October 9, 2017

ಬಯಕೆ

ರವಿಯ ಹೊಂಗಿರಣವು  ಕಣ್ಣ ಸೋಕುವ ತನಕ 
ಮುದ್ದು ಮುಖದಲಿ  ಕೆಂಪು ಎದ್ದು ಕಾಣುವ ತನಕ 
ಎದೆ ಬಡಿತ  ಹೆಚ್ಚಾಗಿ  ಕಿವಿಗೆ ಕೇಳುವ ತನಕ 
ಬಂಧಿಸುವ  ಬಯಕೆಯಿದೆ  ನನ್ನ ಚೆಲುವೆ 

ಹಚ್ಚಿದಾ ತುಟಿ ಬಣ್ಣ ಒರೆಸಿ ಹೋಗುವ ತನಕ 
ಕಣ್ಣಿನಾ ಕಾಡಿಗೆಯು ತೀಡಿ ಹೋಗುವ ತನಕ 
ಕಟ್ಟಿದಾ ಹೆರಳದು  ಬಿಚ್ಚಿ ಹರಡುವ ತನಕ 
ಮುದ್ದಿಸುವ ಬಯಕೆಯಿದೆ ನನ್ನ  ಚೆಲುವೆ 

ನಾಚಿಕೆಯ ತೆಳು ಪರದೆ  ಕಳಚಿ ಬೀಳುವ ತನಕ 
ಬಯಕೆಗಳ  ಪೂರದಲಿ  ಕೊಚ್ಚಿ ಹೋಗುವ ತನಕ 
ಮೈಮನಗಳೊಂದಾಗಿ  ಕರಗಿ ಹೋಗುವ ತನಕ 
ಪ್ರೀತಿಸುವ ಬಯಕೆಯಿದೆ ನನ್ನ ಚೆಲುವೆ 

2 comments:

sunaath said...

ಈ ಕವನಕ್ಕೆ ನೀವು copyright ಹಾಕಿಲ್ಲ ಎಂದರೆ, ನನ್ನ ಹೆಂಡತಿಗೆ ಈ ಮಾತುಗಳನ್ನು ಉಸುರುವ ಬಯಕೆ ನನಗೆ!

ಚಿತ್ರಾ said...

ಕಾಕಾ .....
ಏನು ಹೇಳಬೇಕೋ ತಿಳಿಯುತ್ತಿಲ್ಲ !!! ಧನ್ಯಳಾದೆ !!
ನೀವು ಕಾಕೂಗೆ ಧಾರಾಳವಾಗಿ ಈ ಮಾತುಗಳನ್ನ ಹೇಳಬಹುದು !!