( ಫೋಟೋ ಕೃಪೆ : ಇಟ್ಟಿಗೆ ಸಿಮೆಂಟಿನ ಶ್ರೀ ಪ್ರಕಾಶ್ ಹೆಗಡೆ )
ನೆನಪಾಗುತ್ತಿದ್ದಾನೆ
ಅವನು
ಎಲ್ಲಿಂದಲೋ ಹೇಗೋ ಬಂದು
ಎದೆಯ ಕದವ
ಮೆಲ್ಲಗೆ
ತಟ್ಟಿದವನು ..
ತಿಳಿಯಾದ ಮನದ ಕೊಳದೊಳಗೆ
ಪ್ರೀತಿಯ ಕಲ್ಲೆಸೆದು
ಮಧುರ ಭಾವದಲೆಗಳ
ಎಬ್ಬಿಸಿದವನು
ಕಣ್ಣಲ್ಲಿ ಕನಸು ತುಂಬಿ
ಹೃದಯ ಗರಿ ಬಿಚ್ಚಿ
ಹಾಡುತ್ತಿದ್ದಾಗಲೇ ,
ಮಾಯವಾದವನು ..
ಮತ್ತೆ ಬರುವೆನೆಂದು
ಮಾತು ಕೊಟ್ಟವನ
ಬರವ ಕಾಯುತ್ತಿರುವೆ
ಸಂಜೆ ಇಳಿದು
ಕತ್ತಲಾಗುತ್ತಿದ್ದರೂ ..
12 comments:
ಚಿತ್ರಾ,
ಇಷ್ಟೇಲ್ಲಾ ಕಾಡಿದ ಆವನಿಗೊಂದು ಹೆಸರುಂಟಾ...
Liked this one most among all kavana's to this pic..:)
ಹಹಹ...ಚಿತ್ರಾ ಪ್ರಕಾಶನ ಈ ಫೋಟೋಗೆ...ನೀನೂ ಸೇರಿಟ್ಟೆಯಾ? ಕವನಿಸೋರ ಸಾಲಿಗೆ..?
ಚನ್ನಾಗಿದೆ..ಎಲ್ಲರೂ ಸರಿ ಸುಮಾರು ಅದೇ ಭಾವ ವ್ಯಕ್ತಪಡಿಸಿದ್ದಾರೆ..ಸರಳ ಪದಗಳಲ್ಲಿ ಚನ್ನಾಗಿ ಮೂಡಿದೆ..ಭಾವ...
chennagide kavana...
sundara kavana....prakashaNNa na foto saha....
ಪ್ರಕಾಶರ ಸುಂದರ ಚಿತ್ರಕ್ಕೆ, ಸುಂದರವಾದ ಕವನದ ವ್ಯಾಖ್ಯಾನ. Very good.
very Nice feelings ...
ಹ್ಹ ಹ್ಹ ಹ್ಹ ....
ಶಿವೂ , ಹೀಗೆ ಪ್ರಶ್ನೆ ಕೇಳಬಹುದೇನ್ರಿ ? ಹಾಗೆಲ್ಲ ಹೆಸರು ಹೇಳಲಾಗುತ್ತದಾ? ;-))
ವನಿತಾ,
ಥ್ಯಾಂಕ್ಸ್ ಮೆಚ್ಚುಗೆಗೆ .
ಆಜಾದ್,
ನೀವೆಲ್ಲ ಸೇರಿಕೊಂಡಿರೋವಾಗ ನಾನೊಬ್ಬಳು ಹೇಗೆ ಸುಮ್ಮನಿರೋದು ಅಂತ ? ಆ ಫೋಟೋ ನೋಡಿದಾಗ ಎಲ್ಲರ ಮನದಲ್ಲೂ ಮೂಡುವ ಭಾವ ಸುಮಾರಾಗಿ ಒಂದೇ ರೀತಿಯೇ . ಮೆಚ್ಚಿದ್ದಕ್ಕೆ ಧನ್ಯವಾದಗಳು .
ಮನಸು, ಸವಿಗನಸು , ಸುನಾಥ್ ಕಾಕಾ, ನನ್ನೊಳಗಿನ ಕನಸು , ವಸಂತ್ ,
ಪ್ರತಿಕ್ರಿಯೆಗೆ , ಪ್ರೋತ್ಸಾಹಕ್ಕೆ , ಧನ್ಯವಾದಗಳು
Hey Chitra nimma bhavanegala chittar chennagi mudi bandide
-----havanur123@gmail.com
Post a Comment