October 25, 2008

ದೀಪಾವಳಿಯ ಶುಭಾಶಯಗಳು !


ದೀಪಾವಳಿ ಬಂದೇ ಬಿಡ್ತು ! ಇಲ್ಲಿ ನಮಗೆಲ್ಲ ೫ ದಿನಗಳ ರಜೆ ಆಫೀಸಿಗೆ. ಮಗಳಿಗೂ ೨ ವಾರಗಳ ರಜೆ .
ಊರಿಗೆ ಹೋಗಬೇಕು. ಸಮೀಪದ ಬಂಧುಗಳೊಬ್ಬರು ತೀರಿಕೊಂಡಿದ್ದರಿಂದ ಈ ಸಲ ಹಬ್ಬ ಇಲ್ಲ . ಆದರೂ ಎಲ್ಲರನ್ನೂ
ಭೇಟಿಯಾಗಲು ದೀಪಾವಳಿ ಒಂದು ಅವಕಾಶ. ಹೀಗಾಗಿ ಪ್ರತೀ ದೀಪಾವಳಿಗೂ ಊರಿಗಂತೂ ಹೋಗುತ್ತೇವೆ.
ಈ ಸಲವೂ ಹೋಗಿ ಬರುತ್ತೇನೆ. ಗೋಪೂಜೆ, ಚಪ್ಪೆ ದೋಸೆ ಇಲ್ಲ. ಪಟಾಕಿ ಸುಡಬಾರದು ಎಂದು ನನ್ನ ಪರಿಸರವಾದಿ ಮಗಳು ಎರಡು ವರ್ಷಗಳ ಹಿಂದೆಯೇ ಅಪ್ಪಣೆ ಕೊಡಿಸಿದ್ದಾಳೆ. ಹೀಗಾಗಿ ,ಮಕ್ಕಳ ಖುಷಿಗಾಗಿ ಬಾಗಿಲಲ್ಲಿ ಹಣತೆ ಹಚ್ಚಿ ಆಕಾಶಬುಟ್ಟಿ ತೂಗುಬಿಡುವುದಷ್ಟೇ ಈ ವರ್ಷದ ಕಾರ್ಯಕ್ರಮ.
ನಾಳೆ ಊರಿಗೆ ಹೋದರೆ ಇನ್ನು ೧೦ ದಿನಗಳ ಕಾಲ ಆಫೀಸಿನ ಗಲಾಟೆಯಿಲ್ಲದೆ ಹಾಯಾಗಿ ಕಾಲ ಕಳೆಯಬಹುದು .
ತಿರುಗಿ ಬಂದ ಮೇಲೆ ಬರೆಯುತ್ತೇನೆ.


ಹೃದಯದ ಹಣತೆಯಲ್ಲಿ
ಪ್ರೀತಿಯ ತೈಲವೆರೆದು
ಹಚ್ಚೋಣ ಬನ್ನಿ ಪ್ರೇಮದಾ ದೀಪ

ದ್ವೇಷ ಭಾವವನಳಿಸಿ
ಆತ್ಮೀಯತೆಯ ಬೆಳೆಸಿ
ಬೆಳಗೋಣ ಬನ್ನಿ ಶಾಂತಿಯ ದೀಪ
ನಿಮಗೆಲ್ಲರಿಗೂ ದೀಪಾವಳಿಯ ಹೃತ್ಪೂರ್ವಕ ಶುಭಾಶಯಗಳು !




5 comments:

sunaath said...

ಚಿತ್ರಾ,
ನಿಮಗೂ ಸಹ ದೀಪಾವಳಿಯ ಶುಭಾಶಯಗಳು.

ತೇಜಸ್ವಿನಿ ಹೆಗಡೆ said...

ಚಿತ್ರಾ,

ತುಂಬಾ ಸುಂದರ ಕವಿತೆಯಮೂಲಕ ಹಬ್ಬವನ್ನು ಬರಮಾಡಿಕೊಂಡು ನಮಗೆಲ್ಲಾ ಶುಭಾಶಯ ಹೇಳಿದ ನಿಮಗೂ ನಿಮ್ಮ ಮನೆಯವರಿಗೆಲ್ಲರಿಗೂ ನನ್ನ ಕಡೆಯಿಂದಲೂ ದೀಪಾವಳಿಯ ಹಾರ್ದಿಕ ಶುಭಾಶಯಗಳು. :)

ಸಿರಿ ಪರಿಸರವಾದಿಯಾಗ್ತಾ ಇದ್ದು ಕೇಳಿ ರಾಶಿ ಖುಶಿಯಾತು. ಹೀಂಗೇ ಮುಂದುವರೀಲಿ ಅದ್ರ ಉತ್ತಮ ವಿಚಾರಧಾರೆ. ಜೊತೆಗೂಡಲೆ ಅದಿತಿನೂ ಬರ್ತು ಬಿಡು :)

ಸುಧೇಶ್ ಶೆಟ್ಟಿ said...

ನನಗೂ ಈ ಸರ್ತಿ ದೀಪಾವಳಿ ಇಲ್ಲ. ಏಕೆ೦ದರೆ ನಾನು ಭಾರತದಲ್ಲಿ ಇಲ್ಲ. ಇಲ್ಲಿ ಕೂತು ನನ್ನ ಹಳ್ಳಿಯಲ್ಲಿ ಆಚರಿಸುತ್ತಿದ್ದ ದೀಪಾವಳಿಯನ್ನು ನೆನೆಸಿಕೊ೦ಡಾಗ ಕಣ್ಣ೦ಚಿನಲ್ಲಿ ಸಣ್ಣದೊ೦ದು ಬಿ೦ದು.

ಚಿತ್ರಾ said...

ಸುನಾಥ್ ಕಾಕಾ, ತೇಜಸ್ವಿನಿ,
ಧನ್ಯವಾದಗಳು.



ಸುಧೇಶ್ ,
ನಿಮ್ಮ ಬೇಸರ ಅರ್ಥವಾಗುತ್ತದೆ. ಮುಂದಿನ ಸಲ ಇನ್ನೂ ಹೆಚ್ಚು ಉತ್ಸಾಹದಿಂದ ಆಚರಿಸಿಬಿಡಿ !

shivu.k said...

ಚಿತ್ರಾ ಮೇಡಮ್,

ಬ್ಲಾಗನ್ನು ಇವತ್ತೇ ಓದಿದ್ದರಿಂದ ನಿಮಗೆ ದೀಪಾವಳಿ ಶುಭಾಶಯವನ್ನು ಈಗ ಹೇಳುತ್ತಿದ್ದೇನೆ....ಸ್ವೀಕರಿಸಿ...