December 12, 2010

ಒಗಟಿನ ಉತ್ತರ !

ಬಹಳ ದಿನಗಳ ನಂತರ ನನ್ನದೇ ಬ್ಲಾಗಿಗೆ ಮತ್ತೆ ಬಂದೆ. ಒಗಟಿನ ಉತ್ತರ ಉಳಿದು ಹೋಗಿತ್ತಲ್ಲ?

ಕೆಲವೇ ಉತ್ತರಗಳು ಬಂದವು . ಉಳಿದವರಿಗೆ ಇಷ್ಟವೇ ಆಗಲಿಲ್ಲವೋ ಅಥವಾ ಒಗಟು ಕಷ್ಟ ಎನಿಸಿತೋ ಗೊತ್ತಿಲ್ಲ .


ಪ್ರತಿ ಸಾಲನ್ನು ಬಿಡಿಸುತ್ತಾ ಹೋದರೆ ಉತ್ತರ ಬಲು ಸುಲಭ !

"ಅಂಬುಧಿಯನಾಳಿರ್ದ ಗೌಡಗೆ " - ಅಂಬುಧಿ ಅಂದರೆ ಸಮುದ್ರ, ಸಾಗರ , ಅದನ್ನು ಅಳುವವನು ಅಂದರೆ ಇಲ್ಲಿ ವಿಷ್ಣು . ಅವನಿಗೆ

"ಕುಂಭಕಾರನು ಜನಿಸಲಾತನ " - ಕುಂಭಕಾರ ಅಥವಾ ಕುಂಬಾರ ಅಂದರೆ ಸೃಷ್ಟಿಕರ್ತ ಅಂದರೆ  ಬ್ರಹ್ಮ  ! ಆತನ

"ಶಿರವೊಂದ ಅಂಗುಲಿಯೊಳ್ ಕಡಿದನ " - ತಲೆಯನ್ನು ಬೆರಳಿಂದ ಕಡಿದವನು ಅಂದರೆ ಶಿವ  . ಅವನನ್ನು

" ಬೇಡಿ ತಪದಿಂದ , ಅಂಬ ಪಡೆದನ ಪಿತನ ಸುತನನು " - ಆ ಶಿವನನ್ನು ತಪಗೈದು ಬೇಡಿ ಅಂಬು ಅಂದರೆ ಬಾಣ ವನ್ನು ( ಪಾಶುಪತಾಸ್ತ್ರ) ಪಡೆದವನು ಅಂದರೆ " ಅರ್ಜುನ "  .  ಅವನ ತಂದೆ " ಇಂದ್ರ " ಆತನ ಮಗ " ವಾಲಿ " ( ವಾಲಿ ಇಂದ್ರನ ಮಗ ಎಂಬ ಕಥೆಯನ್ನು ಎಷ್ಟು ಜನರಿಗೆ ತಿಳಿದಿದೆಯೋ ಗೊತ್ತಿಲ್ಲ . ನನಗೆ ಅಜ್ಜ ಹೇಳಿದ್ದರು )

" ಅಂಬಿನೋಳ್ ಕೊಂದನ ವೈರಿಗೆ ಲಿಂಗವಿತ್ತಿಹ ಶಂಭುಗೌಡನ ಸುತನ ಬಲಗೊಂಬೆ "

- ಆ ವಾಲಿಯನ್ನು ಬಾಣದಿಂದ ಕೊಂದವನು  " ರಾಮ " .  ಅವನ ವೈರಿ " ರಾವಣ "  . ಅವನಿಗೆ ಆತ್ಮಲಿಂಗವನ್ನು ಕೊಟ್ಟವನು ಶಿವ ಅಥವಾ ಶಂಭು . ಆತನ ಸುತ ಗಣಪನ್ನು ಬಲಗೊಂಬೆ ( ದೇವರ ಬಲಭಾಗದಿಂದ ಸುತ್ತುತ್ತೇವಲ್ಲ) ಅಂದರೆ ಪ್ರದಕ್ಷಿಣೆ ಮಾಡುತ್ತೇನೆ .

 ಇದು ಈ ಒಗಟಿನ ವಿವರ. " ಗಣಪತಿಗೆ ವಂದಿಸುತ್ತೇನೆ " ಎಂಬ ಅತೀ ಸರಳ ವಾಕ್ಯವನ್ನು ಸುಂದರವಾಗಿ ಒಗಟಿನ ರೂಪದಲ್ಲಿ ಹೆಣೆದು  ವಿಷ್ಣು , ಬ್ರಹ್ಮ , ಶಿವ ,ಅರ್ಜುನ, ಇಂದ್ರ , ವಾಲಿ ,ರಾಮ, ರಾವಣ ಹಾಗೂ ಗಣಪ ಹೀಗೆ ೮ ಜನರನ್ನು ಸೇರಿಸಿ ಬುದ್ಧಿಗೆ ಕಸರತ್ತು ನೀಡಿದ ಆ ಹಿರಿಯರನ್ನು ಮೆಚ್ಚದೆ ಇರಲಾದೀತೇ ?

21 comments:

ಜಲನಯನ said...

ನನ್ನ ಉತ್ತರದಲ್ಲಿ ಮನ್ಮಥ ತೆಗೆದು ಅರ್ಜುನ, ಇಂದ್ರ ಮತ್ತು ವಾಲಿ ಹಾಕಿದ್ರೆ ಫಿನಿಶ್...ಹೆಚ್ಚು ದೂರ ಇರ್ಲಿಲ್ಲ ನನ್ನ ಉತ್ತರಗಳು...ಕರ್ಟಸಿ ಸುನಾಥಣ್ಣ...ಹಹಹಹ

ಸಾಗರದಾಚೆಯ ಇಂಚರ said...

mast iddu nodu ogatu

sunaath said...

ಚಿತ್ರಾ,
ನಿಮ್ಮ ವಿವರಣೆಗಾಗಿ ಬಹಳ ದಿನಗಳವರೆಗೆ ಕಾಯಬೇಕಾಯ್ತು.
ಇರಲಿ, ಸೊಗಸಾದ ಒಗಟನ್ನು ಕೊಟ್ಟಿದ್ದಕ್ಕಾಗಿ ನಿಮ್ಮನ್ನು ಕ್ಷಮಿಸಿದ್ದೇನೆ.

ಚುಕ್ಕಿಚಿತ್ತಾರ said...

ಚಿತ್ರಾ..
ನಾನೋಡಿದ್ದಿದ್ದಿ.. ಇಷ್ಟಾನೂ ಆಗಿತ್ತು ಆದ್ರೆ ಕಷ್ಟ ಆತು....
ಎ೦ತಾ ಮಾಡ್ಲಿ..
ಚೊಲೊ ಇದ್ದು..ನನ್ನ ಮಗಳಿಗೆ ಹೇಳ್ಕೊಡ್ತಿ...

ಅನಂತರಾಜ್ said...

"ಒಗಟು ಕಷ್ಟ ಎನಿಸಿತೋ ಗೊತ್ತಿಲ್ಲ.." ನಿಜವಾದ ಮಾತು ಚಿತ್ರಾ ಅವರೆ, ಒ೦ದು ಗೊತ್ತಾಗಿದ್ರೆ ಇನ್ನೊ೦ದು ಗೊತ್ತಾಗಿರ್ಲಿಲ್ಲ..ಸ್ವಲ್ಪ ಈಸಿ ಆಗಿರೋದು ಕೊಡ್ತಾ ಬನ್ನಿ, ...ಉತ್ತರಗಳ ರಾಶಿಯೇ ನಿಮ್ಮ ತಾಣವನ್ನು ತು೦ಬುತ್ತದೆ.

ಧನ್ಯವಾದಗಳು
ಅನ೦ತ್

ಮನಸು said...

super chitra thanks

ತೇಜಸ್ವಿನಿ ಹೆಗಡೆ said...

Mast Chitrakka! nange vaali, Indra ellava gottE aagittille nodu...

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾ...

ನಾನು ಒಗಟಿಗೆ ಬಹಳ ತಲೆ ಕೆಡಿಸಿಕೊಂಡೆ...

ಪಾಂಡು ಮತ್ತು ಧೃಥರಾಷ್ಟ್ರರಿಗೆ ಸಂಬಂಧ ಪಟ್ಟಿದ್ದು ಇರಬಹುದಾ ಅಂತ ಅನುಮಾನ ಪಟ್ಟಿದ್ದೆ...

ನನ್ನ ಎಣಿಕೆ ಸುಳ್ಳಾಯಿತು...

ನನಗಂತೂ ಇದು ಕಬ್ಬಿಣದ ಕಡಲೆಯಾಗಿತ್ತು..

ಒಟ್ಟಿನಲ್ಲಿ ಮಜಾ ಬಂತು...

ಸುಧೇಶ್ ಶೆಟ್ಟಿ said...

Haudu thumba kashta ittu :)

aadre answer masth idhe :)

shaamala said...

ಚಿತ್ರಾ ಅವರೇ,
ನಿಮ್ಮ ಒಗಟು ಓದಿ ಸುಮಾರು ದಿನಗಳು ಚೆನ್ನಾಗಿ ತಲೆಕೆಡೆಸಿಕೊಂಡೆ, ಧನ್ಯವಾದಗಳು :-)

ವಾಲಿ ಇಂದ್ರನ ಮಗ ಎನ್ನುವುದು ಮಸುಕು-ಮಸುಕಾಗಿಯೂ ನೆನಪಾಗಲಿಲ್ಲವಲ್ಲಾ, ಸಾರ್ಥಕವಾಯ್ತು ಅಜ್ಜಿ ಜೊತೆ ಹರಿಕಥೆ ಕೇಳಿ! ಅದೊಂದು ಲಿಂಕು ಬಿಟ್ಟರೆ ಮತ್ತೆಲ್ಲ ನನಗೆ ಗೊತ್ತಾಗಿತ್ತು :(

ಒಗಟು ತುಂಬಾ ಚೆನ್ನಾಗಿದೆ. ಸಾಧ್ಯವಾದರೆ ಮತ್ತಷ್ಟು ಒಗಟುಗಳನ್ನು ಹಾಕಿ.

ಶಾಮಲ

ಚಿತ್ರಾ said...

ಆಜಾದ್,

ಹೌದು ಹೌದು ... ಇರುವ ೮ ಹೆಸರುಗಳಲ್ಲಿ ಎಲ್ಲೋ ಒಂದು ೬-೭ ಹೆಸರು ಉಳಿದಿತ್ತಷ್ಟೇ ನಿಮ್ಮ ಉತ್ತರದಲ್ಲಿ ! ಜಾಣರು ನೀವು. ಸುನಾಥ್ ಕಾಕಾ ಅವರ ಉತ್ತರ ಕಾಪಿ ಬೇರೆ ಮಾಡಿದ್ದೀರಿ !!!

ಚಿತ್ರಾ said...

ಗುರು ,

ಥ್ಯಾಂಕ್ಸ್ !

ಚಿತ್ರಾ said...

ಕಾಕಾ,

ಮೊದಲಿಗೆ ಕ್ಷಮೆ ಕೇಳುತ್ತೇನೆ. ಮತ್ತೆ , ನಾ ಕೇಳುವ ಮೊದಲೇ ಕ್ಷಮಿಸಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. .

ಇತ್ತೀಚೆ ಕೆಲ ಅನಿವಾರ್ಯ ಕಾರಣಗಳಿಂದಾಗಿ ಬರಹಗಳು ತಡವಾಗುತ್ತಿವೆ. ಇನ್ನೂ ಕೆಲ ಕಾಲ ಹೀಗೆ ನಡೆಯಬಹುದು. ಆದರೆ , ನಿಮ್ಮ ಆಶೀರ್ವಾದ , ಪ್ರೋತ್ಸಾಹಗಳು ಮಾತ್ರ ಜೊತೆಗಿರಲಿ. ಮೆಚ್ಚಿದ್ದಕ್ಕೆ ಧನ್ಯವಾದಗಳು .

ಚಿತ್ರಾ said...

ವಿಜಯಶ್ರೀ,

ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಮನೆಯಲ್ಲಿ ಹಳೆ ಜನರತ್ರೆ ಕೇಳಿದ್ರೆ ಇಂಥದ್ದೇ ಎಷ್ಟೋ ಸ್ವಾರಸ್ಯಕರ ಒಗಟುಗಳು , ಪ್ರಶ್ನೆಗಳು ಸಿಗಲಕ್ಕು ಅಲ್ದಾ? ಹೇಳಿಕೊಡು ಮಗಳಿಗೆ .

ಚಿತ್ರಾ said...

ಅನಂತರಾಜ್,

ಧನ್ಯವಾದಗಳು. ಇವೆಲ್ಲ ನನಗೂ ಮರೆತೇ ಹೋಗಿದ್ದವು. ಇನ್ನು ನೆನಪು ಮಾಡಿಕೊಳ್ಳಬೇಕು .

ಚಿತ್ರಾ said...

ಮನಸು ,

ಧನ್ಯವಾದಗಳು.

ಚಿತ್ರಾ said...

ತೇಜೂ,

ಹಾಂಗೇ ಆಗ್ತು. ಕೆಲವಷ್ಟು ವಿಷಯಗಳು ಅಷ್ಟಾಗಿ ಮುಖ್ಯವಲ್ಲ ಅನಿಸಿದ್ದು ನೆನಪಲ್ಲಿ ಇರ್ತೆ ಇಲ್ಲೆ. ನಾವು ಸಾಧಾರಣವಾಗಿ ಉಪಕಥೆಗಳಿಗೆ ಗಮನ ಕೊಡ್ತ್ವಿಲ್ಲೇ ಹೇಳದೂ ಆಗಿಕ್ಕು ಅಲ್ದಾ?

ಚಿತ್ರಾ said...

ಪ್ರಕಾಶಣ್ಣ,

ಕಬ್ಬಿಣದ ಕಡಲೆಯಿಂದ ಹಲ್ಲು ನೋವಂತು ಬರಲಿಲ್ಲ ತಾನೇ? ಹಿ ಹಿ ಹಿ .

ಥ್ಯಾಂಕ್ಸ್. ಪ್ರೋತ್ಸಾಹ ಹೀಂಗೆ ಇರಲಿ .

ಚಿತ್ರಾ said...

ಸುಧೇಶ್,

ಅಷ್ಟೆಲ್ಲ ಕಷ್ಟ ಇತ್ತಾ ನಿಜಕ್ಕೂ ?

ಚಿತ್ರಾ said...

ಶ್ಯಾಮಲಾ,

ಥ್ಯಾಂಕ್ಸ್ ಕಣ್ರೀ. ಉಳಿದ ಉತ್ತರಗಳನ್ನು ಬರೆದು ಬಿಟ್ಟಿದ್ರೆ , ಮೊದಲನೇ ಬಹುಮಾನ ಬರ್ತಾ ಇತ್ತಲ್ಲಾ ರೀ . ಹಾ ಹಾ ಹಾ .

ಹೀಗೆ ಬರುತ್ತಾ ಇರಿ. ಅಭಿಪ್ರಾಯಕ್ಕೆ ಧನ್ಯವಾದಗಳು.

ಜಲನಯನ said...

ಚಿತ್ರಾ...ಸುನಾಥಣ್ಣನ್ನ ಕಾಪಿ ಮಾಡಿದೆ ಅಂದ್ಯಲ್ಲಾ ಅದು ಕಾಂಪ್ಲಿಮೆಂಟ್ ನನಗೆ ಯಾಕಂದ್ರೆ ಅವ್ರು ತಿಳ್ಕೊಂಡಿರೋದ್ರಲ್ಲಿ ೧೦% ಕಾಪಿ ಮಾಡಿ ಕಲಿತ್ರೆ...ಸಾಕಲ್ವಾ...??
ಹಾಂ ಹಾಗೇನೇ,,,ಕಾಪಿ ಮಾಡೋಕೂ ಜಾಣತನ ಬೇಕು ಅನ್ನೋದನ್ನ ನನ್ನ ಫಿಸಿಕ್ಸ್ ನಲ್ಲಿ (ಸಪ್ಲಿಮೆಂಟರಿ) ಫೇಲಾದ ಸ್ನೇಹಿತ ಹೇಳಿದ್ದು...ಯಾಕೆ ಗೊತ್ತಾ ಅವನ ಮುಂದೆ ಕೂತಿದ್ದವ ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆ ಉತ್ತರ ಮಾಡ್ತಿದ್ದದ್ದು...ಹಹಹ..