March 9, 2009

ಸ್ತ್ರೀ

ಹೆಣ್ಣು

ಸಕಲ ಜೀವಿಗಳಿಗೆ ತಾಯಿಯಾಗಿ
ಪುರುಷರಿಗೆ ಪತ್ನಿಯಾಗಿ
ಸಹೋದರಿಯಾಗಿ,
ಕಾಮುಕರಿಗೆ ಭೋಗವಸ್ತುವಾಗಿ
ದೌರ್ಜನ್ಯಕ್ಕೆ ಬಲಿಯಾಗಿ
ಮುನಿಗಳಿಗೆ ಮಾಯೆಯಾಗಿ
ಪರಮಶಕ್ತಿಯಾಗಿ
ಎಲ್ಲವೂ ಆಗಿ
ಯುಗ ಗಳಿಂದಲೂ ಸಂಪೂರ್ಣ
ಅಂತರಾಳವ ಅರಿಯಲಾಗದ
ನಿಗೂಢತೆ!

--------------------

ಯುಗಾಂತರ

ತ್ರೇತಾಯುಗದಲ್ಲಿ,
ಸೀತೆ ಸಹನ ಶೀಲೆಯಾಗಿದ್ದಳು ,
ಕುಸುಮ ಕೋಮಲೆಯಾಗಿದ್ದಳು
ಅಪಹರಿಸಿದ ರಾವಣ
ಸೀತೆಯ ಸಹಾಯಕ್ಕೆ ರಾಮ -ಲಕ್ಷ್ಮಣ

ನಂತರ ಬಂತು ದ್ವಾಪರ
ಇದೋ ಇವಳೇ ದ್ರೌಪದಿ
ಬೆಂಕಿಯ ಬಾಲೆ , ಅಗ್ನಿಜ್ವಾಲೆ ,
ಅವಳನ್ನು ಕೆಣಕಿದರು ಕೌರವರು
ಪಾಂಚಾಲಿಯ ಎಡಬಲಕೆ ಪಾಂಡವರು

ಇದೀಗ ಕಲಿಯುಗ
ಇವರೆ ನೋಡಿ ಆಧುನಿಕ ವನಿತೆಯರು
ಒಬ್ಬರೇ ಇರುವರೆಂದು ಕೆಣಕದಿರಿ ಜೋಕೆ
ಬಲಕ್ಕಿವರಿಗೆ ಯಾರೂ ಬೇಕಿಲ್ಲ !

------------------------------
ಉಪದೇಶ

ಹೆಣ್ಣೇ ನೀನು
ಭೂಮಿಯಂತಾಗು
ಸಹನಶೀಲೆಯಾಗು
ಎಂದು ಹೆಜ್ಜೆ ಹೆಜ್ಜೆಗೂ
ಬೋಧಿಸುವವರು
ಭೂಮಿಯೂ ಕಂಪಿಸುವುದನ್ನು
ಜ್ವಾಲಾಮುಖಿಗಳನ್ನು ಸ್ಫೋಟಿಸುವುದನ್ನು
ಮರೆತೇ ಬಿಡುತ್ತಾರೆ

( ನಿನ್ನೆಯೇ ಬ್ಲ್ಲಾಗ್ ನಲ್ಲಿ ಕಾಣಬೇಕಿತ್ತಾದರೂ ಅಂತರ್ಜಾಲದ ತೊಂದರೆಯಿಂದಾಗಿ ಇಂದು ಹಾಕುತ್ತಿರುವೆ. ನಮ್ಮ ಪಾಲಿಗೆ ಪ್ರತಿದಿನವೂ ಮಹಿಳಾದಿನವೇ ! )

13 comments:

Ittigecement said...

ಚಿತ್ರಾ...

ನೂರಾರು ಶಬ್ಧಗಳಲ್ಲಿ ..
ಗದ್ಯದಲ್ಲಿ..
ಹೇಳುವ..

ಭಾವಾರ್ಥವನ್ನು ..
ಕವನದಲ್ಲಿ..
ಕೆಲವೇ ಪದಗಳಲ್ಲಿ..

ಭಾವಾರ್ಥವನ್ನು ಸಮರ್ಥವಾಗಿ

ಹೇಳಿದ್ದೀರಿ..

ಮಹಿಳಾ ದಿನಾಚರಣೆಯ ಶುಭಾಶಯಗಳು

ಚಂದದ ಕವನಕ್ಕಾಗಿ..
ಅಭಿನಂದನೆಗಳು...

ತೇಜಸ್ವಿನಿ ಹೆಗಡೆ said...

ಚಿತ್ರಕ್ಕಾ,

ಮಹಿಳಾ ದಿನಚರಣೆಯ ಶುಭಾಶಯಗಳು..:) ಯುಗಾಂತರ ರಾಶೀ ಚೊಲೋ ಬಂಜು. ಉಪದೇಶನೂ ಇಷ್ಟಾ ಆತು. ಚಿತ್ರಕ್ಕ ಚುಟುಕುಗಳನ್ನೂ ಬರೀತು ಹೇಳೆ ಗೊತ್ತಿತ್ತಿಲ್ಲೆ..:):-P

Santhosh Rao said...

wow.. simply superb.. tumb chennagide..

shivu.k said...

ಚಿತ್ರಾ ಮೇಡಮ್,

ಮೂರು ಕವನಗಳಲ್ಲಿ ಹೆಣ್ಣಿನ ಸಂಪೂರ್ಣ ಚಿತ್ರಣವನ್ನು ಕೊಟ್ಟಿದ್ದೀರಿ.....

ಮೂರು ಕವನಗಳು ಅರ್ಥಗರ್ಭಿತವಾಗಿವೆ...

ಮತ್ತೊಮ್ಮೆ...ಮಹಿಳಾ ದಿನಾಚರಣೆಯ ಶುಭಾಶಯಗಳು
ಅಭಿನಂದನೆಗಳು....

sunaath said...

ಚಿತ್ರಾ,
ಮಹಿಳಾದಿನದ ಶುಭಾಶಯಗಳು.
ಸ್ತ್ರೀ ತನ್ನ ಶಕ್ತಿಯನ್ನು ಮರಳಿ ಪಡೆಯುತ್ತಿದ್ದಾಳೆ.
ನಿನ್ನ ಕವನ ಅದರ ಮುಂಗುರುಹು.

ಚಿತ್ರಾ said...

ಪ್ರಕಾಶಣ್ಣ ,
ಕವನಗಳನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು .ಮತ್ತೆ , ಮಹಿಳಾ ದಿನದ ಶುಭಾಶಯಗಳಿಗೂ ಕೂಡ ಧನ್ಯವಾದಗಳು.

ತೇಜೂ,
ಮೆಚ್ಚುಗೆಗೆ ಧನ್ಯವಾದಗಳು.ಖರೇ ಅಂದ್ರೆ, ನಾ ಬರೆಯಲು ಶುರುಮಾಡಿದ್ದೇ ಚುಟುಕಗಳಿಂದ. ಆದ್ರೆ ಅದು ರಾಶಿ ಹಳೇ ಮಾತು. ಮುಂಚೆ ಬರೆದಿದ್ದೆಲ್ಲ ಈಗ ಎಲ್ಲಿಹೋತು ಹೇಳೂ ಗೊತ್ತಿಲ್ಲೆ ನೋಡು !

ಚಿತ್ರಾ said...

ಸಂತೋಷ್,
ಮೆಚ್ಚಿದ್ದಕ್ಕೆ ತುಂಬಾ ಥ್ಯಾಂಕ್ಸ್ ಕಣ್ರೀ.ನೀವೂ ಕೂಡ ಚೆನ್ನಾಗಿ ಬರೀತೀರಾ.

ಶಿವೂ,
ಹೆಣ್ಣಾಗಿ ಹೆಣ್ಣನ್ನು ಅರ್ಥ ಮಾಡಿಕೊಳ್ಳಲಾಗುತ್ತದಾ ಎಂಬ ಚಿಕ್ಕ ಪ್ರಯತ್ನವಷ್ಟೇ ಈ ಕವನಗಳು. ನಿಮ್ಮ ಮೆಚ್ಚುಗೆಗೆ , ಶುಭಾಶಯಗಳಿಗೆ , ಧನ್ಯವಾದಗಳು.

ಕಾಕಾ,
ಶುಭಾಶ್ಯಗಳಿಗೆ ಧನ್ಯವಾದಗಳು.
ಸ್ತ್ರೀಗೆ ತನ್ನ ಶಕ್ತಿಯ ಅರಿವು ಮೂಡಬೇಕು , ಅದರ ಸದುಪಯೋಗವಾಗಬೇಕು ಎಂಬುದು ನನ್ನ ಆಸೆ.
ನಿಮ್ಮ ಆಶೀರ್ವಾದ, ಪ್ರೋತ್ಸಾಹ ಹೀಗೆಯೇ ಇರಲಿ .

PARAANJAPE K.N. said...

ಚಿತ್ರಾ,
ಮಹಿಳಾ ದಿನಾಚರಣೆ ಬಾಬ್ತು ತಡವಾಗಿ ಅಭಿನ೦ದನೆ. ನಿಮ್ಮ ಕವನವನ್ನು ನಿನ್ನೆಯೇ ಓದಿದ್ದೆ. ಆದರೆ ಅ೦ತರ್ಜಾಲ ಸ೦ಪರ್ಕದಲ್ಲಿನ ವ್ಯತ್ಯಯದಿ೦ದ ಅಭಿಪ್ರಾಯಿಸುವಲ್ಲಿ ತಡವಾಗಿದೆ. ಚೆನ್ನಾಗಿದೆ. ಮು೦ದುವರಿಯಲಿ ನಿಮ್ಮ ಕಾವ್ಯರಸಧಾರೆ.

ಚಂದ್ರಕಾಂತ ಎಸ್ said...

ಚಿತ್ರಾ

ನಿಮಗೆ ತಡವಾಗಿಯಾದರೂ ಮಹಿಳಾದಿನದ ಶುಭ ಹಾರೈಕೆಗಳು. ನನಗೂ ಸಹ ನಿಮ್ಮಂತೆ ಎಲ್ಲಾ ದಿನಗಳೂ ನಮ್ಮ ದಿನಗಳೇ ಅನಿಸುತ್ತದೆ.

ನಿಮ್ಮ ಯುಗಾಂತರ ಬಹಳ ಇಷ್ಟವಾಯಿತು.

Unknown said...

ನಂಗೂ ಬರಲೆ ತಡವಾಗೋತು. ಮಹಿಳಾ ದಿನದ ಶುಭಾಶಯಗಳು.

ಸುಧೇಶ್ ಶೆಟ್ಟಿ said...

ಚಿತ್ರಾಕ್ಕ... ಬಿಲೇಟೆಡ್ ವಿಶಸ್...

ನೀವು ಕವನಗಳಲ್ಲಿ ಹೇಳಿರುವುದು ಅಕ್ಷರಶ: ಸತ್ಯ....

ಚಿತ್ರಾ said...

ಪರಾಂಜಪೆಯವರೆ,
ಧನ್ಯವಾದಗಳು. ಶುಭಾಶಯಕ್ಕೆ ಹಾಗೂ ಕವನ ಮೆಚ್ಚಿದ್ದಕ್ಕೆ. ತಡವಾದರೂ ಪರವಾಗಿಲ್ಲ. ಬರುತ್ತಿರಿ.

ಚಂದ್ರಕ್ಕಾ ,
( ಹೀಗೆ ಕರೆದರೆ ಪರವಾಗಿಲ್ಲವೆ? )
ಧನ್ಯವಾದಗಳು. ಯಾವ ದಿನವೇ ಇದ್ದರೂ ಮಹಿಳೆಯರ ದಿನಚರಿಯಲ್ಲಿ ವ್ಯತ್ಯಾಸವಾಗುವುದು ಕಮ್ಮಿ ಅಲ್ಲವೆ? ಅದಕ್ಕೆ ನನಗೆ ಪ್ರತಿದಿನವೂ ನಮ್ಮ ದಿನ ಎನಿಸುತ್ತದೆ !

ಚಿತ್ರಾ said...

ಮಧೂ,
ಧನ್ಯವಾದಗಳು. ಬರುತ್ತಾ ಇರು.

ಸುಧೇಶ್,
ಧನ್ಯವಾದಗಳು. ಶುಭಾಶಯಕ್ಕೆ ಹಾಗೂ ಮೆಚ್ಚುಗೆಗೆ.