August 26, 2020

ಪ್ರೀತಿಯೇ ಹಾಗೆ

 ಪ್ರೀತಿಯೇ ಹಾಗೆ 
ಸಿಗಬೇಕು  ಅಚಾನಕ್ ಆಗಿ
ಹಿಂದೆಂದೂ ನೋಡದಷ್ಟು 
ಮುಂದೆಂದೂ ಕಾಣದಷ್ಟು !

ಪ್ರೀತಿಯೇ ಹಾಗೆ 
ತುಂಬಿಕೊಳ್ಳ ಬೇಕು ಎದೆಯಲ್ಲಿ 
ಮೊಗೆದಷ್ಟೂ ಮುಗಿಯದಂತೆ 
ಕುಡಿದಷ್ಟೂ ತೀರದಂತೆ !

ಪ್ರೀತಿಯೇ ಹಾಗೆ 
ಆವರಿಸಬೇಕು ನಮ್ಮನ್ನು 
ನೋವೆಂದೂ ತಾಗದಂತೆ 
ಭರವಸೆಯ ನೀಡುವಂತೆ !

2 comments:

sunaath said...

ಪ್ರೀತಿಯೇ ಹಾಗೆ
ಪ್ರೀತಿ ತುಂಬಿದ ಕವನವನ್ನು
ನೀವು ಬರೆಯುವಂತೆ!

ಚಿತ್ರಾ said...

ಕಾಕಾ ,
ಧನ್ಯಳಾದೆ!