January 18, 2011

ನಿಜವಾದ ಪ್ರೇಮ ...

ಶ್ರೀಮಂತನಲ್ಲ ಅವನು
ಶ್ರೀಮಂತಳಲ್ಲ ಅವಳೂ   
ಕಟ್ಟೆಯ ಮೇಲೆ ಕುಳಿತು ಕಾಫೀ ಹೀರುತ್ತಾ
ಹರಟೆಯಲ್ಲಿ ಮೈ ಮರೆಯುವರಿಬ್ಬರೂ
ಹೊರಗಿನ ಚಳಿಯಲ್ಲಿ
ಹರಟೆಯ ಬಿಸಿಯಲ್ಲಿ
ಎರಡೇ ಕಪ್ ಕಾಫಿಯಲ್ಲಿ
ಎರಡುಗಂಟೆ ಕಳೆಯುವುದು
ಇದಲ್ಲವೇ ನಿಜವಾದ ಪ್ರೇಮ?
ಕಾಫೀ ಬೇಕೇ  ಎಂದು 
ಪ್ರೀತಿಯಿಂದ ಕೇಳುವನಾತ
ಸಿಹಿಯಾಗಿ ನಕ್ಕು  ಬೇಡ ಎನ್ನುವಳಾಕೆ
ಅವನು ಕಾಫೀ ತಂದ ಮೇಲೆ 
ಅವನು ಕುಡಿಯುವ ಮೊದಲೇ 
ರುಚಿ ನೋಡಿ  ನಗುವಳಾಕೆ . 
ಅವಳ  ಈ ರೀತಿ ಹೊಸದಲ್ಲ ಅವನಿಗೆ
ಆದರೆ , ಅವನ ಕಪ್ ನ ಕಾಫಿಯೇ 
ಹೆಚ್ಚು ರುಚಿ ಎನಿಸುವುದು 
ಇದಲ್ಲವೇ ನಿಜವಾದ ಪ್ರೇಮ?
ರಾತ್ರಿ ಸಿನೆಮಾ ನೋಡುವ ಇಚ್ಛೆ ಅವಳಿಗೆ
ನಸುಕಿನಲೇ  ಕೆಲಸಕ್ಕೋಡುವ  ಕಷ್ಟ  ಅವನಿಗೆ
ಆದರೂ ಜೊತೆ ಕುಳಿತು ಸಿನೆಮಾ ನೋಡುವನವನು
ಅವಳಿಗಾಗಿ 
ಅವಳ ನಗುವಿಗಿಂತ ನಿದ್ದೆ ಹೆಚ್ಚಲ್ಲ
ತನಗೆ ಕಷ್ಟವಾದರೂ
ಅವಳಿಗೆ ಖುಷಿ ತರುವ ಹುರುಪು
ಇದಲ್ಲವೇ ನಿಜವಾದ ಪ್ರೇಮ?
 ನಿದ್ದೆ ಕಣ್ಣೆಳೆಯುವುದು   ಅವಳಿಗೆ
ಬೆಳಗ್ಗೆ  ಪರೀಕ್ಷೆಯ  ಗಡಿಬಿಡಿ ಅವನಿಗೆ
ಅವನ ಜೊತೆಗಿರಲೆಂದು 
ಮೊದಲೇ ಓದಿದ  ಅದೇ 
ಕಾದಂಬರಿ ಹಿಡಿದು 
ರಾತ್ರಿಯಿಡೀ ಕೂರುವ ಅವಳ ಪರಿ  ... 
ಇಂಥಾ ಹುಚ್ಚು ಹಿಡಿಸುವುದೇ ಅಲ್ಲವೇ
ನಿಜವಾದ ಪ್ರೇಮ ?

( ಮರಾಠಿಯಲ್ಲಿ ಈ-ಮೇಲ್  ಮೂಲಕ ಬಂದ ಈ ಹನಿಗಳು ತುಂಬಾ ಇಷ್ಟವಾದವು .ನನಗೆ ತಿಳಿದಂತೆ ರೂಪಾಂತರಿಸಿದೆ .   ಆದರೆ , ಅದರ ಮೂಲ ಕವನಗಳ ಮಾರ್ದವತೆಯನ್ನು  ರೂಪಾಂತರಿಸುವಾಗ ಉಳಿಸಿಕೊಳ್ಳಲಾಗಲಿಲ್ಲ  ಎಂಬ ಕೊರಗಿದೆ. )

25 comments:

ಜಲನಯನ said...

ಅಬ್ಬಬ್ಬಾ ನಿದ್ದೆ ಎಳೆಯುತಿದೆ
ಕಣ್ಣು ಮುಚ್ಚಿದಂತಾಗುತಿದೆ
ಪೆನ್ನು ಏನೇನೋ ಗೀಚುತಿದೆ
ಶ್ರಮಪಟ್ಟು ಬರೆವುದಲ್ಲವೇ ನಿಜ ಬ್ಲಾಗಿ ಪ್ರೇಮ..?
ಇವನೊಬ್ಬ ಚಾಟುತಿರುವ
ಬೇಡೆಲೋ ಅಣ್ಣ..ಕೇಳದವ
ಅಲ್ಲಿ ಹಾಸಿಗೆ ಕೈಬೀಸಿದೆ
ಆದರೂ ಬೆಳಗ ಬ್ಲಾಗಿಗೆ ಬಾಗಲಿಲ್ಲವೇ
ಇದಲ್ಲವೇ ನಿಜವಾದ ಬ್ಲಾಗಿಸುವ ಪ್ರೇಮ....
ಚಿತ್ರಾ...ಸೂಪರ್ ಆಗಿದೆ...ನಿಜ ಪ್ರೇಮದ ವ್ಯಾಖ್ಯಾನ....!!!!

ಮನಸಿನ ಮಾತುಗಳು said...

Very nice...:-)

ತೇಜಸ್ವಿನಿ ಹೆಗಡೆ said...

good one akka...chennagiddu. but after marriage pritinO idu illa before marriagedo? :-P :)

ಚುಕ್ಕಿಚಿತ್ತಾರ said...

wow nice...

Ittigecement said...

ಚಿತ್ರಾ...

ಗೆಳೆಯ.. ಗೆಳತಿ..
"ನಿನಗಾಗಿ ನಾನು..
ನನಗಾಗಿ ನೀನು..

ಹೊಂದಾಣಿಕೆ..
ಇದ್ದರೆ ದಾಂಪತ್ಯ ಸೊಗಸು..."

ಇದು ಮರಾಠಿ ಅನುವಾದ ಅಂತ ಅನ್ನಿಸಲಿಲ್ಲ...
ನೀವೇ ಬರೆದದ್ದು.. ಒರಿಜಿನಲ್ ಥರಹ ಇದೆ...

ಪ್ರತಿಯೊಂದು ಸಾಲು...
ಅದರಲ್ಲಿನ ಸರಳ..
ಚಂದದ ಪ್ರೀತಿ ಇಷ್ಟವಾಯಿತು... ನನ್ನಾಕೆಯ ನೆನಪಾಯಿತು

ತುಂಬಾ ತುಂಬಾ ಥ್ಯಾಂಕ್ಸ್... ಸ್ಪೂರ್ತಿ ಕೊಡುವಂಥಹ ಸಾಲುಗಳಿಗೆ... ಜೈ ಹೋ...

sunaath said...

ಈ ಹನಿಗಳು ಅನುವಾದ ಅನ್ನಿಸಲೇ ಇಲ್ಲ. ಸೊಗಸಾದ ಕವನಗಳು.

PARAANJAPE K.N. said...

ಸಾಲುಗಳು ತುಂಬಾ ಚೆನ್ನಾಗಿವೆ. ಇಷ್ಟವಾಯಿತು

ಸಾಗರದಾಚೆಯ ಇಂಚರ said...

chitra madam
tumbaa sundara saalugalu
odutta irabekendu annisuttade

shivu.k said...

ಚಿತ್ರಾ,

ನಿಮ್ಮ ಈ ಕವನವನ್ನು ಓದಿದಾಗ ಎಲ್ಲೋ ಒಮ್ಮೆ ನಮ್ಮ ಇತ್ತೀಚಿನ ಬದುಕಿನ ಚಿತ್ರವಾ ಎನಿಸಿತು.

"ರಾತ್ರಿ ಸಿನೆಮಾ ನೋಡುವ ಇಚ್ಛೆ ಅವಳಿಗೆ
ನಸುಕಿನಲೇ ಕೆಲಸಕ್ಕೋಡುವ ಕಷ್ಟ ಅವನಿಗೆ
ಆದರೂ ಜೊತೆ ಕುಳಿತು ಸಿನೆಮಾ ನೋಡುವನವನು"

ಇದು ಇತ್ತೀಚಿಗೆ ನಮ್ಮ ಬದುಕಿನಲ್ಲಿ ಆಗುತ್ತಿದೆ. ನಿಮ್ಮ ಕವನದಲ್ಲಿವಂತೆ ಎರಡು ಕಾಫಿ ಕಪ್ಪು ಹಿಡಿದು ಎರಡು ಗಂಟೆ ಕಳೆಯುವುದು ನಿಜಕ್ಕೂ ಪ್ರೇಮವೇ ಸರಿ.
ಇಲ್ಲಿ ಮತ್ತೊಂದು ಹೋಲಿಕೆಯೆಂದರೆ ಕಳೆದ ಎರಡುತಿಂಗಳಿಂದ[ಚಳಿಗಾಲ ಪ್ರಾರಂಭವಾದಮೇಲೆ] ರಾತ್ರಿ ಬೇಗ ಊಟ ಮುಗಿಸಿ ಮಲ್ಲೇಶ್ವರಂ ರೈಲ್ವೆ ನಿಲ್ದಾಣದಲ್ಲಿ ಒಂದು ಗಂಟೆ ವಾಕ್ ಮಾಡುತ್ತೇವೆ. ಕಾಫಿ ಇರದಿದ್ದರೂ ನಮಗೆ ಸಮಯ ಹೋಗುವುದು ಗೊತ್ತಾಗುವುದಿಲ್ಲ. ನಿತ್ಯವೂ ಹೊಸ ವಿಚಾರಗಳು, ಇದರಿಂದಾಗಿ ಇಬ್ಬರಿಗೂ ಬೋರ್ ಆಗುವುದಿಲ್ಲ. ಇವತ್ತು ಸಂಕಷ್ಟಿ ದಿನವಾದ್ದರಿಂದ ಚಂದ್ರ ಬಗ್ಗೆ ಹೊಸ ವಿಚಾರವನ್ನು ಹೇಮಾಶ್ರಿ ನನಗೆ ಹೇಳಿದಾಗ ಅದರ ಬಗ್ಗೆ interesting ಅನ್ನುವ ಹೊಸ ಲೇಖನ ಬರೆಯುವ ಐಡಿಯ ಹೊಳೆಯಿತು. ಮತ್ತೆ ರೈಲ್ವೇ ನಿಲ್ಡಾಣದ ವಿಚಾರವಾಗಿ ಹೊಸದಾದ ಕತೆಯೊಂದು ಹೊಳೆದಿದೆ. ಅದನ್ನು ಬರೆಯಬೇಕಿದೆ.
ಅದಕ್ಕೆ ಬದುಕು ಒಂದು ಕವನವಾ ಅಂತ..
ಚಿತ್ರಾ...ಇದೆಲ್ಲಾವನ್ನು ಹಂಚಿಕೊಳ್ಳಬೇಕೆನಿಸಿತು...

ಮನಸಿನಮನೆಯವನು said...

"ನನ್ನ ಮಗು ಯಾರ ಸಹಾಯವೂ ಇಲ್ಲದೆ ನಡೆಯುವುದನ್ನು ಕಲಿತರೂ ಇನ್ನೂ ನನ್ನ ಹೆಂಡತಿ ಮಾತ್ರ ನನ್ನೆಗಳಿಗೆ ಒರಗಿಯೇ ಕೈಹಿಡಿದು ನಡೆಯುತ್ತಾಳೆ.."
ಇದಲ್ಲವೇ ಪ್ರೇಮ..
ಚೆನ್ನಾಗಿದೆ.

ವಿ.ರಾ.ಹೆ. said...

nice

ಚಿತ್ರಾ said...

ಆಜಾದ್,
ಎಲ್ಲಾ ನಿಮ್ಮಂಥವರ ಆಶೀರ್ವಾದ, ಬರೀಲಿಲ್ಲ ಅಂತ ಕೀಟಲೆ ಮಾಡೋರು ನೀವೇ , ನಿದ್ದೆ ಬಂದರೂ ಕಷ್ಟ ಪಟ್ಟು ಬರೆದರೆ " ಬ್ಲಾಗ್ ಪ್ರೀತಿ .... ಇತ್ಯಾದಿ ಕಾಮೆಂಟ್ ಬೇರೆ ! ಚೆನಾಗಿದೆ !! ಹಾ ಹಾ ಹಾ

ಚಿತ್ರಾ said...

ಥ್ಯಾಂಕ್ಸ್ ದಿವ್ಯಾ

ಚಿತ್ರಾ said...

ತೇಜೂ ,
ಥ್ಯಾಂಕ್ಸ್ .ಮದುವೆಗಿಂತ ಮುಂಚೆಯೂ , ಮದುವೆಯ ನಂತರವೋ ಒಟ್ಟಿನಲ್ಲಿ ಈ ರೀತಿಯ ಪ್ರೀತಿ ಇರದು ಮುಖ್ಯ ಅಲ್ದಾ?

ಚಿತ್ರಾ said...

ವಿಜಿ ,
ಥ್ಯಾಂಕ್ಸ್

ಚಿತ್ರಾ said...

ಪ್ರಕಾಶಣ್ಣ ,
ಅಕ್ಕರೆಯ ಪ್ರತಿಕ್ರಿಯೆಗೆ , ಪ್ರೀತಿ ತುಂಬಿದ ಪ್ರೋತ್ಸಾಹಕ್ಕೆ ಧನ್ಯವಾದಗಳು ! ಹೊಂದಾಣಿಕೆ ಇದ್ದರೆ , ದಾಂಪತ್ಯ ಸೊಗಸು ಎಂಬ ನಿನ್ನ ಸಾಲುಗಳು ಅಕ್ಷರಶಃ ಸತ್ಯ . ಒಂದು SMS ನೆನಪಾಯ್ತು . " The world's happiest couple never have same nature. They just have the best understanding of their differences !" ನಿಜ ಅಲ್ಲವೇ?

ಚಿತ್ರಾ said...

ಕಾಕಾ,
ನಿಮ್ಮ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು .

ಚಿತ್ರಾ said...

ಪರಾಂಜಪೆ, ವಿಕಾಸ್ ,

ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್ !

ಚಿತ್ರಾ said...

ಗುರು,
ನೀ ಬರೆವ ಸಾಲುಗಳ ಚಂದ ಇಲ್ಲಿಲ್ಲ . ಆದರೂ ನಿನ್ನ ಪ್ರೀತಿಗೆ , ಮೆಚ್ಚುಗೆಗೆ ಧನ್ಯವಾದಗಳು

ಚಿತ್ರಾ said...

ಶಿವೂ,
ನಾ ಬರೆದ ಹನಿಗಳು ನಿಮ್ಮ ಬದುಕಿನ ಚಿತ್ರಣದ ಭಾಗವೆನಿಸಿದ್ದು ಖುಷಿ ಅನಿಸಿತು. ನಿಮ್ಮ ಅನಿಸಿಕೆಯನ್ನು , ಅನುಭವವನ್ನು ಪ್ರೀತಿಯಿಂದ ಹಂಚಿಕೊಂಡಿದ್ದು ಸಂತೋಷವಾಯ್ತು ! ನಿಜ ಬದುಕು ಒಂದು ಕಾವ್ಯವೇ . ಅದನ್ನು ಪ್ರೆಮಕಾವ್ಯವಾಗಿ ಮಾಡುವುದು ನಮ್ಮ ಕೈಯಲ್ಲಿದೆ .

ಚಿತ್ರಾ said...

ವಿಚಲಿತ ರೆ,
ನಿಮ್ಮ ಹನಿಯೂ ತುಂಬಾ ಚೆನ್ನಾಗಿದೆ. ಅದು ನಿಜವಾದ ಪ್ರೇಮವೇ ಸರಿ ! ಬರುತ್ತಿರಿ .

ಸುಧೇಶ್ ಶೆಟ್ಟಿ said...

ಮೂಲ ಹೇಗಿದೆಯೋ ಗೊತ್ತಿಲ್ಲ.... ಆದರೆ ನೀವು ಬರೆದಿರುವುದು ಚೆನ್ನಾಗಿಯೇ ಬ೦ದಿದೆ. ಅನುವಾದದ ಮಾಧುರ್ಯ ಕಡಿಮೆ ಆಗಿದೆ ಅ೦ತ ನಿಮಗೆ ಅನಿಸಿದರೂ ನಮಗೆ ಅನಿಸುವುದಿಲ್ಲ ಬಿಡಿ :)

ಪ್ರೇಮ ಈ ತರಹ ಇರುತ್ತದೆ ಅ೦ತ ಗೊತ್ತೇ ಇರಲಿಲ್ಲ ನೋಡಿ :P

ಮರಾಠಿ ಕಥಾ ಸಾಹಿತ್ಯ ತು೦ಬಾ ಸಮೃದ್ಧವಾಗಿದೆ ಅ೦ತ ಕೇಳಿದ್ದೇನೆ. ಈ ತರಹ ಯಾವುದಾದರೂ ಚೆನ್ನಾದ ಕತೆಯಿದ್ದರೆ ಪ್ಲೀಸ್ ಅನುವಾದ ಮಾಡಿ :)

ಬರೇ ಅನುವಾದ ಮಾಡುತ್ತಾ ಇರಬೇಡಿ ಮತ್ತೆ :) ಸ್ವಲ್ಪ ನಿಮ್ಮ ಬರಹಗಳನ್ನು ಕೂಡ ಹಾಕಿ.... ನಾವೆಲ್ಲಾ ಕಾಯ್ತ ಇದ್ದೇವೆ :)

Arun said...

Hi Chitranjali !!

Very nice! Kadege ninu bareede hogidre, edu bhashantara anta gotte agtirallila ! ashtondu naizavagi barididiya !
As i always tell you " keep it up"

Bye

ಚಿತ್ರಾ said...

ಸುಧೇಶ್,

ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು .

ಪ್ರೇಮ ಈ ಥರ ಇರುತ್ತದೆ ಅಂತ ಗೊತ್ತಿಲ್ಲದೇ ಇದ್ದರೂ ಪರವಾಗಿಲ್ಲ , ಆದರೆ , ಮುಂದೆಂದಾದರೂ ಪ್ರೇಮಿಸಿದಾಗ ಸಾಲುಗಳು ನೆನಪಾಗಲಿ!

ಇತ್ತೀಚೆ ಏನೂ ಬರೆಯೋದೇ ಇಲ್ಲ , ಹಾಗೆ -ಹೀಗೆ ಅಂತ ಕೆಣಕುತ್ತಾ ಇದ್ದವರಲ್ಲಿ ನೀವೂ ಒಬ್ಬರು . ನಿಮ್ಮಗಳ ಕಾಟ ತಡೆಯಲಾರದೆ ರೂಪಾಂತರಿಸಿ ಹಾಕಿದೆ. ನನ್ನದೇ ಆದ ಬರಹಕ್ಕೆ ಇನ್ನೂ ಸ್ವಲ್ಪ ಸಮಯ ಬೇಕನ್ನಿಸುತ್ತೆ . ಮರಾಠಿಯ ಕಥೆಗಳನ್ನು ಅನುವಾದಿಸುವಷ್ಟು ಭಾಷಾ ಸಾಮರ್ಥ್ಯ ನನ್ನದಿಲ್ಲ . ಹೀಗೆ ಚಿಕ್ಕ ಪುಟ್ಟ ಕವನಗಳನ್ನು , ಚುಟುಕಗಳನ್ನು ಅನುವಾದಿಸುವ ಪ್ರಯತ್ನ ಮಾಡಬಲ್ಲೆ ಅಷ್ಟೇ. ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ಥ್ಯಾಂಕ್ಸ್ !

ಚಿತ್ರಾ said...

ದೇಶಪಾಂಡೆ (ಅರುಣ್) ,

ಧನ್ಯವಾದಗಳು !

ಆಗಲಿ , ವರ್ಷಕ್ಕೊಂದೆರಡು ಸಲ ಆದ್ರೂ ನನ್ ಬ್ಲಾಗಿಗೆ ಭೇಟಿ ಕೊಟ್ಟು ಪ್ರೋತ್ಸಾಹಿಸ್ತೀರಿ . ಒಳ್ಳೇದು . ನಿಮ್ಮ ಈ ಪ್ರೋತ್ಸಾಹವನ್ನು ಮೇಲೆ ಇಟ್ತಿರ್ತೀನಿ. ( ನೀವೇ ಹೇಳಿದ್ರಿ Keep it Up ಅಂತ )