March 15, 2011

ಕಿವಿಮಾತು


ಸದಾ ಅವಳ  ಜೊತೆಯಾಗಿರುವಾಸೆ ಗೆಳೆಯಾ 
ಏನು ಮಾಡಲಿ ಹೇಳು ಉಪಾಯ ?
ಜಡೆಯ ಮಲ್ಲಿಗೆಯಾಗಲೆ?
ದುಂಡು ಕೈಗಳ ಬಳೆಯಾಗಲೇ?
ಕಾಲ ಮುತ್ತಿಡುವ  ಗೆಜ್ಜೆಯಾಗಲೇ?
ನುಣುಪುಗೊರಳಿನ  ಸರವಾಗಲೇ?
ಬಡಬಡಿಸಿದ ಪ್ರೇಮಿ .
 
ಅದನು ಕೇಳಿದ ಗೆಳೆಯನೆಂದ
ಯಾವ ಕಾಲದಲ್ಲಿರುವೆ ನೀನಿನ್ನೂ ?
ಬಳೆ , ಕಾಲ್ಗೆಜ್ಜೆ , ಚಿನ್ನದ ಚೈನ್
ಇವೆಲ್ಲಾ ಈಗ ಹಳೆ ಫ್ಯಾಶನ್
ಜಡೆಯೇ ಇಲ್ಲದ ಮೇಲೆ ಮಲ್ಲಿಗೆಯೆಲ್ಲಿ  ?
ಇಂಥಾ ಯೋಚನೆ ಯಾಕೋ  ನಿನ್ನ ತಲೆಯಲ್ಲಿ ? 
 
ಸದಾ ಅವಳ 
ಕಿವಿಗೆ ಕಚಗುಳಿಯಿಟ್ಟು
ಮೃದು ಕೆನ್ನೆಯ ಸವರಿ
ತುಟಿಯ ಮುದ್ದಿಸುವ ಆಸೆಯಿದ್ದರೆ
ಓ ಗೆಳೆಯಾ ಕೇಳು
ಬೇರೇನೂ ಬೇಡ ಆಗು
 ಅವಳ ಕೈಯ ಮೊಬೈಲು !!


10 comments:

Sandeep K B said...

ನಿಜ ಹೇಳಿದ ಅವನು ...ಆದ್ರೆ ಮೊಬೈಲ್ ಪ್ರತಿ ವರ್ಷ ಬಾದಲ್ ಆಗುತ್ತೆ.
ಸುಂದರ ವರ್ಣನೆ... :)

ಅನಿಲ್ ಬೇಡಗೆ said...

ಹ ಹ.. ಮಸ್ತ್ :)

ಚುಕ್ಕಿಚಿತ್ತಾರ said...

wow..wow..wow....nice lines..:):)

ಸವಿಗನಸು said...

waah...super....mobile change agade irali ashte....

ಕನಸು ಕಂಗಳ ಹುಡುಗ said...

ಎರಡನೇ ಪ್ಯಾರಾ ಬದಲಾಗಿರೊ ಕಾಲಕ್ಕೆ ಸಂಸ್ಕೃತಿಗೆ ವಿಡಂಬನೆಯಾದರೆ ಮೂರನೆಯದು ಮಾತ್ರ ಪಕ್ಕಾ ವಾಸ್ತವ..
ಯಾಕೆಂದರೆ ಇದು ಮೊಬೈಲ್ ಲೋಕಾನೇ....
ಪದಗಳನ್ನು ತುಂಬಾ ಚನ್ನಾಗಿ ಹೆಣೆದಿದ್ದೀರಿ...
ಖುಷಿಯಾಯಿತು.

ಜಲನಯನ said...

ಚಿತ್ರಾ..ಒಪ್ಪಿದೆ...ಒಪ್ಪಿದೆ..ಆದ್ರೆ ಈ ಮೂ ಬೋಲಿ ಗೆ ಸದ್ಯಕ್ಕೆ ಎದುರು ಇಲ್ಲ ...ನೋ ಟಕ್ಕರ್ ಅಲ್ವಾ..?

ಸುಧೇಶ್ ಶೆಟ್ಟಿ said...

Super aagidhe :)

Ittigecement said...

ಚಿತ್ರಾ...

ಆಗಾಗ ಮೊಬೈಲ್ ಬ್ಲಾಸ್ಟ್ ಆದ ಸುದ್ಧಿನೂ ಕೇಳ್ತಾ ಇರ್ತೀವಿ..

ಕವನ ಪ್ರತಿ ಸಾಲುಗಳನ್ನು ಹೆಣೆದ ರೀತಿ...
ಆ...ತುಂಟತನ ಇಷ್ಟವಾಗಿಬಿಡುತ್ತದೆ...

ಜೈ ಹೋ !!

Digwas Bellemane said...

ಹಹಹಾ..ಮಜಾ ಇದ್ದು

ಗಿರೀಶ್.ಎಸ್ said...

super....nice....