February 3, 2013

ಹನಿಗಳು ....

ಅದೆಷ್ಟೋ ತಿಂಗಳುಗಳೇ ಕಳೆದವು !  ನಾನು ಬರೆಯುತ್ತೇನೆ  ,ನನ್ನದೊಂದು ಬ್ಲಾಗ್ ಇದೆ ಎಂಬುದು  " ನಾನೂ ಬರೆಯುತ್ತಿದ್ದೆ, ಬ್ಲಾಗ್ ಇತ್ತು ,"   ಎಂಬ ಭೂತಕಾಲವಾಗಿ  ಬದಲಾಗುವ ಮೊದಲೇ , ಅದಕ್ಕೊಂದೆರಡು ಹನಿ ನೀರು ಹನಿಸಿ  ಜೀವಂತವಾಗಿಡುವ ಪ್ರಯತ್ನದಲ್ಲಿ .......

೧.


ಶೂನ್ಯ ತುಂಬಿದ ಕಣ್ಣು, ಕಳೆದು ಹೋಗಿದೇ ಕನಸು
ಭಾವನೆಗಳಿಲ್ಲದೆ ಬರಡಾಗಿದೆ ಮನಸು
ಬರಿದಾದರೂ ಖಾಲಿಯಲ್ಲದ ಪುಟಗಳಲಿ
ಗೀಚಿದ್ದನ್ನೆಲ್ಲ ಅಳಿಸಿ ಹಾಕಿದ ಗುರುತು
ಮತ್ತದೇ ಮೌನ , ಮತ್ತೆ ನೀರಸ ಬದುಕು !

----------------------------------------------

೨. 

ನಿನ್ನ ನೆನಪಾದಾಗೆಲ್ಲ 
 ಮನದ ಮೂಲೆಯಲ್ಲೆಲ್ಲೋ ಸಣ್ಣ ಛಳುಕು
ಜೊತೆಯಾಗಿ ಕಳೆದ  
ಕ್ಷಣಗಳ  ನೆನಪು . 
ಕಣ್ಣಲ್ಲಿ ತುಂಬಿತೆ  ಬೆಳಕು  ? 
ಯಾರೇನು ತಿಳಿವರೆಂಬ ಅಳುಕು 

5 comments:

Dr Chethan Raj said...

ವ್ಹಾ ವ್ಹಾ..ಚೆನ್ನಾಗಿವೆ ಚಿತ್ರಕ್ಕ!! ಆದರೆ ಸ್ವಲ್ಪ ವ್ಯಾಕರಣ ಬದಲಾಯಿಸಿದರೆ ಇನ್ನು ಒಳ್ಳೆ ಅರ್ಥ ಬರ್ತಿತ್ತು..

ಶೂನ್ಯ ತುಂಬಿದ ಕಣ್ಣುಗಳಲ್ಲಿ ಕಳೆದು ಹೋಗಿದೆ ಕನಸು
ಭಾವನೆಗಳಿಲ್ಲದೆ ಬರಡಾಗಿದೆ ಮನಸು

ಬರಿದಾದರೂ ಖಾಲಿಯಲ್ಲದ ಪುಟಗಳಲಿ
ಗೀಚಿದ್ದನ್ನೆಲ್ಲ ಅಳಿಸಿ ಹಾಕಿದ ಗುರುತು

ಮತ್ತದೇ ಮೌನ, ಮತ್ತದೇ ನೀರಸ ಬದುಕು!

ನಿನ್ನ ನೆನಪಾದಾಗೆಲ್ಲ ಮನದ ಮೂಲೆಯಲ್ಲೆಲ್ಲೋ ಸಣ್ಣ ಛಳುಕು
ಜೊತೆಯಾಗಿ ಕಳೆದ ಕ್ಷಣಗಳ ನೆನಪು.
ಕಣ್ಣಲ್ಲಿ ತುಂಬೀತೆ ಬೆಳಕು?
ಯಾರೇನು ತಿಳಿವರೆಂಬ ಅಳುಕು

sunaath said...

ಬಹಳ ದಿನಗಳ ನಂತರ ಬ್ಲಾಗಿಗೆ ಮರಳಿದ್ದೀರಿ. ಇದು ಸಂತಸದ ವಿಷಯ. ಕವನ ಚೆನ್ನಾಗಿದೆ.

Badarinath Palavalli said...

ಎರಡೂ ಹನಿಗಳು ಕಟ್ಟಿಕೊಡುವ ಚಿತ್ರಗಳು ನನಗೂ ತೀರ ಖಾಸಗೀ. ನಿಮ್ಮ ಗೆಲುವೂ ಅಲ್ಲೇ ಇದೆ. ತಲುಪಿದಾಗಲೇ ಅಂಚೆಗೂ ಬೆಲೆ.

ಬ್ಲಾಗ್ ಖಾಲಿ ಬಿಡಬೇಡಿ ದಯವಿಟ್ಟು...

www.badari-poems.blogspot.com

prashasti said...

ಸಾಯೋ ಜೀವಕ್ಕೆ ತೊಟ್ಟು ನೀರು ಕೊಡೋದು ಒಳ್ಳೇದೇ ಆದ್ರೂ ಮತ್ತದನ್ನ ಸಾಯೋ ಹಾಗೇ ಬಿಡೋದು ಒಳ್ಳೆಯದಲ್ಲ :-(
ಮರಳಿದ್ದು ಸಂತೋಷ. ಮುಂದುವರಿಸಿರೆಂಬ ಕೋರಿಕೆ :-)

ಜಲನಯನ said...

ಅಂತೂ ಹನಿಸಿ ಜೀವವುಳಿಸಿದೆಯಾ... ಚಿತ್ರಕ್ಕಾ...ಧನ್ಯ
ಆದರೆ ಹನಿಗಳ ನೀಡುವ ತಂಪು ಬಹಳಕಾಲ ಇರುವಂತಹುದು... ಚನ್ನಾಗಿವೆ ಹನಿಗಳು.