December 28, 2010

" ಸಾಧನೆಗಳ ವರ್ಷ " - ೨೦೧೦

೨೦೧೦ ಮುಗಿದು ೨೦೧೧ ಕಾಲು ಇಡುತ್ತಾ ಇದೆ. ಏನನಿಸತ್ತೆ ನಿಮಗೆ ಕಳೆಯುತ್ತಿರುವ ವರ್ಷದ ಬಗ್ಗೆ ?
ನನ್ನ ಕೇಳಿದ್ರೆ , ೨೦೧೦ ಒಂಥರಾ " ಸಾಧನೆಗಳ ವರ್ಷ " ಅನ್ನ ಬಹುದು.


ವೈಯುಕ್ತಿಕವಾಗಿ , ಈ ವರ್ಷದಲ್ಲಿ ಸ್ನೇಹಿತರ ಬಳಗ ಬೆಳೆದಿದೆ. (ಆದರೆ ನನ್ನ ಬ್ಲಾಗ್ ಬರಹಗಳ ಸಂಖ್ಯೆ ಹಿಮ್ಮುಖವಾಗಿದೆ .)

ಆದರೆ ನಾನು ಇಲ್ಲಿ ಹೇಳುತ್ತಿರುವುದು  ಬರೀ ನಮ್ಮ ದೇಶದ ಸಾಧನೆಯ ಬಗ್ಗೆ !

(ಇಲ್ಲಿ ಕೆಲವನ್ನು ಮಾತ್ರ ಪಟ್ಟಿ ಮಾಡಿದ್ದೇನೆ. ನಿಮ್ಮ ಲಿಸ್ಟನ್ನೂ ಕೂಡ ಕೊಡಬಹುದು !)


ಮೊದಲ ಪಟ್ಟಿ :

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಶೋಭಿಸಿದ್ದೇವೆ. ಅನೇಕ ದಾಖಲೆಗಳನ್ನು ಸೃಷ್ಟಿಸಿದ್ದೇವೆ.

ಏಷ್ಯನ್ ಕ್ರೀಡಾಕೂಟದಲ್ಲೂ ೬ನೇ ಸ್ಥಾನದಲ್ಲಿ ನಿಂತು ಬೀಗಿದ್ದೇವೆ.

ಸೈನಾ ನೆಹ್ವಾಲ್ ಸಾಧನೆಗೆ ಹೆಮ್ಮೆ ಪಟ್ಟಿದ್ದೇವೆ.

ಕ್ರಿಕೆಟ್ ನಲ್ಲಿ ಮೊದಲಿಗರಾಗಿ ಮಿಂಚಿದ್ದೇವೆ

ಸಚಿನ್ ೫೦ ಶತಕಗಳ ವೀರನಾಗಿದ್ದಕ್ಕೆ ಸಂಭ್ರಮಿಸಿದ್ದೇವೆ

ಅಮೇರಿಕಾ, ಫ್ರಾನ್ಸ್, ಚೀನಾ ಮುಂತಾದ ದೊಡ್ಡ ಅಣ್ಣಂದಿರ ಪ್ರತಿನಿಧಿಗಳನ್ನು ಸ್ವಾಗತಿಸಿದ್ದೇವೆ. ( ಭೇಟಿ , ಮಾತುಕತೆಗಳ ಫಲಶ್ರುತಿ ಇನ್ನೂ ತಿಳಿದಿಲ್ಲ ! )

ಖುಷಿ ಪಡುವ ವಿಷಯವೆಂದರೆ, ಕ್ರಿಕೆಟ್ ಹೊರತಾಗಿಯೂ ಕ್ರೀಡಾ ಕ್ಷೇತ್ರದಲ್ಲಿ ನಾವು ಹೆಚ್ಚು ಹೆಚ್ಚು ಸಾಧನೆ ಮಾಡುತ್ತಿರುವುದು



ಆದರೆ , ಇವೆಲ್ಲವನ್ನೂ ಮೀರಿಸಿದ ಸಾಧನೆಗಳು ೨೦೧೦ರಲ್ಲಿ ಬಹಳಷ್ಟಿವೆ !!!

ಎರಡನೇ ಪಟ್ಟಿ:

ಕಾಮನ್ ವೆಲ್ತ್ ಕ್ರೀಡಾಕೂಟದ ತಯಾರಿಯಲ್ಲಿ ೭೦ ಸಾವಿರ ಕೋಟಿಗಳ ಹಗರಣ ,

2G , 3G ಸ್ಪೆಕ್ಟ್ರಮ್ ಗಳ ಗಡಿಬಿಡಿಯಲ್ಲಿ ೧೭೦೦೦೦ ಕೋಟಿಗಳ ಹಗರಣ ,

ಮುಂಬಯಿಯ ಪ್ರಮುಖ ಬಡಾವಣೆಯಲ್ಲಿ , ಕಾರ್ಗಿಲ್ ಯೋಧರಿಗಾಗಿ ಕಾದಿರಿಸಿದ್ದ " ಆದರ್ಶ್ ಸೊಸಾಯಿಟಿ "ಯ ಮನೆಗಳನ್ನು ಅನಾದರ್ಶವಾಗಿ ಕಬಳಿಸಿದ ರಾಜಕೀಯ ಮುಖಂಡರ, ಸೇನಾ ಪ್ರಮುಖರ ಹಗರಣ ,

ದೊಡ್ಡ ರಾಷ್ಟ್ರೀಯ ಬ್ಯಾಂಕ್ ಗಳು , ಜೀವ ವಿಮಾ ನಿಗಮಗಳನ್ನೂ ಒಳಗೊಂಡ Housing Loan ಹಗರಣ,

ಕೆಲ ಹೆಸರಾಂತ ಭಾರತೀಯ ಮುಖಂಡರು , ಉದ್ಯಮಿಗಳು , ಪ್ರಮುಖರು ೨೮೦ ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಕಪ್ಪುಹಣವನ್ನು ಸ್ವಿಸ್ ಬ್ಯಾಂಕ್ ನಲ್ಲಿ ಇಟ್ಟಿದ್ದಾರೆ ಎಂಬ ಸುದ್ದಿಯೇ ಒಂದು ದೊಡ್ಡ ಶಾಕ್ !

ಇನ್ನು ಕರ್ನಾಟಕ ರಾಜ್ಯ ರಾಜಕೀಯ ಪ್ರಹಸನವಂತೂ ಕನ್ನಡಿಗರನ್ನು ತಲೆತಗ್ಗಿಸುವಂತೆ ಮಾಡಿದೆ !

ಈಗ ಬರುವ ೨೦೧೧ ರಲ್ಲಿ ಏನೆಲ್ಲಾ ಪಟ್ಟಿ ಮಾಡಬಹುದು ಎಂಬುದು ಕಳವಳಕಾರಿ ಯೋಚನೆ ಗಾಬರಿ ಹುಟ್ಟಿಸುತ್ತಿದೆ ! !

ಮೊದಲನೇ ಪಟ್ಟಿಯ ಸಾಧನೆಗಳು ಮುಂದುವರಿಯಲಿ ಮತ್ತು ಎರಡನೇ ಪಟ್ಟಿ ಸಣ್ಣದಾಗಲಿ ಎಂದು ಹಾರೈಸುತ್ತಾ ೨೦೧೦ ನ್ನು ಬೀಳ್ಕೊಟ್ಟು ೨೦೧೧ನ್ನು ಸ್ವಾಗತಿಸೋಣ !!!



ಎಲ್ಲರಿಗೂ ಬರಲಿರುವ ಹೊಸ ವರ್ಷದ ಶುಭಾಶಯಗಳು !!!

12 comments:

ಸಾಗರದಾಚೆಯ ಇಂಚರ said...

hosa varshadalli eradane patti beleyade idre saaku
adre ade beliya lakshna jaasti alda :)
anyway Happy New Year

ತೇಜಸ್ವಿನಿ ಹೆಗಡೆ said...

ಚಿತ್ರಕ್ಕ,

ನಿನ್ನ ಹಾರೈಕೆಗಳೊಡನೆ ನಂದೂ ಒಂದು ಹಾರೈಕೆ - ನವ ವರುಷ ತರಲಿ ಹರುಷ.

shivu.k said...

ಚಿತ್ರಾ,

ಮೊದಲ ಪಟ್ಟಿ ಓದಿ ಖುಷಿಯಾಯ್ತು. ಅಷ್ಟರಲ್ಲಿ ಎರಡನೆ ಪಟ್ಟಿ ದೊಡ್ಡದಾಗಿತ್ತಲ್ಲ ಅದಕ್ಕೆ ಸ್ವಲ್ಪ ಬೇಸರವಾಗಿತ್ತು. ಇರಲಿ ನಿಮ್ಮ ನಮ್ಮೆಲ್ಲರ ಅನಿಸಿಕೆಯೂ ಅದು ಚಿಕ್ಕದಾಗಬೇಕು ಅಥವ ಇಲ್ಲವಾಗಬೇಕು.

sunaath said...

ನಿಮಗೂ ಹೊಸ ವರ್ಷದ ಶುಭಾಶಯಗಳು.

ವಿ.ರಾ.ಹೆ. said...

ನಿಮಗೂ ಶುಭಾಶಯಗಳು

ಚುಕ್ಕಿಚಿತ್ತಾರ said...

ಚಿತ್ರಾ..
ನಾನೂ ಸುಮಾರು ಹುಡುಕಿದೆ..
ನನ್ನ ಸಾಧನೆಯೇನಾದರೂ ಇದೆಯಾ ಅ೦ತ.. ಎರಡು ಕೇಜಿ ತೂಕ ಹೆಚ್ಚಾದದ್ದು ಬಿಟ್ಟರೆ ಇನ್ಯಾವುದೂ ನೆನಪಾಗುತ್ತಿಲ್ಲ..
ಮತ್ತು
ಅದನ್ನು ಯಾವ ಲಿಸ್ಟಿಗೆ ಸೇರಿಸಬೇಕೂ ಅನ್ನುವುದು ಕೂಡಾ ಗೊತ್ತಾಗುತ್ತಿಲ್ಲ..:((
happy new year..

ಸುಧೇಶ್ ಶೆಟ್ಟಿ said...

2010 ra sadhanegaLa pakshinota chennagidhe... :) nimma saadhanegaLa pakshinota kooda barali :)

ಮನಸ್ವಿ said...

ನಿಜ.. ಮೊದಲನೆ ಪಟ್ಟಿ ಬೇಗನೆ ಮುಗಿದು ಹೋದಂತೆ ಅನಿಸಿತು, ಎರಡನೇ ಪಟ್ಟಿ ಬೆಳೆಯದೇ ಇರಲಿ, ೨೦೧೧ ಬಂದಿದೆ ಮೂರನೆ ಪಟ್ಟಿ ಬಿಡುಗಡೆ ಆದ್ರೆ.. ಅದೂ ಮೊದಲನೇ ಪಟ್ಟಿಯಂತೆ ಒಳ್ಳೆಯ ಸಾದನೆಗಳ ಪಟ್ಟಿಯೇ ಆಗಿರಲಿ ಎನ್ನುವ ಆಸೆ.. ನಿಮಗೂ ಸಹ ಹೊಸ ವರುಷ ಹೊಸ ಹರುಷವನ್ನು ತರಲಿ, ನಿಮ್ಮ ಕನಸುಗಳೆಲ್ಲಾ ನನಸಾಗಲಿ.

ಜಲನಯನ said...

ಚಿತ್ರಾ..ಪಟ್ಟಿಯೇನೋ ಬೆಳೆಯುತ್ತೆ..ಸಾಧನೆಗಳದ್ದು ಕಮ್ಮಿ..ಘೊಟಾಲಾಗಳದ್ದು ಹೆಚ್ಚು..ಯಾಕಂದ್ರೆ ಒಂದು ಎಲ್ಲಾ ಹೇಳ್ಕೊಂಡ್ ತಿರ್ಗೋದು ಇನ್ನೊಂದು...ಕೆದಕಿದಷ್ಟೂ ಇನ್ನೂ..ಇನ್ನೂ ಹೊರಬೀಳೋದು.. ಎರಡನೇದಕ್ಕೆ ಅಂತ್ಯವಿಲ್ಲ...
ನಿಮಗೆಲ್ಲಾ ಹೊಸವರ್ಷದ ಹಾರ್ದಿಕ ಶುಭಾಶಯಗಳು

ಮನಸಿನಮನೆಯವನು said...

ನಿಮ್ಮಂತೆ ನನ್ನ ಹಾರೈಕೆ ಕೂಡ..
ನನ್ನದು ಶೂನ್ಯ ಸಾಧನೆ..
೨೦೧೧ರಲ್ಲಿ ಸಿಹಿಕ್ಷಣಗಳು ಎದುರಾಗಲಿ...

KalavathiMadhusudan said...

saadanegala saalu chennaagide.happy newyear.

KalavathiMadhusudan said...

saadanegala saalu chennaagide.happy newyear.