February 28, 2010

ತುಂಬಿತು ಎರಡು...

ಆತ್ಮೀಯ ಬಂಧುಗಳೇ ಹಾಗೂ ಸ್ನೇಹಿತರೇ ,

ಇಂದು ಫೆಬ್ರುವರಿ ೨೮ ..... ' ಮನಸೆಂಬ ಹುಚ್ಚು ಹೊಳೆ ' ಎಂಬ ಹೆಸರಿನ ಹುಚ್ಚು ಬ್ಲಾಗೊಂದು ಹುಟ್ಟಿಕೊಂಡ ದಿನ ! ಈ ಸಂದರ್ಭದಲ್ಲಿ ಈ ಬ್ಲಾಗಿನ ಪರವಾಗಿ ನಾನು ಎರಡು ಮಾತುಗಳನ್ನು ಆಡಬಯಸುತ್ತೇನೆ.

ನೋಡ ನೋಡುತ್ತಿದ್ದಂತೆ , ಎರಡು ವರ್ಷ ತುಂಬಿಯೇ ಬಿಟ್ಟಿತು ! ಇನ್ನೂ ಮುಂದುವರೆಯುತ್ತಿದ್ದೇನೆ ಅನ್ನೋದು ಒಂಥರಾ ಆರೋಗ್ಯಕರ ಬೆಳವಣಿಗೆ ಅನಿಸುತ್ತದೆ . ಈ ಚಿಕ್ಕ ಅವಧಿಯಲ್ಲಿ ಬಳಗ ಸುಮಾರು ಬೆಳೆದಿದೆ . ಕೆಲವು ಒಳ್ಳೆಯ ಸ್ನೇಹಿತರು ದೊರೆತಿದ್ದಾರೆ.ಅವರೊಂದಿಗೆ ವೈಯುಕ್ತಿಕವಾಗಿ ಹರಟುವಷ್ಟು , ಚರ್ಚೆ ಮಾಡುವಷ್ಟು , ಜಗಳವಾಡುವಷ್ಟು ಸಲುಗೆ ಬೆಳೆದಿದೆ. ಬೆನ್ನು ತಟ್ಟಿ ( ಕಾಮೆಂಟಿಸಿ) ಪ್ರೋತ್ಸಾಹಿಸುವವರ ಸಂಖ್ಯೆ ಹೆಚ್ಚುತ್ತಿದೆ. ಬರೆಯದೆ ಬಹುದಿನಗಳಾದಾಗ " ಯಾಕೆ ಬರೆದಿಲ್ಲ? " ಎಂದು ತಕರಾರು ಮಾಡುವವರೂ ಸಿಕ್ಕಿದ್ದಾರೆ .

ಹಿಂತಿರುಗಿ ನೋಡಿದಾಗ , 'ಸಾಧನೆ ಮಾಡಿದ್ದೇನೆ ' ಎಂದು ಬೆನ್ನು ತಟ್ಟಿ ಕೊಳ್ಳುವಂಥಾದ್ದು ಏನೂ ಕಾಣುತ್ತಿಲ್ಲ ನನ್ನ ಕಣ್ಣಿಗೆ. ಸುಮ್ಮನೆ ,ಮನಸಿಗೆ ಬಂದಿದ್ದನ್ನು, ತಲೆಗೆ ಹೊಳೆದಂತೆ , ಅಕ್ಷರಗಳಲ್ಲಿ ಮೂಡಿಸಿದ್ದೇನೆ. ಈಗ ಮೂರರ ಹೊಸಿಲಲ್ಲಿ ನಿಂತು ಅವನ್ನೆಲ್ಲ ಮತ್ತೊಮ್ಮೆ ಓದಿದಾಗ " ಛೆ, ಇದನ್ನು ಹೀಗೆ ಬರೆಯ ಬಹುದಿತ್ತು, ಇಲ್ಲಿ ಹಾಗೆ ಮಾಡಬಾರದಿತ್ತು, ಇದರಲ್ಲಿ ಇನ್ನಷ್ಟು ವಿವರಗಳನ್ನು / ವಿಷಯಗಳನ್ನು ಸೇರಿಸಬಹುದಿತ್ತು " ಎಂದೆಲ್ಲ ಅನಿಸುತ್ತದೆ. ಅದೆಷ್ಟೋ ಬರಹಗಳು ನನಗೇ ಬಾಲಿಶವೆನಿಸುತ್ತವೆ. ಅವುಗಳನ್ನು ಓದಿ ನೀವೇನು ಅಂದುಕೊಂಡಿರೋ ಎನಿಸಿ ಈಗ ಮುಜುಗರವಾಗುತ್ತದೆ. ಮುಂದೆ ಬರೆಯುವಾಗ ಇವನ್ನೆಲ್ಲ ಗಮನದಲ್ಲಿಟ್ಟುಕೊಳ್ಳಬೇಕು , ಸ್ವಲ್ಪ ಸೀರಿಯಸ್ ಆಗಿ ( ಸೀರಿಯಸ್ ವಿಷಯಗಳು ಎಂದಲ್ಲ! ) ಬರೆಯಬೇಕು ಎಂದುಕೊಳ್ಳುತ್ತೇನೆ . ಆದರೆ ನನಗೆ ಗೊತ್ತು ಮತ್ತೆ ಮುಂದಿನ ವರ್ಷವೂ ಇದು ಪುನರಾವರ್ತಿಸುತ್ತದೆ . ಅದು ಹಾಗೆಯೇ ಅಲ್ಲವೇ/ ಇಂದು ಅತೀ ಮುಖ್ಯವೆನಿಸಿದ್ದು ನಾಳೆಗೆ ಕ್ಷುಲ್ಲಕ ಎನಿಸಿಬಿಡುತ್ತವೆ.

ನಿಮಗೊಂದು ನಿಜ ಸಂಗತಿ ಹೇಳಬೇಕೆಂದರೆ , ಇತ್ತೀಚೆ ಬರವಣಿಗೆ ಸ್ವಲ್ಪ ಹಿಂದೆ ಬಿದ್ದಿದೆ. ಅದು ನನ್ನ ಸೋಮಾರಿತನಕ್ಕೋ ಅಥವಾ ವಿಷಯಗಳೇ ಹೊಳೆಯುತ್ತಿಲ್ಲವೋ ಅಥವಾ ವಿಷಯಗಳಿದ್ದರೂ ಬರೆಯಲು ತೋಚುತ್ತಿಲ್ಲವೋ ಅಥವಾ ಸಮಯಾಭಾವಕ್ಕೋ ಅನ್ನೋದು ನಾನೇ ಕಂಡುಹಿಡಿಯಬೇಕಷ್ಟೇ. ಈ ವರ್ಷವಾದರೂ ಹೆಚ್ಚು ಹೆಚ್ಚು ಬರೆಯಬೇಕು ಅಂತ ಸದ್ಯಕ್ಕಂತೂ ಯೋಚನೆ ಮಾಡುತ್ತಿದ್ದೇನೆ .. ನೋಡೋಣ !

ನನ್ನ ಮಾತುಗಳೇ ಹೆಚ್ಚಾದವು ಎನ್ನುತ್ತೀರಾ? ಸರಿ ಬೇಗ ಮುಗಿಸುವೆ. ಗಂಟೆಗಟ್ಟಲೆ ಕೊರೆಯಲು ನಾನಿನ್ನೂ ರಾಜಕೀಯಕ್ಕೆ ಸೇರಿಲ್ಲ ಬಿಡಿ!

ಮೇಲೆ ಬರೆದಂತೆ, ನನ್ನ ಬರಹಗಳನ್ನು ಓದುವವರ , ಆ ಮೂಲಕ ಪ್ರೋತ್ಸಾಹ ನೀಡುವವರ ಸಂಖ್ಯೆ ಹೆಚ್ಚಾಗಿದ್ದು ಖುಷಿ ಕೊಡುತ್ತಿದೆ. ಆದರೆ , ಅವರೆಲ್ಲರ ಬ್ಲಾಗ್ ಗಳಿಗೆ ರೆಗ್ಯುಲರ್ ಆಗಿ ಹೋಗಲು , ಹೋದಾಗೆಲ್ಲ ಒಂದು ಕಾಮೆಂಟ್ ಹಾಕಲು ಎಷ್ಟೋ ಸಲ ಸಾಧ್ಯವಾಗುತ್ತಿಲ್ಲ ಎನ್ನುವ ಬೇಸರವೂ ಇದೆ. ದಯವಿಟ್ಟು ಈ ವಿಷಯವಾಗಿ ತಪ್ಪು ತಿಳಿಯಬೇಡಿ ಎಂದು ವಿನಂತಿಸುವೆ.

ಹಾಂ , ಬ್ಲಾಗ್ ನ ತಾಯಿ ನಾನಾದರೂ , ಇದನ್ನು ಬೆಳೆಸುವ , ಪ್ರೋತ್ಸಾಹದ ನೀರೆರೆದು ಪೋಷಿಸುವ ಕೆಲಸವನ್ನು ನೀವೆಲ್ಲರೂ ನನ್ನೊಡನೆ ಹಂಚಿಕೊಂಡಿದ್ದಕ್ಕೆ ನಿಮಗೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ . ನಿಮ್ಮೆಲ್ಲರ ಆಶೀರ್ವಾದ, ಪ್ರೋತ್ಸಾಹ , ಪ್ರೀತಿ, ಅಭಿಮಾನಗಳು ಈ " ಹುಚ್ಚು ಹೊಳೆ " ಯ ಜೊತೆ ಸದಾ ಇರಲಿ ಎಂದು ಕೇಳಿಕೊಳ್ಳುತ್ತಾ ನನ್ನ ಎರಡು ಮಾತುಗಳನ್ನು ಮುಗಿಸುತ್ತೇನೆ .

ನಮಸ್ಕಾರ,

ಜೈ ಹಿಂದ್ !

37 comments:

ಶಾಂತಲಾ ಭಂಡಿ said...

ಚಿತ್ರಕ್ಕಾ...
ಬ್ಲಾಗ್ ಮರಿಯ ಎರಡನೇ ಹುಟ್ಟುಹಬ್ಬಕ್ಕೆ ಶುಭಾಶಯ :-)

ಚುಕ್ಕಿಚಿತ್ತಾರ said...

ಎರಡು ವರುಷದ ಬ್ಲಾಗ್ ಮಗುವಿಗೆ ಹುಟ್ಟುಹಬ್ಬದ ಶುಭಾಶಯಗಳು.

shivu.k said...

ಚಿತ್ರ ಮೇಡಮ್,

ಗ್ರೇಟ್! ಒಬ್ಬೊಬ್ಬರೇ ಒಂದು ವರ್ಷ, ಎರಡು ವರ್ಷ ಅಂಥ ನಮ್ಮ ಬ್ಲಾಗುಗಳನ್ನು ಸುರಕ್ಷಿತವಾಗಿ, ಅರೋಗ್ಯಕರವಾಗಿ ಬೆಳೆಸಿ ಸಂವೃದ್ಧಿಗೊಳಿಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ನಿಮ್ಮ ಬ್ಲಾಗ್ ಎರಡು ತುಂಬಿ ಮೂರಕ್ಕೆ ಹೆಚ್ಚೆಹಿಡುತ್ತಿರುವ ಈ ಸಂದರ್ಭದಲ್ಲಿ ನಿಮಗೆ ಅಭಿನಂದನೆಗಳು. ಅದು ನೂರ್ಕಾಲ ಹೀಗೆ ಬೆಳೆಯಲಿ...all the best.

ತೇಜಸ್ವಿನಿ ಹೆಗಡೆ said...

ಚಿತ್ರಕ್ಕ,

ಹುಚ್ಚು ಹೊಳೆಯ ಎರಡನೆಯ ವರುಷದ ಹುಟ್ಟುಹಬ್ಬಕ್ಕೆ ಹಾರ್ದಿಕ ಶುಭಾಶಯಗಳು. ಈ ನಿನ್ನ ಬ್ಲಾಗ್‌ನಿಂದಾಗಿಯೇ ಕಡತೋಕದ ಪರಿಚಯ ನನಗಾಗಿದ್ದು. ಹತ್ತಿರದ ಸಂಬಂಧವು ಬಹು ದೂರವಾಗಿದ್ದರೂ ಇಲ್ಲೇ ನಮ್ಮಿಬ್ಬರ ಪರಿಚಯವಾಗಿ, ಸಂಬಂಧ ಹತ್ತಿರಬಂದಿದ್ದು ಅಲ್ಲವೇ? :)

ಮನಸೊಳಗೆ ನೆನಪುಗಳ, ಕನಸುಗಳ, ಭಾವನೆಗಳ ಹುಚ್ಚು ಹೊಳೆ ಹೀಗೇ ಹರಿಯುತ್ತಿರಲಿ.

sunaath said...

ಚಿತ್ರಾ,
ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಚಂದದ ಬ್ಲಾ^ಗು ನಮ್ಮನ್ನು ಹೀಗೇಯೇ ಸದಾಕಾಲವೂ ರಂಜಿಸುತ್ತಿರಲಿ.

ಸವಿಗನಸು said...

ಎರಡನೆಯ ವರುಷದ ಹುಟ್ಟುಹಬ್ಬಕ್ಕೆ ಹಾರ್ದಿಕ ಶುಭಾಶಯಗಳು
ಹೀಗೆ ಬೆಳೆಯುತ್ತಿರಲಿ

ಮನಸಿನಮನೆಯವನು said...

'ಚಿತ್ರಾ' ಅವ್ರೆ..,
ಶುಭಾಷಯಗಳು..

Blog is Updated: http:/manasinamane.blogspot.com

Guruprasad said...

ಚಿತ್ರ,
ನಿಮ್ಮ ಬ್ಲಾಗ್ ಎರಡು ವರುಷ ಪೂರೈಸಿದ್ದಕ್ಕೆ ಅಭಿನಂದನೆಗಳು,,, ಹೀಗೆ ಮತಸ್ಟು ಹೊಸ ಹೊಸ ವಿಚಾರಗಳ ಬರಹ ನಿಮ್ಮ ಬ್ಲಾಗ್ ಮೂಲಕ ಹೊರಹೊಮ್ಮಲಿ.....
ಗುರು

ಮನಮುಕ್ತಾ said...

ಚಿತ್ರಾ ಅವರೆ,
ನಿಮ್ಮ ಬ್ಲಾಗ್ 3ನೆಯ ವರ್ಷಕ್ಕೆ ಕಾಲಿಟ್ಟಿರುವುದಕ್ಕೆ ಅಭಿನ೦ದನೆಗಳು.ಹೆಚ್ಚು ಹೆಚ್ಚು ಬರಹಗಳು ಬರುತ್ತಿರಲಿ.

ಜಲನಯನ said...

ಜಲನಯನದ ವರ್ಷ ತುಂಬಿದ ಸಮಯದಲ್ಲಿ ಹಾರೈಸಿ ಬಂದ ನಿಮಗೆ -ನಿಮ್ಮ ಮನಸೆಂಬ ಹುಚ್ಚುಹೊಳೆಗೆ ಎರಡು....!! ದ್ವಿವಾರ್ಷಿಕೋತ್ಸವಕ್ಕೆ ಮನತುಂಬಿ ಹಾರೈಕೆ..ಅಂತರಾಳದ ಶುಭಕಾಮನೆ...
ಇಲ್ಲರೀ..ನಿಮ್ಮ ಅನಿಸಿಕೆ ತಪ್ಪು...ಬೆಳೆದಂತೆ ಅಂಬೆಗಾಲು, ಎದ್ದು ನಿಲ್ಲುವುದು, ತಪ್ಪುಹೆಜ್ಜೆ, ಎಡಹುವುದು, ನಡೆಯೋದು ಮತ್ತು ಓಡೋದು..ಹೇಗೆ ತಂದೆ-ತಾಯಿಗೆ ಪ್ರತಿ ಹಂತವೂ ಪ್ರಿಯವೋ ಹಾಗೆ..ನಿಮ್ಮ ಬ್ಲಾಗೆಂಬ ಕೂಸಿನ ಪ್ರತಿ ಹಂತವನ್ನೂ ನೀವು ಪ್ರೀತಿಸಬೇಕು...ನಾವೇನು ವ್ಯಾವಸಾಯಿಕ ಲೇಖಕರಲ್ಲ..ಮನದ ಮಾತನ್ನು ಆಪ್ತರಲ್ಲಿ ಹಂಚುಕೊಳ್ಳುವ ಮಾಧ್ಯಮ ವೇದಿಕೆ ಈ ಬ್ಲಾಗ್ ಬರಹ... ಅಲ್ಲವೇ...? ನಿಮ್ಮ ಕೂಸಿಗೆ ಬಹುಕಾಲದ ಭವಿತ ಮತ್ತು ಎಲ್ಲ ಮೆಚ್ಚುವ ಲೇಖನಗಳು ಮೂಡಿಬರಲಿ ಎಂದೇ ನನ್ನ ಹಾರೈಕೆ.

ಸುಮ said...

ಬ್ಲಾಗ್ ಹುಟ್ಟುಹಬ್ಬಕ್ಕೆ ಶುಭಾಶಯಗಳು.

ವಿ.ರಾ.ಹೆ. said...

ಶುಭಾಶಯಗಳು..

ನಾನಂತೂ ಹುಚ್ಚು ಹೊಳೆಯ regular reader.

keep blogging. ;-)

Sushrutha Dodderi said...

ಚುಬಾಚಯ ಅಕ್ಕಾ.. ಹಿಂಗೇ ಬರ್ಕೋತ್ ಇರು..

ಸುಧೇಶ್ ಶೆಟ್ಟಿ said...

Nimma blogige eradu varsha ashtena aagirodu? Nimma blogina popularity nodi thumba old blog irabahudu antha naanu andhu kondidde 

Nimma barahagaLanthu yavaththu kushi kottide, nagisive... aa mattige neevu very successful aagidheera…. Innu yaavaagalu regular aagi blog update maadtheera……

Heege munduvariyali blog payana… nodona ee varusha namage yenu kaadhidhe antha :):)

Loads of wishes to the birth day!

ಚಿತ್ರಾ said...

ಶಾಂತಲಾ,
ಬ್ಲಾಗಿನ ಹುಟ್ಟಿಗೆ ಮೊದಲ ಪ್ರೇರಣೆ -ಪ್ರೋತ್ಸಾಹ ನಿನ್ನದು !
ಇಂದು ಮೊದಲ ಹಾರೈಕೆಯೂ ನಿನ್ನದೇ ಆಗಿದ್ದು ಬಹಳ ಖುಷಿ ಕೊಟ್ಟಿತು. ಬರುತ್ತಿರು. ಆಗೀಗ ಬ್ಲಾಗ್ ಮರಿಗೆ ಪ್ರೋತ್ಸಾಹದ ಚಾಕೊಲೆಟ್ ತರುತ್ತಿರು ! ಶುಭಾಶಯಕ್ಕೆ ಧನ್ಯವಾದಗಳು.

ಚಿತ್ರಾ said...

ಚುಕ್ಕಿ ಚಿತ್ತಾರ,
ತುಂಬಾ ಧನ್ಯವಾದಗಳು ! ಬರುತ್ತಿರಿ

ಚಿತ್ರಾ said...

ಶಿವೂ,
ಅಭಿನಂದನೆಗೆ , ನಿಮ್ಮ ಹಾರೈಕೆಗೆ ಬಹಳ ಧನ್ಯವಾದಗಳು . ನಿಮ್ಮೆಲ್ಲರ ಪ್ರೋತ್ಸಾಹವೇ ಇಂದು ಈ ಬ್ಲಾಗು ೨ ವರ್ಷಗಳನ್ನು ಯಶಸ್ವಿಯಾಗಿ ಮುಗಿಸಲು ಕಾರಣ !
ನಿಮ್ಮ ತುಂಬು ಹೃದಯದ ಹಾರೈಕೆಗೆ ಧನ್ಯವಾದಗಳು

ಚಿತ್ರಾ said...

ತೇಜೂ ,
ನೀ ಹೇಳಿದಂತೆ , ಕಳೆದೆ ಹೋದಂತಿದ್ದ ಹತ್ತಿರದ ಸಂಬಂಧಗಳೂ ಮರಳಿ ಸಿಗುವಂತೆ ಮಾಡಿದ್ದಕ್ಕೆ , ಆ ಮೂಲಕ ಬಾಂಧವ್ಯವನ್ನು ಮತ್ತಷ್ಟು ಗತ್ತಿಯಾಗಿಸಿದ್ದಕ್ಕೆ ಬ್ಲಾಗ್ ಪ್ರಪಂಚಕ್ಕೆ ಧನ್ಯವಾದಗಳನ್ನು ಹೇಳಲೇ ಬೇಕು.
ನಿನ್ನ ಶುಭಾಶಯಗಳಿಗೆ , ಹಾರೈಕೆಗೆ ನನ್ನ ಬ್ಲಾಗ್ ಧನ್ಯವಾದ ಹೇಳುತ್ತಿದೆ !

ಸೀತಾರಾಮ. ಕೆ. / SITARAM.K said...

ಹುಚ್ಚುಹೊಳೆಗೆ ಎರಡು ವರ್ಷ ತು೦ಬಿದ್ದು ಸ೦ತೋಷದ ವಿಷಯ. ಇನ್ನೂ ನೂರ್ಕಾಲ ಹೊರಬರಲಿ ತಮ್ಮ ಬ್ಲೊಗ್-ಮರಿ.

ಚಿತ್ರಾ said...

ಕಾಕಾ,
ನಿಮ್ಮಂಥವರ ಆಶೀರ್ವಾದ ನನ್ನ ಬ್ಲಾಗ್ ಮರಿಗೆ ಸದಾಕಾಲ ಇರಲಿ !

ಚಿತ್ರಾ said...

ಸವಿಗನಸು , ಗುರುದೆಸೆಯ ಗುರು ,
ನಿಮ್ಮ ಹಾರೈಕೆಗೆ ತುಂಬಾ ಥ್ಯಾಂಕ್ಸ್ !!

ಚಿತ್ರಾ said...

ಗುರು,
ನಿಮ್ಮ ಬ್ಲಾಗಿನಲ್ಲಿರುವ ವೈವಿಧ್ಯ ವನ್ನು ನೋಡಿದಾಗ ನಾನು ಪ್ರತಿ ಬಾರಿ ಬೆರಗಾಗುತ್ತೇನೆ.ಆ ಮಟ್ಟಿಗಲ್ಲದಿದ್ದರೂ , ಸ್ವಲ್ಪವಾದರೂ ಹೊಸತನ ತರಲು ಸಾಧ್ಯವೇ ಎಂಬ ಪ್ರಯತ್ನ ಮಾಡುತ್ತೇನೆ. ಪ್ರೋತ್ಸಾಹವಿರಲಿ !

ಚಿತ್ರಾ said...

ಮನಮುಕ್ತಾ,
ಧನ್ಯವಾದಗಳು. ನಿಮ್ಮ ಬ್ಲಾಗಿಗೆ ಹೆಜ್ಜೆ ಹಾಕಿದರೂ ಪ್ರತಿಕ್ರಿಯೆ ಬರೆಯುವಲ್ಲಿ ಸ್ವಲ್ಪ ಸೋಮಾರಿತನ ತೋರಿಸುವುದಕ್ಕೆ ದಯವಿಟ್ಟು ಕ್ಷಮಿಸಿ. ಬರುತ್ತಿರಿ

ಚಿತ್ರಾ said...

ಆಜಾದ್ ,
ಜಲನಯನದ ನೋಟದಷ್ಟು , ಹೊಳೆಯ ಹರಿವಿಲ್ಲ . ಆದರೆ ನಿಮ್ಮ ಪ್ರೋತ್ಸಾಹದ ಉತ್ಸಾಹವಿದೆ.
ನಿಜ , ನಾವು ವ್ಯಾವಸಾಯಿಕ ಲೇಖಕರಲ್ಲ . ಹೀಗಿದ್ದರೂ , ನಮ್ಮದೇ ವಿಚಾರ ಧಾರೆಯನ್ನು ಮಂಡಿಸುವಾಗಲೂ ಎಲ್ಲೋ ಒಮ್ಮೆ ಅಳುಕು ಮೂಡುತ್ತದೆ. ಸರಿಯೋ ತಪ್ಪೋ , ಮಾಹಿತಿ ಸಂಗ್ರಹ ಸರಿಯಾಗಿದೆಯೇ ಇಲ್ಲವೇ , ಓದುಗರು ಹೇಗೆ ಸ್ವೀಕರಿಸಬಹುದು ಇತ್ಯಾದಿ . ಆದರೆ ಈಗ ಬ್ಲಾಗ್ ಬಂಧುಗಳ ಪ್ರೋತ್ಸಾಹ , ಈ ಭಯವನ್ನು ತಕ್ಕಮಟ್ಟಿಗೆ ಕಮ್ಮಿಯಾಗಿಸಿದೆ ! ಹೀಗೇ ಕೊರೆಯುತ್ತಿರುವೆ , ಬರುತ್ತಿರಿ .

ಚಿತ್ರಾ said...

ಸುಮಾ,
ಧನ್ಯವಾದಗಳು

ಚಿತ್ರಾ said...

ವಿಕಾಸ್,
ನಂದೂ ಅದೇ , ( ಅಂದ್ರೆ ನಾನೂ ಕೂಡ ನಿನ್ನ ವಾದವನ್ನು ಕೇಳುತ್ತಿರುತ್ತೇನೆ ಅಂತ ! ) ಧನ್ಯವಾದಗಳು . ಹೀಂಗೇ ಬರ್ತಾ ಇರು .

ಚಿತ್ರಾ said...

ಥ್ಯಾಂಕ್ಯೂ ಚುಚ್ರುತ ,
ಬತ್ತಾ ಇರು .( ಮತ್ತೆ , ಬರೀತಾನೂ ಇರು ! )

ಚಿತ್ರಾ said...

ಸುಧೇಶ್ ,
ಹೌದು ,ಬರೀ ಎರಡೇ ವರ್ಷ ಆಗಿರೋದು ! ನಂಗೆ ವಯಸ್ಸಾಯ್ತು ಅಂತ ಬ್ಲಾಗಿಗೂ ಹಾಗೇ ಅಂದ್ಕೊಂಡ್ರಾ?ಹಿ ಹಿ ಹಿ.
ಜನಪ್ರಿಯತೆ ಬಗ್ಗೆ ಹೇಳೋದಾದ್ರೆ , ನಿಮ್ಮ ಹೇಳಿಕೆ ಸ್ವಲ್ಪ ಜಾಸ್ತಿಯಾಯ್ತು ಅನಿಸತ್ತೆ. ಆ ಮಟ್ಟಕ್ಕೆ ತಲುಪಿಲ್ಲವೇನೋ ! ಅಪ್ ಡೇಟ್ ಮಾಡುವಲ್ಲಿಯೂ ಅಷ್ಟೇ , ಇತ್ತೀಚೆ ಸ್ವಲ್ಪ ಸೋಮಾರಿಯಾಗಿದ್ದೇನೆ. ನೋಡೋಣ , ಮೂರನೇ ವರ್ಷದಲ್ಲಿ ಏನಾಗತ್ತೆ ಅಂತ . ಕಾಯುತ್ತಿರಿ . ಧನ್ಯವಾದಗಳು

ಸಾಗರದಾಚೆಯ ಇಂಚರ said...

ಚಿತ್ರ
ನಿಮ್ಮ ಬ್ಲಾಗಿನ ಹುಟ್ಟುಹಬ್ಬಕ್ಕೆ ಶುಭಾಷಯ
ಸೋಮಾರಿತನ ನನ್ನನ್ನು ತುಂಬಾ ಕಾಡಿದೆ
ಬರೆಯಬೇಕು ಅಂತ ಮನಸಿದ್ದರೂ ಬರೆಯಲು ಆಗುತ್ತಿಲ್ಲ ಎನ್ನುವ ನಿಮ್ಮ ಕೊರಗು
ಬರವಣಿಗೆಯ ಬಗೆಗಿನ ನಿಮ್ಮ ತುಡಿತವನ್ನು ತೋರಿಸುತ್ತದೆ
ನಿಮ್ಮ ಸಾಧನೆ ಮುಂದುವರೆಯಲಿ

ಗೌತಮ್ ಹೆಗಡೆ said...

belated happy bday:)

ಚಿತ್ರಾ said...

ಗುರು,
ಸಾಗರದಾಚೆಯಿಂದ ನನ್ನ ಬ್ಲಾಗಿಗೆ ಬಂದು ಪ್ರೋತ್ಸಾಹಿಸುತ್ತಿರುವ ನಿಮಗೆ ಅನಂತ ಧನ್ಯವಾದಗಳು .ನಿಮ್ಮೆಲ್ಲರ ಪ್ರೋತ್ಸಾಹವೇ ಇಂದು ನನ್ನ ಬ್ಲಾಗ್ ೨ ವರ್ಷ ಪೂರೈಸಲು ಕಾರಣ .
ಬರುತ್ತಿರಿ

ಚಿತ್ರಾ said...

ಗೌತಮ್,
ಧನ್ಯವಾದಗಳು .

ಚಿತ್ರಾ said...

ಪ್ರಕಾಶಣ್ಣ ,
ನಿನ್ನ ಶುಭಾಶಯಕ್ಕಾಗಿ ಕಾಯುತ್ತಿದ್ದೆ ! ಇಷ್ಟು ದಿನವಾದರೂ ಹೇಳದ್ದಕ್ಕೆ ಇಂದು ಜಗಳವಾಡಿಯೇ ಬಿಡಬೇಕೆಂದುಕೊಂಡಿದ್ದೆ . ಸದ್ಯ ..
ಈ ಬ್ಲಾಗಿನಿಂದಾಗಿ ಅದೆಷ್ಟೋ ಬಾಂಧವ್ಯಗಳು ಬೆಸೆದುಕೊಂಡಿವೆ .ಒಂದು ಕಾಲದ ಅಪರಿಚಿತರೂ ಇಂದು ಆತ್ಮೀಯರಾಗಿ ಬಿಟ್ಟಿದ್ದಾರೆ . ಮುಖತಃ ಎಷ್ಟೋ ಜನರ ಪರಿಚಯವಿಲ್ಲದಿದ್ದರೂ ಬಹಳ ಜನರೊಂದಿಗೆ ಅತ್ಯಂತ ಒಳ್ಳೆಯ ಗೆಳೆತನ ಬೆಳೆಯುವಂತಾಗಿದೆ .. ಎಲ್ಲವು ಈ ಬ್ಲಾಗ್ ದೇವರ ಮಹಿಮೆ !!
ನಿನ್ನ ಬ್ಲಾಗಿನಷ್ಟು ನನ್ನ ಬ್ಲಾಗ್ ' ಇಂಟರೆಸ್ಟಿಂಗ್ ' ಅಲ್ಲವೆಂದು ನಾನು ಪ್ರಮಾಣ ಮಾಡಬಲ್ಲೆ ! ಆದರೂ , ನಿನ್ನ ಮೆಚ್ಚುಗೆಗೆ , ಪ್ರೋತ್ಸಾಹಕ್ಕೆ , ಪ್ರೀತಿ- ಬಾಂಧವ್ಯಕ್ಕೆ ನಾನು ಋಣಿ! ಇದು ಹೀಗೇ ಮುಂದುವರಿಯಲಿ ಎಂದು ಹಾರೈಸುವೆ !

Raghu said...

ಚಿತ್ರಾ ಅವರೇ.. ಬ್ಲಾಗ್ ಹುಟ್ಟಿದ ದಿನದ ಶುಭಾಶಯಗಳು... ನಿಮ್ಮ ಅನಿಸಿಕೆ ಸೂಪರ್..! ನೀವು ಬರ್ದೇ ಬರೀತಿರ.. ನಾವಂತೂ ಓದೇ ಓದ್ತೇವೆ...
ನಿಮ್ಮವ,
ರಾಘು.

vijay said...

ಚಿತ್ರಾ,

ಅಬ್ಬಾ ! ೭೩೦ ದಿನಗಳು
ಗತಿಸಿದವು... ಪುಟ್ಟ ಬರಹಗಾರ್ತಿ
ಹುಟ್ಟಿದ್ದು ಯಾವಾಗ?

ಮನದ ಭಾವನೆಗಳು ಗರಿ ಗೆದರಿ
ಸುಂದರ ಅಕ್ಷರಗಳು ಮೂಡಿದ್ದು,
ಮೂಡಿಸಿದ್ದು ಯಾವಗ ?

ಕಾಲ ಗತಿಯ ವೇಗ, ಮನಸ್ಸಿನ ಹುಚ್ಚು
ಹೊಳೆಯ ವೇಗ .. ಮಾಪನ
ಮಾಡಿದವರುಂಟೆ? ಈ ಬರಹಗಾರ್ತಿಗೆ
ಮತ್ತಸ್ಟು ಕೊಚ್ಚಿ ಹೊಗುವ ಆಸೆ
ಇನ್ನಸ್ಟು ಬರೆಯುಲುಂಟು
ಯಾವಾಗ?

ಪುಟ್ಟ ಪುಟ್ಟ ಹೆಜ್ಜೆ
ಇಡುತ್ತಾ,ಕಾಲಿಗೆ ಕಟ್ಟಿದ ಗೆಜ್ಜೆ
ಮಾಡುತ್ತಾ ಸಪ್ಪಳ
೩ನೆ ವರುಷ ಆರಂಬದ ಈ
ಪುಟ್ಟ ಕವಿ ಬರೆಯಲಿ ಸತತ
ನಾ ಹಾರ್ರೆಸುವೆ ನಿರಂತರ

ವಿಜಯ್

ಚಿತ್ರಾ said...

ರಾಘು,
ಧನ್ಯವಾದಗಳು ! ನಿಮ್ಮ ಪ್ರೋತ್ಸಾಹಕ್ಕೆ, ನಾನು ಬರೆದೇ ಬರೆಯುತ್ತೇನೆ ಎಂಬ ನಿಮ್ಮ ಭರವಸೆಗೆ ಹೆಮ್ಮೆ ಎನಿಸಿದರೂ ನೀವು ಓದಿಯೇ ಓದುತ್ತೇನೆ ಎಂದಿರಲ್ಲ ಆ ನಿಮ್ಮ ಧೈರ್ಯವನ್ನು ಮೆಚ್ಚುತ್ತೇನೆ . ಬರುತ್ತಿರಿ

ಚಿತ್ರಾ said...

ವಿಜಯ್
೭೩೦ ದಿನಗಳು ಎಂದರೆ ಗಾಬರಿಯಾಗಿಬಿಡುತ್ತದೆ ಹೀಗಾಗಿ ಎರಡೇ ವರ್ಷ ಎನ್ನೋಣವೇ? ಹಾ ಹಾ ಹಾ ..
ಈ ಬರಹಗಾರ್ತಿಗೆ ಶುಭಾಶಯ ಹೇಳುತ್ತಾ ನೀವೇ ಚಂದದ ಕವನವನ್ನು ಮೂಡಿಸಿದ್ದೀರಿ ! ಧನ್ಯವಾದಗಳು.
ನಿಮ್ಮ ಅಭಿಮಾನ , ಹಾರೈಕೆಗಳಿಗೆ ಮತ್ತೊಮ್ಮೆ ಮನದಾಳದಿಂದ ಧನ್ಯವಾದಗಳು . ಬರುತ್ತಿರಿ