July 1, 2013

ಉತ್ತರ


ಇಲ್ಲಿನ ಸಂಗತಿಗಳನ್ನೇನು ಹೇಳಲಿ ?
ಮರುಭೂಮಿಯ ಏಕಾಂತವೂ 
ಸಂತೆಯಂತೆ ಗಿಜಿಗುಡುತ್ತಿದೆ 

 ಅಮ್ಮ ಚೇಳಿನ ಚಿಂತೆ ಬಿಟ್ಟು 
 ಹಾಯಾಗಿ ಮಲಗು 
 ಮರಿ  ಎಲ್ಲಿ ಹೋಯ್ತೆಂಬ ಜಾಡೂ ಇಲ್ಲ ಅದಕ್ಕೆ 

 ಮನದ ಕದವನ್ನು ಮುಚ್ಚಿರಬೇಕು ನೀನು 
 ಅದಕ್ಕೆ ಕೇಳುತ್ತಿಲ್ಲ ದನಿಗಳು 
 ಕೊಂಚವೇ ಸರಿಸಿ ನೋಡು 
 ಮುದಗೊಳಿಸುತ್ತವೆ ಶಬ್ದಗಳು 

 ಒಂಟಿಯಾಗಿದ್ದೀಯ ಅದಕೇ  ಸಂಕಟ 
 ಜೊತೆಯಾಗಿ ನೋಡು  ಜಗದೊಡನೆ ,
ಇಲ್ಲಿ ತುಂಬಿದ  ಪ್ರೀತಿ 
 ತಿಳಿಯುವುದು ನಿನಗೆ

(ಬ್ಲಾಗ್ ಗೆಳೆಯ ಸುಧೇಶ್, ಅಪರೂಪಕ್ಕೆ ಒಂದು ಕವನ ಬರೆದರು , ನವ್ಯ ಶೈಲಿಯಲ್ಲಿ ! ಅದನ್ನು ಓದಿದಾಗ  ಅದಕೊಂದು ಉತ್ತರ ಹೊಳೆಯಿತು . ಬಹುದಿನಗಳ ನಂತರ  ಮತ್ತೊಮ್ಮೆ ಶಬ್ದಗಳು ಸರಾಗವಾಗಿ ಹರಿದಾಡಿದವು. ಅದರ ಪರಿಣಾಮ  ಈ ಕವನ . ಸ್ಪೂರ್ತಿಗಾಗಿ ನನ್ನ ಬ್ಲಾಗ್ ಸುಧೇಶ್ ಗೆ ಥ್ಯಾಂಕ್ ಹೇಳ್ತಾ ಇದೆ ! ) 

ಸುಧೇಶ್ ರ ಪ್ರಶ್ನೆ ಇಲ್ಲಿದೆ ನೋಡಿ !

5 comments:

ಜಲನಯನ said...

ಹನಿಯಾಗಲು ಮೋಡಕೆ ತಂಪು ಬೇಕು...ಚಿತ್ರಾ ಮನದಾಳದ ಭಾವ ಪ್ರಕಟಕ್ಕೆ ಅಂತೂ ಸುಧೇಶ್ ಕವನದ ತಂಪಾದ್ರೂ ಸಿಕ್ತಲ್ಲ...???

ಒಂಟಿಯಾಗಿದ್ದೀಯಾ ಎನ್ನುವ ಬದಲು ಜತೆಯಾಗಿ ನೋಡು ಜಗದೊಡನೆ...!!! ಈ ಭಾವ ಇಷ್ಟವಾಯ್ತು.

Swarna said...

ಸೊಗಸಾದ ಉತ್ತರ

ಸಾಕ್ಷಿ said...

ಸುಧೇಶರ ಕವನಕ್ಕೆ ಒಳ್ಳೆಯ ಉತ್ತರ. ಚೆನ್ನಾಗಿದೆ......ಧನ್ಯವಾದಗಳು.....

Badarinath Palavalli said...

ಹೊಸ ಪರಿ, ಅರ್ಥವ್ಯಾಪ್ತಿಯೂ ವಿಶಾಲವಾಗಿದೆ. ಮನಸ್ಸಿಗೆ ಹಿಡಿಸಿತು.
http://badari-poems.blogspot.in/

ಚಿನ್ಮಯ ಭಟ್ said...

chenagide medam