September 14, 2020

ಹೊಸ ಪೀಳಿಗೆಯ ಜಾನಪದ ಗೀತೆ!ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ
ಎಲ್ಲಾ ಸುದ್ದಿಯ ಕೊಡುವಂಥಾs
ಎಲ್ಲ ಸುದ್ದಿಯ ಕೊಡುವಂಥಾ ಮೊಬೈಲ್ ನ
ಎದ್ದೊಂದು ಗಳಿಗೆ ಹಿಡದೇನss

ಟಿಕ್ ಟಾಕ್ ವಿಡಿಯೋ ಚಂದ ಮತ್ತೆ ಪಬ್ ಜಿ ಯು ಚಂದ 
ಮೊಬೈಲ್ ನಲಿ ಚಂದ ಯೂ  ಟ್ಯೂಬುs 
ಮೊಬೈಲ್ ನಲಿ ಚಂದ ಯೂ ಟ್ಯೂಬು  ಇದ್ದರೆ 
ಹೊಸ ಹೊಸ ಅಡುಗೆ  ಮಾಡೇನss 

ಮೊಬೈಲೇ  ಮಾತಾಯಿ ಹಾಕೇನ ಫೇಸ್ ಬುಕ್ಕು 
ಇನ್ಸ್ಟಾಗ್ರಾಮು ಮತ್ತೆ ವಾಟ್ಸಪ್ಪುs 
ಇನ್ಸ್ಟಾಗ್ರಾಮು ಮತ್ತೆ ವಾಟ್ಸಪ್ಪು ಇದ್ದರೆ 
ದಿನವೆಲ್ಲ ನೋಡುತ್ತಾ  ಕಳೆದೇನಾss 

2 comments:

sunaath said...

ಅಹಾ! ಮೋಬೈಲ ನೆಚ್ಚು, ಮೋಬೈಲೆ ಮೆಚ್ಚು,
ಮೋಬೈಲ ಹುಚ್ಚು ಬಲು ಹೆಚ್ಚು, ಓ ಮಗಳೆ
ಮೋಬೈಲು ನಿನಗಿರಲಿ ಸ್ಥಿರವಾಗಿ!

ಚಿತ್ರಾ said...

ಹಾಹಾಹಾ ...
ಹೊಸ ಪೀಳಿಗೆಯ ಬೇಡಿಕೆ ಹಾಗೂ ಆಶೀರ್ವಾದ ಎರಡೂ ಇದೇ !
ಥ್ಯಾಂಕ್ಸ್ ಕಾಕಾ !