May 15, 2019

ನಮ್ಮಲ್ಲಿ ಸಂಜೆಗಳು ಹೀಗಿರುವವು !



ಆಫೀಸಿನಿಂದ ಮನೆಗೆ ಮರಳುವ ಜನರು
ಶಾಲೆ ಕಾಲೇಜಿನ ಬ್ಯಾಗು ಹೊತ್ತವರು
ಮಂದಿರದ ಕುಂಕುಮ ಹಣೆಗಿಟ್ಟು ನಡೆವವರು 
ಒಟ್ಟಾಗಿ ಎಲ್ಲರೂ ರಸ್ತೆ ತುಂಬಿಹರು
ನಮ್ಮಲ್ಲಿ ಸಂಜೆಗಳು ಹೀಗಿರುವವು
ಸಿಗ್ನಲ್ ನಲಿ ನಿಂತ ವಾಹನಗಳು
ಕಿವಿಗೆ ಕರ್ಕಶವಾದ ಹಾರನ್ ಗಳು
ಕಾಲಿಡಲು ಸ್ಥಳವಿರದ ಫುಟ್ ಪಾತ್ ಗಳು
ನಡುವೆಯೇ ಚಾಚಿರುವ ಬಡ ಕೈಗಳು
ನಮ್ಮಲ್ಲಿ ಸಂಜೆಗಳು ಹೀಗಿರುವವು
ಬೇಕೆಂದರೂ ಸಿಗದು ಶಾಂತಿ ಇಲ್ಲಿ
ತಾಳ್ಮೆ ಸಹನೆಗಳಿಗೆ ಜಾಗವೆಲ್ಲಿ
ಸಿಡುಕಾಟ ಗೊಣಗಾಟ ನಿತ್ಯವಿಲ್ಲಿ
ಕಳೆಯುತಿದೆ ಜೀವನವು ರಸ್ತೆಯಲ್ಲಿ
ನಮ್ಮಲ್ಲಿ ಸಂಜೆಗಳು ಹೀಗಿರುವವು
ನಿಮ್ಮಲ್ಲಿ ಸಂಜೆಗಳು ಹೇಗಿರುವವು ?

2 comments:

sunaath said...

ನಮ್ಮಲ್ಲಿಯ ಸಂಜೆಗಳು ನಿಮ್ಮಲ್ಲಿಯ ಸಂಜೆಗಳಷ್ಟು colourful ಇಲ್ಲ!

ಚಿತ್ರಾ said...

ಧಾರವಾಡದ ಸಂಜೆಗಳು ಶಾಂತವಾಗಿರಬೇಕಲ್ಲವೇ ಕಾಕಾ?