November 21, 2009

ಪುಣೆ ಫಲಕಗಳು -2

ಇನ್ನಷ್ಟು ಪುಣೆ ಫಲಕಗಳು ನಿಮ್ಮ ಮನರಂಜನೆಗೆ !!

"ಶ್ರೀ ಬಾಲಾಜಿ ಕೃಪಾ ವಾಚ್ " ಕನ್ನಡಕಗಳನ್ನು ತಯಾರಿಸುವ ಏಕಮೇವ ಸ್ಥಳ ! "
ಖಂಡಿತವಾಗಿಯೂ ಇದು ಕನ್ನಡಕಗಳನ್ನು ತಯಾರಿಸುವ ಏಕಮೇವ " ವಾಚ್ ಅಂಗಡಿ "




"ಹೇ ಈಶ್ವರಾ , ಎಲ್ಲರಿಗೂ ಒಳ್ಳೆಯದನ್ನು ಮಾಡು , ಆದರೆ ಮೊದಲು ನನ್ನಿಂದ ಶುರು ಮಾಡು "
ಎಂಥಾ ಸುವಿಚಾರ !!


ಲಿಫ್ಟ್ ನಲ್ಲಿ ಕಂಡಿದ್ದು !


" ಬಂಗಲೆ ಖಾಲಿ ಇದೆ ! ಕದಿಯುವಂಥಾದ್ದು ಏನೂ ಇಲ್ಲ .
ವಿನಾಕಾರಣ ಕಷ್ಟ ಪಡಬೇಡಿ !! "
ಕಳ್ಳರಿಗೂ ಕಷ್ಟವಾಗಬಾರದೆಂದು ಯೋಚಿಸುವ ಈ ಮಹಾನುಭಾವರು ಯಾರೋ !


"2T ಮಿಕ್ಸ್ ಪೆಟ್ರೋಲ್ ,
ರಿಕ್ಷಾ ಹಾಗೂ ಲೇಡೀಸ್ !! "
ಏನಾದರೂ ತಿಳಿಯಿತೆ? ಇದು ಪೆಟ್ರೋಲ್ ಬಂಕ್ ನಲ್ಲಿ ಪ್ರತ್ಯೇಕ ಸಾಲನ್ನು ಸೂಚಿಸುವ ಬೋರ್ಡ್.


ಇಂಥಾ
ಬೋರ್ಡ್ ಇಲ್ಲಿ ಮಾತ್ರ ನೋಡಬಹುದು !!

" ವಿಳಾಸ ಹೇಳಲು ಚಾರ್ಜ್ ಕೊಡಬೇಕಾಗುತ್ತದೆ .
ವಿಳಾಸ , ೧೦ ಕಿ . ಮೀ ಒಳಗಡೆ ಇದ್ದರೆ ೫೦ ಪೈಸೆ. ಅದಕ್ಕಿಂತ ಹೆಚ್ಚು ದೂರದ್ದಾದರೆ ೧ ರೂ.
ಹೀಗೇಕೆ ಬೋರ್ಡ್ ಹಾಕಿದ್ದೀರಿ ಎಂದು ಕೇಳಿದರೆ ೨೦೦೦ ರೂ. "

ವಿ. ಸೂ.: ಓದಲು ಬಾರದವರಿಗೆ ವಿಳಾಸವನ್ನು ಪುಕ್ಕಟೆಯಾಗಿ ಹೇಳಲಾಗುತ್ತದೆ !! "




ಇದಕ್ಕೇನು ಹೇಳುವಿರಿ ?

" ಜನನ -ಮರಣ ದಾಖಲೆ ವಿಭಾಗ "

೨ ದಿನ 'ಜನನ -ಮರಣ ' ಬಂದ್ ಇರುತ್ತದೆ !!!!

26 comments:

ಸವಿಗನಸು said...

ಚಿತ್ರಾ,
ಸೂಪರ್ ಆಗಿವೆ ಬೋರ್ಡುಗಳು...
ಒಂದಕ್ಕಿಂತ ಒಂದು ತಮಾಷೆಯಾಗಿವೆ.....

ಸುಧೇಶ್ ಶೆಟ್ಟಿ said...

lol!!!

ಒ೦ದೊ೦ದು ಬೋರ್ಡ್ ನೋಡುತ್ತಿದ್ದರೆ ನಗು ಉಕ್ಕಿ ಬ೦ತು...

ರಿಕ್ಷಾದ ಮೇಲಿನ ಬರಹ, ಬಿಲ್ಡಿ೦ಗ್ ಖಾಲಿಯಿದೆ ಅ೦ತೂ ಸೂಪರ್...:)

ಎರಡು ತಿ೦ಗಳ ಹಿ೦ದೆ ಪುಣೆ ಕ೦ಪೆನಿಯೊ೦ದರಿ೦ದ ಆಫರ್ ಬ೦ದಿದ್ದಾಗ ನನಗೆ ನೆನಪಾಗಿದ್ದು ನಿಮ್ಮ ಈ ಬರಹಗಳು...

Dileep Hegde said...

ಹೇ ಈಶ್ವರಾ , ಎಲ್ಲರಿಗೂ ಒಳ್ಳೆಯದನ್ನು ಮಾಡು , ಆದರೆ ಮೊದಲು ನನ್ನಿಂದ ಶುರು ಮಾಡು..!!
ಚೆನ್ನಾಗಿದೆ..!!

ಗೌತಮ್ ಹೆಗಡೆ said...

ಮಜಾ ಇದ್ದು. :):)

sunaath said...

ಇಂಥಾ ಹಾಸ್ಯಪ್ರಜ್ಞೆ ಪುಣೆಯವರಿಗೆ ಮಾತ್ರ ಸಾಧ್ಯವೇನೋ? ಹೆಕ್ಕಿ ತೆಗೆದು ನಮ್ಮನ್ನು ನಗಿಸಿದ್ದಕ್ಕೆ ಧನ್ಯವಾದಗಳು.

Raghu said...

ಚಿತ್ರಾ ಅವರೇ,
ಕ್ಯಾಮರ ಕೈನಲ್ಲೆ ಹಿಡ್ಕೊಂಡು ಹೋಗ್ತೀರಾ ಹೇಗೆ... ಕನ್ನಡಕ ತಯಾರಿಸುದು.. ಖಾಲಿ ಬಂಗಲೆ...೨ ದಿನ 'ಜನನ -ಮರಣ '.. ತುಂಬಾ ಚೆನ್ನಾಗಿದೆ... ಇಂಥಹ ಫಲಕಗಳನ್ನು ನೋಡಿದ ಕೊಡಲೇ ನಿಮ್ಮ ಕ್ಯಾಮರ ಪಾಲು ಕೇಳುತ್ತಾ..?
ನಿಮ್ಮವ,
ರಾಘು.

shivu.k said...

ಆಹಾ ಚಿತ್ರಾ ಮೇಡಮ್,

ನಿಜಕ್ಕೂ ಇವು ಸೂಪರೋ ಸೂಪರು...

ವಿಳಾಸ ಹೇಳಲು ಹಣ ಕೊಡಬೇಕೆ ಇದನ್ನು ನೋಡಿ ನನಗಂತೂ ಹೀಗೂ ಉಂಟೆ ಅನ್ನಿಸಿತ್ತು. ಮತ್ತು ನನ್ನ ಶ್ರೀಮತಿಯಂತೂ ಮನಸಾರೆ ನಕ್ಕಳು. ನಾನೂ ಕೂಡ...

ನನ್ನ ಜ್ವರ ಹೋಗಲು ಇದು ಇಂಥ ಟಾನಿಕ್ಕುಗಳು ಖಂಡಿತ ಬೇಕು.

ಧನ್ಯವಾದಗಳು.

ಸುಮ said...

ಹ್ಹ...ಹ್ಹ...ಹ್ಹ...ಚೆನ್ನಾಗಿದೆ

ಸಾಗರದಾಚೆಯ ಇಂಚರ said...

ಚಿತ್ರಾ ಅವರೇ
ಚೆನ್ನಾಗಿದೆ, ತುಂಬಾ ನಗು ಬಂತು

ವಿ.ರಾ.ಹೆ. said...

ha ha.. superb...

Unknown said...

ಸೂಪರ್

ತೇಜಸ್ವಿನಿ ಹೆಗಡೆ said...

:D :D :D

ಸೀತಾರಾಮ. ಕೆ. / SITARAM.K said...

ಪೂಣೆ ಫಲಕಗಳನ್ನು ನೋಡ್ತಾ ನಕ್ಕು ನಕ್ಕು ಸಾಕಾಯ್ತು. ತಮ್ಮ ಪರಿಶ್ರಮಕ್ಕೆ ಕನ್ನಡ ವಿವರಣೆಗೆ ಧನ್ಯವಾದಗಳು.

ESSKAY said...

पाट्या वाचून हसू अवरेना.
मस्त आहे
- सुनील

ಫಲಕಗಳನ್ನ ಓದಿ ನಗು ತಡೆಯಲು ಆಗುತ್ತಿಲ್ಲ.
ಚೆನ್ನಾಗಿದೆ.
- ಸುನೀಲ್

Ittigecement said...

ಚಿತ್ರಾ....

ಇಷ್ಟೆಲ್ಲ ಫೋಟೊಗಳ ಹಿಂದಿನ ಶ್ರಮ ಸಾರ್ಥಕ ಆಗಿದೆ..!!

ಸಿಕ್ಕಾಪಟ್ಟೆ ನಗು ಬಂತು...
ಒಂದಕ್ಕಿಂತ ಒಂದು ಸೂಪರ್ರು...!

ಹ್ಹಾ..ಹ್ಹಾ...!

ನಮ್ಮನ್ನೆಲ್ಲ ನಗಿಸಿದ್ದಕ್ಕೆ...
ನಿಮ್ಮ ಹಾಸ್ಯ ಪ್ರಜ್ಞೆಗೆ ನನ್ನ ಸಲಾಮ್...

ಚಿತ್ರಾ said...

ಸವಿಗನಸಿನವರೆ, ಗೌತಮ್, ಸುಮಾ,
ವಿಕಾಸ್ ( ವಿ.ರಾ.ಹೆ.) , ಗುರು , ತೇಜೂ , ವಿಕಾಸ್ ,

ನಕ್ಕಿದ್ದಕ್ಕೆ ಧನ್ಯವಾದಗಳು ! ನಗುವುದು ಒಳ್ಳೆಯದು ಅಲ್ಲವೇ?

ಚಿತ್ರಾ said...

ರಾಘು,
ಮೆಚ್ಚಿಗೆಗೆ ಥ್ಯಾಂಕ್ಸ್.
ಇವೆಲ್ಲ ನನ್ನ ಕ್ಯಾಮೆರಾದ್ದಲ್ಲ ! ಪುಣೆಯಲ್ಲಿ ಸಹಜವಾಗಿ ಕಾಣ ಸಿಗುವ ಇಂಥಾ ಬರಹಗಳನ್ನು ಕ್ಲಿಕ್ಕಿಸಿ ನಗುವನ್ನು ಹಂಚುವ ಕುತೂಹಲಿಗರು ಬಹಳ ಜನರಿದ್ದಾರೆ.
ವಿಶೇಷವೆಂದರೆ, ಇದಕ್ಕಾಗಿ ಒಂದು ವೆಬ್ ಸೈಟ್ ಕೂಡ ಮುಡಿಪಾಗಿದೆ ! ನಿಮ್ಮ ಮೆಚ್ಚುಗೆ ಖಂಡಿತಾ ಆ ಮಹಾನುಭಾವರಿಗೆ ಸೇರಬೇಕು ! ಏನು ಬರೆಯಲಿ ಎಂದು ತಲೆ ಓಡದೇ ಇದ್ದಾಗ ಹೀಗೆ ಹೆಕ್ಕಿ , ಅನುವಾದಿಸಿ ನಗಿಸುವ ಪ್ರಯತ್ನ ನನ್ನದು ಅಷ್ಟೇ ! ಆದರೆ, ನಿಜ ಹೇಳ ಬೇಕೆಂದರೆ, ಪುಣೆ ಯಲ್ಲಿ ಓಡಾಡುವಾಗ ನನ್ನ ಕಣ್ಣುಗಳೂ ಆಚೀಚೆ ಇಂಥಾ ಫಲಕಗಳನ್ನು ಹುಡುಕತೊಡಗಿವೆ !

ಚಿತ್ರಾ said...

ಸುಧೇಶ್,
ನೀವು ನಕ್ಕಿದ್ದು , ಖುಷಿ ಪಟ್ಟಿದ್ದು , ನಮಗೂ ಸಂತೋಷ ಮಾರಾಯ್ರೇ !
ಪುಣೆ ಕಂಪನಿಯ ಆಫರ್ ನಿಂದ ನನ್ನ ಬರಹಗಳನ್ನು ನೆನಪು ಮಾಡಿಕೊಂಡಿದ್ದಕ್ಕೆ ಇನ್ನೂ ಖುಷಿಯಾಯಿತು .

ಚಿತ್ರಾ said...

ಕಾಕಾ,
ನಿಜ , ಇಂಥಾ ಬೋರ್ಡ್ ಗಳನ್ನು ಬರೆಯಲು ಇವರಿಗೆ ಮಾತ್ರ ಹೊಳೆಯಬಹುದು! ಪ್ರತಿಯೊಂದಕ್ಕೂ ಒಂದು ನೋಟೀಸ್ ಬರೆದು ಹಚ್ಚುವ ಅಭ್ಯಾಸ ಇಲ್ಲಿ ಹೆಚ್ಚು.

ಚಿತ್ರಾ said...

ದಿಲೀಪ್,
ಈ ವಾಕ್ಯವನ್ನು ನೀವೂ ಸಹ ಬಾಯಿಪಾಠ ಮಾಡುವಂತೆ ಕಾಣುತ್ತಿದೆ !

ಚಿತ್ರಾ said...

ಶಿವೂ,
ಧನ್ಯವಾದಗಳು. ನಿಮ್ಮ ಆರೋಗ್ಯ ಈಗ ಹೇಗಿದೆ? ಬೇಕಿದ್ದರೆ, ಇಂಥಾ ಟಾನಿಕ್ ಗಳನ್ನು ಇನ್ನಷ್ಟು ಕೊಡೋಣ !

ಚಿತ್ರಾ said...

ಸೀತಾರಾಂ ,
ನನ್ನ ಬ್ಲಾಗ್ ಗೆ ಸ್ವಾಗತ ! ಈ ಫಲಕಗಳು ನನ್ನ ಪರಿಶ್ರಮದ್ದಲ್ಲ . ಈ ಬಗ್ಗೆ ರಾಘು ಅವರಿಗೆ ವಿವರಿಸಿದ್ದೇನೆ. ನೋಡಿ. ಇನ್ನು ಕನ್ನಡ ಅನುವಾದ ನನ್ನದು.
ಈಗಾಗಲೇ ತಕ್ಕ ಮಟ್ಟಿಗೆ ಮರಾಟೀ ಮಾತನಾಡಬಲ್ಲೆನಾದ್ದರಿಂದ ಹೆಚ್ಚು ಶ್ರಮ ವಹಿಸಿಲ್ಲ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಹೀಗೆ, ಪ್ರೋತ್ಸಾಹಿಸುತ್ತಿರಿ .

ಚಿತ್ರಾ said...

ಸುನೀಲ್,
तुम्ही हंसले , आम्हाला खूप आनंद झाला !
असच येत रहा ..

ನೀವು ನಕ್ಕಿರಿ , ನಮಗೆ ಬಹಳ ಆನಂದವಾಯಿತು .
ಹೀಗೆ ಬರುತ್ತಿರಿ .
ಧನ್ಯವಾದಗಳು .

ಚಿತ್ರಾ said...

ಪ್ರಕಾಶಣ್ಣ,
ನಮ್ಮ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೆ . ನೋಡಿ ಸಂತೋಷವಾಯಿತು . ಪ್ರೋತ್ಸಾಹ ಹೀಗೆಯೇ ಇರಲಿ.

namana bajagoli said...

೨ ದಿನ 'ಜನನ -ಮರಣ ' ಬಂದ್!!!! ಇರುತ್ತದೆ...ಯಮರಾಜನಿಗೂ ರಜೆ ಕೊಡುವವರೂ ಇದ್ದಾರೆ ಅ೦ತಾಯ್ತು.ತು೦ಬಾ ಚೆನ್ನಾಗಿದೆ.

Unknown said...

ಅಬ್ಬಾ ನಕ್ಕು ನಕ್ಕು ಸುಸ್ತಾಯ್ತು.ತು೦ಬ ಚೆನ್ನಗಿತ್ತು. ಎಷ್ಟೊ ದಿನ ಅಗಿತ್ತು ಹೀಗೆ ನಕ್ಕು.ಧನ್ಯವಾದಗಳು.