May 12, 2010

ಚುಟುಕಗಳು

ಕ್ಷಮಿಸು

ಶ್ರಾವಣದ ಮಳೆಯಲ್ಲಿ

ಶಿಶಿರದ ಚಳಿಯಲ್ಲಿ

ನಿನ್ನ ತೋಳುಗಳಲ್ಲೇ ಕರಗುವ ಆಸೆ

ವೈಶಾಖದಲ್ಲಿ ಮಾತ್ರ

ನಿನ್ನಿಂದ ದೂರ ಸರಿಯುವ  ಬಯಕೆ

ಏಕೆಂದರೆ ,

ಆಗ ನಾ ತಾಳಲಾರದಷ್ಟು

ಸೆಖೆ !

----------------------------------------

ಪಾಪ !

ಸುಂದರೀ ,
ನಿನ್ನ ಮಿಂಚುನೋಟವನ್ನು
ಸ್ವಲ್ಪ ಇತ್ತ ತಿರುಗಿಸಿ ಕೃಪೆ ಮಾಡು
ಎಂದು ಹಲ್ಲು ಬಿಟ್ಟ ಗುಂಡನಿಗೆ ...

ಮಿಂಚು ಹೊಳೆದು,
ಸಿಡಿಲು ಬಡಿದು,
ಎಚ್ಚರ ತಪ್ಪಿತ್ತು !

-----------------------------------------

ವಿಪರ್ಯಾಸ !

ಮೊದಲು ...

ನೀ ನನ್ನ ಕನಸಲ್ಲಿ ಬಂದು

ಕಾಡುವಾಗ ,

ಬದುಕೆಷ್ಟು ಸುಂದರ ಎನಿಸಿತ್ತು !

ಈಗ ....

ನೀನು ಬದುಕಲ್ಲೇ ಬಂದು

ಕಾಡುವಾಗ ,

ಜೀವನವೇ ಸಾಕೆನಿಸಿತ್ತು !

21 comments:

sunaath said...

ವಾಹ್! ವಾಹ್!!

ಗೌತಮ್ ಹೆಗಡೆ said...

ನಂದೂ ಒಂದು ವಾಹ್ ವಾಹ್:):)

ಸೀತಾರಾಮ. ಕೆ. / SITARAM.K said...

ತು೦ಬಾ ಚೆನ್ನಾಗಿದೆ ಮುದನಗೆ ಹರಿಸುವ ಚುಟುಕುಗಳು.
ನ೦ದೂ ವಾಹ್! ವಾಹ್!! ವಾಹ್!!!
ಕ್ಯಾ ಬಾತ್! ಕ್ಯಾ ಭಾತ್!! ಕ್ಯಾ ಭಾತ್!!!
ಮಧ್ಯದ್ದು ಸುಪರ್!

ಮನದಾಳದಿಂದ said...

ವ್ವಾವ್!
ಕ್ಯಾ ಬಾತ್ ಹೈ!
ಆದರೆ,
ಶ್ರಾವಣದಲ್ಲಿ ಜೊತೆಯಾಗಿದ್ದು, ಶೆಖೆಯ ಕಾರಣದಿಂದ ವೈಶಾಕದಲ್ಲಿ ದೂರ ಇರುವುದು ಮೋಸ ಅಲ್ವಾ?
"ವಿಪರ್ಯಾಸ" ವಿಪರ್ಯಾಸವಾಗಿದೆ!
ಚಂದದ ಚುಟುಕುಗಳು.

ಸುಧೇಶ್ ಶೆಟ್ಟಿ said...

ಮೂರನೆಯದು ತು೦ಬ ಇಷ್ಟ ಆಯಿತು :) ನಗೆಹನಿ ಮತ್ತು ಚುಟುಕದ ನಡುವೆ ಇರುವ ವ್ಯತ್ಯಾಸ ಏನು?

ಈ ಬಾರಿ ಚುಟುಕ ಅನಿರೀಕ್ಷಿತವಾಗಿ ಬ೦ದು ಆಶ್ಚರ್ಯ ಹುಟ್ಟಿಸಿತು! ಅದೇ ರೀತಿ ಒ೦ದು ಕತೆ ಬರೆದು ನಮಗೆಲ್ಲ ಸರ್ಪ್ರೈಸ್ ಕೊಡಬಾರದೆನ್ರಿ???

Anonymous said...

Modala hani superb. :-)

ತೇಜಸ್ವಿನಿ ಹೆಗಡೆ said...

:D :D :D

PARAANJAPE K.N. said...

ತು೦ಬಾ ಚೆನ್ನಾಗಿದೆ

!! ಜ್ಞಾನಾರ್ಪಣಾಮಸ್ತು !! said...

ಚಿತ್ರಾ ,

ಕೊನೆಯದು ವಿಪರ್ಯಾಸವೇ ಸರಿ ಬಿಡಿ..
ಆದರೆ ಎಲ್ಲರಲ್ಲೂ ಹಾಗಲ್ಲ..

shivu.k said...

ಚಿತ್ರ ಮೇಡಮ್,

ಚುಟುಕಗಳು ತುಂಬಾ ಚೆನ್ನಾಗಿವೆ...ಇದೆಲ್ಲಾ ಅನುಭವದ ಮಾತಾ? ಏಕೆಂದರೆ ನನ್ನ ಅನುಭವವನ್ನು ನೆನಪಿಸಿದಿರಲ್ಲಾ...ಅಹಾ..ಅಹಾ..ಅಹ...[ತಮಾಷೆಗೆ]

Raghu said...

ಈಗ ನನ್ನ ವಾಹ್! ವಾಹ್! ಸರದಿ..
ನಿಮ್ಮವ,
ರಾಘು.

ಚಿತ್ರಾ said...

ಕಾಕಾ ,ಗೌತಮ್, ಸೀತಾರಾಂ , ರಾಘು ,

ನಿಮ್ಮ ' ವಾಹ್ ವಾಹ್ ' ಗೆ ನನ್ನ ಧನ್ಯವಾದಗಳು .

ಚಿತ್ರಾ said...

ಮನದಾಳದಿಂದ ,

ಏನು ಮಾಡೋದು , ಹಾಳು ಸೆಖೆ .. ಅನ್ಯಾಯ ಮಾಡಿಬಿಡತ್ತೆ !

ಚಿತ್ರಾ said...

ಸುಧೇಶ್,
ಉದ್ದ್ದಕ್ಕೆ ವಾಕ್ಯಗಳಲ್ಲಿ ಸೀದಾಸಾದಾ ಬರೆದರೆ ನಗೆಹನಿ , ಸ್ವಲ್ಪ ಅಲ್ಲಲ್ಲಿ ತುಂಡರಿಸಿ , ಸಾಲುಗಳಾಗಿಸಿ , ಪ್ರಾಸ ಬೆರೆಸಿದರೆ ಚುಟುಕ ಎನಿಸಬಹುದೇನೋ !
ಇದು ನನ್ನ ಅಭಿಪ್ರಾಯ ಅಷ್ಟೇ .
ಇನ್ನು , ಕಥೆ ... ಸುಮಾರು ಕಥೆಗಳನ್ನ ಬರೆದಿದೀನಲ್ರೀ? ಆದರೆ ನಿಮ್ಮಷ್ಟು ಚೆನ್ನಾಗಿ ಬರೆಯೋಕೆ ಬರಲ್ಲ ಅದಕ್ಕೆ ಧೈರ್ಯ ಮಾಡ್ತಾ ಇಲ್ಲ ! :)

ಚಿತ್ರಾ said...

ಪಂಚ ಲೈನ್ , ತೇಜೂ, ಪರಾಂಜಪೆ ,
ಥ್ಯಾಂಕ್ಸು !

ಚಿತ್ರಾ said...

ಗುರು, ( ಜ್ಞಾನಾರ್ಪಣಮಸ್ತು)
ನಿಮಗೆ ಹಾಗೆ ಆಗಿಲ್ಲ ಅಂದರೆ ಸಂತೋಷ ಬಿಡಿ !

ಚಿತ್ರಾ said...

ಶಿವೂ,
ನನ್ನ ಅನುಭವವಲ್ಲ ! ' ಕೆಲವಂ ಬಲ್ಲವರಿಂದ ತಿಳಿದು " ಅಂತಾರಲ್ಲ ಹಾಗೆ ಕೇಳಿ , ಗಮನಿಸಿ , ತಿಳಿದದ್ದು.
ಇನ್ನು , ಈ ಮೂರರಲ್ಲಿ ನಿಮ್ಮ ಅನುಭವ ಯಾವುದು ಅಂತ ಹೇಳ್ತೀರಾ? ಹಾ ಹಾ ಹಾ

ಸುಧೇಶ್ ಶೆಟ್ಟಿ said...

neevu kathe barediddu thumba kadime alva? neevu hechchaagi barediddu suthamutha neevu kandu kELiddu alve?

neevaagi imagine maadikondu baredha kathegaLa bagge naanu heLuttiruvudu :) eega hELi yaavaaga baritheera antha....?

naanu kathe barediddu thumba kadime... barE kaadambari ashte bareyodu naanu... story bareyodu andre nange bhaya :)

ಜಲನಯನ said...

ಚಿತ್ರಾ..ನಿಮ್ಮ ಬಹು ರಂಜಿತ ಗುಟುಕು..ಕಚಗುಳಿ ಇಟ್ಟಿತು...ಚುಟುಕು ಅಂದ್ರೆ,,,ಮ್.ಮ್.ಮ್ ಎನ್ನುವಂತೆ...ದೂರದ ಬೆಟ್ಟ ನುಣ್ಣಗೆ ಅನ್ನೋ ಹಾಗೆ ಕಡೆಯ ಚುಟುಕು ..ಇಷ್ಟ ಆಯ್ತು..

Chinmay said...

ಎರಡನೇಯ ಕವನ ತುಂಬಾ ಚೆನ್ನಗಿದೆ!
ನೀವು ತುಂಬಾ ಚೆನ್ನಾಗಿ ಬರಿತಿರಿ!

Badarinath Palavalli said...

ಕ್ಷಮಿಸು: ವೈಶಾಖ ಬಲು ಕೇಡಿ, ಪ್ರೇಮಿಗಳ ವೈರಿ! ಚುಟುಕು ನವಿರಾದ ಭಾವನೆಯ ಸಹಿಯಂತಿದೆ.

ಪಾಪ: ’ಹಲ್ಲು ಮಿಂಚಿನೊಲು ಪಾಪ ದಂತ ಭಗ್ನ’ ಹೇಗಿದೆ ಈ ಮುಂದಿನ ಸಾಲು?

ವಿಪರ್ಯಾಸ: ನಿಮ್ಮ ಚುಟುಕಿಗೆ ನನ್ನ ಸೇರ್ಪಡೆ:
ಮೊದಲು ನಕ್ಕಳು,
ಆ ನಗುವಿನ ಅಮಲಿಗೆ ಇಲ್ಲೊಂದು ಬಕರ ಬಲಿ!
ಮುಂದಿನದೆಲ್ಲ ಕನ್ನಡ ಚಿತ್ರಕಥೆ.
ಜೋಗ ಬತ್ತೀತು
ಬತ್ತಲಾರದು ಈಗ ಅವಳ ಅಳು

- ೩ ಚುಟುಕಗಳು ಇಷ್ಟವಾದವು.