June 21, 2010

ಅಪ್ಪ

ಮಮತೆಯೆಂದರೆ  ನೆನಪಾಗುವುದು 
ಅಮ್ಮನ ಮಡಿಲು 
ಮರೆಯುತ್ತೇವೇಕೆ   ತಲೆಯಿಟ್ಟು 
ಅತ್ತ ಅಪ್ಪನ ಹೆಗಲು ?

ಸುಡುವ ಸೂರ್ಯನ ಬಿಸಿಲ ದೂರುತ್ತೇವೆ 
ತಂಪೆರೆವ ಚಂದ್ರನನು  ಹೊಗಳುತ್ತೇವೆ
ಚಂದಿರನ ಬೆಳಕಿನಲು   
ಸೂರ್ಯನಾ  ಪ್ರತಿಫಲನ 
ಈ ನಿಜವ ಆ ಕ್ಷಣದಿ ಮರೆತೆವೆಕೆ?
 
ದೇವಕಿ  ಯಶೋದೆಯರ ವಾತ್ಸಲ್ಯದೆದುರು 
ಬುಟ್ಟಿಯಲಿ ಮಗುವಿಟ್ಟು  
ಕಪ್ಪನೆಯ ರಾತ್ರಿಯಲಿ 
ಉಕ್ಕುತಿಹ  ನದಿಯ ದಾಟಿ 
ಬೆಚ್ಚನೆಯ ಮಡಿಲಲ್ಲಿ 
ಕಂದನನು ಮಲಗಿಸಿದ 
ವಸುದೇವ ಮಂಕಾದನೆ ?
 
ಕೌಸಲ್ಯೆಯಾ ದುಖಃಕ್ಕೆ ಮರುಗುವಾಗ 
ಸುಮಿತ್ರೆಯ ನೋವಿಗೆ ಕರಗುವಾಗ 
ಪುತ್ರವಿಯೋಗದಲಿ 
ಪ್ರಾಣವನೆ  ತ್ಯಜಿಸಿದಾ 
ದಶರಥನು ನೆನಪಾದನೆ? 

ಅಮ್ಮನೆಂದೂ ಮೈದಡವಿ ಹರಿವ 
ಮಮತೆಯ ಹೊಳೆ 
ಅಪ್ಪನೂ ಅಲ್ಲವೇ ವಾತ್ಸಲ್ಯದ ಜೀವ ಸೆಲೆ? 
ಅಮ್ಮನ ಪ್ರೀತಿಯ ಗುಣಗಾನವೇ ಎಲ್ಲ 
ಅದರಲ್ಲಿ ಕೊಂಚವಾದರೂ ಅಪ್ಪನಿಗೆಕಿಲ್ಲ ?

ನೆನಪಿಟ್ಟೆವು ಅಮ್ಮ ಪ್ರೀತಿಯಿಂದ 
ಬಾಯಿಗಿಟ್ಟ ತುತ್ತು 
ಮರೆಯಿತೆ ಅಪ್ಪನ ಬೆವರಿನ ಹನಿಯು 
ಅದರಲ್ಲಿ ಬೆರೆತಿದ್ದು ?
ಜೀವನವಿಡೀ ಮಕ್ಕಳ ಹಿಂದೆ 
ಅಪ್ಪನ ಹೆಮ್ಮೆಯ ಕಣ್ಣು 
ಒಮ್ಮೆ ತಿರುಗಿ ನೋಡುವೆವೆ 
ಪ್ರೀತಿಯಿಂದ ಅವನನ್ನು ?  

ಬಿದ್ದಾಗ ಕೈ ಹಿಡಿದು ಎತ್ತಿದಾ ಅಪ್ಪ
ಕಣ್ಣೊರೆಸಿ ಮುದ್ದಿಟ್ಟು ತಲೆ ಸವರಿದಾ  ಅಪ್ಪ 
ನಾನಿರುವೆ ಎಂದು ಧೈರ್ಯ ತುಂಬಿದ  ಅಪ್ಪ 
ನಿಲ್ಲದೆ ಮುಂದುವರಿ ಎಂದು ಹುರಿದುಂಬಿಸಿದ ಅಪ್ಪ 
ಸಾಧಿಸಲು ,ಹೆಮ್ಮೆಯಲಿ ಬೆನ್ನು ತಟ್ಟಿದ  ಅಪ್ಪ 

ತಡವಾದರೂ ಸರಿಯೇ , ಹೇಳುವೆನು ನಾನೀಗ 
" ಈ ಕವನ ನಿನಗೆ ಅರ್ಪಣೆ  ಅಪ್ಪಾ  " 

   

19 comments:

ಚುಕ್ಕಿಚಿತ್ತಾರ said...

tumbaa channaagide kavite..

appayyana nenapaagi manassu hrudaya tumbi bantu....!!!!

ದಿವ್ಯಾ said...

chitra mam,
Nice poem...:-)
ishta aaytu....:-)

PARAANJAPE K.N. said...

Too Good.

ಸವಿಗನಸು said...

ಚೆಂದದ ಕವನ....nuffie

Girish said...

Touching....

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

Nice Chitrakka!

sunaath said...

ಅಪ್ಪ, ಅಮ್ಮ ಇಬ್ಬರೂ ಬೇಕೇ ಬೇಕಲ್ಲವೆ? ಮಗುವಿಗೆ ಇಬ್ಬರೂ
ಪೂರಕ ಪೋಷಕರೇ!

ಸುಮ said...

ಒಳ್ಳೆಯ ಕವಿತೆ ಚಿತ್ರ ...ಇಷ್ಟ ಆಯ್ತು.

ತೇಜಸ್ವಿನಿ ಹೆಗಡೆ said...

ರಾಶಿ ಇಷ್ಟಾತು ಕವನ.... ತುಂಬಾ ಚೆನ್ನಾಗಿ ಮೂಡಿ ಬಂಜು.

jithendra hindumane said...

ಅಪ್ಪನ ಬಗ್ಗೆ ಬರೆಯೋಕೆ ಅಪ್ಪನ ದಿವೇ ಬರಬೇಕಾಯ್ತು...
ನೈಸ್....

ಸುಧೇಶ್ ಶೆಟ್ಟಿ said...

ತು೦ಬಾ ಇಷ್ಟ ಆಯಿತು ಚಿತ್ರ...

ಹೌದು... ಅಪ್ಪ ಯಾವಾಗಲು ಎಲೆ ಮರೆಯ ಕಾಯಿಯಂತೆ ಇರುತ್ತಾನಲ್ಲ....! ಅಪ್ಪನಿಗೆ ಸಮರ್ಪಿಸಿ ಕವಿತೆಯನ್ನು ಸಾರ್ಥಕ ಗೊಳಿಸಿದಿರಿ...

Raghu said...

ಒಳ್ಳೆಯ ಕವನ. ಚೆನ್ನಾಗಿದೆ.
ನಿಮ್ಮವ,
ರಾಘು.

ಸೀತಾರಾಮ. ಕೆ. / SITARAM.K said...

ಅಪ್ಪನ ಬಗ್ಗೆ ಚೆನ್ನಾಗಿ ಬರೆದಿದ್ದಿರಾ ಸು೦ದರ ಕವನದ ಮೂಲಕ.

ಮನದಾಳದಿಂದ............ said...

ಸುಡುವ ಸೂರ್ಯನ ಬಿಸಿಲ ದೂರುತ್ತೇವೆ
ತಂಪೆರೆವ ಚಂದ್ರನನು ಹೊಗಳುತ್ತೇವೆ
ಚಂದಿರನ ಬೆಳಕಿನಲು
ಸೂರ್ಯನಾ ಪ್ರತಿಫಲನ
ಈ ನಿಜವ ಆ ಕ್ಷಣದಿ ಮರೆತೆವೆಕೆ?

ಅರ್ಥಗರ್ಭಿತ ಸಾಲುಗಳು.
ತಾಯಿಯ ಮಮತೆ ಎಷ್ಟು ಆಳವೋ ತಂದೆಯ ಪ್ರೀತಿ ಅಷ್ಟೇ ಅಗಾಧ.
ಅಪ್ಪಂದಿರ ದಿನಾಚರಣೆಯ ಈ ಸಂದರ್ಭದಲ್ಲಿ ನಿಮ್ಮ ಕವನ ಇಷ್ಟವಾಯಿತು.

!! ಜ್ಞಾನಾರ್ಪಣಾಮಸ್ತು !! said...

ಚಿತ್ರಾ ,

ತುಂಬಾನೇ ಇಷ್ಟ ಆಯ್ತು..
ಬಳಸಿರುವ ವಿಷಯಗಳಲ್ಲೂ ಆಯ್ಕೆ ಸೂಪರ್ರ್..

shivu.k said...

ಚಿತ್ರ ಮೇಡಮ್,

ಅಪ್ಪನ ಬಗ್ಗೆ ಭಾವಪೂರ್ಣ ಕವನ.
ಅಪ್ಪನ ಬಗ್ಗೆ ಒಂದು ಉತ್ತಮ ಸಿನಿಮ "ನಾನು ಮತ್ತು ನನ್ನ ಕನಸು" ಇವತ್ತು ಕುಟುಂಬ ಸಮೇತ ಹೋಗಿ ನೋಡಿದೆವು. ಅದು ನಿಜಕ್ಕೂ ಒಂದು ಉತ್ತಮ ಸಿನಿಮಾ..ಬಿಡುವಾದರೆ ನೀವು ನೋಡಿ.

ಚಿತ್ರಾ said...

ಪ್ರತಿಕ್ರಿಯಿಸಿದ , ಪ್ರೋತ್ಸಾಹಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ಕಾರಣಾಂತರಗಳಿಂದ ಬ್ಲಾಗಿನತ್ತ ಗಮನ ಕೊಡಲಾಗುತ್ತಿಲ್ಲ . ದಯವಿಟ್ಟು ಕ್ಷಮಿಸಿ

Deepasmitha said...

ಒಳ್ಳೆಯ ಕವಿತೆ

Siddhartha Hadimani said...

ಅರಿವಿಲ್ಲದೆಯೆ ಆನಂದಭಾಷ್ಪ ತರಿಸಿತು.