ಅಂದು ನೀ ನಕ್ಕಾಗ ಸಂಜೆಯಲಿ ಕೆಂಪಿತ್ತು  
ತಿಂಗಳನ ಅಂಗಳದಿ ಬೆಳದಿಂಗಳರಳಿತ್ತು
ಮಲ್ಲಿಗೆಯ ಮಂಟಪದಿ  ಪರಿಮಳವು ಹರಡಿತ್ತು 
ಚೆಂಗುಲಾಬಿಯು ಮುಳ್ಳ ನಡುವೆಯೂ ಬಿರಿದಿತ್ತು 
ನಿನ್ನ ಕಣ್ಣೋಟದಲಿ ಮಾದಕತೆ ತುಳುಕಿತ್ತು
ಬಳಿಗೆ ಬಾ ಎನ್ನುತಲಿ ನನ್ನನ್ನು ಕರೆದಿತ್ತು 
ಕಾಲಗೆಜ್ಜೆಯ ನಾದ ಎದೆಯ ಝಲ್ಲೆನಿಸಿತ್ತು 
ನನ್ನುಸಿರೇ ನೀನಾಗಿ ಎದೆಯ ತುಂಬಿರುವಾಗ
ಭೂಮಿ-ಬಾನೆಲ್ಲವೂ ಒಂದಾಗಿ  ನಲಿದಿತ್ತು
 
 
2 comments:
ಸಿಹಿಯಾದ, ಮಧುರವಾದ ಕವನ. ಇಂತಹ ಗೀತೆಗೆ ಯಾರು ಮಾರು ಹೋಗದಿರರು?
ಥ್ಯಾಂಕ್ಯೂ ಕಾಕಾ !
ಅಂದ ಹಾಗೆ ನಿಮ್ಮ ಇಮೇಲ್ ವಿಳಾಸ ತಿಳಿಸುವಿರಾ? ಎಂದಾದರೂ ಊರಿಗೆ ಹೋಗುವಾಗ ಧಾರವಾಡ ಹೊಕ್ಕರೆ ನಿಮ್ಮನ್ನು ಭೇಟಿ ಮಾಡುವ ಆಸೆಯಿದೆ .
Post a Comment