April 22, 2023

ನಾವಿಲ್ಲ !


ಚಿಗುರು ಮೂಡುವ ಮೊದಲೇ
ಕೊಡಲಿಯಲಿ ಕಡಿಯುವೆವು
ನಮ್ಮ ಬಣ್ಣಗಳಲ್ಲಿ ಹಸುರಿಲ್ಲ !

ಭೂಮಿಯನು ಅಗೆದಗೆದು
ಬರಿದಾಗಿಸಿದೆವು ಜಲವ
ಬಾಯಾರಿದರೆ ಗುಟುಕು ನೀರಿಲ್ಲ !

ಬೋಳಾಗಿಸಿದೆವು ಮರವ
ಬರಡಾಗಿಸಿದೆವು ನೆಲವ
ಹಂಬಲಿಸಿದರು ಚೂರು ನೆರಳಿಲ್ಲ

ಈ ಭೂಮಿ ನಮದಲ್ಲ
ನಮ್ಮ ಮಕ್ಕಳ ಆಸ್ತಿ
ಈ ಸತ್ಯವನು ನಾವು ತಿಳಿದಿಲ್ಲ !

ಕನಸು ಕಾಣುವ ಮೊದಲು
ವಾಸ್ತವವ ನೋಡಿದರೆ
ನಮ್ಮ ನಾಳೆಗಳಲ್ಲಿ ನಾವಿಲ್ಲ !

( ಫೋಟೋ ಕೃಪೆ : ಅಂತರ್ಜಾಲ )

33 comments:

Raghu said...

ಚಿತ್ರಾ,
ತುಂಬಾ ಚೆನ್ನಾಗಿದೆ... ಗ್ಲೋಬಲ್ ವಾರ್ಮಿಂಗ್ ಗೆ ನಾವೇ ದಾರಿ ಮಾಡಿ ಕೊಡ್ತಾ ಇದ್ದೇವೆ... ಅಲ್ವ...? ನೀರಿನ ಮಟ್ಟ ಎಷ್ಟು ಕಮ್ಮಿ ಆಗಿದೆ ಅಂತ ಊರಲ್ಲಿ ನಮ್ಮ ಮನೆ ಬಾವಿನಲ್ಲಿ ಗೊತ್ತಾಗುತ್ತೆ... ಹೀಗೆ ಆದರೆ ಸತ್ಯವಾಗಲು ನಮ್ಮ ನಾಳೆಗಳಲ್ಲಿ ನಾವಿಲ್ಲ !
ನಿಮ್ಮವ,
ರಾಘು.

ಸವಿಗನಸು said...

ಚಿತ್ರಾ,
ಕವನದ ಸಂದೇಶ ಚೆನ್ನಾಗಿದೆ...
ಅಭಿನಂದನೆಗಳು...

ಸುಮ said...

ಚೆನ್ನಾಗಿದೆ. ಪುಟ್ಟ ಕವನ ತುಂಬ ದೊಡ್ಡ ವಿಚಾರವನ್ನು ತಿಳಿಹೇಳುತ್ತಿದೆ.

ತೇಜಸ್ವಿನಿ ಹೆಗಡೆ said...

ಚಿತ್ರಕ್ಕ,

ಚಿಕ್ಕದಾದರೂ ವಿಶಾಲಾರ್ಥವನ್ನು ಹೇಳುವ ಕವನ ತುಂಬಾ ಚೆನ್ನಾಗಿದೆ. ನಮ್ಮ ನಾಳೆಗಳಲ್ಲಿ ಖಂಡಿತ ನಾವಿರುವುದು ಸಂಶಯ. ಆದರೆ ನಮ್ಮ ಮಕ್ಕಳು, ಅವರ ಮುಂದಿನ ಪೀಳಿಗೆಗಳಿಗೆ ನಾವು ನಾಳೆಯನ್ನೇ ಉಳಿಸುತ್ತಿಲ್ಲ ಎನ್ನುವುದೂ ಕಟು ಸತ್ಯ!

ಮಾನವೀಯತೆ ಇರುವವ ಮಾನವ ಎಂದೆಣಿಸಿಕೊಳ್ಳುತ್ತಾನೆ ಎಂದಿದ್ದರು ಹಿರಿಯರು. ಆದರೆ ಈಗ ಮಾನವ ಮಾನ‘ವಿಲ್ಲದವ’ನಾಗುತ್ತಿದ್ದಾನೆ. :(

Arun said...

ಚಿತ್ರ !!
ಇಷ್ಟೊಂದು ವಳ್ಳೆ ವಿಚಾರ ಎಷ್ಟೊಂದು ಸಲೀಸಾಗಿ ಮಂಡಿಸಿದ್ದಿಯ? ಭಲೇ ಭಲೇ ಹುಡುಗಿ !! ಭಲೇ
ಮಿ ತುಲಾ hazar ವೇಳಾ ಸಾಂಗೀತ್ಲಯ !!! ಅಸ್ಸ ಸಘ್ಳ ಲಿಹಿತಜಾ ಮಹನುನ್!!
ನಾ ತಿಳಕೊಂಡ ನಾವಿಲ್ಲ ಅಂದ್ರ ೨೦೧೨ ಬಗ್ಗೆ ಬರಿತ್ಯೋ ಅಂತ !! ಫೋಟೋ ನೋಡಿ ಹಾಗೆ ಅನಿಸ್ತು
ಅಪ್ರತಿಮ ಅಪ್ರತಿಮ !!

ಸುಧೇಶ್ ಶೆಟ್ಟಿ said...

"ನಮ್ಮ ನಾಳೆಗಳಲ್ಲಿ ನಾವಿಲ್ಲ." ಅನ್ನುವುದು ತು೦ಬಾ ಸತ್ಯ ಚೆತ್ರಾ ಅವರೇ.. ತು೦ಬಾ ಅರ್ಥಪೂರ್ಣವಾಗಿ ಬ೦ದಿದೆ... ಒ೦ದು ಕ್ಷಣ ಕೂತು ಯೋಚಿಸುವ೦ತೆ ಮಾಡಿತು...

ಸೀತಾರಾಮ. ಕೆ. / SITARAM.K said...

ಅದ್ಭುತ ಕವನ. ಮಾನವನ ದುರಾಸೆಗೆ ಒಳ್ಳೇ ಕೈಗನ್ನಡಿ ತಮ್ಮ ಕವನ. ಕೊನೆಯ ಸಾಲು "ನಮ್ಮ ನಾಳೆಗಳಲ್ಲಿ ನಾವಿಲ್ಲ!" ಅರ್ಥಗರ್ಭಿತ ಹಾಗೂ ಅತ್ಯುತ್ತಮ ಸಾಲು.

ಶಿವಪ್ರಕಾಶ್ said...

ನಿಜ ಮೇಡಂ...
ಸ್ವಾರ್ಥ ಜೀವನಕ್ಕಾಗಿ, ಮುಂದಿನ ಪೀಳಿಗೆಗೆ ಏನನ್ನೂ ಉಳಿಸದೆ ಹೋಗುತ್ತಿದ್ದೇವೆ..
ನಿಮ್ಮ ಕವನದ ಸಾಲುಗಳು ಅದ್ಭುತವಾಗಿವೆ.

ರಾಹುದೆಸೆ !! said...

ಸುಮಾ ಅವ್ರೆ..

ತುಂಬಾ ಅರ್ಥಲಯವಾದ ಸಾಲುಗಳು..

ಇನ್ನೊಂದು ವಿಷಯ :ಇಂದು ಜನರು ಕಾರ್ಖಾನೆ,.. ಮುಂತಾದವುಗಳನ್ನು ಸ್ಥಾಪಿಸಲು ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಮಾರಹೊರಟಿದ್ದಾರೆ,ಮಾರುವ ಮುನ್ನ ಅವರು ಅವರ ಜನ್ಮಜರು ಎಷ್ಟು ವರ್ಷಗಳಿಂದ ಆ ಆಸ್ತಿಯನ್ನು ಕಾಪಾಡಿಕೊಂಡು ಬಂದಿದ್ದರೆಂದು ತಿಳಿಯುವುದು ಉತ್ತಮ ಅಲ್ಲವೇ..?

Ittigecement said...

ಚಿತ್ರಾ...

ನಿನ್ನೆ "೨೦೧೨" ನೋಡಿ ಬಂದಿದ್ದೆ.
ವಿನಾಶದತ್ತ ಮುಖ ಮಾಡಿರುವ ಪ್ರಪಂಚದ
ಕಹಿ ಮುಖ ...
ಆ ಮುಖ ನಮ್ಮದೆ ಎನ್ನುವದು ಕಟು ಸತ್ಯ...

"ನಮ್ಮ ನಾಳೆಗಳಲ್ಲಿ ನಾವಿಲ್ಲ "
ಸತ್ಯವಾದ ಮಾತು...!

ಆದರೂ...
ಬರಿದಾದ ಹೃದಯಲ್ಲಿ..
ಕೊನರುವದು ಭಾವಗಳು...
ನೆಲ ಬಿರಿದ ಬೇಸಿಗೆಯಲಿ..
ತಂಪೆರೆಯುವದು
ಮಳೆಯ ಹನಿ ಹನಿಗಳು"

ನಿರಾಸೆ ಬೇಡ..

ಹೊಸ ಚಿಗುರು..
ಚಿಗಿಯುವದು..
ಒಣಗಿದೆಲೆಯು
ಉದುರಿದ ನಂತರವು...

ಚಂದದ ಕವಿತೆಗೆ...
ಅದರ ಭಾವಗಳಿಗೆ ಅಭಿನಂದನೆಗಳು...

Dileep Hegde said...

ಚಿತ್ರಾ ಮೇಡಂ..
ನಮ್ಮ ನಾಳೆಗಳಲ್ಲಿ ನಾವಿಲ್ಲ... ಸತ್ಯವಾದ ಮಾತು.. ಕ್ಷಣಿಕ ಸುಖದ ಬೆನ್ನು ಹತ್ತಿ ಆಧುನೀಕರಣದ ಅಮಲಿನಲ್ಲಿ ನಮ್ಮ ನಾಳೆಗಳನ್ನು ನಾವೇ ನಾಶ ಮಾಡುತ್ತಿದ್ದೇವೆ.. ನಿಮ್ಮ ಕವನ ನೈಜತೆಗೆ ಹಿಡಿದ ಕನ್ನಡಿಯಂತಿದೆ.. ಅಭಿನಂದನೆಗಳು..

PARAANJAPE K.N. said...

ಚಿತ್ರ-ಕವನ ಎರಡೂ ಒ೦ದಕ್ಕೊ೦ದು ಹೊ೦ದಿಕೆಯಾಗುತ್ತವೆ. ಕವನ ಪುಟ್ಟದಾದರೂ ಅದು ಹೊಮ್ಮಿಸುವ ವಿಚಾರದ ಮಹತ್ತು ದೊಡ್ಡದು

ಸಾಗರದಾಚೆಯ ಇಂಚರ said...

ಚಿತ್ರಾ
ಕವನ ತುಂಬಾ ಚೆನ್ನಾಗಿದೆ

sunaath said...

ಚಿತ್ರಾ,
ಭೀಕರ ಸತ್ಯವನ್ನು ಸರಿಯಾಗಿಯೇ ತಿಳಿಸಿದ್ದೀರಿ.

ಜಲನಯನ said...

ಚಿತ್ರಾ, ಪ್ರಕೃತಿ ಪರಿಸರ ನಮ್ಮ ಸೊತ್ತಲ್ಲ ಎನ್ನುವುದನ್ನು ನಾವು ಮನಗಾಣಬೇಕು, ಪರಿಸರಕ್ಕೆ ನಾವು ಮಾಡುತ್ತಿರುವ ಹಾನಿಯನ್ನು ಮತ್ತು ಅದರ ದೂರಗಾಮೀ ಪರಿಣಮಗಳನ್ನು ನಾವು ಅರಿಯುವ ಮೊದಲೇ ತಡವಾಗಬಾರದು ಎನ್ನುವುದನ್ನ, ಇದು ನಮ್ಮ ಮಕ್ಕಳ ಮರಿಮಕ್ಕಳತನಕ ನಮಗೆ ಸಿಕ್ಕ ರೂಪದಲ್ಲೇ ಸಿಗಬೇಕು ಎನ್ನುವುದನ್ನು ಮುದ್ದಾದ ಪದಗಳ ಹೆಣೆದು ತಿಳಿಸಿದ್ದೀರಿ..
ಕನಸು ಕಾಣುವ ಮೊದಲು
ವಾಸ್ತವವ ನೋಡಿದರೆ
ನಮ್ಮ ನಾಳೆಗಳಲ್ಲಿ ನಾವಿಲ್ಲ !

ಮುಸ್ಸ೦ಜೆ said...

ಕವನ ಹಾಗೂ ಸ೦ದೇಶ ಎರಡೂ ಚೆನ್ನಾಗಿದೆ :)

ಮುಸ್ಸ೦ಜೆ said...

ಈ ಕ್ಷಣದ ಸ್ವಾರ್ಥಕ್ಕೆ ನಿಸರ್ಗವನ್ನು ಬಳಸಿಕೊ೦ಡ ನಮಗೆ ನಾಳೆಗಳಿಲ್ಲ ಎ೦ಬ ಕಹಿ ಸತ್ಯವನ್ನು ಚೆನ್ನಾಗಿ ಮೂಡಿಸಿದ್ದೀರ!

ಚಿತ್ರಾ said...

ರಾಘು ,
ನಿಜ, ಗ್ಲೋಬಲ್ ವಾರ್ಮಿಂಗ್ ಗೆ ನಾವೇ ದಾರಿ ಮಾಡಿಕೊಡುತ್ತಿರುವುದು ಆದರೆ , ಇದನ್ನು ತಿಳಿದೂ ನಿರ್ಲಕ್ಷಿಸುವ ಮೂರ್ಖರೂ ನಾವೇ !
ಇದನ್ನು ಅರ್ಥ ಮಾಡಿಕೊಳ್ಳುವವರೆಗೆ ನಾವೇ ಇರುತ್ತೇವೋ ಇಲ್ಲವೋ !
ಮೆಚ್ಚುಗೆಗೆ ಧನ್ಯವಾದಗಳು .

ಚಿತ್ರಾ said...

ಸವಿಗನಸು, ಸುಮಾ ,
ಕವನದ ಸಂದೇಶ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು

ಚಿತ್ರಾ said...

ತೇಜೂ ,
ನಮ್ಮ ಮುಂದಿನ ಪೀಳಿಗೆಗೆ ನಾಳೆಯನ್ನೇ ಉಳಿಸುತ್ತಿಲ್ಲ ನಾವು ಎಂಬ ಸತ್ಯ ನಮಗೆ ಅರಿವಾಗುವುದು ಯಾವಾಗ ? ಈ ಬಗ್ಗೆ ಯೋಚಿಸುವಾಗ ವಿಷಾದವೆನಿಸುತ್ತದೆ . ನೀನು ಹೇಳಿದಂತೆ ' ಮಾನವ' ಈಗ ನಿಜವಾಗಲೂ ' ಮಾನ 'ವಿಲ್ಲದವನಾಗುತ್ತಿದ್ದಾನೆ . ಇದಕ್ಕಿಂತ ಹೆಚ್ಚಾಗಿ ಮಾನವ 'ದಾನವ' ನಾಗುತ್ತಿದ್ದಾನೆ !

ಚಿತ್ರಾ said...

ದೇಶಪಾಂಡೆಯವರೇ ( ಅರುಣ್ )
ಭಾಳ ದಿನದ ಮ್ಯಾಲೆ , ಅದೂ ನಾನು ಹೇಳಿದ್ಮ್ಯಾಲೆ ಬ್ಲಾಗ್ ಓದೀರಿ ! ಅದಕ್ಕ ನಿಮಗ ನನ್ನ ' ಥ್ಯಾಂಕ್ಸು '
ಬರೆದಿದ್ದು ನಿಮಗೆ ಹಿಡಿಸಿದೆ ಅಂದಮೇಲೆ ಮುಗೀತು ಬಿಡ್ರಿ . ನಮಗೂ ಚೊಲೋ ಅನಿಸ್ತದ.
ಅಂದ ಹಾಂಗ , ನೀವಿನ್ನೂ ' ೨೦೧೨' ನೋಡಿ ಬಂದ ಹ್ಯಾಂಗ್ ಓವರ್ ನಲ್ಲೆ ಇದೀರಿ ಅಂತಾತು . ಇರಲಿ , ಹೀಂಗ ಬರ್ತಾ ಇರ್ರಿ . ಖುಷಿಯಾಗ್ತದ .

ಚಿತ್ರಾ said...

ಸುಧೇಶ್ ,
ಈ ಕವನ, ಸ್ವಲ್ಪ ಕಾಲವಾದರೂ ಓದುಗರನ್ನು ಯೋಚಿಸುವಂತೆ ಮಾಡುತ್ತದೆ ಎಂದಾದರೆ, ನಾನು ಧನ್ಯಳು. ನಿಜವಾಗಿಯೂ ನಾವು ಯೋಚಿಸುವ ಕಾಲ ಬಂದಿದೆ ಅಲ್ಲವೇ? ನಮ್ಮ ಸುತ್ತ ಮುತ್ತ ನಡೆಯುತ್ತಿರುವ ಅತಿ ಸಾಧಾರಣ ವಿಷಯಗಳೂ ಸಹ ಆ ನಿಟ್ಟಿನತ್ತ ಯೋಚಿಸುವಂತೆ ಮಾಡುತ್ತಿವೆ

ಚಿತ್ರಾ said...

ಸೀತಾರಾಮ್ , ಶಿವಪ್ರಕಾಶ್ ,
ನಿಮ್ಮ ಮೆಚ್ಚುಗೆಗೆ ಬಹಳ ಧನ್ಯವಾದಗಳು. ಕವನ ಅದ್ಭುತವೋ ಇಲ್ಲವೋ ಗೊತ್ತಿಲ್ಲ . ಆದರೆ ಈ ಭೂಮಿಯಂತೂ ಅದ್ಭುತ ! ಇದನ್ನು ಉಳಿಸಿಕೊಳ್ಳುವ ಕರ್ತವ್ಯ ನಮ್ಮದು ಅಲ್ಲವೇ?

ಚಿತ್ರಾ said...

ರಾಹುದೆಸೆಯವರೇ
ಬಲುಚೆನ್ನಾಗಿದೆ ನಿಮ್ಮ ಹೆಸರು ! ಆದರೆ , ನಿಮ್ಮ ನಿಜ ನಾಮಧೇಯ ತಿಳಿದಲ್ಲಿ ಧನ್ಯವಾದ ತಿಳಿಸಲು ಅನುಕೂಲ .
ನೀವು ಹೇಳಿದಂತೆ , ನಮ್ಮ ಪೂರ್ವಜರು ನಮಗಾಗಿ ಆಸ್ತಿ ಮಾಡಿತ್ತು ಹೇಗೆ ಜತನವಾಗಿ ಕಾದುಕೊಂಡು ಬಂದರೋ ಅದೇ ಪ್ರೀತಿಯಿಂದ ನಾವು ಅದನ್ನು ಕಾಪಾಡಿ ಕೊಳ್ಳುತ್ತಿಲ್ಲ. ಅಜ್ಜ ಮಾಡಿಟ್ಟ ಆಸ್ತಿಯನ್ನು ಅಪ್ಪ ಕಳೆದರೆ , ಮಗ ಹೇಗೆ ಅಪ್ಪನ ಮೇಲೆ ಸಿಟ್ಟಾಗ ಬಹುದೋ ಹಾಗೇ , ನಮ್ಮ ಮುಂದಿನ ಪೀಳಿಗೆ ನಮ್ಮ ಮೇಲೆ ಸಿಟ್ಟಾದರೆ ನಮ್ಮಲ್ಲಿ ಉತ್ತರವಿದೆಯೇ?
ಹಾ , ಇನ್ನೊಂದು ವಿಷಯ , ನನ್ನ ಹೆಸರು ' ಸುಮಾ' ಅಲ್ಲ . ಚಿತ್ರಾ,

ಚಿತ್ರಾ said...

ಪ್ರಕಾಶಣ್ಣ
ನನ್ನ ವಿಷಾದ ಭಾವಕ್ಕೆ ನಿಮ್ಮ ಆಶಾವಾದಿ ಪ್ರತಿಕ್ರಿಯೆ ! ಕವನರೂಪದಲ್ಲಿ ! ಖುಷಿಯಾಯಿತು.
ಆದರೂ ಮನದಲ್ಲಿ ಎಲ್ಲೋ ಒಂದುಕಡೆ ,ಆತಂಕವಿದ್ದಾಗ ಸ್ವಲ್ಪ ಎಚ್ಚರಿಕೆ ವಹಿಸುತ್ತೇವೆ ಅಲ್ಲವೇ? ಆಶಾವಾದದ ಕನಸಿನೊಡನೆ ಆತಂಕದ ಗಂಟೆ ಸಹ ಆಗಾಗ ನಮ್ಮನ್ನು ಎಚ್ಚರಿಸುತ್ತಿರಲಿ ಎನ್ನಲೇ ?

ಚಿತ್ರಾ said...

ದಿಲೀಪ್
ಈ ಅಮಲು ಇಳಿದಾಗ, ನಾವು ನೋಡುವ ಪ್ರಪಂಚ ಹೇಗಿರಬಹುದು ಎಂಬ ಯೋಚನೆಯೇ ಭಯ ಹುಟ್ಟಿಸುತ್ತದೆ . ಮೆಚ್ಚಿದ್ದಕ್ಕೆ ಧನ್ಯವಾದಗಳು

ಚಿತ್ರಾ said...

ಪರಾಂಜಪೆ ,
ತುಂಬಾ ದಿನಗಳ ನಂತರ ನನ್ನ ಬ್ಲಾಗಿಗೆ ಬಂದಿದ್ದೀರಾ ! ಬಹಳ ಖುಷಿಯಾಯಿತು. ಕವನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಬರುತ್ತಿರಿ

ಚಿತ್ರಾ said...

ಸುನಾಥ್ ಕಾಕಾ ,
ನಿಮ್ಮ ಪ್ರತಿಕ್ರಿಯೆ ಇನ್ನೂ ಬಂದಿಲ್ಲವಲ್ಲ ಎಂದು ಯೋಚಿಸುತ್ತಿದ್ದೆ. ಸಮಾಧಾನವಾಯ್ತು. ಥ್ಯಾಂಕ್ಸ್ ಕಾಕಾ. ಹೀಗೆ ಬಂದು ಪ್ರೋತ್ಸಾಹಿಸುತ್ತಿರಿ

ಚಿತ್ರಾ said...

ಆಜಾದ್ ,
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಪ್ರಕೃತಿ, ಪರಿಸರನಾಶ , ಗ್ಲೋಬಲ್ ವಾರ್ಮಿಂಗ್ ಎನ್ನುತ್ತಾ ಅಂತರ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳನ್ನು ಏರ್ಪಡಿಸುತ್ತಾ ದೊಡ್ಡ ದೊಡ್ಡ ಭಾಷಣಗಳನ್ನು ಕುಟ್ಟುವವರನ್ನು ಕಾಣುತ್ತೇವೆ. ಆ ಬಗ್ಗೆ ಚರ್ಚೆಗಳಾಗುತ್ತವೆ, ಪ್ರಬಂಧ ಮಂಡನೆಗಾಗಿ ಪೇಜುಗಟ್ಟಲೆ ಪೇಪರ್ ಬಳಸಿ ಇನ್ನಷ್ಟು ಮರಗಳ ವಿನಾಶಕ್ಕೆ ದಾರಿಮಾಡಿ ಕೊಡಲಾಗುತ್ತದೆ . ಆದರೆ, ಎಷ್ಟು ಜನ ಈ ದಿಶೆಯಲ್ಲಿ ತಮ್ಮ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ? ಹಾಗೆ ಪ್ರಯತ್ನಿಸುವವರಿಗೆ ಪ್ರೋತ್ಸಾಹ ಸಿಕ್ಕುತ್ತದೆಯೇ? ಕಡೆ ಪಕ್ಷ ನಮ್ಮಿಂದ ಸಾಧ್ಯವಾದಷ್ಟನ್ನಾದರೂ ನಾವು ಮಾಡೋಣ ಅಲ್ಲವೇ?

ಚಿತ್ರಾ said...

ಪರಮೇಶ್ವರ್,
ನಮ್ಮ ಸ್ವಾರ್ಥಕ್ಕಾಗಿ ಈಗಾಗಲೇ ಪ್ರಕೃತಿಯನ್ನು ಸಾಕಷ್ಟು ಬಲಿಕೊಟ್ಟಿದ್ದೇವೆ ಇನ್ನು ನಾವೇ ಬಲಿಯಾಗುವ ಮೊದಲು ಎಚ್ಚೆತ್ತುಕೊಳ್ಳಬೇಕಷ್ಟೇ . ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಚಿತ್ರಾ ಮೇಡಮ್,

ನಿಮ್ಮ ಕವನದಲ್ಲಿ ವ್ಯಕ್ತವಾಗಿರುವ ಭಾವನೆ, ಅದರ ಸಂದೇಶ ಮನತಟ್ಟುತ್ತದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು. ಈ ಭೂಮಿಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡಲು...

ಆನಂದ said...

ಭಾವಪೂರ್ಣವಾಗಿದೆ. ಇಷ್ಟವಾಯ್ತು.
ಪ್ರತಿಯೊಬ್ಬನೂ ತನ್ನ ಕೈಲಾದ ಪ್ರಯತ್ನ ಮಾಡಿದ್ರೆ(ಹಾಗೆ ನೋಡಿದರೆ ಸ್ವಲ್ಪ ಜಾಸ್ತಿನೇ ಮಾಡ್ಬೇಕು, ಇರಲಿ), ನಾಳೆ ನಾವಿಲ್ದಿದ್ರೂ, ಬೇರೆಯವರಾದ್ರೂ ಬದುಕಲಿಕ್ಕೆ ಸಹನೀಯವಾದ ವಾತಾವರಣ ಉಳಿಸಬಹುದೇನೋ.
ಈ ಜನಕ್ಕೆ ಬುದ್ಧಿ ಇಲ್ಲ, ಅದು ಇಲ್ಲ ಇದು ಇಲ್ಲ ಅಂತ ಬಯ್ಯೋದಕ್ಕಿಂತನೂ, ನಾವು ನಮ್ಮಿಂದಾಗೋಷ್ಟು ಸಂಪನ್ಮೂಲ ಉಳಿಸ್ತಾ ಹೋಗೋಣ.
ಅಯ್ಯೋ ಬರೀತಾ ಹೋದ್ರೆ ದೊಡ್ಡ ಭಾಷಣ ಆಗುತ್ತೇನೋ.... :)

vijay said...

ಚಿತ್ರಾ

ಹಸಿರು ಕ್ರ್‍ಅಷಿ ಕ್ರಾಂತಿ
ಈಗ ಆದು ಭ್ರಾಂತಿ

ಬಿರುಕು ಬಿಟ್ಟ ಬರಡು ನೆಲ
ಇನ್ನಷ್ಟು ಬಗೆದರೂ ಸಿಗದ ಜಲ

ಸೂರ್‍ಯನ ಒಣ ಬಿಸುಲು
ಸಾಕು ಮತ್ತೆ! ಒಡಲು ಸುಡುಲು

ಹೌದು ...
ನೀವು ಕಂಡ ಸತ್ಯ .. ನಮ್ಮ ನಾಳೆಗಳಲ್ಲಿ .. ನಾವಿಲ್ಲ
ನಾವು ಕಂಡ ಕನಸು .. ನಮ್ಮ ಇಂದಿನಲ್ಲಿ ..
ನಾಳೆಗಳಿಲ್ಲ ?
ನೀರಿಲ್ಲ . .
ಹಸುರಿಲ್ಲ ..
ನಾವಿಲ್ಲ
ನೀವಿಲ್ಲ
ಚಿಂತನೆಗೀಡು ಮಾಡುವ ಕವನ.

ವಿಜಯ