October 1, 2010

ಸುವರ್ಣ ಪುಷ್ಪ !

ಕಳೆದ  ಬರಹದಲ್ಲಿ  ಪುಣೆಯ  ಪ್ರಸಿದ್ಧ ಗಣಪತಿಗಳ ಬಗ್ಗೆ ಪ್ರಸ್ತಾಪಿಸುತ್ತಾ  ' ದಗಡು ಶೇಟ್  ಗಣಪತಿಗೆ , ಭಕ್ತರೊಬ್ಬರು  ೮೦ ಲಕ್ಷ ರೂ. ಬೆಲೆಬಾಳುವ  ಚಿನ್ನದ ಕಮಲವೊಂದನ್ನು ಅರ್ಪಿಸಿದ್ದರ ಬಗ್ಗೆ ಬರೆದಿದ್ದೆ .  ಅದರ ಬಗ್ಗೆ ದಿನಪತ್ರಿಕೆಯೊಂದರಲ್ಲಿ ಬಂದ ಸಂಕ್ಷಿಪ್ತ ವರದಿ ಇಲ್ಲಿದೆ.


17 comments:

sunaath said...

ಚಿತ್ರಾ,
ಭಕ್ತರ ಕಾಣಿಕೆಯನ್ನು ಪ್ರಶ್ನಿಸಲು ನಾನು ಯಾರು? ಆದರೂ ಸಹ, ಕೆಲವೊಮ್ಮೆ ಅನಿಸುತ್ತದೆ: ೮೦ ಲಕ್ಷ ರೂಪಾಯಿಗಳ ಒಂದು ಭಾಗವನ್ನಾದರೂ ಬಡ ವಿದ್ಯಾರ್ಥಿಗಳಿಗೆ ಕೊಟ್ಟಿದ್ದರೆ, ವಿದ್ಯಾಧಿದೇವತೆ ಗಣಪತಿಗೆ ಹೆಚ್ಚಿನ ಖುಶಿಯಾಗುತ್ತಿತ್ತು ಎಂದು.

ಸೀತಾರಾಮ. ಕೆ. / SITARAM.K said...

ಸುನಾಥರ ಅಭಿಪ್ರಾಯವೇ ನನ್ನದೂ!

PARAANJAPE K.N. said...

ನಾನು ಸುನಾಥ್ ಜೀ ಯವರ ಅಭಿಪ್ರಾಯವನ್ನು ಅನುಮೋದಿಸುವೆ.ದೇವರಿಗ್ಯಾಕೆ ಬೇಕು ಇ೦ತಹ ದುಬಾರಿ ಕೊಡುಗೆ ?

ಜಲನಯನ said...

ಹಹಹ...ಚಿತ್ರಾ...ಇದಕ್ಕೆ ನನ್ನದು ..ಬೇರೆ ಪ್ರತಿಕ್ರಿಯೆ ಸಾಧ್ಯಾನೇ ಇಲ್ಲ...ಅನ್ನ ..ವಿದ್ಯೆ ಎರಡನ್ನೂ ದಾನಮಾಡಬಹುದಿತ್ತು ಆ ಹಣದಿಂದ ಅಥ್ವಾ ..ಈಗಲೂ ಕಾಲ ಮಿಂಚಿಲ್ಲ ಅದನ್ನು ಗಣೇಶ ಒಮ್ಮೆ ಧರಿಸಿದನಲ್ಲಾ..ಆತನಿಗೂ ಖುಷಿ ಆಗುತ್ತೆ ಇದನ್ನು ಮಾರಿಸಿ ಸ್ವಲ್ಪ ಗಣೇಶನ ಹುಂಡಿಗೆ ಹಾಕಿ ಮಿಕ್ಕಿದ್ದನ್ನು ಈ ಒಳ್ಳೆಯ ಕೆಲ್ಸಕ್ಕೆ ಉಪಯೋಗಿಸಿದ್ರೆ...ಏನಂತೀರಿ...ಮೇಡಮ್ಮನೋರೆ...??

Gubbachchi Sathish said...

ನನ್ನದೂ ಅದೇ ಅಭಿಪ್ರಾಯ.

ಅನಂತ್ ರಾಜ್ said...

ಭಕ್ತರ ಆಶಯಕ್ಕೆ ನನ್ನ ಅನಿಸಿಕೆ - ಪ್ರಾಮಾಣಿಕವಾಗಿ ನಡೆಸುವ೦ತಹ ಅನೇಕ trust ಗಳಿವೆ. ಸಾವಿರಾರು ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾಗುವ೦ತಹ ಇ೦ತಹ ಸ೦ಸ್ಥೆಗಳು ಸಹಾಯವನ್ನು ಅಪೇಕ್ಷಿಸುತ್ತವೆ. ಇಲ್ಲಿ ಸದ್ವಿನಿಯೋಗ ಮಾಡಬಹುದಿತ್ತು.

ಅನ೦ತ್

ಸವಿಗನಸು said...

ದೇವರಿಗೆ ದುಬಾರಿ ಕಾಣಿಕೆ ನೀಡಿದರೆ ದೇವರು ಇನ್ನಷ್ಟು ಕೊಡ್ತಾನೆ ಅನ್ನುವ ಭಕ್ತನ ಕನಸು ಇರಬಹುದಾ.....
ಸುನಾಥರ ಅಭಿಪ್ರಾಯ ಸರಿಯಾಗಿದೆ...d

ಮನಸಿನಮನೆಯವನು said...

ಸುನಾಥ್ ಹಾಗೂ ಜಲನಯನರ ಮಾತಿನ ಮೇಲೆ ಏನು ಹೇಳಲೂ ಸಾಧ್ಯವಿಲ್ಲ..

ಚಿತ್ರಾ said...

ಕಾಕಾ ,
ನಿಮ್ಮ ಅಭಿಪ್ರಾಯಕ್ಕೆ ನನ್ನ ಅನುಮೋದನೆಯಿದೆ.
ಭಕ್ತರ ಭಾವನೆಗಳನ್ನು ಪ್ರಶ್ನಿಸುವ ಹಕ್ಕು ನಮಗಿಲ್ಲ !
ತಮ್ಮ ಕಾಣಿಕೆ ದೇವರಿಗೆ ನಿಜಕ್ಕೂ ಪ್ರೀತಿಯಾಗುವಂತಿರಬೇಕೆಂದರೆ ಜನೋಪಯೋಗಿ ಕಾರ್ಯಕ್ಕೆ ಬಳಸಬಹುದಲ್ಲವೇ ಎಂಬ ಪ್ರಶ್ನೆ ನಮ್ಮಂಥವರ ಮನದಲ್ಲಿ ಮೂಡುತ್ತದೆ . ಅದು ಕೊಡುವವರ ಮನದಲ್ಲೂ ಮೂಡುವಂತೆ ಆ ಗಣೇಶನೇ ಮಾಡಬೇಕು !!!

ಚಿತ್ರಾ said...

ಪರಾಂಜಪೆ,
ನಿಜ . ಸುನಾಥ್ ಕಾಕಾ ಅವರ ಅಭಿಪ್ರಾಯವೇ ಬಹುಜನರ ಮನದಲ್ಲಿ ಬಂದಿದೆ.
ದೇವರು ಕೊಡುಗೆಯನ್ನು ಕೇಳುವಂತಿದ್ದರೆ ... ಇಂಥಾದ್ದನ್ನೆಲ್ಲ ಕೇಳುತ್ತಲೇ ಇರಲಿಲ್ಲ ಅಲ್ಲವೇ?

ಚಿತ್ರಾ said...

ಆಜಾದ್ ರೆ ,
ಇಷ್ಟು ಹಣದಲ್ಲಿ , ಅನ್ನ , ವಸ್ತ್ರ, ವಿದ್ಯೆ , ವಸತಿ ಹೀಗೆ ಅತ್ಯಾವಶ್ಯಕವಾದ ಮೂಲಭೂತ ಸೌಕರ್ಯಗಳನ್ನೇ ಕೊಡಬಹುದಿತ್ತು. ಅದರಿಂದ ದೇವರು ಹೆಚ್ಚು ಖುಷಿಪಡುತ್ತಿದ್ದ ! ಆದರೆ , ದೇವರ ಕೈಲೇನಿದೆ ? ಆ ಪುಷ್ಪವನ್ನು ಆತ ಸರಿಯಾಗಿ , ನೋಡಿ ,ಧರಿಸುವ ಮೊದಲೇ ಅದು ತಿಜೋರಿ ಸೇರಿರುತ್ತದೆ !!! ಇನ್ನದನ್ನು ಮುರಿಸುವುದು ಸತ್ಕಾರ್ಯಗಳಿಗೆ ಬಳಸುವುದು ... ಕನಸಿನ ಮಾತು .

ಚಿತ್ರಾ said...

ಅನಂತ್ ರಾಜ್ ,
ನೀವು ಹೇಳುವುದು ಸರಿಯೇ. ಅಂಥಹ ಸಂಸ್ಥೆಗಳಿಗೆ ದಾನ ಮಾಡಿದರೂ ಆಗುತ್ತಿತ್ತು. ಆದ್ರೆ ಏನು ಗೊತ್ತ? ಇತ್ತೀಚೆ ಸುತ್ತ ಮುತ್ತ ನಡೆಯುತ್ತಿರುವುದನ್ನು ನೋಡುವಾಗ ಯಾರನ್ನು ನಂಬುವುದು , ಯಾರನ್ನು ಬಿಡುವುದು ಎಂಬ ಪ್ರಶ್ನೆ ಬಹುಜನರನ್ನು ಕಾಡುತ್ತದೆ. ಕೊನೆಗೆ ... ಹೋಗಲಿ ಜಾಸ್ತಿ ಯೋಚನೆ ಮಾಡದೆ , ದೇವರ ಹುಂಡಿಗೆ ಹಾಕೋಣ ಎಂದುಕೊಳ್ಳುತ್ತಾರೆನೋ !

ಚಿತ್ರಾ said...

ಮಹೇಶ್,
ದುಬಾರಿ ಕಾಣಿಕೆ ಹಾಕಿದರೆ ಮತ್ತಷ್ಟು ಕೊಡ್ತಾನಾ ಅನ್ನೋ ಲಾಜಿಕ್ ಎಷ್ಟರ ಮಟ್ಟಿಗೆ ಸತ್ಯ ಅಂತ ಕಳೆದ ವರ್ಷ ತಿರುಪತಿ ವೆಂಕಟೇಶನಿಗೆ ೪೩ ಕೋಟಿ ರೂಪಾಯಿಯ ಕಿರೀಟ ತೊಡಿಸಿದ ಮಹಾಮಂತ್ರಿಗಳನ್ನೇ ಕೇಳಿ ನೋಡಬಹುದೇನೋ !!!!

ಚಿತ್ರಾ said...

ಸೀತಾರಾಮ್, ಗುಬ್ಬಚ್ಚಿ ಸತೀಶ್, ಕತ್ತಲೆ ಮನೆ ,
ನಿಮ್ಮೆಲ್ಲರ ಅಭಿಪ್ರಾಯಕ್ಕೆ ಧನ್ಯವಾದಗಳು !

ತೇಜಸ್ವಿನಿ ಹೆಗಡೆ said...

೮೦ ಲಕ್ಷ ಸುರಿದು ಆ ಪುಟ್ಟ ಹೂವನ್ನು ಕೊಡುವ ಬದಲು ಹೊಟ್ಟಿಗೂ ಇಲ್ಲದೇ, ವಿದ್ಯಾಭ್ಯಾಸವನ್ನೂ ಕಾಣದ ಪುಟ್ಟ ಮಕ್ಕಳ ಭವಿಷ್ಯಕ್ಕೇನಾದರೂ ವ್ಯವಸ್ಥೆ ಅದೇ ಹಣದಲ್ಲೇ ಮಾಡಿದ್ದರೂ ಗಣಪತಿ ಸಂಪೂರ್ಣ ಪ್ರಸನ್ನನಾಗುತ್ತಿದ್ದನೇನೊ!

ಲೋಕೋ ಭಿನ ರುಚಿಃ.

ಸುಧೇಶ್ ಶೆಟ್ಟಿ said...

Jana maruLo... jaathre maruLo annodu idhe irbekalva?

ಸಾಗರದಾಚೆಯ ಇಂಚರ said...

devaraaguvude better anista ide