ಇರುಳ ನೆರಳಲಿ  ಎನ್ನ 
ಮರುಳು ಮಾಡುವುದೇಕೆ 
ಮುಂಗುರುಳ ಸರಿಸುತಲಿ
ಮುದ್ದುಗರೆಯುವೆಯೇಕೆ 
ನನ್ನೊಲವೆ ನೀನೆಂದು 
ಮೋಹಗೊಳಿಸುವುದೇಕೆ 
ಅಧರಗಳ ಮಧುವನ್ನು 
ಸವಿದು ನಗುತಿಹೆಯೇಕೆ 
ಹೃದಯದಲಿ ನೂರಾರು 
ಬಯಕೆ ತುಂಬುವುದೇಕೆ 
ಮತ್ತೀಗ ಮೌನದಲಿ  
ಮನವ ಕಲಕುವುದೇಕೆ
ಹಾಗೇಕೆ ಹೀಗೇಕೆ
ಹೇಳು ಇನಿಯಾ 
ಬರುವುದೋ ಬಿಡುವುದೋ 
ನಿನ್ನ ಸನಿಯ 
 
 
2 comments:
ಮುಗುದೆಯ ಪ್ರೇಮಪೂರ್ಣ ಭಾವನೆಗಳಿಗೆ ನವಿರಾದ ಅಭಿವ್ಯಕ್ತಿಯನ್ನು ಕೊಟ್ಟಿದ್ದೀರಿ, ಚಿತ್ರಾ. ಈ ನುಡಿಗೆ ಮರುಳಾಗದ ನಲ್ಲನಿರಲು ಸಾಧ್ಯವೆ?
ಕಾಕಾ ,
ನಿಮ್ಮ ಪ್ರೋತ್ಸಾಹದ ನುಡಿಗಳು ನನ್ನಲ್ಲಿ ಸ್ಫೂರ್ತಿ ತುಂಬುತ್ತವೆ ! ಹೀಗೆ ಆಶೀರ್ವದಿಸುತ್ತಿರಿ .
Post a Comment