February 28, 2009
ನಂಗೀಗ ಹುಟ್ಟುಹಬ್ಬ !
ನಿಮಗೆಲ್ಲ ನನ್ನ ನಮಸ್ಕಾರ ! ಎಲ್ಲರೂ ಚೆನಾಗಿದೀರಾ ತಾನೆ? ಏನಾಯ್ತು ? ಯಾರೂ ಅಂತ ಕೇಳಿದ್ರಾ? ಅಯ್ಯೋ ರಾಮಾ ಗುರುತು ಸಿಗ್ಲಿಲ್ವಾ?ನಾನೇರೀ। ಸ್ವಲ್ಪ ಮೇಕಪ್ ಮಾಡ್ಕೊಂಡು ಹೊಸ ಅಂಗಿ ಹಾಕ್ಕೊಂಡು ಬಂದಿದೀನಿ ಅಷ್ಟೇ.ಮತ್ತೆ ನಾಳೆ ನನ್ನ ಹುಟ್ಟು ಹಬ್ಬ ಅಲ್ವ, ಅದಕ್ಕೆ ನಿಮ್ಮನ್ನೆಲ್ಲ ಕರೆಯೋಣಾ ಅಂತ ನಾನೇ ಬಂದುಬಿಟ್ಟೆ. ಮಜಾ ಏನು ಗೊತ್ತಾ? ನನ್ನ ನಿಜವಾದ ಹುಟ್ಟುಹಬ್ಬ ೨೯ ಕ್ಕಂತೆ. ಆದರೆ ಫೆಬ್ರುವರಿಯಲ್ಲಿ ೨೯ನೇ ತಾರೀಖು ಪ್ರತಿವರ್ಷ ಎಲ್ಲಿ ಬರತ್ತೆ? ಅದಕ್ಕೆ ೨೮ ಕ್ಕೇ ಮಾಡ್ತಿರೋದು. ಈ ಅಮ್ಮಂಗೆ ಒಂಚೂರು ಬುದ್ಧಿ ಇಲ್ಲಾ. ನಾಕು ವರ್ಷಕ್ಕೊಂದ್ಸಲ ಬರೊ ದಿನಾ ತೊಗೊಂಡು ಬಂದ್ಲು ನನ್ನ ! ಅದಕ್ಕೇ ನಂಗೆ ಅವಳ ಮೇಲೆ ಸ್ವಲ್ಪ ಕೋಪ. ಆದರೆ ಅವಳು ಅಂತಾಳೆ , ನಾನು ಸ್ಪೆಶಲ್ ಆಗಿದ್ದಕ್ಕೆ ಸ್ಪೆಶಲ್ ತಾರೀಕಂತೆ ನಂಗೆ ! ಇರ ಬಹುದು ಅಂತಾ ಚೂರು ಸಮಾಧಾನ ಮಾಡ್ಕೋತೀನಿ.
ಅಂದ ಹಾಗೇ , ನನ್ನ ಹುಟ್ಟಿನ ಕಥೆ ಹೇಳಲಾ ನಿಮಗೆ?
ಅಮೇರಿಕಾದಲ್ಲಿರುವ ನನ್ನ ಅತ್ತೆ, ಅಮ್ಮಂಗೆ ’ ಕೆಂಡ ಸಂಪಿಗೆ’ ನೋಡು ಚೆನ್ನಾಗಿರತ್ತೆ ಅಂತ ಹೇಳಿದಳಂತೆ. ಅಮ್ಮ ಕೆಂಡ ಸಂಪಿಗೆ ನ ಓದ್ತಾ ಓದ್ತಾ ಒಂದಿನ ’ ಶಾಂತಲಾ ’ ಚಿಕ್ಕಮ್ಮ ನ ’ ನೆನಪು -ಕನಸು ’ ನೋಡಿದ್ಲಂತೆ. ಮುದ್ದು ಮುದ್ದಾಗಿರೊ ನೆನಪು -ಕನಸನ್ನ ನೋಡಿ ಅಮ್ಮಂಗೂ ಆಸೆಯಾಯ್ತಂತೆ.ಆದರೆ ಹೇಗೋ -ಏನೋ ಅಂತ ಅನುಮಾನಿಸ್ತಿದ್ದಾಗ, ಶಾಂತಲಾ ಚಿಕ್ಕಮ್ಮನ ಪ್ರೋತ್ಸಾಹದಿಂದಾಗಿ ಅಂತೂ ಇಂತೂ ಧೈರ್ಯ ಮಾಡಿ ನನ್ನ ಕರ್ಕೊಂಡು ಬಂದಳಂತೆ ! ಈಗ ನೋಡಿ, ನಂಗೆ ಇಲ್ಲಿ ಎಷ್ಟೆಲ್ಲಾ ಫ್ರೆಂಡ್ಸ್ ಇದಾರೆ. ಎಲ್ಲಾರೂ ಒಬ್ಬರಿಗಿಂತ ಒಬ್ಬರು ಚೆನ್ನಾಗಿದ್ದಾರೆ.ದೊಡ್ಡೋರೆಲ್ಲ ಬೆನ್ನು ತಟ್ಟಿ ಉತ್ಸಾಹ ತುಂಬ್ತಾರೆ! ನಂಗಂತೂ ತುಂಬಾ ಖುಶಿಯಾಗಿದೇಪ್ಪಾ .
ನನ್ನ ಇನ್ನೂ ಚೆಂದವಾಗಿ ಅಲಂಕರಿಸಬೇಕೂ ಅಂತ ಅಮ್ಮಂಗೆ ಆಸೆ. ಈ ವರ್ಷ ಏನು ಮಾಡ್ತಾಳೆ ಅಂತ ನೋಡ್ಬೇಕು ! ನಾನೂ ಕಾಯ್ತಾ ಇದೀನಿ.
ಅಯ್ಯೋ , ಮಾತಾಡ್ತಾ ಮಾತಾಡ್ತಾ ಹೊತ್ತು ಹೋಗಿದ್ದೇ ಗೊತ್ತಾಗ್ಲಿಲ್ಲ ! ಅಮ್ಮ ಕರೀತಾ ಇದಾಳೆ . ಬರ್ತೀನಿ. ಮತ್ತೆ , ನೀವೆಲ್ಲ ತಪ್ಪದೇ ಬರ್ತೀರಲ್ವಾ? ಗಿಫ್ಟ್ ನಾ ಅಮ್ಮನ ಎದುರು ಕೊಡ್ಬೇಡಿ, ಬಯ್ತಾಳೆ. ಬರಲಾ?
----------------------------------------------------------------------------
ರಾಮಾ ರಾಮಾ , ಎಷ್ಟು ಮಾತಾಡ್ತಾಳೆ ಇವಳು. ನಿಮ್ಮ ತಲೆ ತಿಂದಿಲ್ಲ ತಾನೆ? ಅವಳಿಗೆ ನಾನು ಹೇಳಿದ್ದನ್ನೆಲ್ಲ ನಿಮ್ಮ ಎದುರು ರಿಪೀಟ್ ಮಾಡಿರ್ತಾಳೆ . ನಂಗೊತ್ತು.
ಚಿಕ್ಕವಳು , ಹುಟ್ಟು ಹಬ್ಬ ಅಂತ ಸ್ವಲ್ಪ ಎಕ್ಸೈಟ್ ಆಗಿದಾಳೆ. ತಪ್ಪು ತಿಳ್ಕೋಬೇಡಿ ಪ್ಲೀಸ್ !
ಕರ್ದಿದಾಳಲ್ವಾ ಫಂಕ್ಷನ್ ಗೆ? ತಪ್ಪದೇ ಬನ್ನಿ . ನಾವು ಕಾಯ್ತಿರ್ತೀವಿ . ಬರಲಾ?
Subscribe to:
Post Comments (Atom)
24 comments:
ಹೇ.. ಹುತ್ತಿದ್ ಹಬ್ಬದ್ ಚುಭಾಚಯಾ...
ಚಿತ್ರಾ..
ತುಂಬಾ ಖುಷಿಯಾಯಿತು..
ನಾನು ಇಷ್ಟ ಪಡುವ ಕೆಲವೇ ಬ್ಲಾಗ್ ಗಳಲ್ಲಿ ಇದೂ ಒಂದು..
ವೈವಿದ್ಯವಿದೆ..
ಹೊಸತನವಿರುತ್ತದೆ..
ಬರಹಗಳು ಆಪ್ತವಾಗಿರುತ್ತದೆ..
ಇಷ್ಟು ಸಾಕಲ್ಲ ಇಷ್ಟ ಪಡಲಿಕ್ಕೆ...
ಗಿಫ್ಟ್ ಏನು ಕೊಡಲಿ ಮರಿ..
ಗೊತ್ತಾಗುತ್ತಿಲ್ಲ..
ಹೀಗೆ ಎಲ್ಲರನ್ನೂ ಮೆಚ್ಚಿಸುತ್ತ..
ನಗು ನಗುತ್ತಲಿರು.. ಕಂದಾ...
ಪುಟ್ಟಿಗೆ ಶುಭಾಶಯಗಳು...
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಹುಟ್ಟಿದ್ದು ಫೆಬ್ರುಅರಿ ೨೯ ಕ್ಕೆ.. ಇನ್ನೂ ಸುಮಾರ್ ಜನರ ಲಿಸ್ಟ್ ಇದ್ದು ಇಲ್ಲಿ..
Happy birthday to you(r blog)!
ಹಲೋ ಚಿತ್ರಾಮರಿ,
ಆರಾಮಿದ್ಯಾ? ನೀ ದಿನೇ ದಿನೇ ರಾಶೀ ಚೊಲೋ ಕಾಣ್ಸ್ತಾ ಇದ್ದೆ :) ಸುಂದರ ಅಮ್ಮಂಗೆ ಸುಂದರ ಪುಟ್ಟಿ :) ಕೇಕ್ ನಂಗೂ ಇಡು.. ನಾನಂತೂ ಹಾಜಾರ್ ನೊಡು :)
ಚಿತ್ರಕ್ಕ,
ಬ್ಲಾಗ್ ಹುಟ್ಟುಹಬ್ಬ ಜೋರಾಗಿದ್ದು ಕಾಣಸ್ತು. ಸ್ಪೆಶಲ್ ತಾರೀಕನ್ನೇ ಆರ್ಸಿದ್ದೆ ಬಿಡು :) ಖುಶಿ ಆತು. ಪೂರ್ಣ ಚಂದಿರನಂತೇ ಬೆಳ್ಗ್ತಾ ಇರ್ಲಿ ನಿನ್ನ ಬ್ಲಾಗ್ ಮರಿ. ನೀನೂ ನಿನ್ನ ಪುಟ್ಟಿನೂ ಜೊತೆಯಾಗಿ ಹಿತವಾಗಿರಿ ಹೀಂಗೆಯಾ ಹೇಳಿ ಹಾರೈಸ್ತೆ.
ಚಿತ್ರಾ ಅಕ್ಕಾ...
ನಿನ್ನ ಮರಿಗೂ ಒಂದುವರ್ಷಾ ಆಗೋತಾ? ಮೊನ್ನೆ ಮೊನ್ನೆ ಹುಟ್ಟಿದಂಗಿತ್ತು. ನಾಲ್ಕುವರ್ಷಕ್ಕೆ ಒಂದ್ಸಲ ನಿಜವಾದ ಹುಟ್ಟಿದ ದಿನ ಬಂದ್ರೆ ಬರಲಿ, ಅದೂ ಒಂದು ವಿಶೇಷ, ನಾವು ಪ್ರತೀ ವರ್ಷ ಹುಟ್ಟುಹಬ್ಬ ಮಾಡನ ಬ್ಲಾಗ್ ಮರಿಗಳಿಗೆ.
ಪುತ್ತು ಬ್ಲಾಗ್ ಮರೀ...ಹುತ್ತುಹಬ್ಬದ ಚುಬಾಚಯ ನಿಂಗೆ, ಪಪ್ಪ ಅಂಗಿ ಹಾಕಂಡು ಎಟ್ಟು ಚೆಂದ ಚೆಂದ ಕಾಣಿಸ್ತಲಾ...
ಸರಿ, ಗಿಫ್ಟ್ ಆಮೇಲೆ ಕೊಡ್ತಿ ಅಕಾ... ಅಮ್ಮನ್ ಎದುರಿಗೆ ಬೇಡ, ಬೈತಲಾ ಅದು...ನಂಗೆ ನಿಂಗೆ ಇಬ್ರಿಗೂವ ಕಡಿಗೆ :-)
ಪ್ರೀತಿಯಿಂದ,
ಚಿಕ್ಕಮ್ಮ.
ಚಿತ್ರಾ ಮೇಡಮ್,
ಬ್ಲಾಗ್ ಹುಟ್ಟು ಹಬ್ಬಕ್ಕೆ ಶುಭಾಶಯಗಳು.....
ನಿಮ್ಮ ಬ್ಲಾಗ್ ಚೆಂದ ಇರುತ್ತದೆ.... ವಸ್ತು ಮತ್ತು ಭಾಷೆ ಸರಳವಾಗಿದ್ದರೂ ಅದು ನೇರವಾಗಿ ಮನದಲ್ಲಿ ನಾಟುತ್ತದೆ...
ದಿನಾಂಕದಲ್ಲೇನಿದೆ ವಿಶೇಷ...ಅದು ವಿಶೇಷವಾಗೋದು...ನಂತರ ನಾವು, ನಮ್ಮ ನಡುವಳಿಕೆ...ಬರಹ ಮತ್ತು ಚಿತ್ರಗಳಿಂದ....ಆದ್ರೂ ಒಳ್ಳೇ ದಿನಾಂಕ ಅನ್ನಬಲ್ಲೇ...
ವಿದೇಶಿಗಳ ಹಾಗೆ ಕೇಕು ಪಾರ್ಟಿ ಕೇಳಲ್ಲ.....ಪಕ್ಕ ನಮ್ಮದೇ ಸಂಸ್ಕ್ಟುತಿಯ ಹಾಗೆ ಒಂದಿಡಿ ಸಿಹಿ...ಹಿಡಿಗಿಂತ ಸ್ವಲ್ಪೇ ಹೆಚ್ಚು...ಸಿಹಿಬರಹ...ಬೇಗಬರಲಿ...ಥ್ಯಾಂಕ್ಸ್...
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಬರ್ತ್ ಡೇ ಆಚರಿಸಿಕೊ೦ಡ ರೀತಿ ವಿಭಿನ್ನವಾಗಿದೆ. ನಿಮ್ಮ ಬ್ಲಾಗ್ ಇದೇ ರೀತಿ ಇನ್ನೂ ಇನ್ನೂ ಹೆಚ್ಚಿನ ಹುಟ್ಟುಹಬ್ಬಗಳನ್ನು ಆಚರಿಸುವ೦ತಾಗಲಿ.
ಹೇ ಚಿತ್ರಾ,
Happy Birthday tooo yoooo!
Many Many happy returns of the for your blogmari.
nange cake jote masaaledosenoo beku.
ನಮಸ್ತೆ.. chitra.. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.
ಶುಭವಾಗಲಿ,
- ಶಮ, ನಂದಿಬೆಟ್ಟ
ಬ್ಲಾಗ್ ಮರಿಗೆ ಹುಟ್ಟುಹಬ್ಬದ ಶುಭಾಶಯಾ!
ಥ್ಯಾಂಕ್ ಯೂ ಚುಚ್ರುತ್ ಮಾಮಾ..
ಗಿಫ್ಟ್ ತಂದ್ಯಾ?
ಪ್ರಕಾಶ್,
ನೀವು ಹೊಗಳಿದಷ್ಟೆಲ್ಲ ಚೆನ್ನಾಗಿದೆಯೊ ಇಲ್ಲವೋ ಗೊತ್ತಿಲ್ಲ !ಆದರೆ ಇಷ್ಟ ಪಟ್ಟಿದ್ದಕ್ಕೆ, ಪ್ರೀತಿಯಿಂದ ಪ್ರೋತ್ಸಾಹಿಸಿದ್ದಕ್ಕೆ ನಾನು ಚಿರ ಋಣಿ ! ಈ ಪ್ರೀತಿ ಹೀಗೇ ಇರಲಿ.
ಹರೀಶ,
ಅಬ್ಬಾ ,ಸುಮಾರು ದೊಡ್ಡ ಪಟ್ಟೀನೇ ಕೊಟ್ಟಿದ್ದೆ ನೀನು. ಧನ್ಯವಾದಗಳು!ಬರುತ್ತಾ ಇರು .
ಥ್ಯಾಂಕ್ ಯೂ ತೇಜೂ ಚಿಕ್ಕಮ್ಮಾ,
ನಿಂಗೆ ಹೇಳಿ ಕೇಕ್, ಚಾಕೊಲೇಟ್ ಎಲ್ಲ ಇಟ್ಟಿದ್ದಿ. ಬಂದ ಕೂಡಲೇ ಕೊಡ್ತಿ .ಅದಿತಿನೂ ಕರ್ಕಂಡೇ ಬಾ.
ತೇಜೂ,
ಧನ್ಯವಾದಗಳು. ತಾರೀಕು ನಾನು ಆರಿಸಿದ್ದಲ್ಲ.ಆಕಸ್ಮಿಕ ಹೇಳಲಕ್ಕೇನಾ ! ಮೊದಲ ಬರೆಹ ಪೋಸ್ಟ್ ಮಾಡಿದ ಮೇಲೆ ತಾರೀಖು ನೋಡಿದಿ!ಆಶ್ಚರ್ಯ , ಖುಶಿ ಎರಡೂ ಆತು . ನಿನ್ನ ಶುಭ ಹಾರೈಕೆಗೆ , ಪ್ರೋತ್ಸಾಹಕ್ಕೆ ಮತ್ತೊಮ್ಮೆ ಧನ್ಯವಾದಗಳು !
ಶಾಂತಲಾ,
ನೋಡ್ತಾ ನೋಡ್ತಾ ಒಂದು ವರ್ಷ ಕಳೆದೇ ಹೋತು ನೋಡು!ನನ್ನ ಮನಸಿನಲ್ಲಿದ್ದಿದ್ದನ್ನು ಬರಹರೂಪಕ್ಕಿಳಿಸಲು ಧೈರ್ಯ ತುಂಬಿದ್ದಕ್ಕೆ ,ನಿನ್ನ ಪ್ರೀತಿಯ ಪ್ರೋತ್ಸಾಹಕ್ಕೆ ರಾಶಿ ರಾಶಿ ಥ್ಯಾಂಕ್ಸ್ ನಿಂಗೆ. ಈ ಪ್ರೀತಿ ಹೀಗೇ ಇರಲಿ ಹೇಳಿ ಹಾರೈಸ್ತಿ!
ಶಾಂತಲಾ ಚಿಕ್ಕಮಾ,
ಬಂದ್ಯಾ? ಚಂದ ಇದ್ದಾ ನನ್ನ ಅಂಗಿ? ( ಶ್ ಶ್ಸ್ ..ನಂಗೆ ಎಂತ ತಗಂಬಂದೆ? ಕಡೀಗೆ ಕೊಡು..)
ಶಿವೂ,
ತುಂಬಾ ಧನ್ಯವಾದಗಳು!
ನನಗೆ ತೋಚಿದಂತೆ ನಾನು ಗೀಚಿದ್ದು, ನಿಮಗೆಲ್ಲ ಇಷ್ಟವಾಗಿದ್ದು ನನಗೆ ತುಂಬಾ ಸಂತೋಷದ ವಿಷಯ.ನಿಮ್ಮ ಪ್ರೋತ್ಸಾಹ ನನ್ನಲ್ಲಿ ಇನ್ನಷ್ಟು ಉತ್ಸಾಹ ತುಂಬಿದೆ.ನೀವು ಕೇಳಿದಂತೆ , ಆದಷ್ಟು ಬೇಗ ಸಿಹಿಯಾದ ಬರಹ ಕೊಡಲು ಮನಃ ಪೂರ್ವಕ ಪ್ರಯತ್ನಿಸುತ್ತೇನೆ.
ಸುಧೇಶ್,
ನಿಮ್ಮ ಶುಭಾಶಯಕ್ಕೆ , ಮೆಚ್ಚುಗೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಹೀಗೆ ಜೊತೆಗಿರಲಿ.
ಸುನಾಥ್ ಕಾಕಾ,
ನನ್ನ ಹೃತ್ಪೂರ್ವಕ ನಮನಗಳು. ನಿಮ್ಮ ಆಶೀರ್ವಾದ ,ಸಲಹೆ, ಪ್ರೀತಿಯ ಪ್ರೋತ್ಸಾಹಗಳು ನನ್ನ ಬೆನ್ನಿಗಿರಲಿ.
ಜಗುಲಿ ಭಾಗವತರೇ,
ಧನ್ಯವಾದಗಳು! ಕೇಕ್ ಮತ್ತೆ ಮಸಾಲೆದೋಸೆ ಅಷ್ಟೇ ಸಾಕಾ? ಜೊತೆಗೆ ಬಿಸಿ ಬಿಸಿ ಬೋಂಡಾ ,ರುಚಿ ರುಚಿ ಕಾಫೀ .. ಮಾಡಿಟ್ಟಿರೋದು ಏನು ಮಾಡಲಿ?
ಶುಭಾಶಯಗಳೂಊಊಊಊ... :)
ನಂದು ಒಂದು ಸುಭಾಸಯ .. ಒಂದ್ ಮುಲೇಲಿ ಮಡಿಕಲಿ
Belated birth day wishes to you chitraa.
ವಿಕಾಸ್,
ಥ್ಯಾಂಕ್ಯೂ ಊಊಊಊಊ
ಸಂತೋಷ್,
ನಿಮ್ ಸುಬಾಸಯಾನಾ ಇಲ್ಲೇ ಮೂಲ್ಯಾಗ್ ಮಡಿಕ್ಯಂಡಿವ್ನಿ ಸಿವಾ, ಬರೋ ವರ್ಸಾ ಬ್ಯಾರೆ ಕೊಡ್ತೀರಲ್ವಾ?
ಪರಾಂಜಪೆಯವರೆ,
ತಡವಾದ್ದಕ್ಕೆ ಪರವಾಗಿಲ್ಲ. ಬಂದಿರಲ್ಲ ? ಅದು ಮುಖ್ಯ . ಧನ್ಯವಾದಗಳು!
ಚಿತ್ರಾ ಮೇಡಮ್,
ನಿಮಗೆ " women's day" ಶುಭಾಶಯಗಳು.....
ಈ ದಿನ ನಿಮ್ಮದಾಗಲಿ ಅಂತ ನನಗೆ ಆರೈಸಲು ಇಷ್ಟವಾಗುವುದಿಲ್ಲ....ಏಕೆಂದರೆ ಇದೊಂದೇ ದಿನ ನಿಮ್ಮದಲ್ಲ.....ಪ್ರತಿಕ್ಷಣ, ನಿಮಿಷ, ಗಂಟೆ, ದಿನ, ತಿಂಗಳು, ವರ್ಷಗಳು...ಎಲ್ಲಾ ನಿಮ್ಮವೇ....ನಿಮಗಿಷ್ಟ ಪಟ್ಟಂತೆ ಇರಲು ಇವೆ.. ಪ್ರತಿಕ್ಷಣ ಪ್ರೀತಿಯಿಂದ ಇರಿ.... ಅದರ ನೆಪದಲ್ಲಿ ಪ್ರೀತಿಸಿ.....ಪ್ರೀತಿ ಹಂಚಿ...ನಿಮ್ಮನ್ನು ಪ್ರೀತಿಸಿಕೊಳ್ಳಿ......[ಇದರಲ್ಲಿ ನಮ್ಮ ಸ್ವಾರ್ಥವಿದೆ. ನೀವು ಚೆನ್ನಾಗಿದ್ದರೆ ನಮ್ಮನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತೀರಿ.....ತಾಯಿ, ಅಕ್ಕ-ತಂಗಿ, ಪುಟ್ಟ ಮಗುವಿನ ಹಾಗೆ ನಮನ್ನೂ ಪ್ರೀತಿಸುತ್ತೀರಿ...] ನಿಮ್ಮ ಪತಿ-ಮಕ್ಕಳನ್ನು... ಭಂದು ಭಾಂದವರವನ್ನು ಪ್ರೀತಿಸಿ...ಗೆಳೆಯರನ್ನು ಪ್ರೀತಿಸಿ...ಸಮಯವಿದ್ದರೆ ನಮ್ಮೆಡೆಗೂ ಒಂದಿಡಿ ಪ್ರೀತಿ...ತೋರಿಸಿ.....
ಮತ್ತೊಮ್ಮೆ ಅಭಿನಂದನೆಗಳು.....
ಪ್ರೀತಿಯಿಂದ...
ಶಿವು...
ಶಿವೂ ,
ನಿಮ್ಮ ಪ್ರೀತಿಯ ಶುಭಾಶಯಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ನಾನೂ ನನ್ನ ಗೆಳತಿಯೂ ಇಂದು ಬೆಳಿಗ್ಗೆ ಮಾತನಾಡುವಾಗ " ಅಲ್ಲ ಕಣೇ, ಇವತ್ತು ಮಹಿಳಾ ದಿನ ಅಂತ ಖುಶಿ ಪಟ್ಟುಕೊಂಡು,ಸಿಹಿ ತಿನ್ನಬೇಕು ಅಂದ್ರೆ ನಾವೇ ಸಿಹಿಅಡಿಗೆ ಮಾಡ್ಬೇಕು . ನಮಗ್ಯಾರೂ ಮಾಡಿ ಹಾಕಲ್ವಲ್ಲೇ ’ ಅಂತ ಹೇಳಿಕೊಂಡು ನಕ್ಕೆವು.
ನಿಜ , ನೀವಂದಂತೆ ನಾನೂ ಸಹ , ಇದೊಂದೇ ದಿನ ಅಲ್ಲ ,ಪ್ರತಿದಿನವನ್ನೂ ನಮ್ಮ ದಿನವಾಗಿಯೆ ಆಚರಿಸುತ್ತೇನೆ.ಏಕೆಂದರೆ , ದಿನ ಯಾವುದಿದ್ದರೂ ದಿನಚರಿಯಲ್ಲಿ ಹೆಚ್ಚೇನೂ ವ್ಯತ್ಯಾಸವಾಗುವುದಿಲ್ಲ ತಾನೆ?ಹಾಂ, ಇಂದು ಸಂಜೆ ಐಸ್ ಕ್ರೀಮ್ ಸಿಗುವ ಲಕ್ಷಣವಿದೆ :) ಮತ್ತೆ ದಿನವಿಡೀ ನಿಮ್ಮಂತಹ ಆತ್ಮೀಯರ ಪ್ರೀತಿ ತುಂಬಿದ ಶುಭಾಶಯಗಳು ಈ ದಿನವನ್ನು ಸ್ಪೆಷಲ್ ಎನಿಸಿಬಿಡುತ್ತವೆ.ಮತ್ತೊಮ್ಮೆ ಹೃದಯತುಂಬಿದ ಧನ್ಯವಾದಗಳು. ( ಅಂದಹಾಗೇ ನನ್ನ ಶುಭಾಶಯಗಳನ್ನು ತಿಳಿಸಿ ಹೇಮಾಶ್ರೀಯವರಿಗೆ )
ಚಿತ್ರಾ ಮೇಡಮ್,
ನಿಮ್ಮ ಶುಭಾಶಯಗಳನ್ನು ಅವಳಿಗೆ ತಿಳಿಸಿದ್ದೇನೆ...ಖುಷಿಪಟ್ಟಳು....ಮತ್ತೆ ಇಂದು ಬೆಳಿಗ್ಗೆ ನನಗೆ ಅನೇಕ ಬ್ಲಾಗ್ ಅಕ್ಕಂದಿರು-ತಂಗಿಯರು...ಮೆಸೇಜ್ ಮಾಡಿ ಇವತ್ತು ಹೇಮಾಶ್ರೀ ಹೇಳಿದಂತೆ ಕೇಳಿ ಅಂತ ತಾಕೀತು ಮಾಡಿದ್ದಾರೆ...ಅದರಂತೆ ಆವಳ ಇಷ್ಟದಂತೆ ಅವಳ ತವರೂರಿಗೆ ಜೊತೆಯಲ್ಲಿ ಹೋಗಿದ್ದೆ....ಮತ್ತೆ ಸಂಜೆ ಅವಳ ಜೊತೆಯಲ್ಲಿಯೇ...ವಾಪಸ್ಸು ಬಂದಿದ್ದೇನೆ...ಅವಳಿಗೆ ಖುಷಿಯಾಗಿದೆ...ಅದರಿಂದ ನನಗೂ ಖುಷಿಯಾಗಿದೆ...
ಮಧೂ ಮಾಮಾ,
ನಿಂಗೆ ಥ್ಯಾಂಕ್ಯೂ ಹೇಳಲೆ ಮರೆತೇ ಹೋಗಿತ್ತು ನೋಡು.sorry ! :(
ನಾನು ಓದುವ ಬ್ಲಾಗ್ ಗಳಲ್ಲಿ ನಿಮ್ಮದು ಒಂದು..ಏನೋ ಆಪ್ತತೆ...ನಿಮ್ಮ ಬರಹಗಳಲ್ಲಿ...
ಶುಭಾಶಯಗಳೊಂದಿಗೆ,
ವನಿತಾ.
Post a Comment