June 18, 2017

ಚಂದ್ರ ನಾಚಿದ ಸಮಯ !



ನೇಸರನು ಭೂಮಿಯನು
ಚುಂಬಿಸುವ ಸಮಯದಲಿ
ಕಣ್ಣ ಮಿಟುಕಿಸಿತೊಂದು ತುಂಟ ತಾರೆ
ಸಾಗರನು ಕೆಂಪಾಗೆ
ನಾಚಿ ನಿಂತನು ಚಂದ್ರ
ಪ್ರಿಯನ ತೋಳಲಿ ಅಡಗಿದಳು ನೀರೆ
ಕನಸು ತುಂಬಿದ ಕಣ್ಣು
ತುಸುವೇ ಬಿರಿದಿಹ ಅಧರ
ಬಿಸಿಯಾಗಿ ಕೆಂಪಾದ ಅವಳ ಕೆನ್ನೆ
ಬಳ್ಳಿ ನಡುವಿನ ತನುವು
ನವಿರಾಗಿ ನಡುಗಿರಲು
ಬಿಗಿಯಾಗಿ ಬಳಸಿದಳು ಇನಿಯನನ್ನೇ 

2 comments:

sunaath said...

ಭಾವಪೂರ್ಣವಾದ ಪ್ರಣಯಗೀತೆ. ಸೊಗಸಾಗಿದೆ.

ಚಿತ್ರಾ said...

ಥ್ಯಾಂಕ್ಸ್ ಸುನಾಥ್ ಕಾಕಾ !
ನಿಮ್ಮ ಮೆಚ್ಚುಗೆ ಹುರುಪು ತುಂಬುತ್ತದೆ !