು ಅಂದ್ರ ಚಂಡೂ ಅಂತ ಪಾರಿವಾಳಕ್ಕ ಅಪನಕ್ಕಿ ಅಂತಾರಂತ ಗೊತ್ತs ಇರ್ಲಿಲ್ಲ.

ನೂರಾರು ಸಂಸ್ಕೃತಿ, ನೂರಾರು ಆಡುಭಾಷೆ ಇರುವ ಕನ್ನಡ, ನೀನೇ ಧನ್ಯ; ನಿನ್ನ ಮಡಿಲಲ್ಲಿ ಹುಟ್ಟಿರುವ ನಾನು ಇನ್ನೂ ಧನ್ಯ!

ಚಂದ್ರಕಾಂತ ಎಸ್ said...

ಚಿತ್ರಾ

ನೀವು ಪ್ರೀತಿಯಿಂದ ಚಂದ್ರಕ್ಕಾ ಎಂದರೆ ಖುಷಿಯಾಗುತ್ತೆ. ಈ ನಿಮ್ಮ ಬರಹ ಬಹಳ ಇಷ್ಟವಾಯಿತು. ನನಗೆ ಖಂಡಿತ ನಗು ಬರಲಿಲ್ಲ. ಏಕೆ ಗೊತ್ತೇ? ಇವೆಲ್ಲ ಕನ್ನಡದ ಬೇರೆ ಬೇರೆ ಉಪಭಾಷಗಳು. ಬೆಂಗಳೂರಿನಲ್ಲಿರುವ ನಮ್ಮಂಥವರಿಗೆ ಈ ಭಾಷೆಗಳು ಕೇಳಸಿಗುವುದಿಲ್ಲ.ಆ ಭಾಷೆಗಳ ಕೆಲವು ತುಣುಕುಗಳನ್ನು ಕೊಟ್ಟಿದ್ದಕ್ಕೆ ಧನ್ಯವಾದ. ಭಾಷಾಶಾಸ್ತ್ರದ ಪಾಠ ಮಾಡುವಾಗ ನನಗಿದು ಉಪಯೋಗಕ್ಕೆ ಬರುತ್ತದೆ.

sunaath said...

ನೀವು ಹೇಳೋದು ಸರಿ. ಕನ್ನಡ ಟೀವಿಗಳಲ್ಲಿ ಬರುವ ಕನ್ನಡಕ್ಕಿಂತ ಹಾಲಕ್ಕಿ ಕನ್ನಡವೇ ಏಷ್ಟೋ ಮೇಲು.

ಚಿತ್ರಾ said...

ಗೀತಾ ಅವರೇ,
ನಕ್ಕಿದ್ದಕ್ಕೆ ಧನ್ಯವಾದಗಳು !

ಪರಾಂಜಪೆಯವರೇ,
ನಿಮ್ಮ ಮಮ್ಮದೆಯನ್ನು ಅಮೇರಿಕಾದಲ್ಲಿರುವಾಗಲೇ ಓದಿದ್ದೆ. ಆದರೆ ಆಗ ತಲೆಯಲ್ಲಿ ಬರಹ ರೂಪುಗೊಳ್ಳುತ್ತಿದ್ದರೂ ಬರೆಯಲಾಗಿರಲಿಲ್ಲ. ನೀವಂದಂತೆ, ಶಬ್ದಗಳ ಅಪಭ್ರಂಶ ಏನೆಲ್ಲ ಅಪಾರ್ಥ ಕಲ್ಪಿಸುತ್ತದೆ ಅಲ್ಲವೆ?
ಧನ್ಯವಾದಗಳು

ಬಾಲು,
ಧನ್ಯವಾದಗಳು ನಕ್ಕಿದ್ದಕ್ಕೆ, ಮೆಚ್ಚಿದ್ದಕ್ಕೆ ಮತ್ತು ಆಫೀಸ್ ನಲ್ಲೂ ನಗೆ ತುಂಬಿದ್ದಕ್ಕೆ ! ಬರುತ್ತಾ ಇರಿ.

ಚಿತ್ರಾ said...

ಪ್ರಕಾಶಣ್ಣ,
ಎಲ್ಲ ಊರಿನ ಬಯಲಾಟಗಳಲ್ಲೂ ಇಂಥವು ಸಾಮಾನ್ಯವೇನೋ !! ನಿಮ್ಮೆಲ್ಲರ ಆಶೀರ್ವಾದ ಹೀಗೆಯೆ ಇದ್ದರೆ ಖಂಡಿತಾ ಶತಕ ಬಾರಿಸಲು ಪ್ರಯತ್ನಿಸುವೆ.


ಶಿವೂ,
ಧನ್ಯವಾದಗಳು

ಶಾಂತಲಾ,
ಹೌದೇ, ನಾವು ಎಷ್ಟೇ ಹಾಡು ಕಲಿತರೂ ಹೀಂಗೆ ಹಾಡಲಾಗ್ತಿಲ್ಲೆ ನೋಡು !

ಚಿತ್ರಾ said...

ಕುಲಕರ‍್ಣಿಯವರೆ,

ನಿಜ, ನಮ್ಮ ಕನ್ನಡ ಭಾಷೆ, ಶ್ರೀಮಂತವಾದದ್ದು. ಅದನ್ನು ಉಳಿಸಿಕೊಳ್ಳಲು ನಮ್ಮೆಲ್ಲರ ಪ್ರಯತ್ನ ಅಗತ್ಯವಿದೆ ಅಲ್ಲವೆ? ಧನ್ಯವಾದಗಳು.


ಚಂದ್ರಕ್ಕಾ,
ಈ ಬರಹ, ನಿಮಗೆ ಪಾಠ ಮಾಡುವಾಗ ಉಪಯೋಗವಾಗುತ್ತದೆ ಎಂದು ನೀವು ಬರೆದದ್ದು ನನಗೆ ಹೆಮ್ಮೆಯ ವಿಷಯ.

ಸುನಾಥ್ ಕಾಕಾ,
ಮೆಚ್ಚುಗೆಗೆ ಧನ್ಯವಾದಗಳು.

ಸುಧೇಶ್ ಶೆಟ್ಟಿ said...

"ಇದೇ ಸುಬ ಮೂತ್ರ..." ಅ೦ತೂ ಸೂಪರ್... ನಗು ತಡೆಯಲಾಗಲಿಲ್ಲ:)

Harish - ಹರೀಶ said...

ಹಿಹ್ಹಿಹ್ಹಿ!

ಜೋಮನ್ said...

ಚಿತ್ರಾ ಮೇಡಂ ನಕ್ಕು ನಕ್ಕು ಸಾಕಾಯಿತು. ಚೆಂದ ಬರೆದಿದ್ದೀರ.

Deepasmitha said...

ಚಿತ್ರಾ ಮೇಡಮ್, ತಮಾಷೆಯಾಗಿತ್ತು. 'ಶ್ರೀಕೃಷ್ಣ ಸಂಧಾನ' ನಾಟಕ ನೋಡಿದ ನೆನಪಾಯ್ತು. ಅದರಲ್ಲೂ ಕೂಡ ಹೇಗೆಯೇ. ಭಾಷಾ ಅಪಭ್ರಂಶದಿಂದ ಏನೆಲ್ಲ ಗೊಂದಲ, ತಮಾಷೆ ಸೃಷ್ಟಿಯಾಗುತ್ತವೆ.

ಜಲನಯನ said...

ಚಿತ್ರಾ, ಏನ್ರೀ..?? ಹಾಡು ಹಾಡೋಕೂ ಒಂದು ಸಮಯ, ಸಂದರ್ಭ, ಸ್ಥಾನ ಮಾನ ಬೇಡವೇ,,...? ನನ್ನ ಬ್ಲಾಗ್ ನಲ್ಲಿ ‘ಹಾಡು ವಿಥ್ ಮ್ಯೂಜಿಕ್‘ ಅನ್ನೋ ಬ್ಲಾಗ್ ಪೋಸ್ಟ್ ನೋಡಿ...
ಚನ್ನಾಗಿ ಬರೆದಿದ್ದೀರಿ ನಾಟಕ, ಬಯಲಾಟದ ಪ್ರಸಂಗ...
ನಮ್ಮ ಊರಿನಲ್ಲೂ ಒಮ್ಮೆ ಹೀಗೇ...ಅಪರೂಪಕ್ಕೆ ನಮ್ಮ ಕೇರಿಯ ನಿಂಗಿ (ನ್ನನ ಗೆಳೆಯ ಮಾದನ ಹೆಂಡತಿ, ಕನ್ನಡ ಸಂಘದ ಖಜಾಂಚಿಯಾಗಿದ್ದ ಆವರ್ಷ) ಗೆ...ಸ್ವಾಗತ ಭಾಷಣ ಮಾಡಲು ಹೇಳಿದಾಗ...
ಪಿರೀತಿ ಜನಗಳೇ...ನಮ್ ಸಮ ಆರಂಬಕ್ಕೆ ‘ಹಾದರನೀ“ ಸರಪಂಚಮ್ಮ ಸರೋಜಕ್ಕ್ ಬಂದವ್ರೆ... ಅವ್ರಿಗೆ ನಮ್ಮ ಎಲ್ರ ಪರ್ ವಾಗಿ ಹಾದರ್ದ ಸ್ವಾಗ್ತ ...ಎಂದು ಪದೇ ಪದೇ ಹಾದರ“ಎಂದಾಗ ಎಲ್ಲರಿಗೂ ಮುಜುಗರ...

ಸಂತೋಷ್ ಚಿದಂಬರ್ said...

nakku nakku ,, kannalli neer bantu..