ನಾಲ್ಕು ವರ್ಷಗಳ ಹಿಂದೆ ;
" ಅಮ್ಮಾ, ಪಾಪ್ಯುಲೇಶನ್ ಕಂಟ್ರೋಲ್ ಬಗ್ಗೆ ನಂಗೆ ಸ್ವಲ್ಪ ಅನುಮಾನ ಇದೆ ಅಮ್ಮಾ, ನೀನೇನಾದ್ರೂ ಸರಿಯಾಗಿ ಎಕ್ಸ್ ಪ್ಲೈನ್ ಮಾಡ್ತೀಯಾ? "
ನನ್ನ ಮಗಳು ಕೇಳಿದ ಪ್ರಶ್ನೆಗೆ ಒಮ್ಮೆ ದಂಗಾಗಿ ನಿಂತೆ. ಈ ಪುಟ್ಟ ಪೋರಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ಯೋಚಿಸುವಂತಾದಳೆ? ಎಂದು ಗೊಂದಲದಲ್ಲಿದ್ದಾಗ ಅದರ ಹಿನ್ನೆಲೆ ವಿವರಿಸಿದಳು .
" ಇವತ್ತು ಸ್ಕೂಲ್ ನಲ್ಲಿ ಪಾಪ್ಯುಲೇಶನ್ ಕಂಟ್ರೋಲ್ ಬಗ್ಗೆ ಪಾಠ ಮಾಡಿದ್ರಮ್ಮಾ . ಆದರೆ , ನಂಗೆ ಅರ್ಥ ಆಗದೇ ಇರೋದು ಅಂದ್ರೆ , ಈ ಪಾಪ್ಯುಲೇಶನ್ ಕಂಟ್ರೋಲ್ ಹೇಗೆ ಮಾಡ್ತಾರೆ ಅಂತ ! ಇದ್ದವರನ್ನೆಲ್ಲ ಸಾಯಿಸೋದಂತೂ ಸಾಧ್ಯ ಇಲ್ಲ ಅಲ್ವಾ? ಮತ್ತೆ ಹೇಗೆ ಅಂತ ? "
ಇದೊಳ್ಳೆ ಕತೆ ಆಯ್ತಲ್ಲಪ್ಪ ! ಈಗ ಇವಳಿಗೆ ಎಕ್ಸ್ ಪ್ಲೈನ್ ಹೇಗೆ ಮಾಡಲಿ ಅಂತ ಯೋಚಿಸ್ತಾ ಇದ್ದಾಗ ಒಂದು ಐಡಿಯಾ ಬಂತು.
" ಪುಟ್ಟೀ, ಅದು ಹೇಗೆ ಅಂದ್ರೆ , ನೋಡು, ಪಾಪ್ಯುಲೇಶನ್ ಒಂದೇ ಸಲಕ್ಕಂತು ಕಮ್ಮಿ ಮಾಡೋದು ಸಾಧ್ಯ ಇಲ್ಲ .ನೀನು ಹೇಳಿದ ಹಾಗೇ , ಈಗ ಇದ್ದವರನ್ನಂತೂ ಏನು ಮಾಡೋಕೂ ಆಗಲ್ಲ ಅಲ್ವಾ? ಅದಕ್ಕೇ , ಇರೋವ್ರೆಲ್ಲ ಕಮ್ಮಿ ಮಕ್ಕಳನ್ನ ಮಾಡ್ಕೊಂಡ್ರೆ, ನಿಧಾನವಾಗಿ ಪಾಪ್ಯುಲೇಶನ್ ಕಮ್ಮಿಯಾಗತ್ತೆ. "
" ಅದು ಹೇಗಮ್ಮಾ ಕಮ್ಮಿ ಮಕ್ಕಳನ್ನು ಮಾಡ್ಕೊಳೋದು ? "
ಇನ್ನೊಂದು ಬಾಂಬ್ ಬಿತ್ತು !
ಸ್ವಲ್ಪ ಯೋಚಿಸಿದವಳು ಹೇಳಿದೆ.
" ನೋಡು, ಈಗ ನನ್ನ ಅಜ್ಜ ,ಅಜ್ಜಿಗೆ ೮-೯ ಜನ ಮಕ್ಕಳಿದ್ರು. ನಿನ್ನ ಅಜ್ಜ , ಅಜ್ಜಿಗೆ ನಾವು ಮೂರೇ ಜನ . ಮತ್ತೆ ನಂಗೆ ನೀನೊಬ್ಬಳೇ ಅಲ್ವ? ಅಲ್ಲಿಗೆ ಮಕ್ಕಳು ಕಮ್ಮಿಯಾದ್ರು ತಾನೆ? "
ಕೆಲ ಸೆಕೆಂಡ್ ಸುಮ್ಮನೆ ಇದ್ದವಳು ಮೆಲ್ಲಗೆ, ಸಪ್ಪೆ ದನಿಯಲ್ಲಿ ಕೇಳಿದಳು
" ಅಮ್ಮಾ, ಹಾಗಾದ್ರೆ , ನಂಗೆ ಒಂದೂ ಮಕ್ಕಳಿಲ್ವಾ? "
ಅವಳ ಮುಗ್ಧ ಪ್ರಶ್ನೆಗೆ ಬಂದ ನಗು , ಅವಳ ಬಾಡಿದ ಮುಖ ನೋಡಿ ಅಲ್ಲೇ ನಿಂತು ಹೋಯಿತು !.
6 comments:
ನಿಮ್ಮ ಲೇಖನ ನೋಡಿದ ಮೇಲೆ, ನಾನು ಅನೇಕ ವರ್ಷಗಳ ಹಿಂದೆ ಓದಿದ ಒಂದು ಇಂಗ್ಲಿಶ್ ಜೋಕು ನೆನಪಿಗೆ ಬಂದಿತು. ಅದು ಹೀಗಿದೆ.
Mother wants to explain to the kid her relation with the father.
Mother:"Child, you should know that myself and your father have sexual relationship"
Kid:"Then,why I have never met them all these days?"
ಇಲ್ಲಿಗೇ ನಿಲ್ಸೋಕೆ ನಾವು ಬಿಡೋದಿಲ್ಲ. ಮುಂದೆ ಏನಾಯ್ತು, ಏನಂದ್ರಿ ಅಂತ ಹೇಳಿ :)
ಅಕ್ಕಯ್ಯಾ... ಅಂತು ಬ್ಲೊಗ್ಸಲೇ ಶುರು ಮಾಡಿದ್ದೆ ಹೇಳಿ ಆತು.
ಚೊಲೋ ಬರಿತ ಇದ್ದೆ.. ಬರಿ ಬರಿ.. ಸರಿ ಬರಿತಾ ಇದ್ಯ ಇಲ್ಯ ಹೇಳಿ ಆವಾಗ ಆವಾಗ ನಾನು ಬಂದು ನೋಡ್ತಿ.. .
ಮ್ಯಾಲೆ ಇದು (Keep it up!)
ಚಿತ್ರಾ ಅವರೆ...
ಮೂರಿದ್ದಿದ್ದು ನಂತರದ ತಲೆಮಾರಿಗೆ ಒಮ್ಮೆಲೇ ಒಂದರ ಲೆಕ್ಕ ತೋರಿಸಿಬಿಟ್ಟಿರುವಾಗ ನಿಮ್ಮ ಮಗಳ ಲೆಕ್ಕಾಚಾರ ಸರಿಯಾಗಿದೆ ತಾನೆ? :)
@ ಸುನಾಥ್ ಅವರೇ ,
ಜೋಕ್ ಚೆನ್ನಾಗಿದೆ. ಎಷ್ಟೋ ಸಲ ಪುಟ್ಟ ಮಕ್ಕಳಿರುವಾಗ, ಇಂಥಾ ಸಂದರ್ಭಗಳು ಸಹಜ ಅಲ್ಲವೆ?
@ ವಿಕಾಸ್,
ಮುಂದೇನಾಯ್ತು ಅಂತ ಮತ್ತೊಂದು ಸಲ ಹೇಳ್ತೀನಿ ! :)
@ ಶಾಂತಲಾ ,
ಜನಸಂಖ್ಯೆಯನ್ನು ಸ್ವಲ್ಪ ಫಾಸ್ಟಾಗಿ ಕಮ್ಮಿ ಮಾಡುವ ಉದ್ದೇಶದಿಂದ ಲೆಕ್ಕ ಮೂರರಿಂದ ಸೀದಾ ಒಂದಕ್ಕಿಳಿದಿದೆ ! :-))
ಹೋಯ್ ತೇಜಾ,
ನಾ ಬ್ಲಾಗಲೆ ಶುರು ಮಾಡಿ ಸುಮಾರು ೪ ತಿಂಗಳಾದ ಮೇಲೆ ಅಂತೂ ಒಂದು ಕಾಮೆಂಟ್ ಬರದ್ದೆ ನೀನು ! ಎಂಥಾ ತಮ್ಮನೋ ಮಾರಾಯಾ ! ಆಗ್ಲಿ , ಸರೀ ಬರೀತ್ನಾ ಇಲ್ಯ ಹೇಳಿ ನೋಡಲಾದ್ರೂ ಬರ್ತಾ ಇರು !
Post a Comment