December 28, 2008

ಈ ಪ್ರೇಮ ಸಂಭಾಷಣೆ .. ...

ಅವನು : ಏನು ತಿನ್ನೋಣ?
ಅವಳು : ಏನಾದ್ರೂ ಅಡ್ಡಿಲ್ಲ.ನೀನೇ ಹೇಳು !
ಅವನು : ಪಾವ್ -ಬಾಜಿ ಮತ್ತೆ ವೆಜ್ ಪಲಾವ್ ತೊಗೊಳೋಣ್ವಾ?
ಅವಳು : ಥೂ ಎಷ್ಟು ಆಯಿಲೀ ಇರತ್ತೆ . ನಂಗೆ ಪಿಂಪಲ್ ಬರತ್ತೆ ಅಷ್ಟೆ !
ಅವನು : ಹಾಗಾದ್ರೆ , ಬರೀ ಚಹಾ ಮತ್ತೆ ವೆಜ್ ಸ್ಯಾಂಡ್ ವಿಚ್ ತೊಗೊಳೋದಾ?
ಅವಳು : ನಂಗೆ ನೋಡಿದ್ರೆ ಸಾಯೋ ಅಷ್ಟು ಹಸಿವಾಗಿದೆ , ನೀನು ಬರೀ ಸ್ಯಾಂಡ್ವಿಚ್ ಅಂತೀಯಲ್ಲಾ ,
ಏನು ಜನಾನೋ !
ಅವನು : ಹಾಗಾದ್ರೆ ನೀನೇ ಹೇಳು , ಏನು ತಿನ್ನೋದು ಅಂತ .
ಅವಳು : ಏನಾದ್ರೂ ಪರವಾಗಿಲ್ಲ !ನೀನೆ ಡಿಸೈಡ್ ಮಾಡು.

------------------------------------------------------
ಅವನು : ಸರಿ, ಈಗ ಏನು ಮಾಡೋಣ ನೀನೆ ಹೇಳು
ಅವಳು : ಏನಾದ್ರೂ ಸರಿ. ನೀನೆ ಡಿಸೈಡ್ ಮಾದು.
ಅವನು: ಹಂ. ಯಾವ್ದಾದ್ರೂ ಒಳ್ಳೆ ಪಿಕ್ಚರ್ ಗೆ ಹೋಗೋಣ್ವಾ?
ಅವಳು : ಥೂ ,ಬೇಡ . ಸುಮ್ನೆ ಟೈಮ್ ವೇಸ್ಟ್.
ಅವನು : ಓಕೆ. ಹಾಗಾದ್ರೆ , ಪಾರ್ಕ್ ಗೆ ಹೋಗೋಣ ನಡಿ.
ಅವಳು: ನಿಂಗೇನಾದ್ರೂ ತಲೆ ಕೆಟ್ಟಿದ್ಯಾ? ಹೊರಗಡೆ ಎಷ್ಟು ಬಿಸಿಲಿದೆ ನೋಡಿದೀಯಾ?
ಅವನು: ಬೇಡ ಬಿಡು. ಕಾಫೀ ಶಾಪ್ ಗಾದ್ರೂ ಹೋಗೋಣವಾ?
ಅವಳು: ನಿಂಗೊತ್ತಲ್ವಾ? ಕಾಫಿ ಕುಡಿದ್ರೆ ನಂಗೆ ರಾತ್ರಿ ನಿದ್ರೆನೇ ಬರಲ್ಲ ,ಅಮೇಲೆ ಕಷ್ಟ ಆಗತ್ತೆ ಅಂತ?
ಗೊತ್ತಿದ್ದೂ ಕೇಳ್ತೀಯಲ್ಲ?
ಅವನು: ಹಾಗಾದ್ರೆ ಈಗ ನೀನೇ ಹೇಳು ,ಏನು ಮಾಡೊಣ ಅಂತ !
ಅವಳು : ಏನಾದ್ರೂ ಸರಿ . ನೀನೇ ಡಿಸೈಡ್ ಮಾಡು !

---------------------------------------------------

ಅವನು: ಹೋಗಲಿ ಬಿಡು . ಏನೂ ಬೇಡ. ಸುಮ್ಮನೆ ಮನೆಗೆ ಹೋಗೋಣ ನಡಿ.
ಅವಳು: ನಂಗೆ ಹೇಗಾದ್ರೂ ಪರವಾಗಿಲ್ಲ . ನೀನು ಹೇಗಂದ್ರೆ ಹಾಗೆ.
ಅವನು: ಬಸ್ ನಲ್ಲಿಹೋಗೋದಾ?
ಅವಳು: ಥೂ, ಎಷ್ಟು ರಷ್ ಇರತ್ತೆ. ಏನೇನೋ ವಾಸನೆ ತುಂಬಿರತ್ತೆ ಬಸ್ ನಲ್ಲಿ.
ಅವನು: ಓಕೆ. ಆಟೋದಲ್ಲಿ ಹೋಗೋಣ ಬಿಡು.
ಅವಳು: ದುಡ್ಡು ಹೆಚ್ಚಾಗಿದ್ಯಾ ನಿಂಗೆ? ಆಟೋ ಅಂತೆ ಆಟೋ !
ಅವನು: ಸರಿ ಬಿಡು, ನಡ್ಕೊಂಡೇ ಹೋಗೋಣ !
ಅವಳು : ಎಷ್ಟು ಕೆಟ್ಟೊನೋ ನೀನು? ಹಸೀ ಹೊಟ್ಟೇಲಿರೋಳನ್ನ ನಡಿಸ್ತೀಯಲ್ಲ ?ಏನೂ ಅನ್ಸೋದೇ ಇಲ್ವಾ?
ಅವನು: ಸಾರೀ , ನಡಿ ಹಾಗಾದ್ರೆ , ಮೊದಲು ಏನಾದ್ರೂ ತಿನ್ನೋಣ.
ಅವಳು: ಓ ಕೆ. ನಡಿ.
ಅವನು: ಏನು ತಿನ್ನೋಣ?
ಅವಳು: ನಂಗೆ ಏನಾದ್ರೂ ನಡೆಯತ್ತೆ. ನೀನೆ ಡಿಸೈಡ್ ಮಾಡು ! .......

( ಮರಾಠೀಯಿಂದ )

16 comments:

Harish - ಹರೀಶ said...

ನಂಗೆ ಇಂಗ್ಲಿಷ್ ಅಲ್ಲಿ ಇಮೇಲ್ ಬಂದಿತ್ತು :-)

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾರವರೆ....

ನಾವು ಕಾಲೇಜಿಗೆ ಹೋಗುವಾಗ.. ರೂಮಿನಲ್ಲಿ ತಿನ್ನಲು ಏನೂ ಇರುತ್ತಿರಲಿಲ್ಲ...
" ಅವಲಕ್ಕಿ ಇದ್ದಿದ್ದರೆ.. ಅವಲಕ್ಕಿ ಮೊಸರು ತಿನ್ನ ಬಹುದಿತ್ತು..ಆದರೆ ಮೊಸರೂ ಇಲ್ಲವಲ್ಲೊ.."
ಅನ್ನು ಜೋಕಿನ ಮಾತು ನೆನಪಾಯಿತು...


ಚೆನ್ನಾಗಿದೆ ವಿಡಂಬನೆ...
ದ್ವಂದ ಮನಸ್ಸಿನ ಗೊಂದಲ...

ಅಭಿನಂದನೆಗಳು...

sunaath said...

ತುಂಬಾ ರಸವತ್ತಾದ ಪ್ರೇಮಸಂಭಾಷಣೆ ಕಣ್ರೀ!

ತೇಜಸ್ವಿನಿ ಹೆಗಡೆ- said...

Hahaha :) :)

shivu K said...

ಚಿತ್ರಾ ಮೇಡಮ್,

ಬಲು ಮಜವಾಗಿದೆ. ಪ್ರತಿನಿತ್ಯ ನಡೆಯೋದು ಇದೇ ಅಲ್ಲವೇ ! ಈ ಹುಡುಗಿಯರು ಯಾವುದಕ್ಕೂ ಸಿಕ್ಕಿಹಾಕಿಕೊಳ್ಳೋಲ್ಲ. ಎಲ್ಲವನ್ನು ಹುಡುಗರ ಮೇಲೆ ಹಾಕುತ್ತಾರೆ. ಪಾಪ ಹುಡುಗರು !

ನಿಮ್ಮ ಬ್ಲಾಗನ್ನು ನಾನು ಹಿಂಬಾಲಿಸುತ್ತಿದ್ದೇನೆ. ನಿಮ್ಮ ಅನುಮತಿಯಿಲ್ಲದೆ ಲಿಂಕಿಸಿಕೊಂಡಿದ್ದೇನೆ.... ನೀವು ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳೀಗೆ ಬನ್ನಿ...
ನನ್ನ ಬ್ಲಾಗ್ ವಿಳಾಸ ಗಳು :
http://chaayakannadi.blogspot.com/

ಮತ್ತೊಂದು ಹೊಸ ರೀತಿಯ ಅನುಭವಕ್ಕಾಗಿ :

http://camerahindhe.blogspot.com/

ಸುಶ್ರುತ ದೊಡ್ಡೇರಿ said...

:D ಚೆನ್ನಾಗಿದೆ! ನಂಗೆ ತಕ್ಷಣ ನೆನಪಾದದ್ದು ಇದು:

http://vikasavada.blogspot.com/2007/06/e-mail.html

ಶಾಂತಲಾ ಭಂಡಿ said...

ಚಿತ್ರಾ...
ಹೆಚ್ಚಿಗೆ ಹೇಳಲೆ ಆಗ್ತಿಲ್ಲೆ, ಇಷ್ಟು ಮಾತ್ರ ಹೇಳ್ಲಕ್ಕು. "ನಾವಿರೋದೆ ಹೀಗೆ ಸ್ವಾಮಿ" :-)

ಹೆಚ್ಚಿನ ಪತಿ-ಪತ್ನಿಯರಲ್ಲಿ ಅಥವಾ ಪ್ರೇಮಿಗಳಲ್ಲಿ ನಡೆದಿರಬಹುದಾದ ಸಂಭಾಷಣೆಯಿರಬಹುದಿದು. ತರ್ಜುಮೆಗೊಂಡದ್ದಾದರೂ ಆಪ್ತವೆನಿಸುತ್ತದೆ.

ಚಿತ್ರಾ said...

ಹರೀಶ,
ಇದು ಸುಮಾರು ಭಾಷೇಲಿ ಬಂದಿಕ್ಕು ಇಮೇಲ್ .

ಪ್ರಕಾಶ್,
ಧನ್ಯವಾದಗಳು ! ಈಗ ಮೊಸರು ಅವಲಕ್ಕಿ ಎರಡೂ ತಿಂತಾ ಇದ್ರಿ ತಾನೆ? ಅಷ್ಟು ಸಾಕು ಬಿಡಿ !

ಸುನಾಥ್ ಕಾಕಾ, ತೇಜಸ್ವಿನಿ,
ಧನ್ಯವಾದಗಳು.

ಶಿವು,
ಯಾಕ್ರೀ ಸುಮ್ ಸುಮ್ನೆ ದೋಷನೆಲ್ಲ ಹುಡುಗೀರ ಮೇಲೆ ಹಾಕ್ತೀರಾ? ಇದೆಲ್ಲ ಗೊತ್ತಿದ್ದೂ ಹಿಂದೆ ಬೀಳೋ ಹುಡುಗ್ರನ್ನೇನ್ರೀ ಅಂತೀರ? ಅಂದ ಹಾಗೆ , ಇದು ಒಂಥರಾ ಟೆಸ್ಟ್! ಇಂಥಾ ಎಷ್ಟೋ ಸಂಭಾಷಣೆಗಳ ನಂತರನೂ ಅವನು ಬಿಟ್ಟು ಓಡಿ ಹೋಗದೇ ಜೊತೇಲೆ ಇರ್ತಾನೆ ಅಂದ್ರೆ ಆಗ ಭವಿಷ್ಯದ ಬಗ್ಗೆ ವಿಚಾರ ಮಾಡ ಬಹುದು ಅಂತ ಹುಡುಗಿಯರ ಅಭಿಪ್ರಾಯ !

ಅಂದ ಹಾಗೆ, ಬ್ಲಾಗ್ ಲಿಂಕಿಸಿಕೊಳ್ಳೋಕೆ ಅನುಮತಿ ಅಗತ್ಯ ಇಲ್ಲ ಕಣ್ರೀ. ಹಾಗೆ ಲಿಂಕಿಸಿಕೋಂಡು ನಿಮ್ಮ ಬಳಗಕ್ಕೆ ಸೇರಿಸಿ ಕೊಂಡಿದ್ದಕ್ಕೆ ನಾನೇ ನಿಮಗೆ ಥ್ಯಾಂಕ್ಸ್ ಹೇಳಬೇಕು !
ಬರುತ್ತೇನೆ ನಿಮ್ಮ ಬ್ಲಾಗಿಗೆ. ನೀವು ಬರುತ್ತಿರಿ.

ಸುಶ್ರುತ,
ಲಿಂಕ್ ಕೊಟ್ಟು ನಗಿಸಿದ್ದಕ್ಕಾಗಿ ಧನ್ಯವಾದಗಳು !

ಶಾಂತಲಾ,
ನಿಜ. " ನಾವಿರೋದೇ ಹೀಗೆ "
ಬರುತ್ತಾ ಇರು.

ಸುಧೇಶ್ ಶೆಟ್ಟಿ said...

ಪಾಪ ಆ ಹುಡುಗ:)

ಇದನ್ನು ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಕ್ಕೆ ಥ್ಯಾ೦ಕ್ಸ್ ಚಿತ್ರಾ ಅವ್ರೇ... ತು೦ಬಾ ಇಷ್ಟವಾಯಿತು.

shreeshum said...

ಒಟ್ನಲ್ಲಿ ಈ ಹವ್ಯಕ ಹೆಣ್ಣು ಹುಡುಗ್ರು ರಾಶಿ ಚಲೋ ಅರ್ಯದು ಕಲ್ತಿದ್ವಪ. ಒಂದ್ಸಾರಿ ಓದಿರೆ ಮತ್ಯಾವಾಗ ಹೊಸಾದು ಬರಿತ್ವೋ ಅಂತ ಕಾಯ ಹಂಗಿರ್ತು. ಒಬ್ರಾ... ಇಬ್ರಾ... ಎಲ್ಲರೂ ಹಂಗೆ

ಚಿತ್ರಾ ಕರ್ಕೇರಾ said...

ಚೆನ್ನಾಗಿದೆ ಬರಹ ಚಿತ್ರಾ
@ಶಿವಣ್ಣ..ಹುಡುಗ್ರು ಪಾಪ ಅಂದೋರು ಯಾರು? ನೀವು ಪಾಪಣ್ಣ..ಹಾಗಂತ ಎಲ್ರೂ ಪಾಪ ಅಂದ್ರೆ ಘೋರ ಅಪರಾಧವಾದೀತು..(:)
-ಚಿತ್ರಾ

ಮನಸ್ವಿ said...

ಹೋಟೆಲ್ಗೆ ಹೋಪನಾ ಅಂತ ಪುಣ್ಯಕ್ಕೆ ಹುಡುಗ ಕೇಳಲ್ಲೆ ಏನು ತಿನ್ನೋಣ ಕೇಳಿದ.. ಇಲ್ದೆ ಹೋಗಿದ್ರೆ ದೊಡ್ಡ ಹೋಟೆಲ್ಗೆ ಹೋಪನಾ ಹೇಳ್ತೆ ದುಡ್ಡು ಹೆಚ್ಚಾಯ್ದ, ಚಿಕ್ಕ ಹೋಟಲ್ಗೆ ಹೋಪನ ಹೇಳ್ತ್ಯಲ ನಾಚ್ಕೆ ಆಗ್ತಲ್ಯ ಕೇಳ್ತಿದ್ಲೇನ ಹುಡುಗಿ ಅಲ್ದಾ?,ಹ್ಮ್.. ಇಂಗ್ಲೀಷಿನಲ್ಲಿ ಮಿಂಚಂಚೆ(ಇಮೇಲ್) ಬಂದಿತ್ತು ಎಂಗೂ.

ಚಿತ್ರಾ said...

ಸುಧೇಶ್ ,
ನಕ್ಕಿದ್ದಕ್ಕೆ ಧನ್ಯವಾದಗಳು. ನಿಮ್ಮೊಂದಿಗೂ ಇಂಥಾ ಸಂಭಾಷಣೆ ನಡೆಯಬಹುದು ( ಅಥವಾ ನಡೆದಿರಬಹುದು ! ) ನೆನಪಿಟ್ಟುಕೊಂಡಿರಿ ಡೈಲಾಗ್ ಅನ್ನು .

ಶ್ರೀಶಂ ಅವರೇ,
ಎಲ್ಲಾ ಹವ್ಯಕ ಹೆಣ್ಣುಹುಡುಗ್ರ ವತಿಯಿಂದ ನಿಮಗೊಂದು ದೊಡ್ಡ ಥ್ಯಾಂಕ್ಸ್ ಹೇಳಿಬಿಡ್ತಿ ! ಬತಾ ಇರಿ ಹೀಂಗೇಯ .

ಚಿತ್ರಾ ,
ಧನ್ಯವಾದಗಳು !
’ ಹುಡುಗ್ರು ಪಾಪ ಅಂದೋರು ಯಾರು?’ಅನ್ನೋ ನಿಮ್ಮ ಅಭಿಪ್ರಾಯವನ್ನು ನಾನೂ ಒಪ್ಪುತ್ತೇನೆ ! ಹ ಹ ಹ ..

ಮನಸ್ವಿ,
ಸುಮ್ನೆ ಸಾಗರದಂಥಾ ಊರಲ್ಲಿ ಹೋಟ್ಲಿಗೆ ಕರ್ಕಂಡು ಹೋಗ್ತಿ ನಡಿ ಹೇಳದು ಒಳ್ಳೇದು ಅಲ್ದ ? ದೊಡ್ಡದು ಸಣ್ಣದು ಹೇಳಿ ಯೋಚನೆ ಮಾಡ ಕೆಲ್ಸನೇ ಇಲ್ಲೆ ! ಬರೀ , ಮನೆಯವು ಯಾರೂ ಬರದೇ ಇದ್ದಂಥಾ ಹೋಟ್ಲು ಆರಿಸಿದ್ರಾತು !

ಇದು ಸುಮಾರು ಭಾಷೆಲಿ ಓಡಾಡಿದ್ದು ಕಾಣ್ತು (ಇ ಮೇಲ್)
ಬರ್ತಾಇರು .

ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗಿ said...

hahahha

naz said...

chitra ji.. super..& boys must have pationsssssssss otherwise he will get mad. thanx chitra ji...

naz said...

chitra ..ji r u from jogfalls
bcoz i saw jogfalls image on ur blog its make me very happy bcoz iam frm jogfalls.......