June 16, 2018

ಬರೆಯಲಾಗದ ಹಾಡು !

ಬರೆಯಬೇಕೆನಿಸಿದರೂ ಬರೆಯಲಾಗದ ಹಾಡು 
ನೂರೆಂಟು ಉಳಿದಿಹುದು  ಮನಸಿನೊಳಗೆ 
ಬರೆಯುವುದೋ ಬೇಡವೋ ಎಂಬ ತೊಳಲಾಟದಲಿ
ಬೇಯುತಿಹೆ ನೋಯುತಿಹೆ  ಒಳಗಿಂದೊಳಗೆ 

ನನ್ನೊಡಲ ಭಾವಗಳ ನಿನ್ನೆದುರು ತೆರೆದಿಡಲೇ
ಓದಬಲ್ಲೆಯಾ ಗೆಳೆಯಾ ಪ್ರೀತಿಯಿಂದ?
ನಗುಮೊಗದ ಹಿಂದಿರುವ ನೂರೆಂಟು ನೋವುಗಳ 
ನೋಡಬಲ್ಲೆಯಾ ಗೆಳೆಯಾ ಸಹನೆಯಿಂದ?

ಬೇಸರಾಗಿದೆ ಮಾತು  ಮನವ ತುಂಬಿದೆ ಮೌನ 
ಎದೆಯಲ್ಲಿ ಸುಡುತಿರುವ  ಬೆಂಕಿಯಿಹುದು 
ಬಯಸಿದರೂ  ಸಿಗದಿರುವ  ಬಗೆ ಬಗೆಯ ಕನಸುಗಳು 
ಅಣಕವಾಡುತ  ನನ್ನ  ಕಾಡುತಿಹುದು 

3 comments:

sunaath said...

ಚಿತ್ರಾ ಮೇಡಮ್, ಮನದ ಭಾವವನ್ನು ಸರಳವಾಗಿ, ನೇರವಾಗಿ ತಿಳಿಸುವ ಮುದ್ದು ಕವನವಿದು. ಕವನ ಇಷ್ಟವಾಯಿತು.

sunaath said...

ಬೇಸರವು ಕೂಡ ರಸವಾಗಿ ಹರಿದಿಹುದು
ನಿಮ್ಮ ಈ ಕವನದಲ್ಲಿ.
ಮುದುಡಿದಾ ಮನಸಿಗೆ ಇದೆ ತಾನೆ ಮದ್ದು?
ನೆಮ್ಮದಿಯ ಪಡೆಯುವಿರಿ ನೀವು ಇಲ್ಲಿ.

ಪ್ರಶಾಂತ್ ನಂದಿಗಾವಿ ( Prashanth Nandigavi) said...

ವಿರಹ ವೇದನೆಯ ಕವಿತೆ.... ತುಂಬಾ ಚೆನ್ನಾಗಿದೆ