February 27, 2011

ಮುಗಿಯಿತು ಮೂರು ......


 ಬ್ಲಾಗ್ ಹುಟ್ಟಿ ಮೂರುವರ್ಷಗಳು ಕಳೆದವು ! ಖುಷಿಯೂ ಇದೆ ..... ಬೇಸರವೂ 

ಹೊಸ ಲೋಕಕ್ಕೆ  , ತೆರೆದು ಕೊಂಡಿದ್ದಕ್ಕೆ,  ಹೊಸ ಸ್ನೇಹಿತರ ಬಳಗ ಸಿಕ್ಕಿದ್ದಕ್ಕೆ  ನನ್ನ ಮನದಲ್ಲಿ ಕೊರೆಯುವ ಭಾವಗಳನ್ನು ಅಭಿವ್ಯಕ್ತಿಸಲು  ಅವಕಾಶ ಸಿಕ್ಕಿದ್ದಕ್ಕೆ ಖುಷಿ !
ಅಂದುಕೊಂಡಷ್ಟು ಬರೆಯಲಾಗದ್ದಕ್ಕೆ , ಬರೆದಿದ್ದೂ ಕೂಡ  ತೃಪ್ತಿಯಾಗದ್ದಕ್ಕೆ .. ಬೇಸರ . 

ಶುರು ಶುರುವಿನಲ್ಲಿ , ಒಂದು ಬರಹ  ಮುಗಿಯುತ್ತಿದ್ದಂತೆ ಮುಂದಿನ ಬರಹದ  ಮೊಳಕೆ ಹುಟ್ಟಿರುತ್ತಿತ್ತು . ಪ್ರತಿ ಅಭಿಪ್ರಾಯಗಳನ್ನು ಓದುವಾಗ  ಇನ್ನಷ್ಟು ಚಂದ ಬರೆಯುವ ಹುರುಪು ಮೂಡುತ್ತಿತ್ತು.  ಇವತ್ತೇನು ಬರೆಯಲಿ ಎಂಬ  ಯೋಚನೆ ತಲೆಯಲ್ಲಿ ಕೊರೆಯುತ್ತಿತ್ತು . ಆಗ  ನೂರಾರು ವಿಷಯಗಳು ಹರಿದಾಡುತ್ತಿದ್ದು ಯಾವುದನ್ನು ಶಬ್ದ ರೂಪಕ್ಕೆ ತರಲಿ ಎಂದು  ಯೋಚಿಸುತ್ತಿದ್ದೆ !  

ಈಗಲೂ "ಇವತ್ತೇನು ಬರೆಯಲಿ ? "ಎಂಬ ಯೋಚನೆ ಕೊರೆಯುತ್ತದೆ  ಆದರೆ , ಬೇರೆ ರೀತಿಯಲ್ಲಿ . ವಿಷಯಗಳೇ ಹೊಳೆಯದಾಗುತ್ತವೆ ಎಷ್ಟೋ ಸಲ. ಹೊಳೆದರೂ ಬರಹವಾಗಿಸಲು  ತಿಣುಕಾಡಬೇಕಾಗುತ್ತಿದೆ . ಯಾಕೆನ್ನುವುದು ನನಗೂ ಗೊತ್ತಿಲ್ಲ. ಹೀಗಾಗಿ  ಬ್ಲಾಗ್ ಅಪ್ ಡೇಟ್   ಆಗಲು ಬಹಳ ಸಮಯ ತೆಗೆದುಕೊಳ್ಳುತ್ತಿದೆ. ಇದನ್ನು ನಿಮ್ಮೆದುರು ಪ್ರಾಮಾಣಿಕವಾಗಿ  ಹೇಳಿಕೊಳ್ಳುತ್ತೇನೆ. ಹೆಚ್ಚೆಚ್ಚು ಬರೆಯಲಾಗದ ಬಗ್ಗೆ ನನಗೂ ಬೇಸರವಾಗುತ್ತಿದೆ.  

ಹೀಗಿದ್ದಾಗಲೂ , ನೀವು ಬರೆಯಲು ಪ್ರೋತ್ಸಾಹಿಸುತ್ತೀರಿ , ತೇಜಸ್ವಿನಿ  ,ಪ್ರಕಾಶಣ್ಣ  ಯಾಕೆ ಬರೆಯುತ್ತಿಲ್ಲ ಎಂದು ಪ್ರಶ್ನಿಸಿದರೆ  , ಸುಧೇಶ್( ಅನುಭೂತಿ) , ಗುರುಮೂರ್ತಿ ( ಸಾಗರದಾಚೆಯ  ಇಂಚರ)  " ಅಮಾವಾಸ್ಯೆ - ಹುಣ್ಣಿಮೆಗಾದರೂ ಒಂದು ಬರಹ ಹಾಕಿ ಎಂದು ರೇಗಿಸುತ್ತಾರೆ .  ಇನ್ನು ಆಜಾದ್ ಭಾಯಿ ಅಂತೂ  " ನೀನು ಬರೆಯಲಿಲ್ಲ ಅಂದ್ರೆ , ನಾನೇ ಬರೆದು ನಿನ್ನ ಬ್ಲಾಗ್ ನಲ್ಲಿ ಹಾಕುತ್ತೀನಿ " ಎಂಬ ಪ್ರೀತಿಯ ಬೆದರಿಕೆ ಹಾಕುತ್ತಾರೆ !  ಹಾಗಿದ್ದರೂ ಕೆಲವೊಮ್ಮೆ ಅಕ್ಷರಗಳೇ ಮೂಡುವುದಿಲ್ಲ .

ಹೀಗೆ ಕುಂಟುತ್ತ ಕುಂಟುತ್ತಾ  ಅಂತೂ ೩ ವರ್ಷಗಳ ಹಾದಿ  ಕಳೆಯಿತು .  ಇನ್ನಾದರೂ ಸ್ವಲ್ಪ  ಜಾಸ್ತಿ ಬರೆಯುತ್ತೇನೆ  ಎಂದು ಹೇಳಿದರೆ , ರಾಜಕಾರಣಿಗಳ ಆಶ್ವಾಸನೆ ಆಗಿಬಿಡುತ್ತದೆ .  ಹೀಗಾಗಿ ಆ ಮಾತು ಹೇಳುವುದಿಲ್ಲ.  ಆದರೆ , ಹೊಳೆಯಲ್ಲಿ ಸ್ವಲ್ಪವಾದರೂ ನೀರು ಹರಿಯುತ್ತಿರುವಂತೆ ನೋಡಿಕೊಳ್ಳುತ್ತೇನೆ ಎಂದು ಮಾತ್ರ ಹೇಳಬಲ್ಲೆ. 
ನಿಮ್ಮ  ಪ್ರೀತಿ , ವಿಶ್ವಾಸ , ಪ್ರೋತ್ಸಾಹಗಳು ನನ್ನೊಡನೆ ಇರಲಿ . ಬರೆಯಲು ಸ್ಫೂರ್ತಿ ಕೊಡುತ್ತಿರಲಿ ಎಂಬ ಕಳಕಳಿಯ ಪ್ರಾರ್ಥನೆಯೊಂದಿಗೆ  ಹುಟ್ಟುಹಬ್ಬಕ್ಕೆ  ಆಮಂತ್ರಿಸುವೆ.

.

37 comments:

ಜಲನಯನ said...

ಹುಟ್ಟುಹಬ್ಬದ ಮೊದಲ ಶುಭಕೋರಿಕೆ ಜಲನಯನದ್ದಾದರೆ ನಾನು ಬೆದರಿಕೆ ಹಾಕಿದ್ದಕ್ಕೂ ಸಾರ್ಥಕ ಅನಿಸುತ್ತೆ...ಏನು..ಚಿತ್ರಾ..ಇಲ್ಲಾದ್ರೂ..ನನಗೆ ಗೇಟ್ ಪ್ರೀಮಿಯಂ ಪಾಸ್ ಕೊಟ್ಬಿಡು ಯಾಕಂದ್ರೆ ನಾನು ೦೦.೦೬ ಗಂಟೆಗೆ ಈ ಪ್ರತಿಕ್ರಿಯೆ ಹಾಕ್ತಿದ್ದೇನೆ (ಅಲ್ಲಿ ೨.೩೬ ಬೆಳಗಿನ ಜಾವ)....
ಮೂರು ತುಂಬಿ ನಾಲ್ಕಕ್ಕೆ ಕಾಲಿಟ್ಟ (ಕೈಕೊಡದೇ..ಹಹಹ) ಮನಸೆಂಬ ಹುಚ್ಚುಹೊಳೆ ತುಂಬಿ ತುಳುಕುತ್ತಾ ಹರಿಯಲಿ ..ಎಂದೇ ನನ್ನ ಹಾರೈಕೆ, ಆಶಯ ಮತ್ತು ಚಿತ್ರಾಗೆ ಶುಭಕಾಮನೆ. ಏನು...?? ನೆನಪಿರಲಿ...ಚಿತ್ರಾ..ಹೇಳಿದ್ದು..

Ittigecement said...

ಚಿತ್ರಾ...

ಮೂರು ವರುಷದಲ್ಲಿ ನೂರಾರು ಬಾಂಧವ್ಯ ಅಲ್ಲವೆ?

ನಾನು ಇಷ್ಟಪಡುವ ಬ್ಲಾಗುಗಳಲ್ಲಿ ಈ.. ಹುಚ್ಚು ಹೊಳೆಯೂ ಒಂದು...

ನೀವು ಬರೆದ ಲೇಖನ ಮಸ್ತ್ ಇರುತ್ತವೆ..

"ಏನಾದರೂ ಆಗಲಿ ಮರ್ವಾದಿ ಬಿಟ್ನಾ...?" ನೆನಪಾದಗಲೆಲ್ಲ ನಗುತ್ತಿರುತ್ತೇನೆ...
ಅದರ ಮಿಮಿಕ್ರಿನೂ ಮಾಡುತ್ತಿರುತ್ತೇನೆ...

ಈ ಬ್ಲಾಗ್ ನೂರುವರ್ಷ ನಮ್ಮನ್ನೆಲ್ಲ ರಂಜಿಸುತ್ತ ಇರಲಿ...

ಆಶಿರ್ವಾದಗಳು....!

ಶುಭಾಶಯಗಳು...!!

ಅಭಿನಂದನೆಗಳು...!!!

ಪ್ರೀತಿಯಿಂದ
ಪ್ರಕಾ ಶಣ್ಣ..

ಚುಕ್ಕಿಚಿತ್ತಾರ said...

all d best.. chitra..

ಸುಮ said...

ಅಭಿನಂದನೆಗಳು . ಎಷ್ಟು ಬರೆದಿದ್ದೀರಿ ಎಂಬುದಕ್ಕಿಂದ ಬರೆದದ್ದು ಹೇಗಿತ್ತು ಎಂಬುದು ಮುಖ್ಯ. ಆ ದೃಷ್ಟಿಯಲ್ಲಿ ನಿಮ್ಮ ಬ್ಲಾಗ್ ಮೇಲ್ಮಟ್ಟದಲ್ಲಿದೆಯೆಂಬುದು ನನ್ನ ಅಭಿಪ್ರಾಯ:)

ತೇಜಸ್ವಿನಿ ಹೆಗಡೆ said...

ಸುಮ ಅವರ ಅಭಿಪ್ರಾಯವೇ ನಂದೂ ಕೂಡ ಚಿತ್ರಕ್ಕ :) ಬ್ಲಾಗ್ ಮರಿಗೆ ಹಾರ್ದಿಕ ಶುಭಾಶಯಗಳು.

Sushrutha Dodderi said...

ಶುಭಾಶಯಾ....

ಚಿತ್ರಾ said...

ಆಜಾದ್ ಭಾಯಿ ,

ನಿಮ್ಮ ಬೆದರಿಕೆ ಸಾರ್ಥಕವಾಗಿದೆ !!!! ಪ್ರೀಮಿಯಂ ಪಾಸ್ ರೆಡಿ ಮಾಡ್ತಾ ಇದ್ದೀನಿ. ಮುಂದಿನ ಸಲ ಕೊಡ್ತೀನಿ. ನಿಮ್ಮ ಹಾರೈಕೆ , ಪ್ರೋತ್ಸಾಹ , ಆತ್ಮೀಯತೆಗೆ ನಾನು ಚಿರ ಋಣಿ .

ಚಿತ್ರಾ said...

ಪ್ರಕಾಶಣ್ಣ ,
ಮೂರುವರ್ಷಗಳನ್ನು ಪೂರೈಸಿದ್ದು ನಿಮ್ಮೆಲ್ಲರ ಅಭಿಮಾನ ಆಶೀರ್ವಾದ ಜೊತೆಗಿದ್ದುದರಿಂದ . ತಿಳಿಯದೆಯೇ , ಒಂದು ಬಾಂಧವ್ಯದ ಕೊಂಡಿ ಬೆಸೆದುಕೊಂಡಿದೆ . ಇದು ಕೊನೆಯವರೆಗೂ ಇರಲಿ ಎಂಬ ಆಸೆ ನನ್ನದು. ನನ್ನ ಲೇಖನಗಳು ನಿಮಗೆ ಖುಷಿ ಕೊಟ್ಟರೆ ನನಗದು ಅತ್ಯಂತ ಸಮಾಧಾನದ ವಿಷಯ . ನಿಮ್ಮೆಲ್ಲರ ಅಭಿಮಾನ ನನ್ನಲ್ಲಿ ಬರೆಯುವ ಉತ್ಸಾಹವನ್ನು ತರುತ್ತದೆ . ನಿಮ್ಮ ಶುಭಾಶಯಗಳಿಗೆ , ಆಶೀರ್ವಾದಕ್ಕೆ ಧನ್ಯವಾದಗಳು !

ಚಿತ್ರಾ said...
This comment has been removed by the author.
ಚಿತ್ರಾ said...

ವಿಜಿ ,
ಥ್ಯಾಂಕ್ಸ್ !

ಚಿತ್ರಾ said...

ಸುಮ ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು . ನನ್ನ ಬರಹಗಳು ತಕ್ಕ ಮಟ್ಟಿಗಾದರೂ ಇವೆ ಎಂದು ನಿಮಗೆಲ್ಲ ಅನಿಸಿದರೆ , ಅದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಬರುತ್ತಿರಿ .

ಚಿತ್ರಾ said...

ತೇಜೂ,
ಥ್ಯಾಂಕ್ಸ್, ಆಗಾಗ ನನ್ನನ್ನು ತಟ್ಟಿ ಬರೆಯುತ್ತಿಲ್ಲವೇ ಎಂದು ಎಚ್ಚರಿಸುತ್ತಿದ್ದುದಕ್ಕೆ , ಪ್ರೀತಿ ವಿಶ್ವಾಸಕ್ಕೆ .

ಶಾಂತಲಾ ಭಂಡಿ (ಸನ್ನಿಧಿ) said...

ಚಿತ್ರಕ್ಕ...
ಮೂರು ನೂರಾಗಲಿ. ಬರೆಯುತ್ತಿರು. ಬ್ಲಾಗಿಗೆ ಹುಟ್ಟುಹಬ್ಬದ ಶುಭಾಶಯ.

ಪ್ರೀತಿಯಿಂದ,
-ಶಾಂತಲಾ ಭಂಡಿ

ಸೀತಾರಾಮ. ಕೆ. / SITARAM.K said...

abhinandanegalu.

ವನಿತಾ / Vanitha said...

Good Wishes,
- Vanitha.

ಗಿರೀಶ್.ಎಸ್ said...

abhinandanegalu

ಸವಿಗನಸು said...

Abhinandenagalu....Keep writing..

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಶುಭಾಶಯಗಳು ಚಿತ್ರಕ್ಕ, ನಿಂಗೂ - ಬ್ಲಾಗಿಗೂ..

ಪ್ರೀತಿಯಿಂದ,
ಪೂರ್ಣಿಮಾ.

ಅಲೆಮಾರಿ said...

nandoo ondu shubhaashaya:)

ಗೌತಮ್ ಹೆಗಡೆ said...

ಬ್ಲಾಗ್ ಹುಟ್ಟು ಹಬ್ಬಕ್ಕೆ ನನ್ನ ಕಡೆಯಿಂದನೂ ಒಂದು ಶುಭಾಶಯ :)

ಅನಂತ್ ರಾಜ್ said...

shubhashayagalu chitra avare. dodda sneha-balagavannu hondidderi, sahrudayara bandhavya sadaa nimmodanirali.

ananth

shivu.k said...

ಚಿತ್ರಾ,

ಮನಸೆಂಬ ಹುಚ್ಚು ಹೊಳೆಯನ್ನು ಮೂರು ವರ್ಷ ಚೆನ್ನಾಗಿ ಹರಿಸಿದ್ದೀರಿ....ಅದು ಮುನ್ನೂರಾಗಲಿ...ಅಭಿನಂದನೆಗಳು

ವಿ.ರಾ.ಹೆ. said...

ಕಡಿಮೆಯಾದರೂ ಇರಲಿ ಜಾಸ್ತಿಯಾದರೂ ಇರಲಿ ಹೊಳೆಯಲ್ಲಿ ಈಗಿನಂತೆ ಒಳ್ಳೆ ನೀರು ಹರಿಯುತ್ತಿರಲಿ.;-)

ಬ್ಲಾಗುಗಳು ದೊರಕಿಸಿಕೊಟ್ಟ ಬಾಂಧವ್ಯಕ್ಕೆ ನಾನ್ಯಾವತ್ತೂ ಋಣಿ.
ನಾನಂತೂ ಖುಷಿಯಿಂದ ಓದುತ್ತೇನೆ... ಶುಭಾಶಯಗಳೂ...

sunaath said...

ಚಿತ್ರಾ,
ಈ ಮೂರು ವರ್ಷಗಳಲ್ಲಿ ಖುಶಿ ಕೊಡುವ ಅನೇಕ ಲೇಖನಗಳನ್ನು ಕೊಟ್ಟಿದ್ದೀರಿ. ಅಭಿನಂದನೆಗಳು ಹಾಗು ಹುಟ್ಟುಹಬ್ಬದ ಶುಭಾಶಯಗಳು.

ಮನಮುಕ್ತಾ said...

ಚಿತ್ರಾ,
ಶುಭಾಶಯಗಳು...ಸದಾ ಬರಹಗಳ ಹೊಳೆ ಹರಿಯುತ್ತಿರಲಿ... :)

ಸುಧೇಶ್ ಶೆಟ್ಟಿ said...

ಮೂರು ವರುಷಗಳು ತು೦ಬಿದ್ದಕ್ಕೆ ಕ೦ಗ್ರಾಟ್ಸು... ನಿಮ್ಮ ಬರಹ ಓದಿದ ಮೇಲೆ ನನ್ನ ಬ್ಲಾಗಿಗೂ ಮೂರು ವರುಷ ಇನ್ನು ಕೆಲವೇ ದಿನಗಳಲ್ಲಿ ತು೦ಬುತ್ತದೆ ಎ೦ದು ನೆನಪಾಯಿತು :)

ಏನಾದರೂ ಬರೀತಾ ಇರಿ ಮಾರಾಯ್ರೆ... ತು೦ಬಾ ಸತಾಯಿಸಬೇಡಿ :)

ಪ್ರವಾಹ ಉಕ್ಕಲಿ ನಿಮ್ಮ ಬ್ಲಾಗಿನಲ್ಲಿ :)

ಸಾಗರದಾಚೆಯ ಇಂಚರ said...

ಚಿತ್ರಾ
ಬ್ಲಾಗ್ ನ ಮೂರನೇ ವರ್ಷದ ಸಂಭ್ರಮಕ್ಕೆ ಅಭಿನಂದನೆಗಳು
ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ
ಕೆಲವು ಅನಿವಾರ್ಯ ಕಾರಣಗಳು ಬ್ಲಾಗ್ ಲೋಕಕ್ಕೆ ಬರದಂತೆ ತಡೆ ಹಿಡಿದಿದ್ದವು
ಮತ್ತೆ ಎಂದಿನಂತೆ ಬ್ಲಾಗ್ ಓದಲು ಆರಂಬಿಸಿದ್ದೇನೆ
ನಿನ್ನ ಬ್ಲಾಗ್ ಗೆ ವಿಶ್ ಮಾಡಲು ತಡವಾಗಿದ್ದಕ್ಕೆ ತುಂಬಾ ತುಂಬಾ ಸಾರೀ

ನಿನ್ನ ಬ್ಲಾಗ್ ನೂರಾರು ವರುಷ ಕಾಣಲಿ
ಪ್ರೀತಿಯಿಂದ
ಗುರು

ಚಿತ್ರಾ said...

ಶಾಂತಲಾ ,
ನಿನ್ನ ಪ್ರೀತಿಯ ಹಾರೈಕೆಗೆ ಧನ್ಯವಾದಗಳು. ಬರುತ್ತಿರು .

ಚಿತ್ರಾ said...

ಸೀತಾರಾಮ್ ,ವನಿತಾ,ಗಿರೀಶ್,ಮಹೇಶ್, ಪೂರ್ಣಿಮಾ, ಅಲೆಮಾರಿ, ಗೌತಮ್,

ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿಯೇ ನನ್ನ ಬರಹಗಳ ಸ್ಫೂರ್ತಿ ! ಇದು ಸದಾ ನನ್ನೊಂದಿಗಿರಲಿ !

ಚಿತ್ರಾ said...

ವಸಂತ್,
ಧನ್ಯವಾದಗಳು . ನಿಮಗೆಲ್ಲ ಆದಷ್ಟು ಒಳ್ಳೆಯ ಬರಹಗಳನ್ನು ಕೊಡಲು ಪ್ರಯತ್ನ ಮಾಡುತ್ತೇನೆ.

ಚಿತ್ರಾ said...

ಅನಂತ್ ರಾಜ್,
ನಿಜಕ್ಕೂ ಬ್ಲಾಗಿನಿಂದಾಗಿ ಸ್ನೇಹಿತರ ಬಳಗ ಬೆಳೆದಿದೆ . ತಮ್ಮೆಲ್ಲರ ಪ್ರೋತ್ಸಾಹ ಸದಾ ಜೊತೆಗಿರಲಿ . ಧನ್ಯವಾದಗಳು !

ಚಿತ್ರಾ said...

ಶಿವೂ,
ವರುಷ ಮುನ್ನೂರಾಗುವುದಿಲ್ಲ , ಆದರೆ ಬರಹಗಳ ಸಂಖ್ಯೆಯನ್ನಾದರೂ ಮುನ್ನೂರು ಮುಟ್ಟಿಸ ಬೇಕೆಂಬ ಆಸೆಯಿದೆ . ನೋಡೋಣ.
ಧನ್ಯವಾದಗಳು ಪ್ರೋತ್ಸಾಹಕ್ಕೆ, ಹಾರೈಕೆಗೆ .

ಚಿತ್ರಾ said...

ವಿಕಾಸ್,
ನಾನೂ ಕೂಡ ಬ್ಲಾಗ್ ಬಾಂಧವ್ಯಕ್ಕೆ ಋಣಿಯಾಗಿದ್ದೇನೆ . ಹೊಸ ಹೊಸ ಸ್ನೇಹಿತರನ್ನು , ಆತ್ಮೀಯರನ್ನು ತಂದು ಕೊಟ್ಟಿದೆ ಈ ಬ್ಲಾಗ್ ಲೋಕ .
ನಿನ್ನ ಹಾರೈಕೆಗೆ ಥ್ಯಾಂಕ್ಸು .

ಚಿತ್ರಾ said...

ಕಾಕಾ,
ನಿಮ್ಮೆಲ್ಲರ ಪ್ರೋತ್ಸಾಹವಿಲ್ಲದೆ , ಮುಂದುವರೆಯಲಾಗುತ್ತಿರಲಿಲ್ಲ . ನನ್ನ ಬರಹಗಳನ್ನು ಮೆಚ್ಚಿದ್ದೀರಿ , ವಿಶ್ಲೇಷಿಸಿದ್ದೀರಿ , ನಿಮ್ಮ ನೇರ ಅಭಿಪ್ರಾಯ ತಿಳಿಸಿದ್ದೀರಿ . ನಿಮ್ಮ ಬರಹಗಳ ಮಟ್ಟಕ್ಕೆ ಏರುವುದು ನನ್ನ ಪಾಲಿಗೆ ಅಸಾಧ್ಯದ ಮಾತು . ನಿಮ್ಮ ಪ್ರೀತಿಗೆ ನಾನು ಚಿರ ಋಣಿ. ಆಶೀರ್ವಾದ ಹೀಗೆಯೇ ಇರಲಿ .

ಚಿತ್ರಾ said...

ಸುಧೇಶ್,
ಧನ್ಯವಾದಗಳು.
ಚೆನ್ನಾಗಿದೆ ನೀವು ಹೇಳೋದು ! ನೀವು ಮಾತ್ರ ಯಾವಾಗಲೋ ಒಮ್ಮೆ ಬರೀತೀರ. ನಂಗೆ ಬೇಗ ಬೇಗ ಬರೀರಿ ಅಂತೀರಲ್ಲ ? ಹಾ ಹಾ ಹಾ
ನಿಮ್ಮ ಬ್ಲಾಗ್ ಕೂಡ ೩ ವರ್ಷ ಮುಗಿಸ್ತಾ ಇದೆ ಖುಷಿಯ ವಿಷಯ ಅಲ್ಲವೇ? ನಿಮ್ಮ ವಿಶ್ವಾಸ ಪ್ರೀತಿ ಹೀಗೆ ಇರಲಿ . .

ಚಿತ್ರಾ said...

ಗುರು ,
ತಡವಾಗಿ ಬಂದಿದ್ದಕ್ಕೆ ಬೇಜಾರಿಲ್ಲೆ . ಬಂದ್ಯಲ್ಲ ಅದು ಖುಷಿ ನಂಗೆ. ಬ್ಲಾಗ್ ಅಪ್ ಡೇಟ್ ಮಾಡದೆ ಇರ ಬಗ್ಗೆ ಕಾಲು ಎಳೆಯೋರಲ್ಲಿ ನೀನು ಒಬ್ಬ . ಹೀಂಗಾಗಿ ಬ್ಲಾಗ್ ಅಪರೂಪಕ್ಕಾದರೂ ಹೊಸ ಬರಹಗಳನ್ನು ಕಾಣಲೆ ನಿನ್ನ ಕೈವಾಡನೂ ಇದ್ದು . ಇನ್ನು ಮುಂದೂ ಇರಲಿ . ಹಿ ಹಿ ಹಿ
ಥ್ಯಾಂಕ್ಸೂ

ಶಿವಪ್ರಕಾಶ್ said...

happy birthday to your blog madam..
keep bloging :)