ಕೆಲ ದಿನಗಳಿಂದ ಅತಿಯಾದ ಕೆಲಸದ ಒತ್ತಡದಿಂದಾಗಿ ಬ್ಲಾಗ್ ನಲ್ಲಿ ಹೊಸ ಬರಹ ಪೋಸ್ಟ್ ಮಾಡುವ ಬಗ್ಗೆ ಯೋಚನೆ ಮಾಡಲೂ ಸಮಯವಿಲ್ಲದಂತಾಗಿದೆ. ಆದರೂ , ಬಹಳ ಕಾಲ ಸುಮ್ಮನಿರಲೂ ಆಗದು ! ಹೀಗಾಗಿ ಈ ವಿಡಿಯೋ ಹಾಕುತ್ತಿದ್ದೇನೆ. ನಾನು ಮೊನ್ನೆ ಮೊನ್ನೆಯಷ್ಟೇ ನೋಡಿ ಖುಷಿಪಟ್ಟೆ. ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸಾಯಿತು. ನಿಮ್ಮಲ್ಲಿ ಬಹಳಷ್ಟು ಜನ ಇದನ್ನು ನೋಡಿರಲೂ ಬಹುದು. ಆದರೂ ಇನ್ನೊಮ್ಮೆ ನೋಡಿ ಸಂತೋಷ ಪಡುತ್ತೀರೆನ್ನುವ ಭರವಸೆ ನನ್ನದು.
ವಿಡಿಯೋ ಕೃಪೆ : Youtube
11 comments:
ಚಿತ್ರಾ,
ವಿಡಿಯೊಕ್ಕಾಗಿ ತುಂಬಾ ತುಂಬಾ ಥ್ಯಾಂಕ್ಸ.
ಚಿತ್ರಾ...
ಮಸ್ತ್ ಆಗಿದೆ...
ಇದಾನ್ನು ನೋಡಿ ಫ್ರೆಷ್ ಆದೆ...
ನಮ್ಮನ್ನೆಲ್ಲ ನಗಿಸಿದ ಆ ಪುಣ್ಯಾತ್ಮನಿಗೂ..
ಇಲ್ಲಿ ಹಾಕಿದ ನಿಮಗೂ ಅಭಿನಂದನೆಗಳು..
ಒಟ್ಟಿನಲ್ಲಿ ನಿಮ್ಮ ಬ್ಲಾಗಿಗೆ ಬಂದರೆ ನಗುವದಕ್ಕೆ ಮೋಸವಿಲ್ಲ..
ಚಿತ್ರ ಮೇಡಮ್,
ಈ ಕಾರ್ಯಕ್ರಮ ಬೆಂಗಳೂರಿನ ಜಯನಗರದಲ್ಲಿ ಡಿಸೆಂಬರ್ ೨೫ರ ಕ್ರಿಸ್ಮಸ್ ಸಮಯದಲ್ಲಿ ನಡೆದಿದ್ದು ಅಲ್ವಾ...ನನಗೆ ವರ್ಷ ನೆನಪಿಲ್ಲ. ನಾನು ಮತ್ತು ನನ್ನ ಶ್ರೀಮತಿ ಅಲ್ಲಿ ಪೂರ್ತಿ ದಿನ ಕಳೆದಿದ್ದೆವು. ಆಗ ಸಿ.ಎಮ್ ಆಗಿದ್ದ ಎಸ್ ಎಮ್ ಕೃಷ್ಣ ಬಂದಿದ್ದರು. ಆ ದಿನವೆಲ್ಲಾ ಚೆನ್ನಾಗಿ ನಗುತ್ತಾ ಕಳೆದಿದ್ದೆವು.
ಈ ಕಾರ್ಯಕ್ರಮವನ್ನು ಮತ್ತೊಮ್ಮೆ ಬ್ಲಾಗಿನಲ್ಲಿ ಹಾಕಿ ನೆನಪಿಸಿದ್ದಕ್ಕೆ ಧನ್ಯವಾದಗಳು.
ಚೆನ್ನಾಗಿದೆ. ಅಭಿನಂದನೆಗಳು
ಚಿತ್ರಾ,
ತುಂಬಾ ಮುಂಚೆನೇ ಇದನ್ನು ಕೇಳಿದ್ದೆ, ಪುನಃ ಕೆಲಿಸಿದಿರಿ, ಥ್ಯಾಂಕ್ಸ್
ಚೆನ್ನಾಗಿದೆ...
ಮತ್ತೆ ನಗು ತರಿಸಿದ್ದಕ್ಕೆ ಅಭಿನಂದನೆಗಳು...
ಮೊದಲ ಬಾರಿ ನೋಡಿದ್ದು...... ನಕ್ಕು ನಕ್ಕು ಹೊಟ್ಟೆ ಹಿಡಿದುಕೊ೦ಡಿತು... ಪ್ರತಿಯೊ೦ದು ಸಾಲು ಬರಿಸಲಾಗದಷ್ಟು ನಗು ತ೦ದಿತು....
ತು೦ಬಾ ಥ್ಯಾ೦ಕ್ಸ್ ಚಿತ್ರಾ ಅವರೇ....
ಕಾಕಾ, ಪರಾಂಜಪೆ, ಸಾಗರದಾಚೆಯ ಗುರುಮೂರ್ತಿ, ಸವಿಗನಸಿನ ಮಹೇಶ್,
ಮೆಚ್ಚುಗೆಗೆ ಧನ್ಯವಾದಗಳು !
ಶಿವೂ,
ಇದು ನೀವು ಹೇಳಿದ ಕಾರ್ಯಕ್ರಮವೇ ಆಗಿರಬೇಕು. ನಾನು ಈಗ ವಾರದ ಹಿಂದಷ್ಟೇ ನೋಡಿದ್ದು. ದಸರಾ ಮುಗಿಯುವವರೆಗೂ , ಅತಿಯಾದ ಕೆಲಸದೊತ್ತಡದಿಂದ ಏನನ್ನೂ ಬರೆಯಲಾಗುತ್ತಿಲ್ಲ.
( ಯಾರ ಬ್ಲಾಗಿಗೂ ಹೋಗಲಾಗುತ್ತಿಲ್ಲ ! ಹೋದರು ಆರಾಮಾಗಿ ಅಭಿಪ್ರಾಯ ಬರೆಯಲೂ ಸಮಯವಿಲ್ಲ. ಹೀಗಾಗಿ ನಿಮ್ಮ ಬರೆಹಗಳಿಗೆ ನನ್ನ ಅಭಿಪ್ರಾಯ ತಡವಾಗುತ್ತಿದೆ. ದಯವಿಟ್ಟು ಕ್ಷಮಿಸಿ.)
ಪ್ರೋತ್ಸಾಹಕ್ಕಾಗಿ ಧನ್ಯವಾದಗಳು.
ಪ್ರಕಾಶಣ್ಣ ,
ಮೆಚ್ಚಿದ್ದಕ್ಕೆ, ನಕ್ಕಿದ್ದಕ್ಕೆ ಥ್ಯಾಂಕ್ಸ್ ! ಏನೇ ಆದರೂ , ನಿಮ್ಮಷ್ಟು ನಗಿಸಲು ನನಗೆ ಬರುವುದೇ ಇಲ್ಲ ಎಂದು ಆಣೆ ಮಾಡಿ ಹೇಳಬಲ್ಲೆ !!
ಸುಧೇಶ್,
ಹೊಟ್ಟೆ ಹಿಡಿದುಕೊಳ್ಳುವಷ್ಟು ನಗಬೇಡಿ ಸ್ವಾಮೀ .ಡಾಕ್ಟರ್ ಫೀಸು ಇತ್ತೀಚೆ ತುಂಬಾ ಹೆಚ್ಚಾಗಿದೆ !
ಮೆಚ್ಚಿದ್ದಕ್ಕೆ ಧನ್ಯವಾದಗಳು !
Post a Comment