ಹರಿಯುತ್ತಿರಬೇಕು ಕಣಾ ಪ್ರೀತಿ
ನನ್ನಿಂದ ನಿನ್ನತ್ತ
ನಿನ್ನಿಂದ ನನ್ನತ್ತ
ನಮ್ಮಿಬ್ಬರೆದೆಯೊಳಗೆ ಜೀವನದಿಯಾಗಿ
ಹರಿಯುತ್ತಿರಬೇಕು ಕಣಾ ಪ್ರೀತಿ !
ಹರಿಯಬಾರದು ಭಾವದೆಳೆಗಳು
ಕೊರೆಯಬಾರದು ಗೆರೆಯ ಎದೆಯೊಳು
ಜೀವವನು ಕಾಪಿಟ್ಟ
ಹೃದಯವೇ ತಾನಾಗಿ
ಮಿಡಿಯುತ್ತಿರಬೇಕು ಕಣಾ ಪ್ರೀತಿ
ನೋವನಳಿಸುವ ಜಗವ ಮರೆಸುವ
ಮನದೊಳಗೆ ಸದಾ ಬೆಳಕ ಬೀರುವ
ತಮವನಳಿಸುತ
ಎಂದೂ ಆರದ
ನಂದಾ ದೀಪವೇ ತಾನಾಗಿ
ಬೆಳಗುತ್ತಿರಬೇಕು ಕಣಾ ಪ್ರೀತಿ
6 comments:
"ಹರಿಯಬಾರದು ಭಾವದೆಳೆಗಳು
ಕೊರೆಯಬಾರದು ಗೆರೆಯ ಎದೆಯೊಳು"
ನಿಜ ಚಿತ್ರ.. ಪ್ರೀತಿ ಮೂಡಿಸುವ ಗಾಯದ ಗೆರೆ ಯಾವ ಮುಲಾಮಿನಿಂದಲೂ ವಾಸಿಯಾಗದು. ಕೆಲವೊಮ್ಮೆ ಕಾಲವೂ ಮದ್ದಾಗಿ ಪರಿಣಮಿಸದು! ಇದೇ ಗೆರೆ ಮುಂದೆ ಕಂದಕವಾಗಿ ಹರಿದು ಬರುವ ಪ್ರೀತಿಯನ್ನೇ ನುಂಗಿಹಾಕುವುದು.. ರಾಶಿ ಚೊಲೋ ಇದ್ದು ಕವನ. ಇಷ್ಟ ಆತು.
ಚಿತ್ರಾ...
ಪ್ರತಿ ಸಾಲುಗಳನ್ನೂ ಇಷ್ಟಪಟ್ಟೆ.
ಅದರಲ್ಲೂ
"ಹರಿಯಬಾರದು ಭಾವದೆಳೆಗಳು
ಕೊರೆಯಬಾರದು ಗೆರೆಯ ಎದೆಯೊಳು
ಜೀವವನು ಕಾಪಿಟ್ಟ
ಹೃದಯವೇ ತಾನಾಗಿ
ಮಿಡಿಯುತ್ತಿರಬೇಕು"
ಭಾವಗೀತೆಯಿದು.
ತುಂಬ ಇಷ್ಟ ಆತು, ಬರೀತಾ ಇರು ಹಿಂಗೇ.
ತೇಜೂ ,
ನೀ ಹೇಳಿದ್ದು ನಿಜಾನೆ. ಮನಸಿಗಾದ ಗಾಯಕ್ಕೆಲ್ಲ ಕೆಲವೊಮ್ಮೆ ಕಾಲವೂ ಮದ್ದೂ ತಾಗ್ತಿಲ್ಲೆ.
ಧನ್ಯವಾದಗಳು.
ಶಾಂತಲಾ,
ಮೆಚ್ಚುಗೆಗೆ ಧನ್ಯವಾದಗಳು. ನಿಜ ಹೇಳ ಬೇಕೆಂದರೆ, ಈ ಕವಿತೆ ನನಗೆ ಪೂರ್ತಿ ಸಮಾಧಾನ ಕೊಟ್ಟಿಲ್ಲ. ಹೇಳಬೇಕಾದ್ದು ಇನ್ನೂ ಇದೆ .. ಯಾಕೋ ಅರ್ಧ ಮನಸ್ಸಿಂದ ಬರೆದೆನೇನೋ ಅನಿಸುತ್ತಿದೆ.
ಚೆ೦ದ ಇತ್ತು ಕವನ. ಇಷ್ಟವಾಯ್ತು.
ಪ್ರೀತಿ ಎನ್ನುವ ಭಾವ ಕವನವಾಗಿ ಬಂದಿದೆ.
ಚಿತ್ರ ಮೇಡಮ್,
ಪ್ರೀತಿ ಬಗೆಗಿನ ಕವನ ನನಗಿಷ್ಟವಾಯಿತು....
ಹರಿಯಬಾರದು ಭಾವದೆಳೆಗಳು
ಕೊರೆಯಬಾರದು ಗೆರೆಯ ಎದೆಯೊಳು"
ಸಾಲುಗಳು ಇಷ್ಟವಾದವು.... ನನ್ನ ಬ್ಲಾಗಿನಲ್ಲೂ ಮೊದಲ ಬಾರಿಗೆ ಒಂದು ಕವನ ಬರೆದಿದ್ದೇನೆ.... ನೋಡಲು ಓದಿ ಸಹಿಸಿಕೊಳ್ಳಲು ಬನ್ನಿ.....
Post a Comment