October 10, 2010

ಸೀತಾಪಹರಣ - ಪೀಠಿಕೆ

' ಅಜ್ಜೀ... ನಂದು ಹೋಂ ವರ್ಕ್ ಮುಗೀತು . ಪ್ಲೀಸ್ ಕಥೆ ಹೇಳ್ತೀಯ?'

ಅಜ್ಜಿಯ ಬೇಜಾರು ಸ್ವಲ್ಪ ಮಟ್ಟಿಗೆ ಕಮ್ಮಿಯಾಗಿತ್ತು.

' ಸರಿ , ಆದರೆ ತೀರ ತಲೆ ಹರಟೆ ಮಾಡಿದ್ರೆ ಇಷ್ಟ ಆಗಲ್ಲ ನಂಗೆ'

' ಇಲ್ಲ ಅಜ್ಜಿ, ನಾನು ನಿಂಗೆ ಹಾಗೆಲ್ಲ ಕೇಳಿದೀನ? ಇವ್ನು ಈ ವರುಣ್ ಹಂಗೆಲ್ಲ ತಲೆ ಹರಟೆ ಮಾಡೋದು. ನೀನು ನನಗೊಬ್ಬಳಿಗೆ ಹೇಳು. '

' ಹಂ... ಎಲ್ಲಿಗೆ ನಿಲ್ಸಿದ್ದೆ ?'

' ಅದೇ, ಅಜ್ಜಿ.. ಶೂರ್ಪನಖಿ ಕಿವಿ -ಮೂಗು ಕತ್ತರಿಸೋವರೆಗೆ ..'

' ಹಾಂ , ಶೂರ್ಪನಖಿ ಅಲ್ಲಿಂದ ಅಳ್ತಾ ಓಡಿದವಳು ಸೀದಾ ಅಣ್ಣ ರಾವಣನ ಅರಮನೆಗೆ ಬಂದಳು. ಅಲ್ಲಿ ರಾವಣ ಸಭೆಯಲ್ಲಿದ್ದ. ಇವಳು ಅಲ್ಲಿಗೆ ಹೋದಳು. ಶೂರ್ಪನಖಿ ಕಿವಿ ಮೂಗು ಕತ್ತರಿಸಿಕೊಂಡು ರಕ್ತ ಸುರಿಸಿ ಕೊಂಡು ಬಂದಿದ್ದನ್ನ ನೋಡಿ ರಾವನಂಗೆ ತಡ್ಯೋಕೆ ಆಗ್ಲಿಲ್ಲ. ' ತಂಗಿ, ಏನಿದು? ಹೇಗಾಯ್ತು ಇದು ಯಾವ್ದಾದ್ರು ಕಾಡು ಪ್ರಾಣಿ ಕಚ್ಚಿತಾ' ಅಂತೆಲ್ಲ ಕೇಳ್ದ. ಶೂರ್ಪನಖಿ ' ಅಣ್ಣ , ಪ್ರಾಣಿ ಎಲ್ಲಾ ಅಲ್ಲಾ, ಇಬ್ಬರು ಮನುಷ್ಯರು ಸೇರಿ ಮಾಡಿದ್ದು ಹೀಂಗೆ ಅಂದ್ಲು. ರಾವಣನಿಗೆ ಸಿಟ್ಟು ನೆತ್ತಿಗೆರ್ತು .
ಯಾರವರು? ಎಷ್ಟು ಧೈರ್ಯ ಅವರಿಗೆ , ನನ್ನ ತಂಗಿಗೆ ಹೀಗೆ ಅವಮಾನ ಮಾಡೋ ಅಷ್ಟು ಸೊಕ್ಕು ? ' ಅಂತ ಹಾರಾಡಿದ.

' ಆಮೇಲೆ ? '

' ಆಮೇಲೆ, ತಂಗಿಗೆ , ನಿಂಗೆ ಹೇಗೆ ಸಿಕ್ಕಿದರು ಅವರು ಅಂತ ಕೇಳ್ದ ಅದಕ್ಕೆ ಶೂರ್ಪನಖಿ , ' ಅಣ್ಣಾ, ನಾನು ಕಾಡಲ್ಲಿ ಓಡಾಡ್ತಾ ಇರೋವಾಗ ಒಬ್ಬಳು ತುಂಬಾ ಚೆಂದ ಇರೋ ಹುಡುಗಿನ ನೋಡಿದೆ. ಅವಳು ನಿಂಗೆ ಸರಿಯಾದ ಜೋಡಿ ಅನಿಸ್ತು. ಅದಕ್ಕೆ ಅವಳನ್ನ ಕರ್ಕೊಂಡುಬಂದು ನಿಂಗೆ ಉಡುಗೊರೆಯಾಗಿ ಕೊಡೋಣ ಅಂತ ಹೋದಾಗ ಅವಳ ಗಂಡ ಮತ್ತೆ ಮೈದುನ ಸೇರಿ ಹೀಗೆ ಮಾಡಿದ್ರು ' ಅಂತ ಅಂದ್ಲು .

' ಅಜ್ಜಿ, ಸುಳ್ಳಲ್ವ ಅವಳು ಹೇಳಿದ್ದು ? '

' ಹೌದು ಪುಟ್ಟಿ , ಆದರೆ , ಅವಳಿಗೆ ರಾವಣನ್ಗೆ ಕೋಪ ಜಾಸ್ತಿ ಆಗೋ ತರ ಮಾಡ್ಬೇಕಿತ್ತಲ್ಲ? ಅದಕ್ಕೆ . ಅವಳು ಸೀತೆ ಎಷ್ಟು ಚಂದ ಇದಾಳೆ ಅಂತ ಹೊಗಳಿ ಹೊಗಳಿ ಇಟ್ಳು. ನೀನು ಅವಳನ್ನ ಮದ್ವೆ ಮಾಡ್ಕೊಂಡ್ರೆ ಅರಮನೆಗೆ ಒಂದು ಕಳೆ ಬರತ್ತೆ ಅಂತೆಲ್ಲ ಕಿವಿ ತುಂಬಿಸಿದಳು ಇಷ್ಟೆಲ್ಲಾ ಕೇಳೋ ಹೊತ್ತಿಗೆ ರಾವಣನಿಗೂ ಹೌದಲ್ವಾ ಅನಿಸೋಕೆ ಶುರುವಾಯ್ತು. ಅವನು ತಂಗೀನ ಸಮಾಧಾನ ಮಾಡಿ ಆಚೆ ಕಳಿಸಿದ. ಅವನಿಗೆ ಒಬ್ಬ ಸೋದರ ಮಾವ ಇದ್ದ . ' ಮಾರೀಚ' ಅಂತ ತುಂಬಾ ಕೆಟ್ಟವನು.ಅವನಿಗೆ ಮಾಯ ಮಂತ್ರ ಎಲ್ಲಾ ಚೆನ್ನಾಗಿ ಬರ್ತಿತ್ತು . ಅವನ್ನ ಕರೆಸಿದ. ಅವರಿಬ್ಬರೂ ಸೇರಿ , ಸೀತೆನಾ ಎತ್ತಿಗೊಂಡು ಬಂದು ಬಿಟ್ರೆ , ಸೇಡೂ ತೀರಿಸ್ಕೊಂಡ ಹಾಗೆ ಆಗತ್ತೆ ಮತ್ತೆ ಒಬ್ಬ ಚಂದದ ಹೆಂಗಸು ಅರಮನೆಗೆ ಬಂದ ಹಾಗೆ ಆಗತ್ತೆ ಅಂತ ಯೋಚನೆ ಮಾಡಿದ್ರು. '

' ಅಜ್ಜಿ .... ಅಂದ್ರೆ , ಸೀತೆ ನ ಕಿಡ್ ನ್ಯಾಪ್ ' ಮಾಡ್ತಾರಾ? ಪಾಪಾ ಅಲ್ವ .. ಅವಳೇನು ಮಾಡಿದ್ಲು ಪಾಪ ? ಅಲ್ಲಾ, ಅವರು ಕಿಡ್ ನ್ಯಾಪ್ ಮಾಡಿ ದುಡ್ಡು ಕೇಳಿದ್ರೆ ರಾಮ ಎಲ್ಲಿಂದ ತರ್ತಾನೆ ಅಜ್ಜಿ ?ಕಾಡಲ್ಲಿ ATM ಕೂಡ ಇರಲ್ವಲ್ಲ ? ' ಅಪೂರ್ವ ಮುಖ ಚಿಕ್ಕದಾಯ್ತು ಕಿಸಕ್ಕೆಂದ ಅಣ್ಣಂದಿರ ಕಡೆ ದುರುಗುಟ್ಟಿದಳು.

ಹ್ಮ್ .. ಕೇಳು ಮುಂದೆ .. ಪ್ಲಾನ್ ಪ್ರಕಾರ , ಮಾರೀಚ ಬಂಗಾರ ಬಣ್ಣದ ಜಿಂಕೆ ಆದ. ಕಾಡಲ್ಲಿ ಸೀತೆ ಇರೋ ಕಡೆ ಹೋಗಿ ಅಆಚೆ ಏಎಚೆ ಅವಳ ಕಣ್ಣಿಗೆ ಬೀಳೋ ತರ ಓಡಾಡಿದ! '

'ಅಜ್ಜಿ, ಹಾಗೆಲ್ಲ ಅವ್ನು ಹೇಗೆ ಜಿಂಕೆ ತರ ಆಗ್ಬಿಟ್ಟ? '

' ಹೇಳಿದ್ನಲ್ಲ ಚಿನ್ನಾ, ಅವನಿಗೆ ಮಾಯ - ಮಂತ್ರ ಎಲ್ಲಾ ಚೆನ್ನಾಗಿ ಬರ್ತಾ ಇತ್ತು ಅಂತ . ಆ ಜಿಂಕೆ ನ ನೋಡಿ ಸೀತೆಗೆ ತುಂಬಾ ಖುಷಿಯಾಯ್ತು. ಅದನ್ನ ತಾನು ಸಾಕಬೇಕು ಅಂತ ಇಷ್ಟ ಪಟ್ಟಳು. ರಾಮನ ಹತ್ರ ಅದನ್ನ ತಂದು ಕೊಡು ಅಂತ ನೂ ಹೇಳಿದಳು. ಆದರೆ , ರಾಮಂಗೆ ಆ ಜಿಂಕೆ ಮೇಲೆ ಅನುಮಾನ ಬಂತು. ಇಷ್ಟು ದಿನ ಇಲ್ಲದ್ದು ಇದ್ದಕ್ಕಿದ್ದ ಹಾಗೆ ಎಲ್ಲಿಂದ ಬಂತು ಇದು ಅಂತ . ಆದರೆ , ಸೀತೆ ಮಾತ್ರ ಕೇಳಲೇ ಇಲ್ಲ. ತನಗೆ ಬೇಕೇ ಬೇಕು , ತಂದುಕೊಡು ಅಂತ ಹಠ ಮಾಡಿದ್ಲು. ಸರಿ ಅಂತ ರಾಮ ಆ ಜಿಂಕೆ ಹಿಡಿಯೋಕೆ ಹೋದ. ಹೋಗೋ ಮುಂಚೆ, ಲಕ್ಷ್ಮಣನಿಗೆ , ಮನೆ ಹತ್ರ ನೇ ಇದ್ದು ಸೀತೆ ನ ಕಾಯ್ತಾ ಇರ್ಬೇಕು ಅಂತ ಆರ್ಡರ್ ಮಾಡಿ ಹೋದ '

' ರಾಮಂಗೆ ಏನೂ ಆಗಲ್ಲ ಅಲ್ವಾ ಅಜ್ಜಿ? ಈ ಸೀತೆ ಒಬ್ಬಳು. ಸುಮ್ಮನೆ ಹೇಳಿದ್ದು ಕೇಳದೆ ಹಠ ಮಾಡ್ತಾಳೆ. !

' ಇಲ್ಲ ಮರೀ , ಹಾಗೆಲ್ಲ ಏನೂ ಆಗಲ್ಲ ರಾಮಂಗೆ' ಮೊಮ್ಮಗಳ ಕಾಳಜಿ ನೋಡಿ ಅಜ್ಜಿಗೆ ನಗು.

" ಅಜ್ಜಿ ನನಗೊಂದು ಡೌಟು . ಶೂರ್ಪನಖಿ ಮೂಗು ಕಟ್ ಆಗಿತ್ತಲ್ಲ? ಅದಕ್ಕೆ ಅವಳು ಪ್ಲಾಸ್ಟಿಕ್ ಸರ್ಜರಿ ಮಾಡಸಿದ್ಲ ಇಲ್ವಾ ಅಂತ ?  "

" ಹಾ ಹಾ ಹಾ ..... ಮಾಡ್ಸಿಕೊಂಡಳು ಕಣೆ . ಒಳ್ಳೆ ಕತ್ರಿನಾ ಕೈಫ್ ತರ ಮೂಗು ಮಾಡ್ಕೊಂಡ್ಲಂತೆ !!! ಏನು ಬುದ್ಧಿ ನೇ ನಿಂದು ? ಆಗೆಲ್ಲ ಅದೆಲ್ಲ ಇರಲೇ ಇಲ್ಲ . ಅಷ್ಟೂ ಗೊತಾಗಲ್ವ? ' ವರುಣ್ ಅಣಕಿಸಿದಾಗ ಅಪೂರ್ವ ಮುಖ ಚಿಕ್ಕದಾಯ್ತು.

" ಅಜ್ಜಿ ನೀನು ಮುಂದೆ ಹೇಳಜ್ಜಿ . ನನ್ ಡೌಟ್ ಎಲ್ಲಾ ನಾವಿಬ್ರೇ ಕೂತ್ಗೊಂಡು ಆಮೇಲೆ ಡಿಸ್ಕಸ್ ಮಾಡಣ "

"ಹ್ಮ್ಮ್.. ಜಿಂಕೆ ಮಾರೀಚ ತುಂಬಾ ದೂರ ಓಡಿ ಹೋದ ಅವನ ಹಿಂದೆ ರಾಮ . ಸುಮಾರು ಹೊತ್ತಾದ ಮೇಲೆ ರಾಮ , ಇನ್ನು ಈ ಜಿಂಕೆ ಹಿಡಿಯೋಕ್ಕಿಂತ , ಸಾಯಿಸಿ ತೊಗೊಂಡು ಹೋಗೋದೇ ಸರಿ ಅಂತ ಬಾಣ ಬಿಟ್ಟ . ಆ ಬಾಣ ತಾಗಿ ಜಿಂಕೆ ಮಾರೀಚ ಸತ್ತೇ ಹೋದ ! ಆದ್ರೆ , ಸಾಯೋ ಮುಂಚೆ ಅವನ ನಿಜ ರೂಪದಲ್ಲಿ ಸತ್ತ . ಅಲ್ದೆ , ರಾಮಂದೇ ಧ್ವನಿ ಲಿ ' ಹಾ ಸೀತಾ, ಹಾ ಲಕ್ಷ್ಮಣಾ .. ' ಅಂತ ಜೋರಾಗಿ ಕೂಗಿ ಪ್ರಾಣ ಬಿಟ್ಟ ! "

" ಅಜ್ಜಿ, ತುಂಬಾ ಮೋಸ ಅಲ್ವ? ಹಾಗೆ ಮಾಡ ಬಾರದು ಅವನು ! "

" ಇಲ್ಲಿ ಸೀತೆಗೆ ಮಾರೀಚ ಕೂಗಿದ್ದು ಕೇಳಿಸ್ತು. ಲಕ್ಷ್ಮಣನಿಗೂ ಕೇಳ್ತು. ಸೀತೆ ಗಾಬರಿಯಾಗಿ , ಲಕ್ಷ್ಮಣ , ನಿಮ್ಮಣ್ಣ ನಿಗೆ ಏನೋ ಅಪಾಯ ಆಗಿದೆ , ಹೋಗಿ ನೋಡ್ಕೊಂಡು ಬಾ ' ಅಂದ್ಲು "

" ಆದ್ರೆ , ಮಾರೀಚ ಅಲ್ವ ಕೂಗಿದ್ದು ? "

" ಹೌದಮ್ಮ, ಆದ್ರೆ ಸೀತೆಗೆ ಗೊತ್ತಿಲ್ವಲ್ಲ ? ಲಕ್ಷ್ಮಣ ಹೇಳ್ದ , 'ಅತ್ತಿಗೆ , ಭಯ ಪಟ್ಕೋ ಬೇಡ , ಅಣ್ಣನಿಗೆ ಹಾಗೆಲ್ಲ ಏನೂ ಆಗೋದಿಲ್ಲ . ಮತ್ತೆ ಅವನು ನಂಗೆ ಹೇಳಿದಾನೆ , ನಿನ್ನ ಒಬ್ಬಳನ್ನೇ ಬಿಟ್ಟು ಹೋಗಬಾರದು ಅಂತ ' "

ಅದಕ್ಕೆ ಸೀತೆ , ಸಿಟ್ಟು ಮಾಡ್ಕೊಂಡು , ಇಲ್ಲ ನಿಂಗೆ ಅಣ್ಣ ನ ಮೇಲೆ ಪ್ರೀತಿ ನೇ ಇಲ್ಲ , , ಇಲ್ಲ ಅಂದ್ರೆ , ನೀನು ಹೋಗಲ್ಲ ಅಂತಿರಲಿಲ್ಲ . ಸ್ವಲ್ಪ ಹೊತ್ತು ಒಬ್ಬಳೇ ಇರೋಕೆ ನನಗೇನೂ ಭಯ ಇಲ್ಲ.. ಹಾಗೆ -ಹೀಗೆ .. ಅಂತೆಲ್ಲ ಲಕ್ಷ್ಮಣ ನಿಗೆ ಬಯ್ದ್ಲು . "

" ಪಾಪ ಲಕ್ಷ್ಮಣ ಅಲ್ವ ಅಜ್ಜಿ ? "

" ಹೂಂ , ಅವನು ಬೇಜಾರು ಮಾಡ್ಕೊಂಡು , ಸರಿ ಅತ್ತಿಗೆ ನಾನು ನೋಡ್ಕೊಂಡು ಬರ್ತೀನಿ . ಆದರೆ , ಬಾಗಿಲ ಹತ್ರ ನಾನು ಗೆರೆ ಹಾಕಿ ಹೋಗ್ತೀನಿ ನಿನ್ನ ರಕ್ಷಣೆಗೆ ಅಂತ. ಆ ಗೆರೆ ನ ದಾಟಿ ಒಂದು ಹುಳು ಕೂಡ ಒಳಗೆ ಬರೋದು ಸಾಧ್ಯ ಇಲ್ಲ . ಆದರೆ , ನೀನು ಮಾತ್ರ ಯಾವ ಕಾರಣಕ್ಕೂ ಅದನ್ನ ದಾಟಬಾರದು. ' ಅಂತ ಹೇಳಿ ಬಾಗಿಲ ಹತ್ರ ಗೆರೆ ಎಳೆದು ಹೋದ . ಆ ಗೆರೆ ಗೆ ಲಕ್ಷ್ಮಣ ರೇಖೆ ಅಂತಾರೆ !"

"ಓಹ್ ! , ನಂಗು ಗೊತ್ತು ಅಜ್ಜಿ ಅದು . ಅದನ್ನ ದಾಟಿ ಒಂದು ಸಣ್ಣ ಇರುವೆ ನೂ ಬರೋಕಾಗಲ್ಲ, ಮಮ್ಮಿ ಆಗಾಗ ಸ್ವೀಟ್ಸ್ ಡಬ್ಬಿ ಹತ್ರ ಎಲ್ಲಾ ಗೆರೆ ಹಾಕಿರ್ತಾಳೆ !!  ಮತ್ತೆ  ಜಿರಳೆ ನೂ ಬರಲ್ಲ ಅದು ಹಾಕಿ ಬಿಟ್ರೆ .  ನಂಗೊತ್ತು , ಅಮ್ಮ ಹೇಳಿದಾಳೆ   ! "  ತನಗೆ ಮಹತ್ವದ್ದೇನೋ ಗೊತ್ತಿದೆ  ಎಂಬಂತೆ  ಅಪೂರ್ವಾಳ ಮುಖ ಅಗಲವಾಗಿತ್ತು !

" ಆದ್ರೆ , ಅಜ್ಜಿ , ಹುಳು ಎಲ್ಲಾ ಸರಿ , ಆದರೆ , ದೊಡ್ಡ ಪ್ರಾಣಿಗಳು, ಮನುಷ್ಯರು ಎಲ್ಲಾ ಬರಬಹುದಲ್ಲ? ನಾನು ಎಷ್ಟೋ ಸಲ ಲಕ್ಷ್ಮಣ ರೇಖೆ ದಾಟಿ ಸ್ವೀಟ್ಸ್ ತಿಂದಿದೀನಿ , ನನಗೇನೂ ಆಗಿಲ್ಲ ? " ಈಗ ಅನುಮಾನ ಮೂಡಿತು ಧ್ವನಿಯಲ್ಲಿ.

" ಅಯ್ಯೋ ಅದು ಬೇರೆ ಕಣೆ. ಲಕ್ಷ್ಮಣ ಹಾಕಿದ ಗೆರೆಗೆ ಅಷ್ಟು ಶಕ್ತಿ ಇತ್ತು. ಯಾರೂ ದಾಟೋಕಾಗ್ತಿರಲಿಲ್ಲ . ಮುಂದೆ ಕೇಳು. ಲಕ್ಷ್ಮಣ ಆಚೆ ಹೋದ ತಕ್ಷಣ ರಾವಣ ಅಲ್ಲಿಗೆ ಬಂದ . ಅದೂ ಸನ್ಯಾಸಿ ತರ ವೇಷ ಹಾಕೊಂಡು ! "

" ಅಜ್ಜೀ, ಸೀತೆ ಒಬ್ಬಳೇ ಇದಾಳಲ್ವ ? ಅವಳೊಂದು.. ಹೇಳಿದ್ದು ಕೇಳೋಕೆ ಬರಲ್ಲ . ಛೆ ! ಅಂದ್ರೂ ಹೇಗೂ ಲಕ್ಷ್ಮಣ ರೇಖೆ ಇದೆಯಲ್ಲ ? ಆದ್ರೆ , ಅಜ್ಜಿ , ರಾವಣ ಮನೆ ಹಿಂದುಗಡೆಯಿಂದ ಏನಾದ್ರೂ ಬಂದ್ರೆ ? ಲಕ್ಷ್ಮಣ ಹೊರಗಡೆ ಬಾಗಿಲ ಹತ್ರ ಗೆರೆ ಹಾಕಿದ್ದಲ್ವ ? ಮುಂದೇನಾಯ್ತು ಅಜ್ಜಿ ? " ಗಾಬರಿ, ಸಮಾಧಾನ ,ಅನುಮಾನ .. ಎಲ್ಲಾ ಭಾವಗಳ ಮಿಶ್ರಣ ಅಪೂರ್ವಾಳ ಮುಖದಲ್ಲಿ !

" ಹೇಳ್ತೀನಿ ಇರು ಸ್ವಲ್ಪ ಕಾಲು ಜೋಮು ಹಿಡಿದಿದೆ .. ನಾಲ್ಕು ಹೆಜ್ಜೆ ಓಡಾಡಿಕೊಂಡು ಬರ್ತೀನಿ " . ಅಜ್ಜಿ ಮೆಲ್ಲಗೆ ಎದ್ದು ಅಂಗಳಕ್ಕೆ ಹೊರಟರು !

" ಅಜ್ಜೀ.... ಬೇಗ ಬಾ ... ನಂಗೆ ಟೆನ್ ಶನ್ ಆಗ್ತಿದೆ .. " ಅಪೂರ್ವಾಳ ಸ್ವರ ಕೇಳ್ತಾ ಇತ್ತು .


ಹಳೆಯ ಕಂತುಗಳಿಗಾಗಿ ಇಲ್ಲಿ ನೋಡಿ  :

ಹಿಂದಿನ ರಾಮಾಯಣವೂ ,ಇಂದಿನ ಮಕ್ಕಳೂ ..
ಅರಣ್ಯ ಕಾಂಡ
 

28 comments:

ಮನಸು said...

ಹಹಹ ಚಿತ್ರ ಸೂಪರ್ ಕಥೆ.... ಅಪೂರ್ವಗೆ ಏನೆಲ್ಲಾ ಪ್ರಶ್ನೆ ಕೇಳಬೇಕನಿಸುತ್ತಾಪ್ಪಾ, ಅಜ್ಜಿ ಕಥೆ ಹೇಳುವುದೊಂದಾದ್ರೆ ಅವಳ ಪ್ರಶ್ನೆಗೆ ಉತ್ತರ ಹೇಳುವುದೊಂದು ಕಥೆ... ತುಂಬಾ ಚೆನ್ನಾಗಿದೆ ನಗು ತರಿಸಿತು

ಜಲನಯನ said...

ನನಗೊಂದು ಡೌಟ್ ಅಜ್ಜಿ..ಅಲ್ಲ ಅದನ್ನ ನೋಡಿ ನಮ್ಮ ಸಿನಿಮಾದವ್ರು ಹಾಡು ಬರೆದದ್ದಾ...ಜಿಂಕೆ ಮರಿನಾ,,ನೀ ಜಿಂಕೆ ಮರಿನಾ,,ನೀ ಜಿಂಕೆ ಜಿಂಕೆ ಮರಿನಾ,,,??
ಲೋ..ತರ್ಲೆ ಸುಮ್ನೆ ಕೂತ್ಕೋ...ಅದು ಜಿಂಕೆ ಮರಿ ಅಲ್ಲ ಅಂತ ಗೊತ್ತಿತ್ತು ರಾಮಂಗೆ...

ಹಹಹ ಚಿತ್ರಾ...ಮಕ್ಕಳ ಎಕ್ಸಪ್ಲನೇಶನ್ ಮಧ್ಯೆ ಅಜ್ಜಿಯ ಕಥೆಯ ಎಕ್ಸಪ್ಯಾನ್ಶನ್ ಮುಮ್ದುವರೀಲಿ...ಹಹಹ

ಅನಂತ್ ರಾಜ್ said...

ಚಿತ್ರಾ.. ನಮ್ಗೂ ಅಪೂರ್ವ ಥರಾನೇ ಟೆನ್ಷನ್ ಆಗ್ತಿದೆ. ಬೇಗ ಕಥೆನಾ ಮು೦ದುವರಿಸಿ ಅಜ್ಜಿಯ ಮೂಲಕ..
ಸು೦ದರ ನಿರೂಪಣೆ..ಧನ್ಯವಾದಗಳು.

ಅನ೦ತ್

sunaath said...

ಅಜ್ಜಿಯ ರಾಮಾಯಣ ತುಂಬ ಸ್ವಾರಸ್ಯಕರವಾಗಿ ಸಾಗ್ತಾ ಇದೆ. ಹೀಗೇ ಮುಂದುವರೆಯಲಿ.

ತೇಜಸ್ವಿನಿ ಹೆಗಡೆ said...

ಅಕ್ಕಾ,

:) ಆ ಅಜ್ಜಿ ಎಲ್ಲಿಪ್ಪದು ಹೇಳು ಮರಾಯ್ತಿ.. ತಲೆ ತಿನ್ನ ಈ ಅದಿತಿನೂ ಅದ್ರ ಹತ್ರನೇ ಕಳಿಸ್ತಿ :) ಮಸ್ತ್ ಬತ್ತಿದ್ದು ರಾಮಾಯಣ. ಲಕ್ಷಣ ರೇಖೆಯ ಪವರ್ ಈಗ ಜಿರಲೆ, ಹುಳಗಳಿಗಷ್ಟೇ ಸೀಮಿತ ಆಗೋಗಿದ್ದೂ ನಿಜ ಅಲ್ದಾ! ಬೇಗ ಮುಂದುವರಿಲಿ.

Manju M Doddamani said...

ಅನ್ಕೊಂಡೆ ಓದುವಾಗಲೇ ಅನ್ಕೊಂಡೆ ಇದು ನಮ್ಮಜ್ಜಿ ನಂಗೆ ಹೇಳ್ತಾ ಇದ್ದ ಕಥೆ ಅಂತ ನಮ್ಮಜ್ಜಿ ನು ಹೀಗೆ ಹೇಳ್ತಾ ಇದ್ರೂ ತಲೆ ಹರಟೆ ಮಾಡಿದ್ರೆ ಹೇಳ್ತಾ ಇರ್ಲಿಲ್ಲ ನಾನು ಸುಮ್ನೆ ಕೂತು ಹ್ಮಂ ಹ್ಮಂ ಅಂತ ಇದ್ದೆ ಚನ್ನಾಗಿದೆ ಅಜ್ಜಿ ಕಥೆ ಮುಂದುವರೆಸಿ....!

shivu.k said...

ಚಿತ್ರಾ,

ನನಗೆ ಗೊತ್ತಿತ್ತು. ಹೀಗೆಲ್ಲಾ ವಿಶೇಷವಾಗಿರುತ್ತೆ ಅಂತ. ಏಕೆಂದರೆ ನಾನು ಥಿಂಕ್ ಮಾಡೋದೇ ಹೀಗಲ್ವೇ...ಒಂಥರ ತರಲೇ ನಮ್ಮ ಮಕ್ಕಳಿಗೆ ಹೀಗೆ ದಸರ ರಜಾ...ಅವರಿಗೆ ಇಂಥ ತಿಪ್ಪರಲಾಗದ ಅನೇಕ ಅಧುನಿಕ ಕತೆಗಳನ್ನು ಹೇಳಲು ಪ್ರಯತ್ನಿಸುತ್ತೇನೆ. ಹಳೆಯ ಕತೆಗಳನ್ನು ಹೇಳಿದರೆ ಅವರು ಹೀಗೆ ಪ್ರಶ್ನೆ ಕೇಳುತ್ತಾರೆ ಅದಕ್ಕೇ ಸ್ವಲ್ಪ ರೋಬಾಟ್...ಟ್ರಾಫಿಕ್....ಕ್ಯೂ ನಿಲ್ಲುವ ಕತೆ...ಹೀಗೆ ನಾನೇ ಸೃಷ್ಟಿಸಿರುವ ಕತೆಯನ್ನು ಅವರು ಎಲ್ಲೂ ಕೇಳಿರುವುದಿಲ್ಲವಾದ್ದರಿಂದ ಕುತೂಹಲದಿಂದ ಕೇಳುತ್ತಾರೆ..ಸಾಧ್ಯವಾದರೆ ಎಂದಾದರೂ ಅದನ್ನು ಬ್ಲಾಗಿನಲ್ಲಿ ಬರೆಯಬೇಕು.
ಒಟ್ಟಾರೆ ಇಂದಿನ ಮಕ್ಕಳಿಗೆ ಕತೆಹೇಳುವುದು ಕಷ್ಟ ಅಲ್ವಾ..
ನಿಮ್ಮ ಸೀತಾಪರಣ ಕತೆ ಓದಿ ನಗು ಬಂತು..

PARAANJAPE K.N. said...

ಅಜ್ಜಿ ಕಥೆ ತು೦ಬಾ ಚೆನ್ನಾಗಿದೆ

ಮನಸಿನಮನೆಯವನು said...

ಸೊಗಸಾಗಿ ಮುಂದುವರೆಯುತ್ತಿದೆ..

ಬನ್ನಿ ನನ್ನ 'ಮನಸಿನಮನೆ'ಗೆ..

ಮನದಾಳದಿಂದ............ said...

ಈಗಿನ ಮಕ್ಕಳಿಗೆ ಪುರಾಣದ ಕತೆ ಹೇಳೋದು ಅಂದ್ರೆ..........
ಪಾಪ ಅಜ್ಜಿಗೆ ತುಂಬಾ ಕಷ್ಟ ಆಗ್ತಾ ಇರ್ಬೇಕು ಅಲ್ವಾ?
ಹ್ಹ ಹ್ಹ ಹ್ಹಾ.........
ತುಂಬಾ ಚನ್ನಾಗಿದೆ.
ಚಿತ್ರಾ ಅವ್ರೆ, ದಯವಿಟ್ಟು ಕಾಗುಣಿತದ ಬಗ್ಗೆ ಸ್ವಲ್ಪ ಹೆಚ್ಚು ಮಹತ್ವ ಕೊಟ್ಟರೆ ಒಳ್ಳೆಯದು ಅನಿಸುತ್ತದೆ.

ಸುಧೇಶ್ ಶೆಟ್ಟಿ said...

ajji... hangella yaake katheya ardhadhalle yedhdhu hogthe???

E maathannu ajjige thalupisibidi :)

anthu marethu hoguva hanthadhalliruva raamayanavannu nimmadhe reethiyalli vivarisutta nenapisuttiddeeeri.. thumba thanks...:)

so nimma ee raamayaNakke yenendu hesaridoNa :P

ಚಿತ್ರಾ said...

ಮನಸು ,
ಧನ್ಯವಾದಗಳು. ಈಗಿನ ಮಕ್ಕಳೇ ಹಾಗೆ ಅಲ್ವೇ? ಪ್ರಶ್ನೆಗಳು ಮುಗಿಯೋದೇ ಇಲ್ಲ ! ನಾವುಗಳು ಯಾವಗ್ಲಾದ್ರೂ ಹೀಗೆ ಪ್ರಶ್ನೆ ಕೇಳಿದ್ವ ಅಂತ ಅನುಮಾನ ಬಂದು ಬಿಡತ್ತೆ !

ಚಿತ್ರಾ said...

ಆಜಾದ್ ,
ಇದೀಗ ನಿಜವಾಗಿಯೂ ಯೋಚಿಸಬೇಕಾದ ವಿಷಯ ! ಇಂದಿನ ಸಿನೆಮಾದಲ್ಲಾದ್ರೆ , ' ಜಿಂಕೆ ಮರೀನಾ .. ನೀ ಜಿಂಕೆ ಮರೀನಾ ..' ಅನ್ನೋ ಹಾಡು ಶೂರ್ಪನಖಿ ಬಂದಾಗಲೇ ಬಂದು ಬಿಡ್ತಾ ಇತ್ತು !
ಪ್ರೋತ್ಸಾಹಕ್ಕೆ ಧನ್ಯವಾದಗಳು

ಚಿತ್ರಾ said...

ಅನಂತರಾಜ್ ,
ಬರ್ತಾಳೆ ಅಜ್ಜಿ ಬೇಗಾನೆ, ಜಾಸ್ತಿ ಟೆನ್ಶನ್ ಮಾಡ್ಕೋ ಬೇಡಿ !
ಥ್ಯಾಂಕ್ಸ್ !

ಚಿತ್ರಾ said...

ಕಾಕಾ,
ಧನ್ಯವಾದಗಳು . ನಿಮ್ಮೆಲ್ಲರ ಆಶೀರ್ವಾದ ಹೀಗೇ ಇರಲಿ .

ಚಿತ್ರಾ said...

ತೇಜೂ,
ಈಗ ಕಥೆ ಹೇಳ ಅಜ್ಜಿ ಹುಡುಕದು ಕಷ್ಟ . ನಾವೇ ಹೀಂಗೆ ಕಥೆ ಹೇಳಲೆ ಕಲಿಯವು ! ಅದಕ್ಕೂ ಮುಂಚೆ , ಪ್ರಶ್ನೆಗಳಿಗೆಲ್ಲ ಉತ್ತರ ಹೇಳಲೆ ತಾಳ್ಮೆ ಕಲಿಯ ಪ್ರಸಂಗ ನೋಡು ! ಹಾ ಹಾ ಹಾ ..

ಚಿತ್ರಾ said...

ಮಂಜು,
ನೀವೇನೋ ಅಜ್ಜಿ ಹೇಳಿದ್ದಕ್ಕೆ ಸುಮ್ನೆ ಕೂತ್ಗೊಂಡು ಹೂಂ ಅಂದ್ಕೊಂಡು ಕೇಳ್ತಾ ಇದ್ರಿ . ಈಗ ಕೇಳಲ್ಲ ಸ್ವಾಮೀ ಮಕ್ಕಳು !
ಆದರೂ ನೀವೂ ಸಹ ಅಜ್ಜಿಗೆ ತರ್ಲೆ ಮಾಡ್ತಾ ಇದ್ರಿ ಅಂತಾಯ್ತು ! ಹಿ ಹಿ ಹಿ ... ಹೀಗೇ ಭೇಟಿ ಕೊಡ್ತಾ ಇರಿ

ಚಿತ್ರಾ said...

ಶಿವೂ,
ನೀವೂ ಹೊಸಾ ರೀತಿಯಲ್ಲಿ ಕಥೆಗಳನ್ನು ಹೇಳ್ತೀರಾ ಅಂತ ತಿಳಿದು ಖುಷಿಯಾಯ್ತು. ಈಗಿನ ಮಕ್ಕಳಿಗೆ ಸೀದಾ ಸಾದಾ ಕಥೆಗಳು ಇಷ್ಟ ಆಗಲ್ಲ ! ಹೀಗೆಲ್ಲಾ ತಿರುಚಿ , ಹೊಸಾದನ್ನು ಸೇರಿಸಿ ಏನೇನೋ ಗಿಮಿಕ್ ಮಾಡಿ ಹೇಳಿದ್ರೆ ಮಾತ್ರ ಕೇಳ್ತಾರೆ. ಇಲ್ಲಾ ಅಂದ್ರೆ , " ಥೂ ಎಷ್ಟು ಬೋರ್ ಕಥೆ ಇದು .. ಸಾಕು , ನಾನು ಕಾರ್ಟೂನ್ ನೋಡ್ತೀನಿ " ಅಂತ ಎದ್ದು ಹೋಗಿ ಬಿಡ್ತಾರೆ ಅಷ್ಟೇ !

ಚಿತ್ರಾ said...

ಪರಾಂಜಪೆ ,
ತುಂಬಾ ಧನ್ಯವಾದಗಳು .

ಚಿತ್ರಾ said...

ಗುರುಪ್ರಸಾದರೆ ,
ಥ್ಯಾಂಕ್ಸ್ .
ಅಂದ ಹಾಗೆ , ನಿಮ್ಮ " ಮನಸಿನ ಮನೆ" ಎಂಬ ಚಂದದ ಬ್ಲಾಗ್ ಇರುವಾಗ .. " ಕತ್ತಲೆ ಮನೆ' ಯಾಕೆ ಎಂದು ಅರ್ಥವಾಗಲಿಲ್ಲ !

ಚಿತ್ರಾ said...

ಪ್ರವೀಣ್ ( ಮನದಾಳದಿಂದ)

ಪುರಾಣದ ಕಥೆಗಳನ್ನು ನವೀಕರಿಸಿ ಹೇಳೋದು ... ಸ್ವಲ್ಪ ಕಷ್ಟಾ ನೇ . ಆದರೂ ಪಾಪ ಅಜ್ಜಿಯ ಪ್ರಯತ್ನ ಸಾಗಿದೆ .
ಕಾಗುಣಿತದ ಬಗ್ಗೆ , .. ನಿಮ್ಮ ಸಲಹೆಯನ್ನು ಗಮನದಲ್ಲಿಡುತ್ತೇನೆ. ಗೂಗಲ್ ನಲ್ಲಿ ಕನ್ನಡ ಬರೆಯುವಾಗ ಕೆಲವೊಮ್ಮೆ ಅಕ್ಷರಗಳು ಬೇಕಾದಂತೆ ಮೂಡುವುದಿಲ್ಲ. ಎಚ್ಚರಿಕೆಯಿಂದ ತಿದ್ದಿದರೂ ಕೆಲ ಸಲ ತಪ್ಪುಗಳು ಉಳಿದು ಹೋಗುತ್ತವೆ . ಇನ್ನು ಮುಂದೆ .. ಮತ್ತಷ್ಟು ಎಚ್ಚರ ವಹಿಸುತ್ತೇನೆ.

ಚಿತ್ರಾ said...

ಸುಧೇಶ್,
' ತಮ್ಮಾ, ವಯಸ್ಸಾದ ಮೇಲೆ ಒಂದೇ ಸಮ ಮಾತಾಡದು , ಒಂದೇ ಕಡೆ ಕೂರದು ಕಷ್ಟ . ಹಾಗಾಗಿ ನಡು ನಡುವೆ ನಿಲ್ಲಿಸೋದು . ನಿನಗೂ ವಯಸ್ಸಾದ ಮೇಲೆ ಅರ್ಥ ಆಗತ್ತೆ" ಹೀಗಂತ ಅಜ್ಜಿ ನಿಮಗೆ ಹೇಳೋಕೆ ಹೇಳಿದಾರೆ.
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು . ನಮ್ಮದೇ ರೀತಿಯಲ್ಲಾದರೂ ಹೇಳೋಕೆ ಪ್ರಯತ್ನಪಟ್ಟರಾದ್ರೂ ನಮ್ಮ ಕಥೆಗಳನ್ನ ಉಳಿಸಿಕೊಳ್ಳೋಕೆ ಸ್ವಲ್ಪ ಆದರೂ ಹೆಲ್ಪ್ ಆಗಬಹುದು ಅಂತ ... .
ಮತ್ತೆ ಇದಕ್ಕೆ ಇನ್ನೂ ಹೆಸರಿಡುವ ಯೋಚನೆ ಬಂದಿರಲಿಲ್ಲ ! ಹಿ ಹಿ ಹಿ ... ನೀವೇ ಇಟ್ಟುಬಿಡಿ !

ಸುಧೇಶ್ ಶೆಟ್ಟಿ said...

ajji raamayaNa hegidhe :)

illa andare "chitra ramayana" anthaanoo idabahudheno :)

ಮನದಾಳದಿಂದ............ said...

ಚಿತ್ರಾ ಅವರೆ, ನೀವು ಯಾಕೆ 'ಬರಹ direct' download ಮಾಡಿಕೊಳ್ಳಬಾರದು?
ನೇರವಾಗಿ ಎಲ್ಲ ಪೇಜಿನ ಮೇಲೂ ಕನ್ನಡ ಕೀಲಿಸಬಹುದಲ್ವಾ?

ಸಾಗರದಾಚೆಯ ಇಂಚರ said...

ಚಿತ್ರಾ
ಕ್ಷಮಿಸು ಲೇಟ್ ಆಗಿ ಬಂದಿದ್ದಕ್ಕೆ,
ಅಜ್ಜಿ ಕಥೆ ಚೊಲೋ ಹೇಳಿದ್ದೆ
ನಿನ್ನ ಶೈಲಿ ಸಕತ್ತಿದ್ದು
ನಿನ್ ಮೇಲ್ ಅಡ್ರೆಸ್ ಯಾವುದು
ನಂದು, murthyhegde@gmail.com
adre mail maadu

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ನಿಜಕ್ಕೂ"ಅಜ್ಜಿ ರಾಮಾಯಣ" ಹೆಸರಲ್ಲಿ ಮುದ್ರಣವಾದರೆ

ತುಂಬಾ ಮಕ್ಕಳು ಇಷ್ಟ ಪಡುವುದರಲ್ಲಿ ಸಂಶಯವಿಲ್ಲ.

ಈಗಿನ ಕಾಲದ ಮಕ್ಕಳಿಗೆ ಆಸಕ್ತಿದಾಯಕವಾಗುವಂತೆ

ಬರೀತಿದ್ದೀರಾ..

"ಕೆಂಡ ಸಂಪಿಗೆ" ಯಂತಹ ಹೆಚ್ಚು ಜನರನ್ನು ತಲುಪುವ

ಬ್ಲಾಗ್ ನಲ್ಲದರೂ ಹಾಕಿ.

ಅಭಿನಂದನೆಗಳು..

ಚುಕ್ಕಿಚಿತ್ತಾರ said...

ಚಿತ್ರಾ.. ಹ್ಹ.ಹ್ಹ.ಹ್ಹಾ..

ನಿಮ್ಮ ರಾಮಾಯಣ ಕಥೆ ಕೇಳುವವರೇ ಭಾರೀ ಹುಶಾರಿದ್ದಾರೆ....ಅ೦ದಿನ ಕಥೆಗೂ ಇ೦ದಿನ ಸನ್ನಿವೇಶಗಳಿಗೂ ಚನ್ನಾಗಿ ಹೊ೦ದಿಸಿದ್ದೀರಿ... ಮಕ್ಕಳ ಮುಗ್ಧತೆಯಲ್ಲಿ ಹಾಸ್ಯದ ಹೊನಲನ್ನೇ ಹರಿಸಿದ್ದೀರಿ.. ಹ್ಹ ಹ್ಹ..ಹ್ಹಾ... ಮು೦ದುವರೆಸಿ..

Sandhya Rao said...

bala majavagittu ajji mommakkala kathayana