ಸದಾ ಅವಳ ಜೊತೆಯಾಗಿರುವಾಸೆ ಗೆಳೆಯಾ
ಏನು ಮಾಡಲಿ ಹೇಳು ಉಪಾಯ ?
ಜಡೆಯ ಮಲ್ಲಿಗೆಯಾಗಲೆ?
ದುಂಡು ಕೈಗಳ ಬಳೆಯಾಗಲೇ?
ಕಾಲ ಮುತ್ತಿಡುವ ಗೆಜ್ಜೆಯಾಗಲೇ?
ನುಣುಪುಗೊರಳಿನ ಸರವಾಗಲೇ?
ಬಡಬಡಿಸಿದ ಪ್ರೇಮಿ .
ಅದನು ಕೇಳಿದ ಗೆಳೆಯನೆಂದ
ಯಾವ ಕಾಲದಲ್ಲಿರುವೆ ನೀನಿನ್ನೂ ?
ಬಳೆ , ಕಾಲ್ಗೆಜ್ಜೆ , ಚಿನ್ನದ ಚೈನ್
ಇವೆಲ್ಲಾ ಈಗ ಹಳೆ ಫ್ಯಾಶನ್
ಜಡೆಯೇ ಇಲ್ಲದ ಮೇಲೆ ಮಲ್ಲಿಗೆಯೆಲ್ಲಿ ?
ಇಂಥಾ ಯೋಚನೆ ಯಾಕೋ ನಿನ್ನ ತಲೆಯಲ್ಲಿ ?
ಸದಾ ಅವಳ
ಕಿವಿಗೆ ಕಚಗುಳಿಯಿಟ್ಟು
ಮೃದು ಕೆನ್ನೆಯ ಸವರಿ
ತುಟಿಯ ಮುದ್ದಿಸುವ ಆಸೆಯಿದ್ದರೆ
ಓ ಗೆಳೆಯಾ ಕೇಳು
ಬೇರೇನೂ ಬೇಡ ಆಗು
ಅವಳ ಕೈಯ ಮೊಬೈಲು !!
10 comments:
ನಿಜ ಹೇಳಿದ ಅವನು ...ಆದ್ರೆ ಮೊಬೈಲ್ ಪ್ರತಿ ವರ್ಷ ಬಾದಲ್ ಆಗುತ್ತೆ.
ಸುಂದರ ವರ್ಣನೆ... :)
ಹ ಹ.. ಮಸ್ತ್ :)
wow..wow..wow....nice lines..:):)
waah...super....mobile change agade irali ashte....
ಎರಡನೇ ಪ್ಯಾರಾ ಬದಲಾಗಿರೊ ಕಾಲಕ್ಕೆ ಸಂಸ್ಕೃತಿಗೆ ವಿಡಂಬನೆಯಾದರೆ ಮೂರನೆಯದು ಮಾತ್ರ ಪಕ್ಕಾ ವಾಸ್ತವ..
ಯಾಕೆಂದರೆ ಇದು ಮೊಬೈಲ್ ಲೋಕಾನೇ....
ಪದಗಳನ್ನು ತುಂಬಾ ಚನ್ನಾಗಿ ಹೆಣೆದಿದ್ದೀರಿ...
ಖುಷಿಯಾಯಿತು.
ಚಿತ್ರಾ..ಒಪ್ಪಿದೆ...ಒಪ್ಪಿದೆ..ಆದ್ರೆ ಈ ಮೂ ಬೋಲಿ ಗೆ ಸದ್ಯಕ್ಕೆ ಎದುರು ಇಲ್ಲ ...ನೋ ಟಕ್ಕರ್ ಅಲ್ವಾ..?
Super aagidhe :)
ಚಿತ್ರಾ...
ಆಗಾಗ ಮೊಬೈಲ್ ಬ್ಲಾಸ್ಟ್ ಆದ ಸುದ್ಧಿನೂ ಕೇಳ್ತಾ ಇರ್ತೀವಿ..
ಕವನ ಪ್ರತಿ ಸಾಲುಗಳನ್ನು ಹೆಣೆದ ರೀತಿ...
ಆ...ತುಂಟತನ ಇಷ್ಟವಾಗಿಬಿಡುತ್ತದೆ...
ಜೈ ಹೋ !!
ಹಹಹಾ..ಮಜಾ ಇದ್ದು
super....nice....
Post a Comment