December 19, 2008

ನೆನಪುಗಳು

ಈ ನೆನಪುಗಳೇ ಹೀಗೆ.
ನಗಿಸುತ್ತವೊಮ್ಮೆ , ಅಳಿಸುತ್ತವೊಮ್ಮೆ.
ಕಾಡಿಸಿ ಗೋಳಾಡಿಸುತ್ತವೆ ಮತ್ತೊಮ್ಮೆ.
ಈ ನೆನಪುಗಳೇ ಹೀಗೆ
ಬೇಕೆಂದಾಗ ಬಾರದೇ
ಬೇಡವಾದಾಗ ಬಂದು
ಕಾಡತೊಡಗುತ್ತವೆ

ಎಷ್ಟೋ ಸಲ ಕೇವಲ ನೆನಪುಗಳಲ್ಲಿ
ಜೀವನವೇ ಕಳೆದು ಹೋಗುತ್ತದೆ.

8 comments:

Ittigecement said...

ಚಿತ್ರಾರವರೆ..

ಕವನ ತುಂಬಾ ಚೆನ್ನಾಗಿದೆ..
" ಮತ್ತದೆ..ಸಂಜೆ..ಅದೆ ಏಕಾಂತ.."
ನೆನಪಾಯಿತು....

ಭಾವಪೂರ್ಣವಾಗಿ ಬರೆದಿದ್ದೀರಿ...
ಅಭಿನಂದನೆಗಳು..

ತೇಜಸ್ವಿನಿ ಹೆಗಡೆ said...

ಚಿತ್ರಾ,

ನನಗೂ ಈ "ನೆನಪು" ವಿಷಯ ಬಹಳವಾಗಿ ಕಾಡುತ್ತಿರುತ್ತದೆ. ನೆನಪು-ಮರೆವು ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೇ? ಇದೇ ವಿಷಯದಲ್ಲಿ ನಾನೂ ಒಂದು ಕವನ ರಚಿಸಿದ್ದೆ. ಸಮಯವಾದಾಗ ನೋಡಬಹುದು. ಲಿಂಕ್ ಇಲ್ಲಿದೆ.
http://manasa-hegde.blogspot.com/2008/01/blog-post_4370.html

ಕವನ ಚೆನ್ನಾಗಿದೆ. ಉತ್ತಮ ಪ್ರಯತ್ನ. :)

ಚಂದ್ರಕಾಂತ ಎಸ್ said...

ನೆನಪುಗಳ ವಿಲಕ್ಷಣತೆಯೇ ಅದು. ಯಾವುದನ್ನು ಯಾವಾಗ ಮರೆಯಬೇಕೋ ಆವಾಗ ಬಂದು ಕುಕ್ಕಿ ಕೊಲ್ಲುತ್ತವೆ !ಆದರೆ ನೆನಪು ವರವಾಗುವುದು ವೃದ್ಧಾಪ್ಯದಲ್ಲಿ ಮಾತ್ರ.
ಇತ್ತಿಚೆಗೆ ನೆನಪಿನ ಬಗ್ಗೆ ನಾನೊಂದು ಕತೆ ಬರೆದಿರುವೆ. ಸಮಯವಿದ್ದಾಗ ನನ್ನ ಬ್ಲಾಗ್ ಗೊಮ್ಮೆ ಭೇಟಿ ಕೊಡಿ.

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ,

ಎಷ್ಟೋ ಸಲ ಕೇವಲ ನೆನಪುಗಳಲ್ಲಿ
ಜೀವನವೇ ಕಳೆದು ಹೋಗುತ್ತದೆ.

ಎಷ್ಟು ಸತ್ಯ.
ನೆನಪಿನ ವಿಷಯಕ್ಕೆ ನಾನು ತಿನ್ನುತ್ತಿದ್ದ ಬಯ್ಗುಳಗಳ ನೆನಪಾಯಿತು:)

Arun said...

ಪರವಾಗಿಲ್ಲ ತುಂಬಾ ಚೆನ್ನಾಗಿ ಮೂಡಿ ಬಂದಿದೆ!! ಒಂಟಿ ಜೀವಿಗೆ ಇದರ ಬಿಡಲಾರದ ನಂಟು. ಮರವು ಹ್ಯಾಗೆ ವರದಾನವೊ ನೆನಪು ಕೂಡ ಮನುಶ್ಯನಿಗೆ ದೆವರ ಅಮೊಘ ಕಾಣಿಕೆ .
ವಬ್ಬೊಬ್ಬರಿಗೆ ಒಂದೊಂದು ಕ್ಯಾಪ್ಯಾಸಿಟಿಯ ಹಾರ್ಡ್ ಡಿಸ್ಕ್!! ಏನಂತಿಯಾ ಚಿತ್ರಾ ?

ಚಿತ್ರಾ said...

ಪ್ರಕಾಶ್,
ಧನ್ಯವಾದಗಳು.

ತೇಜೂ,
ನಿಜ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳೇ. ಆದರೆ, ಯಾವಾಗಲೂ , ಹೆಡ್ ಬೇಕಾದಾಗ ಟೈಲ್ , ಟೈಲ್ ಬೇಕಾದಾಗ ಹೆಡ್ ಬೀಳುವುದು ವಿಚಿತ್ರ ಅಲ್ಲವೆ?

ಚಂದ್ರಕಾಂತಾ,
ನಿಮ್ಮ ನೆನಪುಗಳನ್ನು ಓದಿದೆ . ಚೆನ್ನಾಗಿದೆ .

ಸುಧೇಶ್,
ಧನ್ಯವಾದಗಳು. ನೀವು ಬಯ್ಗುಳ ತಿನ್ನುತ್ತಿದ್ದದ್ದು ಮರೆಗುಳಿತನಕ್ಕೋ ಅಥವಾ ಬೇಡದ್ದನ್ನೆಲ್ಲ ನೆನಪಿಡುತ್ತಿದ್ದುದಕ್ಕೋ ? :)

ದೇಶಪಾಂಡೆಯವ್ರೆ,
ಧನ್ಯವಾದಗಳು ! ನೀವೂ ನನ್ನ ಬ್ಲಾಗಿಗೆ ಭೇಟಿ ಕೊಡೋದನ್ನ ನೆನಪಿಟ್ಟುಕೊಳ್ರಿ. ಹಾರ್ಡ್ ಡಿಸ್ಕ್ ನಿಂದ ಬೇಡದ್ದನ್ನ ತೆಗೆದು ಹಾಕಿ ಜಾಗ ಮಾಡ್ಕೋರಿ

shivu.k said...

ಚಿತ್ರಾ ಮೇಡಮ್,

ನೆನಪಿನ ಕವನ ಚೆನ್ನಾಗಿದೆ....

"ಸವಿನೆನಪು ಅಳಬೇಕು
ಸವಿಯಲೇ ಬದುಕು "

ಹಾಡು ನೆನಪಾಯಿತು.

ಶಾಂತಲಾ ಭಂಡಿ (ಸನ್ನಿಧಿ) said...
This comment has been removed by the author.