ನಿನ್ನ ಕನಸುಗಳಲ್ಲಿ ನಾನಿಹೆನೋ ಇಲ್ಲವೋ
ನನ್ನ ಕನವರಿಕೆಯಲಿ ನೀನಿರುವೆ ಗೆಳೆಯ
ಬೆಳಗಿನಲಿ ಸಂಜೆಯಲಿ , ಏಕಾಂತದಿರುಳಿನಲಿ
ನನ್ನ ಮನ ಬಯಸಿಹುದು ನಿನ್ನ ಸನಿಯ
ತನುವ ಕಚಗುಳಿಯಿಡುತ ಕೇಳುತಿದೆ ತಂಗಾಳಿ
ಎಂದು ಬರುವನು ಹೇಳು ನಿನ್ನ ಇನಿಯ ?
ಬಳಸುವನೆ ತೋಳಿನಲಿ ಕೆಣಕುವನೆ ಮಾತಿನಲಿ ?
ಪಿಸುಮಾತು ತುಂಬುವುದೇ ನಿನ್ನ ಕಿವಿಯ ?
ಮುಡಿದ ಮಲ್ಲಿಗೆ ಮಾಲೆ ಜಡೆಯಲ್ಲೇ ಬಾಡುವುದೇ?
ಪರಿಮಳವು ಪಸರುವುದೇ ಕೋಣೆಯಲ್ಲಿ?
ಬಳೆಯ ಕಿಂಕಿಣಿ ನಾದ ಕೇಳುವುದೇ ನೀ ಹೇಳು
ಕುಂಕುಮವು ಕರಗುವುದೇ ಬೆವರಿನಲ್ಲಿ ?
ಸಂಜೆ ಇಳಿದಿದೆ ನಲ್ಲ , ಒಳಗೆ ಬೆಳಗಿದೆ ದೀಪ
ಸಜ್ಜೆಮನೆಯೊಳಗಿಹುದು ಧೂಪದಾರತಿಯು
ಕಾತರದಿ ಕಾಯುತಿಹೆ ಮನೆಯ ಮುಂಬಾಗಿಲಲಿ
ಬಂದು ಬೇಗನೆ ಮನಕೆ ಮುದವ ನೀಡು
3 comments:
Beautiful poem. ವಿರಹಿಣಿಯ ಪ್ರತೀಕ್ಷೆ ಮನವನ್ನು ಆವರಿಸುತ್ತಿದೆ.
kayuvikeya kavalugalu..chendada kavana
kayuvikeya kavalugalu..chendada kavana
Post a Comment