December 22, 2009

ನಾನು ನಿನಗೇನು ?

ನಾನು
ನಿನಗೇನು ?
ಎಂದೆಯಾ?

ನೀ ನನ್ನ ..

ಜೀವದ ಜೀವ
ಒಲವಿನ ಭಾವ
ಹೃದಯದ ಮಿಡಿತ
ಬದುಕಿನ ತುಡಿತ
ಕಣ್ಣ ಮಿಂಚು
ತುಟಿಯ ಹೊಳಪು
ಉಸಿರಿನ ಉಸಿರು
ಕನಸಿನ ಹೆಸರು .....


ಸಾಕೆ ?
ಹೇಳಲೇ ಇನ್ನೂ?
ಈಗ
ನೀ ಹೇಳು ಗೆಳೆಯಾ
ನಾನು
ನಿನಗೇನು ?

29 comments:

ಸಾಗರದಾಚೆಯ ಇಂಚರ said...

ಚಿತ್ರಾ,
ತುಂಬಾ ಚೆನ್ನಾಗಿದೆ,
ಎಅಗ ನಿಮ್ಮ ಮಿತ್ರ ತಲೆ ಕೆಡಿಸಿಕೊಂಡಿದ್ದಾನೆ,
ಯಾವ ಶಬ್ದಗಳಿಂದ ವರ್ಣಿಸಲಿ ಎಂದು
ಎಲ್ಲ ಶಬ್ದಗಳನ್ನು ನೀವೇ ಪ್ರಯೋಗಿಸಿದಂತಿದೆ :)
ತುಂಬಾ ಸುಂದರವಾದ ಸಾಲುಗಳು

ಆನಂದ said...

ತುಂಬಾ ಚೆನ್ನಾಗಿದೆ ಕಣ್ರೀ...

ಸವಿಗನಸು said...

ಚಿತ್ರಾ,
ಪದಗಳನ್ನು ಹುಡುಕುತ್ತಿರಬೇಕು ನಿಮ್ಮ ಗೆಳೆಯ.....
ಅಥವಾ same to me ಅನ್ನಬಹುದಾ?
ಚೆಂದದ ಸಾಲುಗಳು....

ತೇಜಸ್ವಿನಿ ಹೆಗಡೆ said...

ಹ್ಹಹ್ಹ.. ಚೊಲೋ ಇದ್ದು ನಿನ್ನ ಸವಾಲು. ಕೇಳಿ ನೋಡಿದ್ಯಾ "ನಾನು ನಿನಗೇನು" ಹೇಳಿ? :)

sunaath said...

ಇಂಥಾ ಸವಾಲಿಗೆ ನಿಮ್ಮ ಗೆಳೆಯ ಬೇಜವಾಬ್ ಆಗಲೇಬೇಕು!

ಮನಮುಕ್ತಾ said...

ಚಿತ್ರಾ ಅವರೆ,

ಎಷ್ಟೊ೦ದು ಕಷ್ಟಕ್ಕೀಡು ಮಾಡಿದಿರಿ ನಿಮ್ಮ ಗೆಳೆಯನನ್ನು?
ಪಾಪ ... ಕನ್ನಡ ನಿಘ೦ಟಿನೊಳಗೆ ತಲೆಯನ್ನು ಹುದುಗಿಸಿ ಕೊ೦ಡಿರಬಹುದು!
ಚೆನ್ನಾಗಿದೆ.

ಶಿವಪ್ರಕಾಶ್ said...

ತುಂಬಾ ಚೆನ್ನಾಗಿದೆ

ಮುಸ್ಸ೦ಜೆ said...

ತು೦ಬಾ ಚೆನ್ನಾಗಿದೆ. ಬೇಗ ನಿನ್ನ ಪ್ರಶ್ನೆಗೆ ಉತ್ತರ ಬರಲಿ.

ಚುಕ್ಕಿಚಿತ್ತಾರ said...

ತು೦ಬಾ ಚೆನ್ನಾಗಿದೆ.
ಸವಾಲಿಗೆ ಜವಾಬ್ ಸಿಕ್ಕಿತಾ..??

ಸೀತಾರಾಮ. ಕೆ. / SITARAM.K said...

ತಮ್ಮ ಪ್ರಶ್ನೇಗೆ ಬರೋ ಉತ್ತರಾನೂ ಬರೆದು ಹಾಕಿ.
ಚೆನ್ನಾಗಿದೆ ತಮ್ಮ ಸವಾಲು.

ಚಿತ್ರಾ said...

ಗುರು,
ಹುಡುಕಲಿ ಬಿಡಿ ಹೊಸ ಶಬ್ದಗಳನ್ನು ! ಮೊದಲು ಉತ್ತರ ನೀಡಿದ್ದಕ್ಕೆ " advantage point " ನನಗೆ !!
ಪ್ರತಿಕ್ರಿಯೆಗೆ ಥ್ಯಾಂಕ್ಸ್

ಚಿತ್ರಾ said...

ಆನಂದ್, ಶಿವಪ್ರಕಾಶ್ ,

ಮೆಚ್ಚಿದ್ದಕ್ಕೆ ಧನ್ಯವಾದಗಳು !

ಚಿತ್ರಾ said...

ತೇಜು ,
ದಿನಾ ಕೇಳ್ತಾ ಇದ್ದಿ .. ಇನ್ನು ಉತ್ತರ ಹುಡುಕ್ತಾ ಇದ್ದಂಗಿದ್ದು . ಹಾ ಹಾ ಹಾ ..

ಚಿತ್ರಾ said...

ಸವಿಗನಸು,
ಹೊಸ ಶಬ್ದಗಳು ಸಿಕ್ಕದಿದ್ದರೂ ಅಡ್ಡಿಲ್ಲ ,'same to me' ಅಂದರೆ ಅಷ್ಟೇ ಸಾಕು !

PARAANJAPE K.N. said...

ಚೆನ್ನಾಗಿದೆ, ನಿಮಗೆ ಉತ್ತರ ಸಿಕ್ಕಿತೆ ??

Ittigecement said...

ಚಿತ್ರಾ...

ತುಂಬಾ ಸೊಗಸಾಗಿದೆ..
ಚೇತೋಹಾರಿಯಾಗಿದೆ...

"ನೀನು
ನನಗೇನು ಎಂದು ಕೇಳಲಾರೆ...
ಸುಮ್ಮನಿದ್ದುಬಿಡು
ಸದ್ದುಮಾಡದೆ..
ನನ್ನೆದೆಯೊಳಗೆ..
ಭಾವರಾಗದ..
ಪ್ರೇಮಗೀತೆ
ನುಡಿಸುತ.."

ಎಂದು ಹೇಳಿಬಿಡುತ್ತಾನೆ...!!

ಚಂದದ ಹಾಡಿಗೆ ಅಭಿನಂದನೆಗಳು...

ಸುಧೇಶ್ ಶೆಟ್ಟಿ said...

ಮನಸಾರೆ ಚಿತ್ರದಲ್ಲಿ ಒ೦ದು ಹಾಡಿನಲ್ಲಿ ಈ ಸಾಲು ಬರುತ್ತೆ... "ಒ೦ದು ಬಾರಿ ಬ೦ದು ಹೇಳು.... ಯಾರು ಯಾರು ನಾ ನಿನಗೆ?".....

ಇದು ಆ ಪದ್ಯವನ್ನು ನೆನಪಿಸಿತು....

ನಿಮಗೆ ಉತ್ತರ ಸಿಕ್ಕಿದ ಮೇಲೆ ಅದನ್ನು ಪದ್ಯವಾಗಿ ಬರೆದು ನಮಗೆ ತಿಳಿಸಿ ಆಯ್ತಾ? :)

shivu.k said...

ಚಿತ್ರ ಮೇಡಮ್,

ಇದು ಯಾರ ಕುರಿತು ಬರೆದ ಕವನ. ಒಂದೊಂದೆ ಪದಗಳಲ್ಲಿ ಚೆನ್ನಾಗಿದೆ.

ಚಿತ್ರಾ said...

ಕಾಕಾ ,
ಗೆಳೆಯನನ್ನು ಬೇಜವಾಬ್ ಮಾಡುವಂಥಾ ಸವಾಲ್ ಎಸೆಯುವಲ್ಲಿ ಹೆಣ್ಣು ಮಕ್ಕಳು ಬಲು ಜಾಣರು ಅಲ್ಲವೇ?

ಚಿತ್ರಾ said...

ಮನಮುಕ್ತ,
ಈ ರೀತಿಯ ಪೇಚಿಗೆ ಸಿಲುಕಿಸುವುದರಲ್ಲೂ ಒಂದು ರೀತಿಯ ಮಜಾ ಇರುತ್ತದೆ , ಗೆಳತಿಗೋಸ್ಕರ ನಿಘಂಟನ್ನು ಜಾಲಾಡಲಾರನೆ ಗೆಳೆಯ ?

ಚಿತ್ರಾ said...

ಪರಮ್,
ಮೆಚ್ಚಿದ್ದಕ್ಕೆ ಥ್ಯಾಂಕ್ಸ್ ! ಉತ್ತರಕ್ಕಾಗಿ ಕಾಯ್ತಾ ಇದ್ದಿ. ನೋಡನ !

ಚಿತ್ರಾ said...

ಚುಕ್ಕಿಚಿತ್ತಾರ
ಬ್ಲಾಗಿಗೆ ಸ್ವಾಗತ ! ಜವಾಬ್ ಯಾವಾಗ ಸಿಗುತ್ತದೋ ನೋಡಬೇಕು !

ಚಿತ್ರಾ said...

ಸೀತಾರಾಂ
ಮೆಚ್ಚಿದ್ದಕ್ಕೆ ಧನ್ಯವಾದಗಳು ! ಮೊದಲು ಉತ್ತರ ಬರಲಿ ಅಲ್ಲವೇ?

ಚಿತ್ರಾ said...

ಪರಾಂಜಪೆ,
ಉತ್ತರಕ್ಕಾಗಿ ಇನ್ನೂ ಕಾಯುತ್ತಿದ್ದೇನೆ ! ಬಂದರೆ ತಿಳಿಸುವೆ .

ಚಿತ್ರಾ said...

ಪ್ರಕಾಶಣ್ಣ ,
ನಿನ್ನ ಅಭಿಪ್ರಾಯ ಇನ್ನೊಂದು ಚಂದದ ಕವನ ! ನಿನ್ನ ಕವನಗಳನ್ನು ಓದಿದ ನನ್ನ ಗೆಳೆಯ ಸಹಾಯ ಕೇಳಿದಂತಿದೆ . ಅವನಿಗೇ ಉತ್ತರಿಸಲು ಬಿಡು ಏನನ್ನುತ್ತಾನೋ ನೋಡಿಯೇ ಬಿಡೋಣ !

ಚಿತ್ರಾ said...

ಸುದೇಶ್,
ಹಾ, ಆ ಹಾಡನ್ನು ನಾನೂ ಕೇಳಿದ್ದೇನೆ . ಸುಂದರವಾದ ಹಾಡದು ! ಉತ್ತರ ಸಿಕ್ಕಮೇಲೆ , ಅದನ್ನು ಕವನ ರೂಪದಲ್ಲಿ ಬರೆಯುವುದೋ ಕಥೆಯನ್ನೇ ಬರೆಯುವುದೋ ನೋಡುತ್ತೇನೆ . ಅಕಸ್ಮಾತ್ ಕಾದಂಬರಿ ಮಾಡುವಷ್ಟು ದೊಡ್ಡದಿದ್ದರೆ ನಿಮ್ಮನ್ನೇ request ಮಾಡುತ್ತೇನೆ !!

ಚಿತ್ರಾ said...

ಶಿವೂ,
ಹಾ ಹಾ ಹಾ .. ಯಾಕ್ರೀ ಇಷ್ಟು ಕುತೂಹಲ ನಿಮಗೆ?

ಸುಧೇಶ್ ಶೆಟ್ಟಿ said...

:)

ಸಧ್ಯಕ್ಕೆ ನನ್ನ ಕಾದ೦ಬರಿಯನ್ನು ನಿಮ್ಮಿ೦ದ ಬೈಸಿಕೊಳ್ಳದೆ ಮುಗಿಸಿದರೆ ಸಾಕಾಗಿದೆ :)

vijay said...

ಚಿತ್ರಾ
ಭಾವದಿಂದ ಮಿಡಿದ ಕವನ.
ನಾ(ನೀ)ನು ನಿನಗೇನು ?!
ನನ್ನ ಜೀವ , ಬದುಕು , ಉಸಿರು ... ಎಲ್ಲ ನಿನ್ನ ಕ್ಯೆಲಿ..
ಕಣ್ಣು ಮುಚ್ಚಿ ... ತುಟಿ ಕಚ್ಚಿ ..
ಏನು ಹೇಳಲಿ ಗೆಳತಿ ..
ನೀನೆ ಹೇಳು ... ನಾನು ನಿನಗೇನು ?

ವಿಜಯ