ಕಂಡೂ ಕಾಣದ ಸಂಜೆಯಲಿ 
ಅತ್ತಿತ್ತ ನೋಡುತ್ತಾ 
ಮೆತ್ತಗೆ ಮುತ್ತಿಟ್ಟು  ಕರಗಿದವಳೇ 
ಬಿಸಿಯೇರಿದಾ ಕೆನ್ನೆ 
ತಂಪಾಗುವ  ಮೊದಲು
ಕೆಂಪಾದ ಪರಿಯನ್ನು ನೋಡದವಳೇ 
ಕೈಯಲ್ಲಿ ಕೈಯಿಟ್ಟು 
ಬೆರಳಾಟವಾಡುತ್ತ
ತುಂಟನೋಟವ ಬೀರಿ ನಾಚಿದವಳೇ 
ಎದೆಬಡಿತ ಏರಿಸಿ 
ಕೆನ್ನೆ ಕೆಂಪಾಗಿಸಿ 
ಕೈಗೆ ಸಿಗದೆಲೆ ದೂರ ಓಡಿದವಳೆ ! 
ಕಾಯುತಿರುವೆನು ನಿನ್ನ
ಗೆಜ್ಜೆ ಕಾಲಿನ ಸದ್ದು 
ಮೆಲ್ಲಗೆ ಬಳಿಬಂದು ಅಪ್ಪಿಕೊಳ್ಳೆ
 
 
4 comments:
ಆಹಾ.. ಪ್ರೇಮಿಗಳ ದಿನಕ್ಕೊಂದು ಪ್ರೇಮ ಪದ್ಯ ;-)
ಆಹಾ... ನನ್ನ ತಾರುಣ್ಯದ ಎಲ್ಲ ಕನಸಿನ ಕನ್ಯೆಯರನ್ನೂ ನೆನಪಿಗೆ ತಂದಿರಿ....
ತುಂಬ romantic ಕವನ!
ಎಲ್ಲರಿಗೂ ಧನ್ಯವಾದಗಳು !
Post a Comment