ಪುಣೆಯಲ್ಲಿ ಓಡಾಡುವಾಗ ನಿಮ್ಮನ್ನು ಅಡಿಗಡಿಗೆ ವಿವಿಧ ರೀತಿಯ ಸೂಚನಾ ಫಲಕಗಳು ಸ್ವಾಗತಿಸುತ್ತವೆ. ಬಹುಶಃ ಇಲ್ಲಿನವರಿಗೆ ಫಲಕಗಳನ್ನು ಬರೆದು ಹಾಕುವುದು ತುಂಬಾ ಮೆಚ್ಚಿನ ಕೆಲಸವಿರಬೇಕು ಎಂದು ನನ್ನ ಭಾವನೆ .ಅದರಲ್ಲಿಯೂ ’ ಹಳೆ ಪುಣೆ" ಯ ಭಾಗಗಳಲ್ಲಂತೂ ಚಿತ್ರ ವಿಚಿತ್ರ ಬೋರ್ಡ್ ಗಳು ಕಣ್ಣಿಗೆ ಬೀಳುತ್ತವೆ. ಈ ಭಾಗದಲ್ಲಿನ ಹೆಚ್ಚಾಗಿ ಇರುವ ’ ಕೊಂಕಣಸ್ಥ ಬ್ರಾಹ್ಮಣರು’ ತಮ್ಮ ಶಿಸ್ತು ಹಾಗೂ ಮಿತವ್ಯಯಕ್ಕಾಗಿ ಪ್ರಸಿದ್ಧರು. ಅವರು ಶಿಸ್ತಿಗೋಸ್ಕರ ಆರಂಭಿಸಿದ ಫಲಕಗಳು ಕ್ರಮೇಣ ಎಲ್ಲರಲ್ಲೂ ಹರಡಿ ಪುಣೆಯ ಜನರ ತಮಾಷೆಯ ವಿಷಯವಾಗಿವೆ. ಕೆಲವು ಅಪಾರ್ಥ ಕೊಡುವಂಥ ಬೋರ್ಡ್ ಗಳಾದರೆ , ಕೆಲವು ವಿಚಿತ್ರಾರ್ಥದವು !
ಇಂಥ ಬೋರ್ಡ್ ಗಳ ಬಗ್ಗೆ ವೆಬ್ ಸೈಟ್ ಕೂಡ ಇದೆ.
ಇಲ್ಲಿ ಕೆಳಗೆ ಕೆಲವು ಬೋರ್ಡ್ ಗಳನ್ನು ಅದರ ಕನ್ನಡಾನುವಾದ ದೊಂದಿಗೆ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ನಕ್ಕು ಹಗುರಾಗುವಿರೆಂದು ಭಾವಿಸುವೆ .
ಇಂಥ ಬೋರ್ಡ್ ಗಳ ಬಗ್ಗೆ ವೆಬ್ ಸೈಟ್ ಕೂಡ ಇದೆ.
ಇಲ್ಲಿ ಕೆಳಗೆ ಕೆಲವು ಬೋರ್ಡ್ ಗಳನ್ನು ಅದರ ಕನ್ನಡಾನುವಾದ ದೊಂದಿಗೆ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ನಕ್ಕು ಹಗುರಾಗುವಿರೆಂದು ಭಾವಿಸುವೆ .
ಬಿಲ್ಡಿಂಗ್ ಒಂದರಲ್ಲಿ ಕಂಡಿದ್ದು !
" ನಾಲ್ಕು ಹೆಜ್ಜೆ ಮುಂದಿರುವ ಏಣಿ ( ಮಹಡಿ ಮೆಟ್ಟಿಲು ) ಯ ಮೂವತ್ತು ಮೆಟ್ಟಿಲೇರಿದರೆ ಶ್ರೀ. ಭಟ್ ಸಿಕ್ಕುತ್ತಾರೆ ! "
ದೇವಸ್ಥಾನವೊಂದರ ಬದಿಯಲ್ಲಿ ಕಂಡ ಫಲಕ
" ಸ್ತ್ರೀಯರಿಗಾಗಿ
ಕ್ಯೂ ಹಚ್ಚಿರಿ "
ಯಾರನ್ನೂ ಬಿಡದ ಜನರ ಕೀಟಲೆ ಬುದ್ಧಿಗೆ ಒಂದು ಉದಾಹರಣೆ .
" ಭವ್ಯ ೧೦೦ ಮೀ. ಮೋಟೋ ಕ್ರಾಸ್ ಸ್ಪರ್ಧೆ !
ಆಯೋಜಕರು : ಮಹಾನಗರ ಪಾಲಿಕೆ , ಪುಣೆ "
ಹೇಗಿದೆ?
" ಅಪರಿಚಿತ ವಸ್ತುಗಳನ್ನು ಮುಟ್ಟಬೇಡಿ . ( ವ್ಯಕ್ತಿಗಳನ್ನೂ ಸಹ ) "
ಇನ್ನು ಇದಂತೂ ಅತ್ಯದ್ಭುತ !!! ಯಾರೋ ಮಿತವ್ಯಯಿಗಳು ಬರೆಸಿದ್ದಿರಬೇಕು !
" ಇಂದಿನ ತಾಜಾ ಪದಾರ್ಥಗಳು
ಭಜಿ ೬ ರೂ
ಮಿಸಳ್
ಮೂಲವ್ಯಾಧಿಯ ಔಷಧಿ ಸಿಕ್ಕುತ್ತದೆ "
ಇನ್ನೂ ಬೇಕಷ್ಟಿವೆ , ಮತ್ತೊಮ್ಮೆ ಹಾಕುತ್ತೇನೆ. ಅಲ್ಲಿಯವೆರೆಗೆ ನಗುತ್ತಿರಿ !
20 comments:
ಚಿತ್ರಾ ..
" ಮಸ್ತ್" ಆಹೆ...
ಎಲ್ಲಿಂದ ತರುತ್ತೀರಿ ಇದನ್ನೆಲ್ಲ....?
"ವ್ಯಕ್ತಿಗಳನ್ನೂ ಸಹ ಮುಟ್ಟಬಾರದು..."
ಹ್ಹಾ..ಹ್ಹೋ...ಹ್ಹಾ...!!
ನಕ್ಕು... ನಕ್ಕು ಸುಸ್ತಾದೆ...!!
ಹ್ಹೆ ಹೆಹ್ಹೆ...ಸಖತ್ ಮಜವಾಗಿದೆ...ಮುಂದಿನ ಸರ್ತಿ ಇದನ್ನ ನಮ್ಮ ಬ್ಲಾಗಿಗೆ ಕಳಿಸಿ.ನೀವೇ ಹಾಕಿದರೂ ಪರ್ವಾಗಿಲ್ಲ. ಆದರೆ ವಿಚಿತ್ರ ಚಿತ್ರಗಳಿಗೇ ಬ್ಲಾಗಿರುವುದರಿಂದ ಹಾಗೆ ಹೇಳಿದೆ ಅಷ್ಟೆ.
ಚಿತ್ರಾ ಮೇಡಮ್,
ನಿಮ್ಮ ಬೋರ್ಡ್ ಪುರಾಣವಂತೂ ಸಕ್ಕತ್ತಾಗಿದೆ...
ನಾನು ಮತ್ತು ನನ್ನ ಶ್ರೀಮತಿ ಇಬ್ಬರು ನೋಡಿದೆವು. ನಗು ತಡೆಯಲಾಗಲಿಲ್ಲ....ಇನ್ನಷ್ಟು ಹಾಕಲಿಕ್ಕೆ ಹೇಳಿ ಎಂದು ನನ್ನಾಕೆ ಹೇಳಿದ್ದಾಳೆ....
ಅಬ್ಬಾ.... ನಕ್ಕು ನಗಿಸಿತು. ಇನ್ನು ಕೆಲವು ದಿನಗಳವರೆಗೆ ಇವು ನೆನಪಾಗಿ ನಗಿಸುತ್ತಲೇ ಇರುತ್ತವೆ.
ಇದೇ ರೀತಿ ಪುಣೆಯ ವಿಶೇಷಗಳನ್ನು ಹ೦ಚಿಕೊಳ್ಳುತ್ತಿರಿ ಚಿತ್ರಾ ಅವರೇ...
- ಸುಧೇಶ್
ರಸ್ತೆಯ ಬಗ್ಗೆ ಮಹಾನಗರ ಪಾಲಿಕೆಯನ್ನು ಲೇವಡಿ ಮಾಡಿರುವ ಜನರ ಚಾಣಾಕ್ಷ್ಯತನಕ್ಕೆ ಹ್ಯಾಟ್ಸ್ ಆಫ್. ದೇವಸ್ಥಾನದ ಫಲಕ ದೇವಸ್ಥಾನದ ಭಟ್ಟರೇ ಬರೆಸಿದ್ದಾ ಎನ್ನುವ ಅನುಮಾನವಿದೆ. ಚಿತ್ರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಹಾಗು ಕನ್ನಡ ಅನುವಾದವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು.. ಇಲ್ಲದೇ ಹೋಗಿದ್ದರೆ ಒಂದಕ್ಷರವೂ ಅರ್ಥವಾಗುತ್ತಿರಲಿಲ್ಲ,ನಕ್ಕು ನಕ್ಕು ಸುಸ್ತಾದೆ.
ಕೊನೆಯದಂತೂ ಅದ್ಭುತವಾಗಿದೆ..ಮಿತವ್ಯಯದ ಪರಾಕಷ್ಠೆ..:) ಮತ್ತಷ್ಟು ಬೋರ್ಡಗಳ ನಿರೀಕ್ಷೆಯಲ್ಲಿದ್ದಿ....:)
ಚಿತ್ರಾ,
Beautiful! ಯೇ ದಿಲ್ ಮಾಂಗೇ ಮೋರ್!
ಪ್ರಕಾಶ,
ಸೂಚನೆ ನೆನಪಿಡುವಂಥದ್ದೇಯ ಅಲ್ಲದಾ?
ಲಕ್ಷ್ಮಿ ,
ನಿಮ್ಮ ಬ್ಲಾಗಿನಲ್ಲಿನ ಬೋರ್ಡ್ ಗಳೂ ಸಹ ಚೆನಾಗಿವೆ.ಕನ್ನಡದಲ್ಲಿ ಹಾಗೆ ನೋಡಿದರೆ ಇಂಥಾ ಬೋರ್ಡ್ ಗಳು ಸ್ವಲ್ಪ ಕಮ್ಮಿ ಅಲ್ಲವೆ?
ಶಿವು,
ಧನ್ಯವಾದಗಳು. ನಿಮ್ಮಿಬ್ಬರದೂ ’ ಫೆವಿಕಾಲ್ ’ ಜೋಡಿ ಅನ್ಸತ್ತೆ. ಇಬ್ರೂ ಯಾವಾಗ್ಲೂ ಜೊತೇಲೇ ಬ್ಲಾಗ್ ನೋಡ್ತೀರಿ ಅಲ್ವಾ? ಜೊತೆಯಾಗಿ , ನಗು ನಗುತ್ತಾ ಹೀಗೇ ಇರಿ ! ನಿಮ್ಮನೆಯವರಿಗೆ ಹೇಳಿ ಒಳ್ಳೆ ಕಲೆಕ್ಷನ್ ಸಿಕ್ಕ ಕೂಡಲೇ ಹಾಕ್ತೀನಿ ಅಂತ !
ಸುಧೇಶ್ ,
ನಕ್ಕಿದ್ದಕ್ಕೆ ಧನ್ಯವಾದಗಳು . ಖಂಡಿತಾ ಹಂಚಿಕೊಳ್ಳುತ್ತೇನೆ !
ಮನಸ್ವಿ,
ದೇವಸ್ಥಾನದ ಫಲಕದ ಬಗ್ಗೆ ಭಟ್ಟರನ್ನೇ ಕೇಳಬೇಕು. ನಿಮ್ಮೂರ ಭಟ್ಟರಿಗೆ ತೋರಿಸಿಬಿಡಬೇಡಿ ಮತ್ತೆ !!!
ತೇಜೂ ,ಸುನಾಥ್ ಕಾಕಾ
ಇನ್ನಷ್ಟನ್ನ ಹುಡುಕ್ತಾ ಇದ್ದೀನಿ .ಸಿಕ್ಕ ಕೂಡಲೇ ಹಾಕುತ್ತೇನೆ !
ಹ್ಹ ಹ್ಹ..ಒಳ್ಳೇ ಮಜಾ ಇತ್ತು.. ಇನ್ನಷ್ಟು ಬರಲಿ..
ದೇವಸ್ಥಾನದ ಮುಂದೆ ಜನವೇ ಇಲ್ಲೆ!
ಚಿತ್ರ,
ನನ್ನ ಮತ್ತು ನನ್ನಾಕೆ ಅಭಿರುಚಿ ಬೇರೆ ಬೇರೆ ಇದ್ದರೂ ಸಂತೋಷ ಪಡಲಿಕ್ಕೆ ಒಟ್ಟಿಗೆ ಇರುತ್ತೇವೆ...ಅವಳಿಗೆ ಸಂತೋಷವಾಗುವ ವಿಚಾರ ನನಗೆ ಹೇಳದೆ ಅವಳಿಗೆ ನೆಮ್ಮದಿ ಇಲ್ಲ ನನಗೂ ಆಷ್ಟೇ...ಅದ್ರೆ ಒಂದು ವಿಚಾರ ಇಬ್ಬರೂ ತಮ್ಮ ತಮ್ಮ ಕೆಲಸದಲ್ಲಿ ಖಂಡಿತ ಬ್ಯುಸಿಯಾಗಿರುತ್ತೇವೆ...ನಿಮ್ಮ ಮಾತನ್ನು ಹೇಮಾಶ್ರಿಗೆ ಹೇಳುತ್ತೇನೆ....
ತುಂಬಾ ಚೆನ್ನಾಗಿದೆ ಥ್ಯಾಂಕ್ಸ
ಗಿರಿ
ವಿಕಾಸ್,
ಮೆಚ್ಚಿದ್ದಕ್ಕೆ ಧನ್ಯವಾದಗಳು . ಬರುತ್ತಿರಿ
ಹರೀಶ,
ಬೋರ್ಡ್ ನೋಡಿ ಪರಿಸ್ಥಿತಿ ಬದಲಾಗಿರಲಕ್ಕು ! :)
ಶಿವು ,
ಹಾಗೇ ಇರಬೇಕು ಅಲ್ಲವಾ? ಪರಸ್ಪರ ಖುಷಿ ಹಂಚಿಕೊಳ್ಳುತ್ತಾ . ದೇವರು ನಿಮ್ಮಿಬ್ಬರನ್ನು ಹೀಗೇ ಖುಷಿ ಖುಷಿಯಾಗಿಟ್ಟಿರಲಿ ಎಂದು ಹಾರೈಸುವೆ.
ಗಿರಿ,
ಧನ್ಯವಾದಗಳು. ಬರುತ್ತಿರಿ.
ಚಿತ್ರಾ ಮೇಡಮ್,
ಹೊಸ ಕವನವನ್ನು ಬ್ಲಾಗಿಗೆ ಹಾಕಿದ್ದೇನೆ.....ನೋಡಿ.....ನಿಮಗೆ ಹೇಗನ್ನಿಸುತ್ತದೆ ಪ್ರತಿಕ್ರಿಯಿಸಿ.....ಕವನದ ವಿಚಾರದಲ್ಲಿ ನಾನು ಹೊಸಬ....ನಿಮ್ಮ ಪ್ರತಿಕ್ರಿಯೆ ನನ್ನ ಮುಂದಿನ ಬರವಣಿಗೆಗೆ ಸ್ಪೂರ್ತಿ,....
http://chaayakannadi.blogspot.com/
ಪ್ರೀತಿಯಿರಲಿ....
ಶಿವು....
ಚಿತ್ರ ಮೇಡಂ,
ಚಿತ್ರಗಳ ಸಂಗ್ರಹ ಸೊಗಸಾಗಿವೆ, ಇಷ್ಟವಾಯ್ತು.
-ರಾಜೇಶ್ ಮಂಜುನಾಥ್
ಹೇ ಹೇ ಭಾಳ ಮಜ ಬಂತು ಪುಣೆ ಬೋರ್ಡ್ ಗಳನ್ನ ನೋಡಿ...
ಹೆಂಗಸರಿಗಾಗಿ ಕ್ಯೂ ....!?
ಅದೂ ದೇಗುಲದಲ್ಲಿ...!?
ಶಿವ...ಶಿವಾ...
ಅಶೋಕ ಉಚ್ಚಂಗಿ
http://mysoremallige01.blogspot.com/
ರಾಜೇಶ್, ಉಮಿ ,
ಧನ್ಯವಾದಗಳು !ಹೀಗೆ ಭೇಟಿ ಕೊಡುತ್ತಿರಿ.
ಅಶೋಕ್,
ಎಲ್ಲಾ ಕಲಿಗಾಲ ಸ್ವಾಮಿ !
ಧನ್ಯವಾದಗಳು . ಬರುತ್ತಿರಿ
ಮೂಲವ್ಯಾಧಿಯ ಔಷಧಿ. ಹಹಹಾ
ನಗು ತದ್ಯೋಕ್ಕೆ ಆಗ್ತಾ ಇಲ್ಲ ನಂಗೆ
ಕಟ್ಟೆ ಶಂಕ್ರ
ಶಂಕರರೇ,
ಕಟ್ಟೆಯಿಂದ ಹೊಳೆಗಿಳಿದಿದ್ದೀರಾ . ಸ್ವಾಗತ .
ನಕ್ಕಿದ್ದಕ್ಕೆ ಧನ್ಯವಾದಗಳು.
ಹೀಗೇ ಬರುತ್ತಾ ಇರಿ . ಇನ್ನಷ್ಟು ಔಷಧಿಗಳನ್ನು ಕೊಡೋಣ.
ನಗೋದಕ್ಕೆ ಸ್ವಾಮೀ.
Post a Comment