October 30, 2009

ಕೋರಿಕೆ ..

ಕಳೆದು ಹೋಗಿದೆ ಹೃದಯ
ಹುಡುಕಿ ಕೊಡುವೆಯಾ ಗೆಳೆಯಾ?

ಇರಬಹುದು ಇಲ್ಲೆಲ್ಲೋ
ನಿನ್ನದೇ ಸುತ್ತ ಮುತ್ತ !
ಅಡಗಿರಬಹುದು ನಿನ್ನ
ತುಂಟ ನೋಟದಲ್ಲಿ
ಕಳೆದಿರಬಹುದು
ನಿನ್ನ ಸವಿ ಮಾತುಗಳಲ್ಲಿ ..
ಮುಳುಗಿ ಹೋಗಿರಬಹುದು ನಿನ್ನ
ಪ್ರೀತಿಯ ನದಿಯಲ್ಲಿ ..
ಹಂಚಿಹೋಗಿದೆ ನಿನ್ನ ಧಮನಿ ಧಮನಿಗಳಲ್ಲಿ ..
ಇನ್ನೆಲ್ಲೆಂದು ನಾ ಅದನ್ನು ಹುಡುಕಲಿ ?

ಹೃದಯವಿಲ್ಲದೆ ನಾನು ಹೇಗೆ ಬದುಕಲಿ
ಗೆಳೆಯಾ ?
ಕೊನೆ ಪಕ್ಷ ನಿನ್ನ ಹೃದಯವನ್ನಾದರೂ
ಕೊಡಲಾರೆಯಾ ?

28 comments:

ಸವಿಗನಸು said...

ಚಿತ್ರಾ,
ನಿಮ್ಮ ಕಳೆದು ಹೋದ ಹೃದಯ ಸಿಗುವುದಿಲ್ಲ....ಅದು ನಿಮ್ಮ ಗೆಳೆಯನಲ್ಲಿ ಸೇರಿದೆ...
ಅದಕ್ಕೆ ಬದಲಾಗಿ ನಿಮ್ಮ ಗೆಳೆಯನ ಹೃದಯ ಖಂಡಿತ ನಿಮಗೆ ಸಿಗುವಂತಾಗಲಿ....
ಚೆಂದದ ಕವನ...
ಅಭಿನಂದನೆಗಳು.....

ಸಾಗರದಾಚೆಯ ಇಂಚರ said...

ಚಿತ್ರಾ,
''ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ''
ಎಂಬ ಪದ್ಯ ನೆನಪಾಯಿತು ನಿಮ್ಮ ಹ್ರದಯದ ಹುಡುಕಾಟ ಓದಿದಾಗ
ಸುಂದರ ಕವನ

ಬಸವರಾಜ said...

ಕಳೆದು ಹೋಗಿದೆ ಹೃದಯ
ಹುಡುಕಿ ಕೊಡುವೆಯಾ ಗೆಳೆಯಾ?
--
ಮೇಲಿನ ಸಾಲು ಇಷ್ಟವಾಯ್ತು.
ನಿಮ್ಮ ಹೃದಯ ಸಿಗಲಿ ನಿಮಗೆ.
ಬರೀತಿರಿ :-)

Anonymous said...

ಚಿತ್ರ,
ನಿಮ್ಮ ಕಳೆದುಹೋದ ಹೃದಯ, ನಿಮ್ಮ ಗೆಳೆಯನ ಹತ್ತಿರ ಇದ್ದರೆ, ಅವರ ಹೃದಯ ನಿಮಗೆ ಖಂಡಿತ ಸಿಗುತ್ತದೆ ಬಿಡಿ...
ಕವನ ತುಂಬಾ ಚೆನ್ನಾಗಿದೆ....
ಕಳೆದು ಹೋದ ಹೃದಯ, ಹೃದಯ ಮುಟ್ಟುವಂತಿದೆ... ಅಭಿನಂದನೆ...

ಸುಧೇಶ್ ಶೆಟ್ಟಿ said...

Chitra avare...

Aparoopakke kavana barediddeera.... nimma kavanagalannu hechchaagi oDiDa nenapilla...

E kavana chennagide....

Kaleduhodaddu sikkare namage thilisi... :)

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾ...

ವಾಹ್...!
ಈ ಕವನ ಓದಿದ ಗೆಳೆಯ ಓಡೋಡಿ ಬಂದು..
ತನ್ನ ಹೃದಯ ಕೊಟ್ಟು ಹೋಗುತ್ತಾನೆ...!

ಕವಿತೆಯ ಪ್ರತಿಶಬ್ಧ,...
ಭಾವ.. ಇಷ್ಟವಾಯಿತು...

ಚಂದದ ಕವನಕ್ಕೆ ಅಭಿನಂದನೆಗಳು...

Guru's world said...

ಚಂದದ ಕವನಕ್ಕೆ ಧನ್ಯವಾದಗಳು ,,, ತುಂಬ ಚೆನ್ನಾಗಿ ಇದೆ

Raghu said...

ಚಿತ್ರಾ,
ಚೆನ್ನಾಗಿ ಬರೆದಿದ್ದೀರಿ. ಮೊದಲ ಸಾಲು ತುಂಬಾ ಆಗಿ ಇತ್ತು. 'ಇಷ್ಟವಾದದನ್ನ ಕಷ್ಟಪಟ್ಟಾದರೂ ಪಡಿಬೇಕಂತೆ' ಎನ್ನುದನ್ನ ಕೇಳಿದ್ದೀನಿ. ನಿಮ್ಮ ಕವಿತೆನಲ್ಲಿ ಅದರ humbleness ನೋಡಿದೆ. ಸೂಪರ್!.
ನಿಮ್ಮ ಕೆವಿತೆಗೆ ನಾನು ಬರೆದಿರುವ ಒಂದು ಕವಿತೆಯಾ ಮೊದಲ ಸಾಲು dedicate ಮಾಡ್ತೀನಿ.
'ಬದುಕಿನ ದಾರಿಯಲ್ಲಿ ನೆನಪುಗಳ ಮಾತಿನಲ್ಲಿ
ಕಳೆಯುತಿದೆ ದಿನವು ಬರೀ ಹುಡುಕಾಟದಲ್ಲಿ'...
ನಿಮ್ಮವ ,
ರಾಘು.

ಚಿತ್ರಾ said...

ಸವಿಗನಸು , ಸಾಗರದಾಚೆಯ ಗುರು, ಬಸವರಾಜ್ ,
ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು . ನಿಮ್ಮ ಪ್ರೋತ್ಸಾಹ ಹೀಗೆ ಇರಲಿ !

ಚಿತ್ರಾ said...

ನಿಮ್ಮೂರ ಹುಡುಗಿ,
ನಿಮ್ಮ ಹೆಸರು ಗೊತ್ತಾಗಲಿಲ್ಲ!
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಹೀಗೆ ಬರುತ್ತಿರಿ !

ಚಿತ್ರಾ said...

ಸುಧೇಶ್,
ಕೆಲವು ಕವನಗಳಿವೆ ನನ್ನ ಬ್ಲಾಗಿನ ಕಂತೆಯಲ್ಲಿ , ಬಹುಶಃ ನೀವು ಓದಿರಲಿಕ್ಕಿಲ್ಲ. ಒಂದಾನೊಂದು ಕಾಲದಲ್ಲಿ , ಕವನಗಳನ್ನೂ ಕೊರೆಯುವುದು ನನ್ನ ಪ್ರೀತಿಯ ಹವ್ಯಾಸವಾಗಿತ್ತು. ಆದರೆ ಅವುಗಳನ್ನು ಅಷ್ಟಾಗಿ ಜೋಪಾನ ಮಾಡಿರದ ಕಾರಣ ಕಳೆದುಹೋಗಿವೆ . ಈಗ ಬರವಣಿಗೆಯ ಹಾದಿ ಬದಲಾಗಿವೆ ಅಷ್ಟೇ .
ಮೆಚ್ಚಿದ್ದಕ್ಕೆ ಧನ್ಯವಾದಗಳು.

ಚಿತ್ರಾ said...

ಥ್ಯಾಂಕ್ಯು ಪ್ರಕಾಶಣ್ಣಾ,
ನನ್ನ ಪ್ರತಿ ಬರಹಕ್ಕೂ ಬೆನ್ನು ತಟ್ಟುವವರು ನೀವು . ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ .

ಚಿತ್ರಾ said...

ಧನ್ಯವಾದಗಳು ಗುರು, ( guru's world )
ನಿಮ್ಮ ಬರಹಗಳುಸಹ ಬಹಳ ಕುತೂಹಲಕಾರಿಯಾಗಿರುತ್ತವೆ . ಒಳ್ಳೊಳ್ಳೆ ಮಾಹಿತಿಗಳನ್ನು ಸಂಗ್ರಹಿಸಿ ನಮ್ಮ್ಮೊಂದಿಗೆ ಹಂಚಿಕೊಳ್ಳುತ್ತೀರಿ ನೀವು .

ಚಿತ್ರಾ said...

ರಾಘು,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ನಿಮ್ಮ ಕವಿತೆಯ ಅರ್ಥಪೂರ್ಣ ಸಾಲುಗಳನ್ನು dedicate ಮಾಡಿದ್ದಕ್ಕೆ ಅತ್ಯಂತ ಆಭಾರಿಯಾಗಿದ್ದೇನೆ. ನಿಮ್ಮ ಪ್ರೀತಿ, ಪ್ರೋತ್ಸಾಹಗಳು ಹೀಗೆಯೇ ಇರಲಿ.

ತೇಜಸ್ವಿನಿ ಹೆಗಡೆ- said...

ಚಿತ್ರಕ್ಕ,

ಅಪರೂಪಕ್ಕೆ ಒಂದು ಸುಂದರ ಕವನ ಕೊಟ್ಟಿದ್ದೆ. ಚೊಲೋ ಇದ್ದು. ಎಂತಕ್ಕೆ ಸುಮ್ನೆ ಹುಡುಕಿ ಕಷ್ಟ ಪಡ್ತೆ? ಮಹೇಶಣ್ಣನ ಹತ್ರ ಇದ್ದು ಬಿಡು. ಕೇಳಿ ಬೇಕಿದ್ರೆ ಕನ್‌ಫರ್ಮ್ ಮಾಡ್ಕೊ :)

damu said...

ಚೆನ್ನಾಗಿದೆ. ಒಂದು ಹೃದಯ ಮತ್ತೊಂದು ಹೃದಯವನ್ನು ಹುಡುಕಾಡುತ್ತಿದೆ..
ಮಧುರ ಪ್ರೀತಿಯ ಭಾವನೆಗಳೇ ಹೀಗೆ.

shivu said...

ಚಿತ್ರ ಮೇಡಮ್,

ಹೃದಯ ಕಳೆದುಹೋಗುವ ಸಂಗತಿ ಹಳೆಯದು. ಅದ್ರೆ ಅದು ಎಲ್ಲೆಲ್ಲಿ ಕಳೆದುಹೋಗಿರಬಹುದು ಅನ್ನುವ ನಿಮ್ಮ ಕಲ್ಪನೆ ಹೊಸತು. ಅದು ಸತ್ಯವೂ ಕೂಡ ಅನ್ನಿಸದಿರದು. ತುಂಬಾ ದಿನಗಳ ನಂತರ ಒಂದು ಸೊಗಸಾದ ಸುಂದರ ಕವನವನ್ನು ಬರೆದಿದ್ದೀರಿ...ಧನ್ಯವಾದಗಳು.

ಜಲನಯನ said...

ಚಿತ್ರಾ,
ಬಲ್ಲೆಯಾ ಯಾಕೋ ಏನೋ ಹುಡುಕುತಿದೆ ಮನ
ತಿಳಿಯದಾಗಿದೆ ಎಲ್ಲೋ ಏನೋ ಕಳೆದುಹೋಗಿದೆ
ನನ್ನದೆಂದು ನಿನ್ನದಾಗಿರೆ
ನಿನ್ನ ದೆಂದು ನನ್ನದಾಗಲು ಬಿಡು
ಕಳೆದು ಹೋಗಿದೆ ಏನೋ
ಹುಡುಕಿಕೊಡು ಇಲ್ಲ ನೀನೂ ಕಳೆದು ಬಿಡು
..ನಿಮ್ಮ ಅಭೂತ ಭಾವಮಂಥನಕೆ ನನ್ನ
ಕವನ ರೂಪೀ ಪ್ರತಿಕ್ರಿಯೆ...

Arun said...

Andru vamme sahityada kade gamana kotti annu!!!
chanda Bardidi !!

Alla ! Hraday Hangyang Kalakondi ?
Jappasi itkobardenu?
irli een kalaji madbyada, hudkunu
sikke sigatada elli hogtada !!

ಗೌತಮ್ ಹೆಗಡೆ said...

mast iddu:)

ದಿನಕರ ಮೊಗೇರ.. said...

ಚಿತ್ರ ಮೇಡಂ,
ಕವನ ಸಕತ್ತಾಗಿದೆ, ಧಮನಿ ಧಮನಿ ಗಳಲ್ಲಿ ಗೆಳೆಯನ ಪ್ರೀತಿ ಸ್ಪುರಿಸುತ್ತಿವೆ..... ಬೇಗ ಬೇಗ ಸಿಗಲಿ ನಿಮ್ಮ ಹ್ರದಯ ..........

ಚಿತ್ರಾ said...

ತೇಜೂ ,
ಮೆಚ್ಚಿದ್ದಕ್ಕೆ ಥ್ಯಾಂಕ್ಸ್ ! ಅವರಿಗೆ ಎಲ್ಲಿ ಇಟ್ಟಿದ್ರು ಹೇಳೇ ಮರೆತೇ ಹೋಯ್ದು !!! ಹಾ ಹಾ ಹಾ

ಚಿತ್ರಾ said...

ದಾಮು ,
ಮೆಚ್ಚಿದ್ದಕ್ಕೆ ಧನ್ಯವಾದಗಳು.

ಗೌತಮ್ ,
ಥ್ಯಾಂಕ್ಸ್ !

ಚಿತ್ರಾ said...

ಶಿವೂ,
ಕವನ ಬರೆದು ಬಹುದಿನಗಳಾದವು , ಆದರೆ ಹುಡುಕುವ ನೆನಪಾಗಿದ್ದು ಈಗ !! ಕವನ ಇಷ್ಟ ಪಟ್ಟಿದ್ದಕ್ಕೆ ಥ್ಯಾಂಕ್ಸ್ !

ಚಿತ್ರಾ said...

ಅಜ್ಹಾದ್ ,
ನಿಮ್ಮ ಕಾವ್ಯಮಯ ಪ್ರತಿಕ್ರಿಯೆ , ಅದ್ಭುತವಾಗಿದೆ ! " ಕಳೆದು ಹೋಗಿದೆ ಏನೋ ಹುದುಕಿಕೊದು, ಇಲ್ಲ ನೀನೂ ಕಳೆದುಬಿಡು " ಮಧುರವಾದ ಸಾಲುಗಳು . ಧನ್ಯವಾದಗಳು.

ಚಿತ್ರಾ said...

ದೇಶಪಾಂಡೆ,
ಮೆಚ್ಚಿದ್ದಕ್ಕೆ ಥ್ಯಾಂಕ್ಸ್ ! ಜೋಪಾನಾ ಮಾಡೇ ಇಟ್ಟಿದ್ದೆರೀ, ಅಂದ್ರೂ ಹ್ಯಾಗೋ ಕಳೆದೆ ಹೋಯ್ತು !

ಚಿತ್ರಾ said...

ದಿನಕರ ,
ಕವನ ಮೆಚ್ಚಿದ್ದೀರಾ , ಪ್ರೋತ್ಸಾಹಿಸಿದ್ದೀರ , ತುಂಬಾ ಧನ್ಯವಾದಗಳು. ಹೀಗೆ ಬರುತ್ತಿರಿ !

ಸೀತಾರಾಮ. ಕೆ. said...

nice