ರವಿಯ ಹೊಂಗಿರಣವು ಕಣ್ಣ ಸೋಕುವ ತನಕ
ಮುದ್ದು ಮುಖದಲಿ ಕೆಂಪು ಎದ್ದು ಕಾಣುವ ತನಕ
ಎದೆ ಬಡಿತ ಹೆಚ್ಚಾಗಿ ಕಿವಿಗೆ ಕೇಳುವ ತನಕ
ಬಂಧಿಸುವ ಬಯಕೆಯಿದೆ ನನ್ನ ಚೆಲುವೆ
ಹಚ್ಚಿದಾ ತುಟಿ ಬಣ್ಣ ಒರೆಸಿ ಹೋಗುವ ತನಕ
ಕಣ್ಣಿನಾ ಕಾಡಿಗೆಯು ತೀಡಿ ಹೋಗುವ ತನಕ
ಕಟ್ಟಿದಾ ಹೆರಳದು ಬಿಚ್ಚಿ ಹರಡುವ ತನಕ
ಮುದ್ದಿಸುವ ಬಯಕೆಯಿದೆ ನನ್ನ ಚೆಲುವೆ
ನಾಚಿಕೆಯ ತೆಳು ಪರದೆ ಕಳಚಿ ಬೀಳುವ ತನಕ
ಬಯಕೆಗಳ ಪೂರದಲಿ ಕೊಚ್ಚಿ ಹೋಗುವ ತನಕ
ಮೈಮನಗಳೊಂದಾಗಿ ಕರಗಿ ಹೋಗುವ ತನಕ
ಪ್ರೀತಿಸುವ ಬಯಕೆಯಿದೆ ನನ್ನ ಚೆಲುವೆ
2 comments:
ಈ ಕವನಕ್ಕೆ ನೀವು copyright ಹಾಕಿಲ್ಲ ಎಂದರೆ, ನನ್ನ ಹೆಂಡತಿಗೆ ಈ ಮಾತುಗಳನ್ನು ಉಸುರುವ ಬಯಕೆ ನನಗೆ!
ಕಾಕಾ .....
ಏನು ಹೇಳಬೇಕೋ ತಿಳಿಯುತ್ತಿಲ್ಲ !!! ಧನ್ಯಳಾದೆ !!
ನೀವು ಕಾಕೂಗೆ ಧಾರಾಳವಾಗಿ ಈ ಮಾತುಗಳನ್ನ ಹೇಳಬಹುದು !!
Post a Comment